ತರಕಾರಿ ನರ್ಸರಿ ಬೇಸಾಯ ಮಾಡುವುದು ಹೇಗೆ?
ತರಕಾರಿ ನರ್ಸರಿ ಬೇಸಾಯ ಮಾಡುವುದು ಹೇಗೆ?
ಎಷ್ಟು ಬಂಡವಾಳ ಬೇಕು?
ಮಾರ್ಕೆಟಿಂಗ್ ಮಾಡುವುದು ಹೇಗೆ ?
ಎಷ್ಟು ಲಾಭ ಗಳಿಸಬಹುದು ?
ತರಕಾರಿ ನರ್ಸರಿ ಬೇಸಾಯ ಮಾಡುವುದು ಹೇಗೆ?
ದಿನನಿತ್ಯ ಆಹಾರದಲ್ಲಿ ಪ್ರಮುಖ ಪಾತ್ರವಹಿಸುವ ತರಕಾರಿಗಳನ್ನು ಇತರ ಬೆಳೆಗಳ ಜೊತೆ ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ಕೊಡುವ ತರಕಾರಿಬೆಳೆಯನ್ನು ನೀವು ಬೆಳೆದಿದ್ದೆ ಆದಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದು. ಅಥವಾ ತರಕಾರಿ ಸಸಿ ಬೆಳಸಿ ಮಾರಾಟ ಮಾಡಿ ಶೇಡ್ ನೆಟ್ ಹಾಕಿಕೊಂಡು ಉತ್ತಮ ಗುಣಮಟ್ಟದ ಸಸಿ ಬೆಳೆಸಿ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು.
ನರ್ಸರಿಯಲ್ಲಿ ಸಸ್ಯಯೋತ್ಪಾದನೆ ಮಾಡಲು ಸಸಿಗಳ ಸಂರಕ್ಳ್ಷಣೆ ಮಾಡಲು ಸೂಕ್ತ ಸಸ್ಯ ಸಂರಕ್ಷಣಾ ಕ್ರಮವನ್ನು ಅನುಸರಿಸಬೇಕು.
ಉತ್ತಮ ಗುಣಮಟ್ಟದ ಬೀಜವನ್ನು ಖರೀದಿಸಿ ತಂದು ಅದಕ್ಕೆ ಪ್ರಾರಂಭದಲ್ಲಿ ಸಂಬಂದಿಸಿದ ಔಷದಿಯಲ್ಲಿ ನೆನೆಸಿ ಬಿತ್ತನೆ ಮಾಡಬೇಕು.
ಕೃಷಿ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು ತರಕಾರಿ ಸಸಿ ಬೆಳೆದರೆ ನಷ್ಟವನ್ನು ತಪ್ಪಿಸಬಹುದು
ಮಣ್ಣು ಮಿಶ್ರಣ:-
ಸಸಿಯನ್ನು ಬೆಳೆಸಲು ಬೇಕಾಗುವ ಉತ್ತಮ ಗುಣಮಟ್ಟದ ಮಣ್ಣು ಮಿಶ್ರಣ ಮಾಡಿ ಹಾಗೆ ತಜ್ಞರು ಸಲಹೆ ಕೊಟ್ಟ ಗೊಬ್ಬರವನ್ನು ಮಿಶ್ರಣ ಮಾಡಬೇಕು .
ಹೀಗೆ ಮಿಶನ ಮಾಡಿರುವ ಮಣ್ಣನ್ನು ಕೊಕೊ ಫೀಟ್ ಗೆ ಹಾಕಬೇಕು. ಹೀಗೆ ಕೊಕೊ ಫೀಟ್ ಗೆ ತುಂಬಿದಮೇಲೆ ಅದಕ್ಕೆ ಬೀಜವನ್ನು ಬಿತ್ತನೆ ಮಾಡಬೇಕು.
ಉತ್ತಮ ಗುಣಮಟ್ಟದ ಯಾವುದೇ ರೋಗ ಇಲ್ಲದ ಬೀಜವನ್ನು ಕೊಕೊ ಫೀಟ್ ನಲ್ಲಿ ಬಿತ್ತನೆ ಮಾಡಬೇಕು
ಬಿತ್ತನೆ ಮಡಿದ ಮೇಲೆ ಅದಕ್ಕೆ ಸೂಕ್ತವಾದ ನೀರಿನ ವ್ಯವಸ್ಥೆ ಹಾಗೆ ಗೊಬ್ಬರ ಔಷಧಿಯ ವ್ಯವಸ್ಥೆಯನ್ನು ಮಾಡಬೇಕು ಹೀಗೆ ನೀವು ಚೆನ್ನಾಗಿ ಆರೈಕೆ ಮಾಡಿದ ಸಸಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ
ಸೀಸನ್ ಗೆ ತಕ್ಕಂತೆ ಸಸಿಯನ್ನು ಬೆಳೆಯಬೇಕು , ಸೀಸನ್ ಗೆ ತಕ್ಕಂತೆ ಸಸಿಮಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು.
ಬೀಜ ಹಾಕಿದ ನಂತರ ಸಸಿ ಕೃಷಿ ಮಾಡುವುದಕ್ಕೆ ಬರುವ ದಿನಗಳು
ಟೊಮೊಟೊ-25 ದಿನಗಳು
ಬದನೆಕಾಯಿ-30 ದಿನಗಳು
ಹೂವುಕೋಸು-30 ದಿನಗಳು
ಗೆಡ್ಡೆಕೋಸು-30 ದಿನಗಳು
ಮೆಣಸಿನಕಾಯಿ-45 ದಿನಗಳು
ಹೀಗೆ ನಿಮ್ಮ ಊರಲ್ಲಿ ಹೆಚ್ಚಾಗಿ ಯಾವ ತರಕಾರಿಯನ್ನು ಬೆಳೆಯುತ್ತಾರೋ ಅದರ ಸಸಿಯನ್ನು ನೀವು ಬೆಳೆಸಿ ಮಾರಾಟ ಮಾಡಬಹುದು.
ಬಂಡವಾಳ ಎಷ್ಟು ಬೇಕು:
ಇದಕ್ಕೆ ಮೊದಲಸಾರಿ ಶೇಡ್ ನೆಟ್ ಖರೀದಿ ಮಾಡಬೇಕಾಗುತ್ತದೆ ಹಾಗೆ ಕೊಕೊ ಫೀಟ್ ಖರೀದಿಸಬೇಕು ನಂತರ ಬೀಜಗಳು ಹಾಗೆ ಔಷಿದಿ ಗೊಬ್ಬರವನ್ನು ಖರೀದಿಸಿ ಬಿತ್ತನೆ ಮಾಡಬೇಕು ಅಂದರೆ ಅಂದಾಜು ೪೦ ಸಾವಿರ ಖರ್ಚು ಬರುತ್ತದೆ ನೀವು ಎಷ್ಟು ಅಡಿ ಸುತ್ತಳೆತೆಯಲ್ಲಿ ಸಸಿಯನ್ನು ಬೆಳೆಸುತ್ತೀರಿ ಅನ್ನುವುದರೆ ಮೇಲೆ ಖರ್ಚು ನಿಗದಿಯಾಗಿರುತ್ತದೆ .
Vegetable cultivation in Nursery
ಲಾಭ ಎಷ್ಟು ಗಳಿಸಬಹುದು :
ಒಂದೊಂದು ಸಸಿಗೆ ಒಂದೊಂದು ಬೆಲೆ ಇದೆ,
ಟೊಮೊಟೊ- 50 ಪೈಸೆ
ಬದನೆಕಾಯಿ-60 ಪೈಸೆ
ಹೂವುಕೋಸು-50 ಪೈಸೆ
ಗೆಡ್ಡೆಕೋಸು-50 ಪೈಸೆ
ಮೆಣಸಿನಕಾಯಿ-80 ಪೈಸೆ
ಸಸ್ಯತ್ಪಾದನೆಯಲ್ಲಿ ಸಸಿಗಳನ್ನು ಹೆಚ್ಚು ಮುತುವರ್ಜಿ ವಹಿಸಿ ಪೋಶಿಸಿಸುವುದರಿಂದ ಸಸಿಗಳಲ್ಲಿ ಗುಣಮಟ್ಟ ವೃದ್ಧಿಗೊಂಡು ಅಧಿಕ ಲಾಭ ಪಡೆಯಬಹುದು.
Vegetable cultivation in Nursery
ಗಾಣದ ಎಣ್ಣೆ ಬ್ಯುಸಿನೆಸ್ ಮಾಡುವುದು ಹೇಗೆ? | How to Start a Oil Mill Business? | NEWS IN KANNADA
[…] ತರಕಾರಿ ನರ್ಸರಿ ಬೇಸಾಯ ಮಾಡುವುದು ಹೇಗೆ? | Veget… […]