Monday, September 26, 2022
HomeinformationYoga in Kannada । Yogasana Kannada । ಯೋಗ ಎಂದರೇನು?

Yoga in Kannada । Yogasana Kannada । ಯೋಗ ಎಂದರೇನು?

yoga in kannada

yoga in kannada । yogasana kannada । ಯೋಗ ಎಂದರೇನು?

‘ ಯೋಗ ‘ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ‘ ಯುಜ್ ‘ ಎನ್ನುವುದರಿಂದ ಬಂದಿದ್ದು , ಬಂಧಿಸು , ಕೂಡಿಸು , ನೂಗು ಕಟ್ಟು , ಚಿತ್ತವನ್ನು ನಿರ್ದೆಶಿಸಿ ಕೇಂದ್ರೀಕರಿಸು ಉಪಯೋಗಿಸು ಮತ್ತು ಆಸಕ್ತಿವಹಿಸು ಎನ್ನುವ ಅರ್ಥಗಳನ್ನು ಕೊಡುತ್ತದ ಸಂಯೋಜನ ಅಥವಾ ಸಂಸರ್ಗ ಎನ್ನುವ ಅರ್ಥವೂ ಇದಕ್ಕೆ ಇದೆ . ಭಗವಂತನ ಇಚ್ಛೆಯೊಂದಿಗೆ ನಮ್ಮ ಇಚ್ಛೆಯ ನಿಜವಾದ ಸಂಸರ್ಗವೆಂದರೆ ಇದೇ . ಮಹದೇವ ದೇಸಾಯಿಯವರು ಗಾಂಧೀಜಿಯವರ ದೃಷ್ಟಿಯಲ್ಲಿ ಗೀತ ಎನ್ನುವ ಪುಸ್ತಕದ ಪ್ರಸ್ತಾವನೆಯಲ್ಲಿ ‘ ಶರೀರದ , ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದು ಯೋಗ , ಇದು ಚಿತ್ತ , ಮನಸ್ಸು ಭಾವನೆಗಳು , ಇಚ್ಛೆ ಎನ್ನುವ ಯೋಗದ ಮೂಲಭಾವನೆಗಳನ್ನು ಶಿಸ್ತುಗೊಳಿಸುವುದು ಮತ್ತು ಜೀವನದ ಎಲ್ಲ ಅಂಶಗಳನ್ನೂ ಸಮದೃಷ್ಟಿಯಿಂದ ನೋಡಲು ಸಹಾಯಕವಾಗುವ ಆತ್ಮದ ಒಂದು ನಿಲುವು ‘ ‘ ಎಂದು ಹೇಳುತ್ತಾರೆ,

yoga in kannada

ಭಾರತಿಯ ಆಸಕ್ತಿದರ್ಶನದಲ್ಲಿ ಯೋಗವೂ ಒಂದು . ಅದನ್ನು ೧೮೫ ಶಿಷ್ಟ ಸೂತ್ರಗಳ ನ್ಯೂಳಗೊಂಡ ಯೋಗಸೂತ್ರಗಳೆಂಬ ಶ್ಯಾಯ ಗ್ರಂಥದಲ್ಲಿ ಪಂತಜಲಿ ಮುನಿ ಸಂಶೋಧಿ ಸಂಯೋಜಿಸಿದ್ದಾನೆ . ಹಿಂದೂಶದಲ್ಲಿ ಪ್ರತಿಯೊಂದು ವಸ್ತುವೂ ಪರಾತ್ಪರ ವಿಶ್ವಶಕ್ತಿಯಿಂದ ( ಪರಮಾತ್ಮ ಅಥವಾ ಭಗವಂತ ) ಅವಾಸವಾಗಿದ್ದು ಜೀವಾತ್ಮನು ಅದರ ಒಂದು ಅಂಶವೆಂದು ಪರಿಗಣಿಸಲ್ಪಟ್ಟಿದೆ . ಜೀವಾತ್ಮನು ಪರಮಾತ್ಮನೊಂದಿಗೆ ಐಕ್ಯ ಹೊಂದಲು ಅಥವಾ ಸಂಸರ್ಗ ಹೊಂದಲು ಮಾರ್ಗವನ್ನು ತೋರಿಸಿ ಆ ಮೂಲಕ ಮೋಕ್ಷ ಸಂಪಾದಿಸಲು ಸಹಾಯಮಾಡುವುದ ರಿಂದ ಯೋಗಶಾಸಕ್ಕೆ ಆ ಹೆಸರು ಬರಲು ಕಾರಣ , ಯೋಗಮಾರ್ಗವನ್ನು ಅವಲಂಬಿಸುವವನು ಯೋಗಿ ಯೋಗದರ್ಶನಕ್ಕೆ ಬಹುಮುಖ್ಯವಾದ ಆಧಾರವನಿಸುವ ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಯೋಗದ ಅರ್ಥ ‘ ನೋವು ಮತ್ತು ದುಃಖಗಳ ರ್ಸ್ತದಿಂದ ಬಿಡುಗಡೆ ‘ ಎಂದು ಹೇಳಿದ್ದಾನೆ : “ ಯಾವಾಗ ಮನಸ್ಸು ಬುದ್ದಿ ಮತ್ತು ಅಹಂಕಾರ ನಿಗ್ರಹಿಸಲ್ಪಡುತ್ತವೆಯೋ , ಚಂಚಲವಾದ ಕಾಮಗಳಿಂದ ಬಿಡುಗಡೆ ಹೊಂದಲ್ಪಟ್ಟು ಆತ್ಮನಲ್ಲಿ ನಿಲ್ಲುತ್ತದೋ , ಆಗ ಮಾನವನು ಭಗವಂತನೊಡನೆ ಸಂಸರ್ಗಹೊಂದಿದ ‘ ಯುಕ್ತ ಎಂದಾಗುತ್ತಾನೆ . ಎಲ್ಲಿ ಗಾಳಿಯು ಬೀಸುವುದಿಲ್ಲವೋ ಅಲ್ಲಿ ದೀಪವು ಅಲಗುವುದಿಲ್ಲ ಹಾಗೆಯೇ ಮನಸ್ಸನ್ನೂ ಬುದ್ದಿಯನ್ನೂ ಅಹಂಕಾರವನ್ನೂ ಆಧೀನವಾಗಿರಿಸಿಕೊಂಡ ಯೋಗಿಯ ವಿಚಾರವೂ ಕೂಡ . ( ಯೋಗಸಾಧನೆಯಿಂದ ಮನಸ್ಸಿನ , ಬುದ್ಧಿಯ , ಅಹಂಕಾರದ ಚಂಚಲತೆಯನ್ನು ಯಾವಾಗ ತಡೆಯಬಹುದೋ ಆಗ ಯೋಗಿಯು ಅಕ್ಷರ ಪ್ರಸಾದದಿಂದ ಸಂತೃಪ್ತನಾಗುತ್ತಾನೆ . ಆಗ ಬುದ್ದಿ ತರ್ಕ ಹಿಡಿತಕ್ಕೆ ಸಿಗದ , ಇಂದ್ರಿಯಗಳ ಶಕ್ತಿಗೆ ಅತೀತವಾದ , ನಿತ್ಯಾನಂದವನ್ನು ಅರಿಯುತ್ತಾನೆ . ಅಂಥವನು ಈ ಸರಸ್ತುವಿನಲ್ಲಿ ನೆಲೆಸಿ ಅದರಿಂದ ಹೊರಗೆ ಬರುವುದೇ ಇಲ್ಲ .

yoga in kannada

ಕರ್ಮಗ್ಯವಾಧಿಕಾರಸ್ತೇ ಮಾ ಫಲಿಷು ಕದಾಚನ |

ದ ಕರ್ದುಫಲಹೇತುರ್ಭೂ ದಾ ತೇ ಸಂಗೊಡ್ಕರ್ಮಣಿ ||

ಯೋಗ ಕುರು ಕರ್ದಾಣ ಸಂಗಂ ತ್ಯಾ ಧನಂಜಯ |

ಸಿದ್ಧಸಿದ್ದೂ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ||

ಭಗವದ್ಗೀತೆಯ ಯೋಗವೆನ್ನುವ ಪದಕ್ಕೆ ಇತರ ವಿವರಣೆಗಳನ್ನೂ ನೀಡಿ ಕರ್ಮಯೋಗ ಎನ್ನುವುದರ ಮೇಲೆಯೂ ಹೆಚ್ಚಿನ ಗಮನ ನೀಡಿದೆ . ಅಲ್ಲಿ ಹೀಗೆ ಹೇಳಲ್ಪಟ್ಟಿದೆ : “ ಕರ್ಮಕ್ಕೆ ಮಾತ್ರ ನೀನು ಅಧಿಕಾರಿ , ಆದರಿಂದ ಬರುವ ಫಲಗಳ ಮೇಲಲ್ಲ ಫಲಗಳೇ ಸಾಧನೆಯ ಗುರಿಯಾಗು ವಂತೆ ಬಿಡಬೇಡ , ಅಲ್ಲದೆ ಕರ್ಮವನ್ನು ಮಾಡದೆ ಇರಬೇಡ . ಸ್ವಾರ್ಥದ ಆಶೆಗಳನ್ನು ಬಿಟ್ಟು ದೇವರ ಹೆಸರಿನಲ್ಲಿ ದುಡಿ . ಜಯ ಅಪಜಯಗಳಿಂದ ಬಾಧಿತನಾಗದಿರು . ಈ ಸಮತ್ವವೇ ಯೋಗ ” ಯೋಗವನ್ನುವುದು ಕರ್ಮದಲ್ಲಿ ಕುಶಲತೆ , ಸಾಮರಸ್ಯ ಮತ್ತು ತಾಳ್ಮೆಯನ್ನು ಸೂಚಿಸುವುದೆಂದೂ ವಿವರಿಸಲ್ಪಟ್ಟಿದೆ .

yoga in kannada

yoga in kannada

ಯೋಗ

ನಾತ್ಯಶ್ನ ತಸ್ತು ಯೋಗೋಸ್ತಿ ನ ಚೈಕಾಂತಮನಶ್ವತ |

ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |

ಯುಕ್ತ : ಸ್ವಪ್ರಾವಬೋಧಸ್ಯ ಯೋಗೋ ಭವತಿ ದುಃಖಹಾ ||

“ ಯೋಗವೆನ್ನುವುದು ಅತಿ ಆಶೆಯಿಂದ ಭಕ್ಷಿಸುವವನಿಗೂ ಅಲ್ಲ ಅತಿಯಾಗಿ ಉಪವಾಸ ಮಾಡುವವನಿಗೂ ಅಲ್ಲ ಹೆಚ್ಚು ನಿದ್ರೆ ಮಾಡುವವನಿಗೂ ಅಲ್ಲ

ಯಾವಾಗಲೂ ನಿದ್ರೆ ಮಾಡದವನಿಗೂ ಅಲ್ಲ ತಿನ್ನುವುದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ಮಧ್ಯವರ್ತಿಯಾಗು ವತ ,

ಕೆಲಸ ಅಥವಾ ಕರ್ಮದಲ್ಲಿ ಕ್ರಮ ಪಾಲಿಸುವಂತೆ , ನಿದ್ರೆ ಮತ್ತು ಎಚ್ಚರ ಇವುಗಳಲ್ಲಿ ಹೊಂದಾಣಿಕೆಗೊಳಿಸುವಂತೆ ಮಾಡಿ ಯೋಗವು ನೋವು ಮತ್ತು ದುಖವನ್ನು ನಿವಾರಿಸುತ್ತದೆ.

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments