Wednesday, November 30, 2022
HomeFinancewater bottle in kannada, ವಾಟರ್ ಬಾಟಲ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

water bottle in kannada, ವಾಟರ್ ಬಾಟಲ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

ವಾಟರ್ ಬಾಟಲ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

water bottle in kannada, ವಾಟರ್ ಬಾಟಲ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ  ಕಡಿಮೆ ಬಂಡವಾಳದಲ್ಲಿ  ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ವಾಟರ್ ಬಾಟಲ್ ಮೇಕಿಂಗ್  ಬ್ಯುಸಿನೆಸ್ 

ವಾಟರ್ ಬಾಟಲ್ ಅನ್ನು ಎಲ್ಲಿ ಹೆಚ್ಚಾಗಿ ಖರೀದಿ ಮಾಡುತ್ತಾರೆ   ಅಂತ ನೋಡೋದಾದ್ರೆ ಪ್ರತಿಯೊಂದು ವಾಟರ್ ಸಪ್ಲಯ್ ಕಂಪನಿ ಗಳಲ್ಲಿ  ಬಾಟಲ್ ಗಳನ್ನೂ ಖರೀದಿ ಮಾಡುತ್ತಾರೆ   ಆದ್ದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ.

ಅದಕೋಸ್ಕರ ವಾಟರ್ ಬಾಟಲ್ ಮೇಕಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ವಾಟರ್ ಬಾಟಲ್ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

water bottle in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ  ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು .  ಇದಕ್ಕೆ   15Χ25 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ವಾಟರ್ ಬಾಟಲ್ ಮೇಕಿಂಗ್   ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.

ಹಾಗೆ ಪೆಟ್ ಪ್ರಿಫರ್ಮ್ , ಕ್ಯಾಪ್ಸ್, ಲೇಬಲ್ಸ್ ಮತ್ತು ಪ್ಯಾಕೇಜಿಂಗ್ ಮೆಟೀರಿಯಲ್ಸ್ ಇಷ್ಟನ್ನು ಖರೀದಿಸಿ ಬ್ಯುಸಿನೆಸ್ ಮಾಡಬೇಕು 

ತಯಾರಿಸುವ ವಿಧಾನ : 

ಪೆಟ್ ಪ್ರಿಫರ್ಮ್ ಅನ್ನು ಬ್ಲೂ ಮೌಲ್ಡಿಂಗ್ ಮಷಿನಲ್ಲಿ ಹಾಕಬೇಕು ನಂತರ ಮೌಲ್ಡ್ ನ್ನು ಮುಚ್ಚಬೇಕು ಇದಾದ ಸ್ವಲ್ಪ ಸಮಯದ ನಂತರ ಪೆಟ್ ಪ್ರಿಫರ್ಮ್ ಹೀಟ್ ಆದ ತಕ್ಷಣ ಹೊರಗಡೆ ತೆಗಿಯಬೇಕು ನಂತರ ಹೀಟ್ ಆಗಿರುವ ಪೆಟ್ ಪ್ರಿಫರ್ಮ್ ನ್ನು ಏರ್ ಕಂಪ್ರೆಸರ್ ಮೌಲ್ಡ್ ನಲ್ಲಿ ಹಾಕಬೇಕು ಹೀಗೆ ಹಾಕಿದ ನಂತರ ಏರ್ ಕಂಪ್ರೆಸರ್ ಅನ್ನು ಆನ್ ಮಾಡಬೇಕು ಹೀಗೆ ಮಾಡಿದರೆ ನೀವು ಯಾವ ತರಹದ ಮೌಲ್ಡ್ ಹಾಕಿರ್ತಿರೋ ಹಾಗೆ ಸೈಜ್ ಆಗಿ ನಿಮಗೆ ಸಿಗುತ್ತದೆ. ಅಂದರೆ ನೀವು ಯಾವ ಟೈಪ್ ಮೌಲ್ಡ್ ಹಾಕಿರುತ್ತೀರಾ ಹಾಗೆ ಯಾವ ಕಲರ್ ಪೆಟ್ ಪ್ರಿಫರ್ಮ್  ಸೆಟ್ ಮಾಡುತ್ತೀರಾ  ಡಿಪೆಂಡ್ ಆಗಿರುತ್ತದೆ 

ಇದಕ್ಕೆ ನೀವು ನಿಮ್ಮದೇ ಬ್ರಾಂಡ್ ಲೇಬಲ್ ಹಾಕಿ ಮಾರಾಟ ಮಾಡಬಹುದು . 

ಎಷ್ಟು ಸ್ಥಳಾವಕಾಶ ಬೇಕು : 

ಈ ಬ್ಯುಸಿನೆಸ್ ಮಾಡಲು ಎಷ್ಟು ಸ್ಥಳಾವಕಾಶ ಬೇಕು ಅಂತ ಈ ಕೆಳಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ 

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 1500 ಅಡಿ ಸುತ್ತಳತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ . ಈ ಸ್ಥಳಾವಕಾಶವು  ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ. 

ಎಷ್ಟು ಬಂಡವಾಳ ಬೇಕು:

ವಾಟರ್ ಬಾಟಲ್ ಮೇಕಿಂಗ್ ಮಷಿನ್  ಬೆಲೆ  :3,15,000

ರಾ ಮೆಟಿರಿಯಲ್ : 10,000 ( ಪೆಟ್ ಪ್ರಿಫರ್ಮ್ ಕೆಜಿ 110ರೂ )

ಇತರೆ ಖರ್ಚು : 5,000

ಒಟ್ಟು : 3,30,0000

 ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ. 

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು. ಈ ಮಷಿನ್ ಗಳಲ್ಲಿ ಆಟೋಮ್ಯಾಟಿಕ್ ಮಷಿನ್ ಮತ್ತು ಸೆಮಿ ಆಟೋಮ್ಯಾಟಿಕ್ ಮಷಿನ್ ಹಾಗೆ ಫುಲ್ಲಿ ಆಟೋಮ್ಯಾಟಿಕ್ ಮಷಿನ್ ಗಳು ದೊರೆಯುತ್ತವೆ . 

 ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ  ಇದು  ಮಷಿನ್  ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

water bottle in kannada

water bottle in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಟ್ರೇಡಿಂಗ್ ಲೈಸೆನ್ಸ್

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:

ನಿಮ್ಮ ಹತ್ತಿರದ ಇಂಡಸ್ಟ್ರಿಯಲ್ಲಿ ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಅಥವಾ  ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.

ಅದರ  ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು. 

water bottle in kannada

water bottle in kannada

Buy Now 

ಕೆಲಸಗಾರರು ಎಷ್ಟು ಜನ ಬೇಕು : 

1 ರಿಂದ 2 ಜನ ಕೆಲಸಗಾರರು ಬೇಕು

ಮಾರ್ಕೆಟಿಂಗ್ ಮಾಡುವುದು ಹೇಗೆ :

 ನೀರಿನ ಬಾಟಲ್  ಇಂಡಸ್ಟ್ರಿಯವರ ಹತ್ತಿರ ಮಾತಾಡಿಕೊಂಡು ನೀವು ಅವರಿಗೆ ಸೆಲ್ ಮಾಡಬಹುದು. 

ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಲಾಭ ನಷ್ಟಗಳು ಡಿಪೆಂಡ್ ಅದಿರುತ್ತದೆ.

ಲಾಭ ಎಷ್ಟು ಗಳಿಸಬಹುದು :

ಒಟ್ಟಾರೆಯಾಗಿ ಹೇಳಬೇಕು ಅಂದರೆ 15 ರಿಂದ 20 ಪರ್ಸೆಂಟ್ ಮಾರ್ಜಿನ್ ಈ ಬ್ಯುಸಿನೆಸ್ ನಲ್ಲಿ ಪಡೆಯಬಹುದು 
ಅಂದರೆ 10 ಸಾವಿರ ಬ್ಯುಸಿನೆಸ್ ಮಾಡಿದರೆ ನಿಮಗೆ  2 ಸಾವಿರ ಲಾಭ ದೊರೆಯುತ್ತದೆ. 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಮಳಿಗೆ ನಿಮ್ಮದೇ ಸ್ವಂತ ಇಲ್ಲ ಅಂದರೆ ಅದನ್ನು ಅಡ್ವಾನ್ಸ್ ಕೊಟ್ಟು ಪಡೆಯಬೇಕಾಗುತ್ತದೆ.
ಹಳ್ಳಿಯಲ್ಲಿ ಮಾಡುವುದಾದರೆ ವಿದ್ಯುತ್ ಸಮಸ್ಯೆ ಇರುತ್ತದೆ .
ಈ ಬ್ಯುಸಿನೆಸ್ ನಲ್ಲಿ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಎಷ್ಟೇ ಕಾಂಪಿಟೇಷನ್ ಇದ್ದರು ಕೂಡ ನೀವು ಮಾರ್ಕೆಟಿಂಗ್
ಚೆನ್ನಾಗಿ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಹಾಗೆ ಮಾರ್ಕೆಟಿಂಗ್ ಮಾಡುವುದು ಕೂಡ ತುಂಬಾ ಕಷ್ಟ ಇದೆ.
ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿ ಗಳು ಲಭ್ಯವಿವೆ ಅವಗಳಮುಂದೆ ನೀವು ತುಂಬ ಪ್ರಯತ್ನ ಹಾಕಬೇಕಾಗುತ್ತದೆ.
ಮಾರ್ಕೆಟ್ ನಲ್ಲಿ ಸಾವಿರ ಕಂಪನಿ ಇದ್ದರು  ಕೂಡ ಅದಕ್ಕೆ ತಕ್ಕಂತೆ ಜನಸಂಖ್ಯೆಕೂಡ ಹೆಚ್ಚಿದೆ ಆದ್ದರಿಂದ  ನೀವು ಈ ಬ್ಯುಸಿನೆಸ್ ನಲ್ಲಿ ಎಫರ್ಟ್ ಹಾಕಿದ್ದೆ ಆದಲ್ಲಿ ಕಂಡಿತಾ ಉತ್ತಮ ಪ್ರಾಫಿಟ್ ಗಳಿಸಬಹುದು.
ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ .
ಈ ಬ್ಯುಸಿನೆಸ್ ಗೆ ಲಕ್ಷ ಗಟ್ಟಲೆ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments