ಹಳ್ಳಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವ 5 ಬ್ಯುಸಿನೆಸ್ ಐಡಿಯಾಗಳು
ಹಳ್ಳಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವ 5 ಬ್ಯುಸಿನೆಸ್ ಐಡಿಯಾಗಳು | business ideas
ಈ ಲೇಖನದಲ್ಲಿ ನಿಮ್ಮ ಹಳ್ಳಿಯಲ್ಲೇ ಮಾಡಬಹುದಾದ ಲಕ್ಷ ಗಳಿಕೆಯ ಬಿಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತೇನೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .
ನರ್ಸರಿ:
ನಿಮ್ಮ ಹಳ್ಳಿಯಲ್ಲಿ ಅಂದರೆ ನಿಮ್ಮ ಮನೆಯ ಅಕ್ಕ ಪಕ್ಕ ಇರುವಂತಹ ಖಾಲಿ ಜಾಗದದಲ್ಲಿ ನೀವು ನರ್ಸರಿ ಮಾಡಿ ಉತ್ತಮ ಲಾಭವನ್ನು ಗಳಿಸಬಹುದು.
ನಿಮಗೆಲ್ಲ ಗೊತ್ತಿರುವ ಹಾಗೆ ನರ್ಸರಿಯಲ್ಲಿ ಹೂವಿನ ಗಿಡ ಸೇರಿದಂತೆ ಅರಣ್ಯ ಕೃಷಿ ಮಾಡಲು
ವಿವಿಧ ರೀತಿಯ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಒಂದು ಹೂವಿನ ಗಿಡದ ಪಾರ್ಟ್ ಗೆ ಕಡಿಮೆ ಅಂದರು 100 ರಿಂದ 150 ರೂ ಗೆ ಸೆಲ್ ಮಾಡುತ್ತಾರೆ.
ನೀವೇ ಯೇಚನೆ ಮಾಡಿ ಪ್ರತಿ ದಿನ 10 ಗಿಡಗಳು ಸೆಲ್ ಆದರೆ 1500 ರ ವರೆಗೆ ಲಾಭವನ್ನು ಗಳಿಸಬಹುದು.
ಕೋಳಿ ಸಾಕಾಣಿಕೆ :
ಹಬ್ಬ ಹರಿದಿನ, ಇತರ ಕಾರ್ಯಕ್ರಮಗಳಿಗೂ ಸೇರಿದಂತೆ ವಾರಕ್ಕೆ 2 ರಿಂದ 3 ದಿನಗಳು ಸಾಮಾನ್ಯವಾಗಿ ನಾನ್ ವೆಜ್
ಮಾಡುವುದರಿಂದ ಸಾಕಷ್ಟು ಚಿಕನ್ ಬೇಕಾಗುತ್ತದೆ. ಹಾಗೆ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ
ಅವರಿಗೆ ಆಹಾರ ಪೂರೈಕೆ ಮಾಡುವುದು ಕಷ್ಟ ಆಗುತ್ತಿದೆ ಒಂದುವೇಳೆ ಪೂರೈಕೆ ಮಾಡಿದರು ಅದರ ಬೆಲೆ ದುಪ್ಪಟ್ಟು ಆಗಿರುತ್ತದೆ.
ಇದಕ್ಕೆ ಕಾರಣ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ ಅನ್ನುವುದು ನಿಮಗೆ ತಿಳಿಯುತ್ತದೆ.
ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಚಿಕನ್ ಬೆಲೆಯಲ್ಲೂ ಸಾಕಷ್ಟು ಹೆಚ್ಚಾಗಿದೆ ಆದ್ದರಿಂದ ನೀವು ಕೋಳಿಸಾಕಾಣಿಕೆ ಮಾಡಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹುದು . ಕೋಳಿ ಸಾಕಾಣಿಕೆ ಮಾಡುವುದು ಅಂದರೆ ಸುಮ್ಮನೆ ಹೇಗೆಬೇಕು ಹಾಗೆ ಮಾಡುವುದಲ್ಲ ಅದಕ್ಕೆ ಒಂದು ಪ್ಲಾನಿಂಗ್ ಮಾಡಿಕೊಳ್ಳಬೇಕು ಹೇಗೆ ಮಾಡಬೇಕು, ಎಲ್ಲಿ ಮಾಡಬೇಕು, ಯಾವ ಯಾವ ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕು ಹೀಗೆ ಹತ್ತು ಹಲವಾರು ಮಾಹಿತಿಯನ್ನು ತಜ್ಞರ ಹತ್ತಿರ ತಿಳಿದುಕೊಂಡು ಮಾಡಬೇಕು ವೈಜ್ಞಾನಿಕ ಪದ್ದತ್ತಿಯಲ್ಲಿ ಕೋಳಿ ಸಾಕಾಣಿಕೆ ಮಾಡಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹದು.

ಕುರಿ ಸಾಕಾಣಿಕೆ :
ಮಟನ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ ಯಾಕೆ ಇಷ್ಟು ಬೆಲೆ ಅಂತ ನೀವು ಕೇಳಬಹುದು . ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹಾಗೆ ಬೇಡಿಕೆಗೆ ತಕ್ಕಂತೆ ಮಟನ್ ಪೂರೈಕೆ ಆಗುತ್ತಿಲ್ಲ ಆದ್ದರಿಂದ ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಕುರಿಯನ್ನು ಎಲ್ಲರೂ ಸಾಕಾಣಿಕೆ ಮಾಡುವುದಿಲ್ಲ , ಸಾಕುವ ಆಸಕ್ತಿ ಇದ್ದವರಿಗೆ ಹತ್ತಾರು ಸಮಸ್ಯೆಗಳು ಇರುತ್ತವೆ. ನಿಮಗೆ ಈ ಕುರಿ ಸಾಕಾಣಿಕೆ ಮಾಡುವುದರ ಕುರಿತು ಆಸಕ್ತಿ ಇದ್ದರೆ ಹಾಗೆ ಅದಕ್ಕೆ ಬೇಕಾದ ಸ್ಥಳಾವಕಾಶ ಇದ್ದರೆ ನೀವು ತುಂಬಾ ಸರಳವಾಗಿ ಕುರಿ ಸಾಕಾಣಿಕೆ ಮಾಡಬಹುದು . ಇದಕ್ಕೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಮಾಡಿದರೆ ಯಾವುದೇ ನಷ್ಟ ವಿಲ್ಲದೆ ಉತ್ತಮ ಆದಾಯ ಗಳಿಸಬಹುದು.
business ideas
ಮೀನು ಸಾಕಾಣಿಕೆ :
ನಿಮಗೆ ಜಮೀನು ಹೆಚ್ಚು ಇದ್ದರೆ ಹಾಗೆ ನೀರಿನ ಸೌಕರ್ಯ ಚೆನ್ನಾಗಿ ಇದ್ದರೆ ನೀವು ಈ ಮೀನು ಸಾಕಾಣಿಕೆ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು . ನೀವು ಮೀನು ಸಾಕಾಣಿಕೆ ಮಾಡಬೇಕು ಅಂದುಕೊಂಡರೆ ಪ್ರಾರಂಭದಲ್ಲಿ ತಪ್ಪದೆ ತರಭೇತಿಯನ್ನು ಪಡೆಯಬೇಕಾಗುತ್ತದೆ . ಹೀಗೆ ತರಬೇತಿ ಪಡೆದುಕೊಂಡು ಮಾಡಿದ್ದೆ ಆದಲ್ಲಿ ಹೆಚ್ಚು ಹೆಚ್ಚು ಮೀನುಗಳನ್ನು ಬೆಳೆಸಿ ಮಾರಾಟ ಮಾಡಬಹುದು . ನಿಮಗೆ ಗೊತ್ತಿರುವ ಹಾಗೆ ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಸಾಕಷ್ಟು ಹೆಚ್ಚು ಇದೆ ಅಷ್ಟೇ ಅಲ್ಲ ಇದಕೆ ಬೇಡಿಕೆ ಕೂಡ ಹೆಚ್ಚು ಇದೆ. ಸರಿಯಾದ ಸಮಯಕ್ಕೆ ಸಾಕಷ್ಟು ಉತ್ಪತಿ ಆಗುತ್ತಿಲ್ಲ ಆದ್ದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ನೀವು ಮೀನು ಸಾಕಾಣಿಕೆ ಮಾಡಿದರೆ ಯಾವುದೇ ನಷ್ಟವಿಲ್ಲದೆ ಉತ್ತಮ ಲಾಭವನ್ನು ಗಳಿಸಬಹುದು .
[…] […]