Wednesday, November 30, 2022
HomeBusinessವುಡನ್ ಟಾಯ್ ಮೇಕಿಂಗ್ ಬಿಸಿನೆಸ್ ಐಡಿಯಾ | wooden toys manufacturing business ideas in...

ವುಡನ್ ಟಾಯ್ ಮೇಕಿಂಗ್ ಬಿಸಿನೆಸ್ ಐಡಿಯಾ | wooden toys manufacturing business ideas in kannada

ವುಡನ್ ಟಾಯ್ ಮೇಕಿಂಗ್ ಬಿಸಿನೆಸ್ ಐಡಿಯಾ 

ಫ್ರೆಂಡ್ಸ್ ನಿಮಗೆಲ್ಲ ಗೊತ್ತಿರುವ ಹಾಗೆ ವುಡನ್ ಟಾಯ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾನೇ ಬೇಡಿಕೆ ಇದೆ ಒಂದು ಚಿಕ್ಕ ಮರದ ಗೊಂಬೆಯನ್ನು ಖರೀದಿ ಮಾಡಬೇಕು ಅಂದರೆ ಅದಕ್ಕೆ ಕಡಿಮೆ ಅಂದರು 200 ರಿಂದ 300 ರೂಪಾಯಿ ಹೇಳುತ್ತಾರೆ. ಅಂದರೆ ನೀವೇ ಯೋಚನೆ ಮಾಡಿ ಮಾರ್ಕೆಟ್ ನಲ್ಲಿ ಈ ಉಡನ್ ಟಾಯ್ ಗೆ ಎಷ್ಟು ಬೇಡಿಕೆ ಇದೆ ಅಂತ . ಈ ಲೇಖನದಲ್ಲಿ ಮರದ ಗೊಂಬೆಯನ್ನು ತಯಾರಿಸಿ ಮಾರಾಟ ಮಾಡುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಈ ಬ್ಯುಸಿನೆಸ್ ಕುರಿತು ಬರೆದ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

ವುಡನ್ ಟಾಯ್ ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ: 

ಚಿಕ್ಕ ಮಕ್ಕಳಿಗೆ ಆಟವಾಡಲು ಹೆಚ್ಚಾಗಿ ಖರೀದಿಸುತ್ತಾರೆ ಹಾಗೆ ಮದುವೆ ಸಮಾರಂಭ ಸೇರಿದಂತೆ ಹುಟ್ಟಿದ ಹಬ್ಬಕ್ಕೆ ಸಾಕಷ್ಟು ಜನ ಗಿಫ್ಟ್ ಕೊಡುವುದನ್ನು ನೋಡಿರ್ತಿರ ಅಷ್ಟೇ ಅಲ್ಲದೆ ಮನೆಯನ್ನು ಸುಂದರವಾಗಿ ಇಡಲು ಈ ವುಡೇನ್ ಟಾಯ್ ಗಳನ್ನೂ ಹೆಚ್ಚಾಗಿ ಖರೀದಿ ಮಾಡುತ್ತಾರೆ ಹೀಗೆ ಸಾಕಷ್ಟು ಕಡೆ ಇದರ ಬಳಕೆ ಇರುವುದರಿಂದ ನೀವು ಈ ಬ್ಯುಸಿನೆಸ್ ಮಾಡುವುದರಿಂದ ಉತ್ತಮ ಲಾಭವನ್ನು ಗಳಿಸಬಹುದು .

wooden toys manufacturing business

ಈ ಬ್ಯುಸಿನೆಸ್ ಮಾಡುವುದು ಹೇಗೆ

ಎಷ್ಟು ಬಂಡವಾಳ ಬೇಕು

ಮಷಿನ್ ಎಲ್ಲಿ ಸಿಗುತ್ತದೆ

ಲೇಸೆನ್ಸ್ ಬೇಕಾ ಬೇಡವಾ

ಮಾರ್ಕೆಟಿಂಗ್ ಮಾಡುವುದು ಹೇಗೆ

ಲಾಭ ಎಷ್ಟು ಗಳಿಸಬಹುದು

ಈ ಬ್ಯುಸಿನೆಸ್ ಮಾಡುವುದು ಹೇಗೆ:

wooden toys manufacturing business

wooden toys manufacturing business

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಈ ಬ್ಯುಸಿನೆಸ್ ಮಾಡಿದರೆ ನಿಮಗೆ ಯಾವುದೇ ಕಾರಣಕ್ಕೂ ನಷ್ಟ ಆಗುವುದಿಲ್ಲ ಯಾಕಂದರೆ ಇದಕ್ಕೆ ಬೇಡಿಕೆ ಹೆಚ್ಚು ಇರುವುದರಿಂದ ನೀವು ಹೆಚ್ಚು ಹೆಚ್ಚು ಲಾಭವನ್ನು ಪಡೆಯಬಹುದು . ಈ ಬ್ಯುಸಿನೆಸ್ ಮಾಡಬೇಕು ಅಂದರೆ ಒಂದು ಮಷಿನ್ ಖರೀದಿ ಮಾಡಬೇಕು. ಮಷಿನ್ ಇಲ್ಲದೆ ಕೈಯಿಂದಲೂ ಕೂಡ ಈ ಗೊಂಬೆಯನ್ನು ತಯಾರಿಸಿ ಮಾರಾಟ ಮಾಡಬಹುದು ಇದಕ್ಕೆ ಸಾಕಷ್ಟು ಸಮಯ ಹಿಡಿಯುವುದರಿಂದ ನೀವು ಹೆಚ್ಚು ಗೊಬೆಯನ್ನು ತಯಾರಿಸಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ನೀವು ಈ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಎಷ್ಟು ಬಂಡವಾಳ ಬೇಕು:

ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಗೊಂಬೆಯನ್ನು ತಯಾರಿಸಿ ಮಾರಾಟ ಮಾಡಬೇಕು ಅಂದರೆ ನೀವು ಆಟೋಮ್ಯಾಟಿಕ್ ಮಷಿನ್ ಖರೀದಿ ಮಾಡಬೇಕು ಈ ಮಷಿನ್ ನಿಮ್ಮ ಹತ್ತಿರದ ಇಂಡ್ಟ್ರೀಸ್ ನಲ್ಲಿ ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಒಂದುವೇಳೆ ಅಲ್ಲಿ ಈ ಮಷಿನ್ ದೊರೆತಿಲ್ಲ ಅಂದರೆ ಆನ್ಲೈನ್ ಮುಖಾಂತರ ಖರೀದಿ ಮಾಡಬಹುದು ನೀವು ಆನ್ಲೈನ್ ನಲ್ಲಿ ಖರೀದಿ ಮಾಡುವುದಾದರೆ ಆ ಮಷಿನ್ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿದ್ದೇನೆ ನೀವು ಅಲ್ಲಿ ಕ್ಲಿಕ್ ಮಾಡಿ ಮಷಿನ್ ಕುರಿತು ಹೆಚ್ಚಿನಮಾಹಿತಿಯನ್ನು ಪಡೆದು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಹಾಗೆ ಇದಕ್ಕೆ ಬೇಕಾದ ಗಮ್ ಸೇರಿದಂತೆ ಹಾಗೆ ಇತರ ಟೂಲ್ಸ್ ಕೂಡ ಆನ್ಲೈನ್ ನಲ್ಲಿ ಸಿಗುತ್ತದೆ ಅಲ್ಲಿ ಖರೀದಿ ಮಾಡಬಹುದು .

ಮಷಿನ್ ಬೆಲೆ : 4,50,000

ಇತರೆ ಖರ್ಚು : 50,000

ಒಟ್ಟು : 5,00000

wooden toys manufacturing business

Buy Now

ಲೇಸೆನ್ಸ್ ಬೇಕಾ ಬೇಡವಾ:

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಜಿ ಎಸ್ ಟಿ ಮಾಡಿಸಿಕೊಂಡು ಬ್ಯುಸಿನೆಸ್ ಮಾಡಬೇಕು
ಜಿ ಎಸ್ ಟಿ ಯನ್ನು ಮಾಡಿಸಲು 2 ರಿಂದ 3 ಸಾವಿರ ಆಗುತ್ತದೆ .

wooden toys manufacturing business

wooden toys manufacturing business

ಮಾರ್ಕೆಟಿಂಗ್ ಮಾಡುವುದು ಹೇಗೆ:

ನಿಮಗೆಲ್ಲ ಗೊತ್ತಿರುವ ಹಾಗೆ ಯಾವುದೇ ಜ್ಯಾತ್ರೆಯಲ್ಲಿ ಹಾಗೆ ಫ್ಯಾನ್ಸಿ ಅಂಗಡಿಗಳಲ್ಲಿ ಈ ಟಾಯ್ ಗಳನ್ನೂ ಸೆಲ್ ಗೆ ಇಟ್ಟಿರುತ್ತಾರೆ ನೀವು ಇಂತಹ ಅಂಗಡಿಗೆ ಭೇಟಿನೀಡಿ ಅವರೊಂದಿಗೆ ಮಾತಾಡಿ ಸೆಲ್ ಮಾಡಬಹುದು. ಇನ್ನು ಆನ್ಲೈನ್ ನಲ್ಲಿ ಸೆಲ್ ಮಾಡುವುದರಿಂದ  ಹೆಚ್ಚು  ಲಾಭ ಪಡೆಯಬಹುದು ಇದು ಒಂದು ಉತ್ತಮ ಪ್ಲಾಟಫಾರ್ಮ್ ಅಂತಾನೆ ಹೇಳಬಹುದು.

 

ಲಾಭ ಎಷ್ಟು ಗಳಿಸಬಹುದು:

ನಿಮಗೆ ಗೊತ್ತಿರುವ ಹಾಗೆ ಒಂದು ಉಡೆನ್ ಟಾಯ್ ಗೆ 300 ರಿಂದ 600 ಕಿಂತ ಹೆಚ್ಚು ಬೆಲೆ ಇದೆ ನೀವೇ ಯೋಚಿಸಿ ಪ್ರತಿದಿನ ಕಡಿಮೆ ಅಂದರು 4 ರಿಂದ 5 ಸಾವಿರ ಆದಾಯವನ್ನು ಈ ಬ್ಯುಸಿನೆಸ್ ನಲ್ಲಿ ಗಳಿಸಬಹುದು .

 

ಸೂಚನೆ  : ಈ ಬ್ಯುಸಿನೆಸ್ ಪ್ರಾರಂಭ ಮಾಡುವುದಕ್ಕಿಂತ ಮೊದಲು ನಿಮಗೆ ಈ ಕೆಲಸದ ಕುರಿತು ಒಂದಿಷ್ಟು ಜ್ಞಾನ ಇರಬೇಕಾಗುತ್ತದೆ. ನಿಮಗ ಈ ಕೆಲಸದ ಕುರಿತು ಒಂದಿಷ್ಟು ಜ್ಞಾನವಿಲ್ಲ ಅಂದರೆ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚುರಿತ್ತದೆ. ಈ ಬ್ಯುಸಿನೆಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಈ ಬ್ಯುಸಿನೆಸ್ ಮಾಡಿದರೆ ಉತ್ತಮ .

business ideas kannada

ದಾಳಿಂಬೆ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿ | pomegranate cultivation in kannada | Business ideas

 

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments