Thursday, June 23, 2022
HomeBusiness NewsVermiculture Business Ideas In Kannada | ಎರೆಹುಳು ಗೊಬ್ಬರವನ್ನು ತಯಾರಿಸುವ ಬ್ಯುಸಿನೆಸ್ ಐಡಿಯಾ

Vermiculture Business Ideas In Kannada | ಎರೆಹುಳು ಗೊಬ್ಬರವನ್ನು ತಯಾರಿಸುವ ಬ್ಯುಸಿನೆಸ್ ಐಡಿಯಾ

 

ಎರೆ ಗೊಬ್ಬರ ರಾಸಾಯನಿಕ ರಹಿತ ಕೃಷಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ ವಿವಿಧ ಪೋಶಕಾಂಶವನ್ನು ಒಳಗೊಂಡ ಇದನ್ನು ಇವತ್ತು ಬಹಳಷ್ಟು ರೈತರು ಬಳಕೆ ಮಾಡುತಿದ್ದಾರೆ
ಕೆಲವರು ರೈತರು ಎರೆ ಗೊಬ್ಬರವನ್ನು ತಮ್ಮದೇ ಜಮೀನಿನಲ್ಲಿ ತಯಾರಿಸಿ ಬಳಸುತ್ತಿದ್ದರೆ ಇನ್ನು ಕೆಲವು ರೈತರು ಬೇರೆಕಡೆಯಿಂದ ಹಣಕೊಟ್ಟು ಖರೀದಿಸುತ್ತಾರೆ.

ಎರೆಹುಳು ಗೊಬ್ಬರವನ್ನು ತಯಾರಿಸುವವರು ವೈಜ್ಞಾನಿಕ ವಿಧಾನವನ್ನು ಅನುಸರಿಸೋದು ಬಹುಮುಖ್ಯವಾಗಿದೆ  ಇತ್ತೀಚಿಗಿನ ದಿನಗಳಲ್ಲಿ ಕೃಷಿಯಲ್ಲಿ ಅಧಿಕ ಪ್ರಮಾಣದ ರಸಗೊಬ್ಬರ ಮತ್ತು ಔಷದಿಯ ಬಳಕೆ ತುಂಬಾನೇ ಹೆಚ್ಚಾಗುತ್ತಿದೆ ಇದರಿಂದ ಕೃಷಿಯಲ್ಲಿ ಉತ್ಪಾದನ ವೆಚ್ಚ ಹೆಚ್ಚು ಆಗುತ್ತಿದೆ ಇಷ್ಟೇ ಅಲ್ಲದೆ ಭೂಮಿ ಕೂಡ ತನ್ನ ಸತ್ವವನ್ನು ಕಳೆದುಕೊಂಡು ಬಂಜರಾಗುತ್ತಿದೆ.

Vermiculture

ಅದಕ್ಕಾಗಿ ಅನೇಕ ರೈತರು ಸಾವಯುವ ಕೃಷಿ ಬಗ್ಗೆ ಗಮನ ಹರಿಸುತ್ತಿದ್ದಾರೆ . ಈ ಸಾವಯುವ ಕೃಷಿಯಲ್ಲಿ ವಿವಿಧರೀತಿಯ ಗೊಬ್ಬರವನ್ನು ಬಳಸುವುದುಟ್ಟು ಅದರಲ್ಲಿ ಎರೆಹುಳು ಗೊಬ್ಬರಕೂಡ ಒಂದು.

ಎರೆ ಹುಳು ಗೊಬ್ಬರ ಬೆಳೆಗೆ ಬೇಕಾದ ಪೋಷಕಾಂಶವನ್ನು ಅತಿ ಶೀಘ್ರದಲ್ಲಿ ಒದಗಿಸುತ್ತದೆ ಜೊತೆಗೆ ಸಸ್ಯ ಪ್ರಚೋದಕವಾಗಿ ಕೆಲಸ ಮಾಡುತ್ತದೆ ಅಲ್ಲದೆ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿಯನ್ನು ತುಂಬಿ ಅಧಿಕ ಇಳುವರಿ ಪಡೆಯಲು ಸಹಾಯ ಮಾಡುತ್ತದೆ. 

 

ಪೋಷಕಾಂಶಗಳ ಆಗರವಾಗಿರುವ ಎರೆಹುಳು ಗೊಬ್ಬರವನ್ನು ಬಹಳ ಸರಳವಾಗಿ ತಯಾರಿಸಿಕೊಳ್ಳಬಹದು ಅದು ಹೇಗೆ ಅಂತ ಈ ಕೆಳಗೆ ತಿಳಿಸಿಕೊಡುತ್ತೇನೆ.

ತಮ್ಮ ಉಪಯೋಗಕ್ಕೆ ತಕ್ಕಂತೆ ಹಾಗೆ ಬಂಡವಾಳಕ್ಕೆ ತಕ್ಕಂತೆ ತೊಟ್ಟಿ ಮಾಡಿಕೊಂಡು ಅಥವಾ ಗುಂಡಿಯ ಮೇಲ್ಮೈ ನಲ್ಲಿ ಕೂಡ ತಯಾರಿಸಬಹುದು

ಎರೆಹುಳು ಗೊಬ್ಬರ ಸಾರಜನಕ,ರಂಜಕ, ಪೊಟ್ಯಾಷ್ ಇತರೆ ಪೋಷಕಾಂಶವನ್ನು ಹೊಂದಿದೆ.

ಎರೆಹುಳು ಗೊಬ್ಬರವನ್ನು ಬಹಳ ಸರಳವಾಗಿ ತಯಾರಿಸಿಕೊಳ್ಳಬಹದು ಅದು ಹೇಗೆ?

ಭೂಮಿಯ ಮೇಲೆ ತೊಟ್ಟಿಯ ಅಳತೆ ಹೀಗಿರಲಿ

2-ಅಡಿ ಆಳ

3-ಅಡಿ ಅಗಲ

30ಅಡಿ ಉದ್ದ

ಭೂಮಿಯ ಆಳದಲ್ಲಿ ತೊಟ್ಟಿಯ ಅಳತೆ ಹೀಗಿರಲಿ

2ಅಡಿ ಆಳ

3ಅಡಿ ಅಗಲ

30ಅಡಿ ಉದ್ದ

ತೊಟ್ಟಿಯಲ್ಲಿ ಹೆಚ್ಚು ನೀರು ನಿಲ್ಲದಹಾಗೆ ನೋಡಿಕೊಳ್ಳಬೇಕು 

 

ಹೆಚ್ಚು ಬಿಸಿಲು ಬೀಳದಹಾಗೆ ನೋಡಿಕೊಳ್ಳಬೇಕು ಅಂದರೆ ಮರದ ಕೆಳಗೆ ಅಥವಾ ಶೆಡ್ ನಿರ್ಮಾಣ ಮಾಡಬೇಕು.

ಅರ್ಧ ಕೊಳೆತ ಕಸಗಳನ್ನು ಹಾಕಬೇಕು ಎರೆ ಹುಳುಗಳು ಒಣಗಿರುವ ಕಸವನ್ನು ಇಷ್ಟಪಡುವುದಿಲ್ಲ.

ಕಸವನ್ನು ಚೆನ್ನಾಗಿ ನೆನಸಿ ಸಗಣಿ ರಾಡಿ ಮತ್ತು ನೀರನ್ನು ಹಾಕಿ ಚೆನ್ನಾಗಿ  ಕೊಳೆತ ಸ್ಥಿತಿಗೆ ತೆಗೆದುಕೊಂಡು ಬರಬೇಕು ನಂತರ ಎರೆಹುಳು ತೊಟ್ಟಿಗೆ ಹಾಕಬೇಕು 

ನಂತರ ಇದರಮೇಲೆ ಸಗಣಿ ರಾಡಿಯನ್ನು ಚೆನ್ನಾಗಿ ಹರಡಬೇಕು ಇದೆ ರೀತಿ ನಾಲ್ಕು ಪದರಗಳನ್ನು ಮಾಡಬೇಕು.

ತೊಟ್ಟಿಯ ಮೇಲೆ ಒಂದು ಅಡಿ ಬರುವಂತೆ ಕಸವನ್ನು ಹಾಕಬೇಕು ಯಾಕಂದರೆ ಇದು ನಂತರದ ದಿನಗಳಲ್ಲಿ ಕುಸಿಯುತ್ತದೆ

ಇದಾದ ಒಂದು ಚದುರ ಮೀಟರ್ ಗೆ ಒಂದು ಕೆಜಿ ಎರೆಹುಳುಗಳನ್ನು ಸೇರಿಸಬೇಕು ಹೀಗೆ ಮಾಡುವುದರಿಂದ ಕೇವಲ ಎರಡು ತಿಂಗಳಲ್ಲಿ ನಮಗೆ ಅತ್ಯುತ್ತಮ ಗೊಬ್ಬರ ಸಿಗುತ್ತದೆ.

 

ಈ ಎರೆ ಹುಳು ಸಾವಯುವ ಕೃಷಿ ಸಂಶೋಧನಾ ಕೇಂದ್ರದಲ್ಲಿದ್ದು ಪ್ರತಿ ಕೆಜಿಗೆ ರೂಪಾಯಿ ಇಂದ ಪ್ರಾರಂಭ ಆಗುತ್ತದೆ

 ಸಿಮೆಂಟ್ ತೊಟ್ಟಿಯನ್ನು ತಯಾರಿಸಿ ಎರೆಹುಳು ಗೊಬ್ಬರ ತಯಾರಿಸಲು ಸಾಧ್ಯವಿಲ್ಲ ಅಂದರೆ ನೀವು ನೆಲದಲ್ಲೇ ಗುಂಡಿಯನ್ನು ತೆಗೆದು ಮಾಡಬಹದು 

ನಿಮ್ಮ ಬೂಮಿಗೆ ಬಳಕೆ ಮಾಡುವುದಷ್ಟೇ ಅಲ್ಲದೆ ಎರೆಗೊಬ್ಬರ ತಯಾರಿಕೆಯನ್ನೇ ಒಂದು ಲಾಭದಾಯಕ ಉದ್ಯೋಗವನ್ನಾಗಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ ಆದರೆ ವೈಜ್ಞಾನಿಕ ತಳಹದಿಯಮೇಲೆ  ಮಾಡಿದಾಗ ಮಾತ್ರ ಲಾಭದಾಯಕವಾಗಲು ಸಾಧ್ಯ.

Vermiculture

business

RELATED ARTICLES

3 COMMENTS

LEAVE A REPLY

Please enter your comment!
Please enter your name here

Most Popular

Recent Comments