Wednesday, November 30, 2022
HomeBusinesswashing powder business opportunity | ವಾಷಿಂಗ್ ಪೌಡರ್ ಬ್ಯುಸಿನೆಸ್ | Business Ideas In...

washing powder business opportunity | ವಾಷಿಂಗ್ ಪೌಡರ್ ಬ್ಯುಸಿನೆಸ್ | Business Ideas In Kannada

ವಾಷಿಂಗ್ ಪೌಡರ್ ಬ್ಯುಸಿನೆಸ್

ನಿಮಗೆಲ್ಲ ಗೊತ್ತಿರುವ ಹಾಗೆ  ಸಾಕಷ್ಟು  ಮನೆಯಲ್ಲಿ ವಾಷಿಂಗ್ ಪೌಡರ್ ಹೆಚ್ಚು ಬಳಕೆಮಾಡುತ್ತಾರೆ ಆದ್ದರಿಂದ ಇದಕ್ಕೆ ಮಾರ್ಕೆಟ್ ನಲ್ಲಿ ತುಂಬಾನೇ ಡಿಮ್ಯಾಂಡಿ ಇದೆ.
ಮಾರ್ಕೆಟ್ ನಲ್ಲಿ ಹಲವಾರು ಕಂಪನಿ ಬ್ರಾಂಡ್ ವಾಷಿಂಗ್ ಪೌಡರ್ ಇದೆ ಎಷ್ಟು ಇದ್ದರು ಸಹ ಬೆಳೆಯುತ್ತಿರುವ ಜನಸಂಖ್ಯೆಗೆ ಎಷ್ಟು ಇದ್ದರು ಸಾಲುವುದಿಲ್ಲ ಅದರಿಂದ ನಾನು ಯಾಕೆ  ಈ ಮಾಹಿತಿಯನ್ನು ನಿಮಗೆ ತಿಳಿಸುತ್ತ ಇದ್ದೀನಿ ಅಂದರೆ ನೀವು ಸಹ ನಿಮ್ಮದೇ ಆಗಿರುವ ಬ್ರಾಂಡ್ ಮಾಡಿ ಮಾರಾಟ ಮಾಡಬಹುದು . ಅದು ಹೇಗೆ , ಎಷ್ಟು ಬಂಡವಾಳಬೇಕು , ಮಾರ್ಕೆಟಿಂಗ್ ಮಾಡುವುದು ಹೇಗೆ , ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ , ಎಷ್ಟು ಲಾಭ ಗಳಿಸಬಹುದು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
washing powder business opportunity
ವಾಷಿಂಗ್ ಪೌಡರ್ ಬ್ಯುಸಿನೆಸ್ ಮಾಡುವುದು ಹೇಗೆ?
ಎಷ್ಟು ಬಂಡವಾಳ ಬೇಕು?
ಹೋಲ್ಸೇಲ್ ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದೇ ಹೇಗೆ?
ಲಾಭ ಎಷ್ಟು ಗಳಿಸಬಹುದು?
ವಾಷಿಂಗ್ ಪೌಡರ್ ಬ್ಯುಸಿನೆಸ್ ಮಾಡುವುದು ಹೇಗೆ?
ವಾಷಿಂಗ್ ಪೌಡರ್ ಇದನ್ನು ಮನೆಯಲ್ಲಿ ಬಟ್ಟೆ ವಾಷ್ ಮಾಡಲು ಬಳಕೆ ಮಾಡುತ್ತಾರೆ , ಈ ವಾಷಿಂಗ್ ಪೌಡರ್ ನಿಮಗೆ ಹೋಲ್ಸೇಲ್ ದರದಲ್ಲಿ ಬಲ್ಕ್ ದರದಲ್ಲಿ ಕೆಜಿಯ ಲೆಕ್ಕದಲ್ಲಿ ಸಿಗುತ್ತದೆ ನೀವು ಇದನ್ನು ಖರೀದಿ ಮಾಡಿ ನಿಮ್ಮದೇ ಆಗಿರುವ ಸ್ವಂತ ಬ್ರಾಂಡ್ ಮಾಡಿ ಕಾಲು ಕೆಜಿ , ಅರ್ಧ ಕೆಜಿ , ಒಂದು ಕೆಜಿ ,ಅಥವಾ 5 ರೂಪಾಯಿ, 10 ರೂಪಾಯಿ , 20 ರೂಪಾಯಿ ಹೀಗೆ ನೀವು ಪ್ಯಾಕ್ ಮಾಡಿ ಮಾರಾಟ ಮಾಡಬೇಕು ಇದಕ್ಕೆ ಯಾವುದೇ ದೊಡ್ಡ ಮಷಿನ್ ಬೇಕಾಗಿಲ್ಲ . ಮ್ಯಾನುಯಲ್ ಮಷಿನ್ ನಿಂದ ಕೂಡ ಪ್ಯಾಕ್ ಮಾಡಬಹುದು ಒಂದುವೇಳೆ ನಿಮ್ಮ ಹತ್ತಿರ ಬಂಡವಾಳ ಹೆಚ್ಚು ಇದ್ದರೆ ಅಟೋಮ್ಯಾಟಿಕ್ ಪ್ಯಾಕಿಂಗ್ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ನೀವು ಆರ್ಡರ್ ಕೊಟ್ಟರೆ ಉತ್ತಮ ಗುಣಮಟ್ಟದ ವಾಷಿಂಗ್ ಪೌಡರ್ ಕೊಡುತ್ತಾರೆ ಇದನ್ನು ನೀವೇ ಪ್ಯಾಕ್ ಮಾಡಿ ಮಾರಾಟ ಮಾಡಬಹುದು.
ಇದಕ್ಕೆ ಪ್ಯಾಕಿಂಗ್ ಕವರ್
ಸ್ವಂತ ಬ್ರಾಂಡ್
ಸೀಲಿಂಗ್ ಮಷಿನ್
ಲೈಸೆನ್ಸ್ ಮಾಡಿಸಬೇಕು

ಯಾವ ಲೈಸೆನ್ಸ್ ಮಾಡಿಸಬೆಕು:

ಜಿ ಎಸ್ ಟಿ ಸೇರಿದಂತೆ ಟ್ರೇಡ್ ಲೈಸೆನ್ಸ್ ,
MSME/SSI Registration ,
Trade Mark
IS 4955-1968: Also BIS Registration and IS 4955-1968
washing powder business opportunity

ಎಷ್ಟು ಬಂಡವಾಳ ಬೇಕು?

ನೀವು ಆಟೋಮ್ಯಾಟಿಕ್ ಪ್ಯಾಕಿಂಗ್ ಮಷಿನ್ ಖರೀದಿ ಖರೀದಿಗೆ :- 1,90,000 ರೂ
ಮ್ಯಾನುಯಲ್ ಮಷಿನ್ ಬೆಲೆ : 2000 ರೂ
ಪ್ರಾರಂಭದಲ್ಲಿ ವಾಷಿಂಗ್ ಪೌಡರ್ ಖರೀದಿ ಮಾಡಲು: 30,000ರೂ
ಒಟ್ಟು ಬಂಡವಾಳ: 2,22,000 ರೂ
ಹೋಲ್ಸೇಲ್ ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ನೀವು ವಾಷಿಂಗ್ ಪೌಡರ್ ಪ್ಯಾಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ ಮಾಡುತ್ತೀರಾ ಅಂದರೆ ಹೋಲ್ಸೇಲ್ ರಾ ಮೆಟಿರಿಯಲ್ ಬೇಕಾಗುತ್ತದೆ ಇದು ಎಲ್ಲಿ ಸಿಗುತ್ತದೆ ಅನ್ನುವ ಮಾಹಿತಿಯನ್ನು ನಾನು ಈ ಕೆಳಗೆ ತಿಳಿಸಿದ್ದೇನೆ ನೀವು ಅವರನ್ನು ಸಂಪರ್ಕಿಸಿ ಹೋಲ್ಸೇಲ್ ವಾಷಿಂಗ್ ಪೌಡರ್ ಅನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
washing powder business opportunity
washing powder business opportunity
washing powder business opportunity
ಮಾರ್ಕೆಟಿಂಗ್ ಮಾಡುವುದೇ ಹೇಗೆ?
ದಿನಸಿ ಅಂಗಡಿ ಸೇರಿದಂತೆ , ಹೋಲ್ಸೇಲ್ ಮಾರ್ಕೆಟ್ ಹಾಗೆ, ಸೂಪರ್ ಮಾರ್ಕೆಟ್ ಗಳಿಗೆ ಸೆಲ್ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು.
washing powder business opportunity
ಲಾಭ ಎಷ್ಟು ಗಳಿಸಬಹುದು?
ಪ್ರಾರಂಭದಲ್ಲಿ ನಿಮ್ಮ ಪ್ರಾಫಿಟ್ ಮಾರ್ಜಿನ್ ಸ್ವಲ್ಪ ಕಡಿಮೆ ಇಟ್ಟು ಸೆಲ್ ಮಾಡಿದರೆ ಅಂಗಡಿಯವರಿಗೆ ಹೆಚ್ಚು ಮಾರ್ಜಿನ್ ಸಿಗುವ ಕಾರಣದಿಂದ ಅವರು ನಿಮ್ಮ ಪ್ರಾಡಕ್ಟ್ ನ್ನು ಹೆಚ್ಚಾಗಿ ಸೆಲ್ ಮಾಡುತ್ತಾರೆ ಇದರಿಂದ ನಿಮ್ಮ ಪ್ರಾಡಕ್ಟ್ ಕೂಡ ಹೆಚ್ಚಾಗಿ ಸೆಲ್ ಆಗುತ್ತದೆ ಹಾಗೆ ಪ್ರಾಫಿಟ್ ಕೂಡ ಹೆಚ್ಚು ಗಳಿಸಬಹುದು.
ಹೋಲ್ಸೇಲ್ ಒಂದು ಕೆಜಿ ಡಿಟರ್ಜೆಂಟ್ ಪೌಡರ್ 20 ರೂಪಾಯಿ ಗೆ ಸಿಗುತ್ತದೆ
ಅದನ್ನು ಪ್ಯಾಕ್ ಮಾಡಿ ರಿಟೇಲರ್ ಗೆ ಕೆಜಿಗೆ 80 ರೂ ಗೆ ಮಾರಾಟ ಮಾಡಬಹುದು
ಅವರು ಇದನ್ನು 150 ರೂ ವರೆಗೆ ಮಾರಾಟ ಮಾಡುತ್ತಾರೆ .
ಇದರಿಂದ ನೀವು 60 ರೂಪಾಯಿ ಗಳಿಸಬಹುದು ,
ಇನ್ನು ನೀವು ಡಿಸ್ಟ್ರಿಬ್ಯುಟರ್ ಗೆ ಮಾರಾಟ ಮಾಡಿದರೆ ಅವರಿಗೆ ಒಂದು ಕೆಜಿ ಗೆ 60 ರೂ ಕೊಟ್ಟರು
ನಿಮಗೆ 40 ರೂ ಒಂದು ಕೆಜಿಯ ಮೇಲೆ ಗಳಿಸಬಹುದು ,
ಹೀಗೆ ನೀವು ದಿನಕ್ಕೆ 30 ಕೆಜಿ ಮಾರಾಟ ಮಾಡಿದರೆ
1200 ರೂ ವರೆಗೆ ಲಾಭವನ್ನು ಗಳಿಸಬಹುದು.
ಈ ಬ್ಯುಸಿನೆಸ್ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಹಾಗೆ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಹೇಗಿದೆ ಅನ್ನುವುದರ ಕುರಿತು ಅಂಪೂರ್ಣ ಅಧ್ಯಯನ ನಡೆಸಿ ಬ್ಯುಸಿನೆಸ್ ಮಾಡಿದರೆ ಯಾವುದೇ ನಷ್ಟವಿಲ್ಲದೆ ಉತ್ತಮ ಆದಾಯ ಗಳಿಸಬಹುದು.
RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments