Saturday, June 25, 2022
HomeAgricultureರೈತರಿಗೆ ಮಾತ್ರ, ಹೀಗೂ ಮಾಡಿ ಒಂದಿಷ್ಟು ಹಣ ಗಳಿಸಬಹುದು | zero investment agriculture...

ರೈತರಿಗೆ ಮಾತ್ರ, ಹೀಗೂ ಮಾಡಿ ಒಂದಿಷ್ಟು ಹಣ ಗಳಿಸಬಹುದು | zero investment agriculture business ideas in kannada

ರೈತರಿಗೆ ಮಾತ್ರ, ಹೀಗೂ ಮಾಡಿ ಒಂದಿಷ್ಟು ಹಣ ಗಳಿಸಬಹುದು

ಸೂಚನೆ :- ಅಡಿಕೆ ಬೆಳೆಯುವ ರೈತರಿಗೆ ಮಾತ್ರ ನನ್ನ ಅನಿಸಿಕೆ.

ಮಲೆನಾಡು ಪ್ರದೇಶ ಸೇರಿದಂತೆ ಇತರ ಸ್ಥಳಗಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ರೈತರು  ಅಡಿಕೆಗೆ ಮಾತ್ರ ಈ ಅಡಿಕೆ ಗಿಡವನ್ನು ಬೆಳೆಸುವ ವಾಡಿಕೆ ಇದೆ ಆದರೆ ರೈತರು ಆ ಅಡಿಕೆ ಮರದಲ್ಲಿ ಬೇರೆ ಏನೆಲ್ಲ ಉಪಯೋಗ ಇದೆ ಅನ್ನುವುದನ್ನು ತಿಳಿದುಕೊಂಡರೆ ಹೆಚ್ಚು ಹೆಚ್ಚು ಲಾಭವನ್ನು ಗಳಿಸಬಹುದು.

ನಿಮಗೆಲ್ಲ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಯಾವ ರೈತರು ಅಡಿಕೆ ಹಾಳೆಯನ್ನು ಸಂಗ್ರಹಿಸುವುದಿಲ್ಲ, ಅಡಿಕೆ ಹಾಳೆಗಳ ತೋಟದಲ್ಲೇ ಕೊಳೆತು ಹಾಳಾಗುತ್ತವೆ.

ಹೀಗೆಹಾಳಾಗಲು ಬಿಡದೆ ನಾನು ಹೇಳುವಂತಹ ಐಡಿಯಾವನ್ನು ಉಪಯೋಗಿಸಿದರೆ ಒಂದಿಷ್ಟು ಹಣವನ್ನು ಗಳಿಸಬಹುದು.

ಈ ಲೇಖನದಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಒಂದು ಉತ್ತಮ ಬ್ಯುಸಿನೆಸ್ ಐಡಿಯಾದ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇನೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

zero investment agriculture business

ನಿಮಗೆಲ್ಲ ಗೊತ್ತಿರುವ ಹಾಗೆ ಅಡಿಕೆ ತಟ್ಟೆಗೆ ಹೆಚ್ಚು ಬೇಡಿಕೆ ಇರುವುದರಿಂದ ಅಡಿಕೆ ತಟ್ಟೆ ಮಾಡುವ ಇಂಡಸ್ಟ್ರಿಗಳು ಸಾಕಷ್ಟು ಓಪನ್ ಮಾಡಿದ್ದಾರೆ.

ಈ ಅಡಿಕೆ ತಟ್ಟೆಯನ್ನು ತಯಾರಿಸಲು ಈ ಇಂಡಸ್ಟ್ರಿ ಗಳಿಗೆ ಅಡಿಕೆ ಹಾಳೆ ಗಳು ಬೇಕಾಗುತ್ತವೆ .

ಇದನ್ನು ಅವರು ಬೇರೆ ಬೇರೆ ರೈತರ ಹತ್ತಿರ ಹೋಲ್ಸೇಲ್ ದರದಲ್ಲಿ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಾರೆ.

ಆದ್ದರಿಂದ ಇದಕ್ಕೆ ತುಂಬಾನೇ ಬೇಡಿಕೆ ಇದೆ. ಸಾಮಾನ್ಯವಾಗಿ ಅಡಿಕೆ ತಟ್ಟೆ ಮಾಡುವ ಇಂಡಸ್ಟ್ರಿಗಳು ಅವರದೇ ಆದ  ಎಂಪ್ಲಾಯ್ ಗಳನ್ನೂ ನೇಮಕ ಮಾಡಿಕೊಂಡಿರುತ್ತಾರೆ .

 ಅವರಿಗೆ ಸ್ಯಾಲರಿ ಕೊಡುವುದು ಸ್ವಲ್ಪ ಕಷ್ಟ ಆಗುತ್ತದೆ. ಹೀಗಾಗಿ ಅವರು ಪ್ರಸ್ತುತ  ಯಾವುದೇ ಎಂಪ್ಲಾಯ್ ನ ನೇಮಕ ಮಾಡಿಕೊಳ್ಳದೆ ನೇರವಾಗಿ ರೈತರ ಹತ್ತಿರ ಒಂದು ಹಾಳೆಗೆ 1 ರೂ ಅಥವಾ 2 ರೂ ನಂತೆ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ ಇದರಿಂದ ಅವರಿಗೆ ತುಂಬಾನೇ ಹಣ ಉಳಿಯುತ್ತದೆ.

 

ನೀವು ಏನು ಮಾಡಬೇಕು ?
zero investment agriculture business
ನೀವು ಏನು ಮಾಡಬೇಕು ಅಂದರೆ ನಿಮ್ಮ  ಅಡಿಕೆ ತೋಟದಲ್ಲಿರುವ  ಹಾಳೆಯನ್ನು ನೀವು ಒಟ್ಟುಗೂಡಿಸಿ ಇಡಬೇಕಾಗುತ್ತದೆ .
ಒಂದುವೇಳೆ ನಿಮ್ಮ ಮನೆಯಲ್ಲಿ ಅಡಿಕೆ ಮರಗಳು ಇಲ್ಲ ಅಂದರೆ ನೀವು ಬೇರೆ ರೈತರ ತೋಟದಲ್ಲಿ ತೆಗೆದುಕೊಂಡು ಬರಬಹುದು ಹೀಗೆ ಬೇರೆಯವರ ರೈತರ ತೋಟದಲ್ಲಿ ತಂದರೆ ನೀವು ಅವರಿಗೂ ಸಹ ಕಮಿಷನ್ ಕೊಡಬೇಕಾಗುತ್ತದೆ.
ಹೀಗೆ ನೀವು ಹೋಲ್ಸೇಲ್ ಆಗಿ ಹಾಳೆಗಳನ್ನು ಜೋಡಿಸಿಟ್ಟು ಅಡಿಕೆ ತಟ್ಟೆ ಮಾಡುವ ಇಂಡಸ್ಟ್ರಿಯವರಿಗೆ ಒಂದು ಕರೆ ಮಾಡಿದರೆ ಅವರೇ ನೇರವಾಗಿ ನಿಮ್ಮ ಮನೆಗೆ ಬಂದು  ನಿಮಗೆ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. 
zero investment agriculture business
ಲಾಭ ಎಷ್ಟು ಗಳಿಸಬಹುದು
ಒಂದು ಉತ್ತಮ ಗುಣಮಟ್ಟದ ಅಡಿಕೆ ಹಾಳೆಗೆ  ರೂಪಾಯಿ ದೊರೆತರೆ 10 ಸಾವಿರ ಅಡಿಕೆ ಹಾಳೆ ಮಾರಾಟ ಮಾಡಿದರೆ 20 ಸಾವಿರ ಹಣವನ್ನು ಯಾವುದೇ ಖರ್ಚು ಇಲ್ಲದೆ ಗಳಿಸಬಹುದು.
ಇದು ನೀವು ಮಾಡುತ್ತಿರುವ ಕೃಷಿ ಕೆಲಸದೊಂದಿಗೆ ಇದನ್ನು ಮಾಡಿ ಉತ್ತಮ ಆದಾಯ ಗಳಿಸಬಹುದು.
ಇದು ದೊಡ್ಡ ಮೊತ್ತದ ಹಣ ಎಂದು ನಾನು ಹೇಳುತ್ತಿಲ್ಲ ನಿಮಗೆ ಯಾವುದುದಾದರೂ ಒಂದು ಖರ್ಚಿಗೆ ಸಹಾಯವಾಗಬಹುದು ಅನ್ನುವ ಉದ್ದೇಶ ನನ್ನದು.
zero investment agriculture business
zero investment agriculture business

small business ideas in kannada

zero investment agriculture business

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments