Tuesday, September 27, 2022
HomeAgricultureವೆನಿಲ್ಲಾ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ | vanilla cultivation in karnataka

ವೆನಿಲ್ಲಾ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ | vanilla cultivation in karnataka

ವೆನಿಲ್ಲಾ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ

 

ಈ ಲೇಖನದಲ್ಲಿ ಅತೀ ಹೆಚ್ಚು ಲಾಭವನ್ನು ತಂದುಕೊಡುವ ವೆನಿಲ್ಲಾ ಕೃಷಿ ಕುರಿತು ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ನಿಮಗೆ ಈ ಪ್ರಯತ್ನ ಇಷ್ಟ ಆದರೆ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ 
ವೆನಿಲ್ಲಾ ಎಲ್ಲಾ ಬೆಳೆಯು ಉಷ್ಣವಲಯದ ಆರ್ಕಿಡ್ ಬೆಳೆಯಾಗಿದ್ದು ಇದನ್ನು ಸುವಾಸಿತ ಕಾಯಿಗಳಿಗಾಗಿ ಬೆಳೆಯಲಾಗುತ್ತಿದೆ .
ಉಷ್ಣ ಹಾಗೂ ಆರ್ಧ್ರ ಹವೆಯಲ್ಲಿ ಮೇಲಿಂದ ಮೇಲೆ ಮಳೆ ಬೀಳುತ್ತಿರುವಂತಹ ವತಾವರಣವನ್ನು ಬಯಸುತ್ತದೆ .
ನಿತ್ಯ ಹರಿದ್ವರ್ಣ ಅರಣ್ಯ ಪ್ರದೇಶಗಳು ಈ ಬೆಳೆಯನ್ನು ಬೆಳೆಯಲು ಯೋಗ್ಯ ಪ್ರದೇಶಗಳಾಗಿವೆ.
vanilla cultivation in karnataka

ಮಣ್ಣು ಮತ್ತು ಹವಾಗುಣ :

ವೆನಿಲ್ಲಾವನ್ನು ವಿವಿಧ ತರಹದ ಮಣ್ಣುಗಳಲ್ಲಿ ಬೆಳೆಯಬಹುದಾದರೂ , ಮರಳು ಮಿಶ್ರಿತ ಗೋಡು ಮಣ್ಣು ಹಾಗೂ ರಸಸಾರ 6 – 6.5 ಇರುವುದು ಸೂಕ್ತ .
ವಾರ್ಷಿಕ 1500 ರಿಂದ 3000 ಮಿ . ಮೀ . ಮಳೆ ಬೀಳುವ ಮತ್ತು 20 ರಿಂದ 32 ° ಸೆ , ಉಷ್ಣತೆ ಮತ್ತು ಸಮುದ್ರ ಮಟ್ಟದಿಂದ 700 – 1500 ಮೀಟರ್ ಎತ್ತರವಿರುವ ಪ್ರದೇಶಗಳು ಸೂಕ್ತ .
ಈ ಬಳ್ಳಿಗಳಿಗೆ ನೆರಳು ಅಗತ್ಯ ಪ್ರಾಕೃತಿಕವಾಗಿಯೇ ನೆರಳು ಲಭ್ಯವಿಲ್ಲದಿದ್ದಲ್ಲಿ ನೆರಳಿಗೋಸ್ಕರ ಮರಳನ್ನು ಬೆಳೆಸಿ , ತೆಂಗು ಮತ್ತು ಅಡಿಕೆ ತೋಟದ ನೆರಳಿನಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು .
ವೆನಿಲ್ಲಾ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಕೊಡಬೇಕು .
ಇದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದುಕೊಳ್ಳಲು ಮತ್ತು ಬೇರು ಹರಡಿಕೊಳ್ಳಲು ಸಹಾಯವಾಗುತ್ತದೆ .
ಆದುದರಿಂದ ವರ್ಷದಲ್ಲಿ 2-3 ಬಾರಿ ಚೆನ್ನಾಗಿ ಕಳಿತ ಸಸ್ಯ ಜನ್ಯ ಸಾವಯವ ಗೊಬ್ಬರ ಕೊಡಬೇಕು ,
ಬಳ್ಳಿಗಳಿಗೆ ಶೇ . 1 ರ 17 : 17 : 17 ( NPK ) ಮಿಶ್ರಣವನ್ನು ಪ್ರತಿ ತಿಂಗಳಿಗೆ ಒಂದು ಸಾರಿ ಸಿಂಪರಿಸಿದರೆ ಉತ್ತಮ ಬೆಳವಣಿಗೆ ಹಾಗೂ ಹೂಗಳು ಉತ್ಪಾದನೆಯಾಗುತ್ತವೆ .
vanilla cultivation in karnataka
ತೋಟಗಳ ನಿರ್ವಹಣೆ :
ಬಳ್ಳಿಗಳು ಬೆಳೆದ ನಂತರ ನಿರಂತರವಾಗಿ ಗಮನ ಕೊಟ್ಟು ಬಳ್ಳಿಗಳ ಸುತ್ತಲೂ ಕಳಿತ ಗೊಬ್ಬರ ಇರುವಂತೆ ನೋಡಿಕೊಳ್ಳಬೇಕು .
ಯಾವುದೇ ಅಂತರ ಬೇಸಾಯ ಮಾಡುವಾಗ ಬೇರುಗಳಿಗೆ ಹಾನಿಯಾಗದಂತೆ ಎಚ್ಚರವಹಿಸಬೇಕು .
ಆಸರೆ ಗಿಡಗಳು 135 ಸೆಂ.ಮೀ. ಎತ್ತರಕ್ಕೆ ಬೆಳೆದಾಗ ಕತ್ತರಿಸಿ ಹೆಚ್ಚು ರೆಂಬೆಗಳು ಬರುವಂತೆ ಮಾಡಬೇಕು .
ರೆಂಬೆಗಳನ್ನು ಛತ್ರಿ ಆಕಾರದಲ್ಲಿ ಬೆಳೆಸುವುದರಿಂದ ಬಳ್ಳಿಗಳಿಗೆ ನೆರಳು ದೊರಕಿ ಉತ್ತಮವಾಗಿ ಬೆಳೆಯುತ್ತವೆ .

ಕಾಲ ಮತ್ತು ನಾಟಿ ಮಾಡುವ ವಿಧಾನ :

ವೆನಿಲ್ಲಾ ಬಳ್ಳಿಯಾಗಿದ್ದು ಬೆಳೆಯಲು 120-150 ಸೆಂ.ಮೀ. ಎತ್ತರದ ಆಸರೆ ಅವಶ್ಯಕ .
ಹಾಲವಾಣ , ಜೆಟೊಪ , ಗ್ಲಿರಿಸಿಡಿಯಾ , ದೇವಕಣಿಗಲೆ , ಹಿಪ್ಪುನೇರಳೆ ಗಿಡಗಳನ್ನು ಆಸರೆ ಗಿಡಗಳಾಗಿ ಬೆಳೆಸಬಹುದಾಗಿದೆ .
ಇವುಗಳನ್ನು ಒಂದು ವರ್ಷ ಮೊದಲು 2.5 ಮೀ . X 2. ಮೀ . ಅಂತರದಲ್ಲಿ ನಾಟಿ ಮಾಡಬೇಕು ಅಥವಾ
ಆಧಾರ ಗಿಡಗಳ 125 -150 ಸೆಂ.ಮೀ. ಉದ್ದದ ಕಾಂಡದ ತುಂಡುಗಳನ್ನು ಮೇ – ಜೂನ್ ತಿಂಗಳಲ್ಲಿ ನೆಟ್ಟು , ಅವು ಚಿಗುರೊಡೆದು ರೆಂಬೆ – ಕೊಂಬೆಗಳು ಬಂದ ನಂತರ ವೆನಿಲ್ಲಾ ಬಳ್ಳಿಯನ್ನು ನೆಡಬೇಕು .
ಬೇರು ಬಂದಿರುವ ಬಳ್ಳಿಯಾದರೆ 100 ಸೆಂ.ಮೀ. ಉದ್ದವಿರುವುದನ್ನು ಬಳಸಿ , ಬೇರು ಬರಿಸಿದ ತುಂಡುಗಳಾದರೆ 45 ರಿಂದ 50 ಸೆಂ.ಮೀ. ಉದ್ದವಿರುವುದನ್ನು ನಾಟಿಗೆ ಉಪಯೋಗಿಸುವುದು ಒಳ್ಳೆಯದು
, ವೆನಿಲ್ಲಾ ಬಳ್ಳಿಯನ್ನು ಅತಿ ಹೆಚ್ಚು ಮಳೆ ಬೀಳುವಾಗ ಹಾಗೂ ಅತಿ ಒಣ ಹವಾಮಾನವಿರುವಾಗ ನಾಟಿ ಮಾಡುವುದು ಸೂಕ್ತವಲ್ಲ ,
ಆಧಾರ ಮರದಿಂದ ಈಶಾನ್ಯ ದಿಕ್ಕಿಗೆ 40 X 40 X 40 ಸೆಂ.ಮೀ. ಗಾತ್ರದ ಗುಣಿಗಳನ್ನು ತೆಗೆದು , ಗುಣಿಯ ಮಧ್ಯಭಾಗದಲ್ಲಿ ಬಳ್ಳಿಯ ತುಂಡುಗಳನ್ನು ನಾಟಿ ಮಾಡಿ , ಆಧಾರ ಮರಕ್ಕೆ ಕಟ್ಟಬೇಕು .
ಆಧಾರ ಮರವನ್ನು 135 ಸೆಂ.ಮೀ. ಎತ್ತರದವರೆಗೆ ಬೆಳೆಯಲು ಬಿಡಬೇಕು .
vanilla cultivation in karnataka

ಕೃತರ ಪರಾಗಸ್ಪರ್ಶ :

ಬಳ್ಳಿಗಳು ನಾಟಿ ಮಾಡಿದ 3 ವರ್ಷಗಳ ನಂತರ ಹೂ ಬಿಡಲು ಪ್ರಾರಂಭಿಸುತ್ತವೆ .
ಬಳ್ಳಿಗಳ ತುದಿಯನ್ನು ಚಿವುಟ ಹಾಕುವುದರಿಂದ ಬಳ್ಳಿಗಳು ಬೇಗ ಹೂ ಬಿಡುತ್ತವೆ .
ಹೂಗಳಲ್ಲಿ ಸ್ವಯಂ ಪರಾಗಸ್ಪರ್ಶ ಕ್ಲಿಷ್ಟಕರವಾಗಿದ್ದು ಉತ್ತಮವಾಗಿ ಕಾಯಿ ಕಚ್ಚಲು ಕೃತಕ ಪರಾಗಸ್ಪರ್ಶ ಸಹಾಯಕವಾಗುತ್ತದೆ .
ಕೈಯಿಂದ ಪ್ರತಿ ದಿನ ಬೆಳಿಗ್ಗೆ 6 ರಿಂದ 1 ಗಂಟೆಯ ತನಕ ಪರಾಗಸ್ಪರ್ಶ ಮಾಡಬೇಕು .
ಒಬ್ಬರು ಸುಮಾರು 1000-1500 ಹೂಗಳಿಗೆ ಕೈಯಿಂದ ಪರಾಗಸ್ಪರ್ಶವನ್ನು ಮಾಡಬಹುದು ,

ಕೊಯ್ಲು ಮತ್ತು ಸಂಸ್ಕರಣೆ :

ಬೇಸಾಯ ಪ್ರದೇಶವನ್ನು ಅವಲಂಬಿಸಿ ನಾಟಿ ಮಾಡಿದ 8 ರಿಂದ 9 ತಿಂಗಳಿಗೆ ಬಳ್ಳಿಗಳು ಕಾಯಿ ಬಿಡುತ್ತವೆ .
ಬಲಿತ ಕಾಯಿಗಳು ಹಸಿರು ಬಣ್ಣದಿಂದ ಕೂಡಿದ್ದು ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು .
ಈ ಹಂತದಲ್ಲಿ ನೈಜ ಸುವಾಸನೆ ಇರುವುದಿಲ್ಲ .
ಸಂಸ್ಕರಣೆ ಮಾಡುವಾಗ ನೈಜ ಸುವಾಸನೆ ರಾಸಾಯನಿಕ ಕ್ರಿಯೆಗಳಿಂದ ಉತ್ಪತ್ತಿಯಾಗುತ್ತದೆ .
vanilla cultivation in karnataka

 

ವೆನಿಲ್ಲಾ ಸಂಸ್ಕರಣೆಯ ನಾಲ್ಕು ಹಂತಗಳು

ಕಾಯಿಗಳನ್ನು ನಿರ್ಜೀವಗೊಳಿಸುವುದು :
ಕಾಯಿಗಳನ್ನು ಸ್ವಚ್ಛಗೊಳಿಸಿ 60-65 ° ಸೆ.ಉಷ್ಣತೆಯ ಬಿಸಿ ನೀರಿನಲ್ಲಿ 3 ನಿಮಿಷ ಅದ್ದಬೇಕು .
ಇದರಿಂದ ಕಾಯಿಗಳ ಮಾಗುವಿಕೆ ಸ್ಥಗಿತಗೊಂಡು ಸುವಾಸನೆಗೆ ಕಾರಣವಾದ ಕಿಣ್ವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ

ಬೆವರಿಸುವುದು :

ಒಂದು ಮೀ . ಎತ್ತರದ ಗಾಳಿಯಾಡುವ ಅಟ್ಟದಂತಹ ಜಾಗದ ಮೇಲೆ ಪ್ರತೀ ದಿನ ಬೆಳಿಗ್ಗೆ ಸುಮಾರು 1,30 -2.00 ಗಂಟೆ ಸಮಯ ಬಿಸಿ ನೀರಿನಲ್ಲಿ ಅದ್ದಿದ ಕಾಯಿಗಳನ್ನು ಬಿಸಿಲಿನಲ್ಲಿಡಬೇಕು .
ನಂತರ ಕಾಯಿಗಳನ್ನು ಬಿಸಿಯಿದ್ದಾಗಲೇ ಕಂಬಳಿಯಲ್ಲಿ ಸುತ್ತಿ ಗಾಳಿಯಾಡದ ಮರದ ಪೆಟ್ಟಿಗೆಯಲ್ಲಿರಿಸಬೇಕು .
ಮರುದಿನ ಕಾಯಿಗಳು ಚಾಕೋಲೇಟ್ ಕಂದು ಬಣ್ಣಕ್ಕೆ ತಿರುಗಿರುತ್ತವೆ .
ಅವುಗಳನ್ನು ಮತ್ತೆ ಹಿಂದಿನಂತೆ ಬಿಸಿಲಿನಲ್ಲಿಟ್ಟು ಉಷ್ಣತೆ ನಷ್ಟವಾಗದಂತೆ ನೋಡಿಕೊಳ್ಳಬೇಕು . ಇದೇ ಕ್ರಮವನ್ನು 10 -12 ದಿನಗಳ ಕಾಲ ಮುಂದುವರಿಸಬೇಕು . ಹೀಗೆ ಹದ ಮಾಡಿದ ಕಾಯಿಗಳು ಬಗ್ಗಿಸಿದರೆ ಬಗ್ಗುತ್ತವೆಯೇ ಹೊರತು ಮುರಿಯುವುದಿಲ್ಲ ಅಥವಾ ಬಿರಿಯುವುದಿಲ್ಲ .
ಈ ಹಂತದಲ್ಲಿ ಕಾಯಿಗಳ ತೂಕವು ಮೊದಲ ತೂಕದ ಅರ್ಧದಷ್ಟಿರುತ್ತದೆ .

ನಿಧಾನ ಒಣಗಿಸುವುದು :

ಬೆವರಿಸಿದ ಕಾಯಿಗಳನ್ನು ( ಕಂದು ಅಥವಾ ಕಪ್ಪು ಬಣ್ಣದ ಕಾಯಿಗಳು ) ಮರದ ಟ್ರೇಗಳಲ್ಲಿ ಹರಡಿ 30 40 ದಿವಸಗಳವರೆಗೆ ನೆರಳಿನಲ್ಲಿ ಒಣಗಿಸಬೇಕು ,
ಇದರಿಂದ ಕಾಯಿಗಳಲ್ಲಿನ ತೇವಾಂಶ ಮತ್ತಷ್ಟು ಕ್ಷೀಣಿಸುತ್ತದೆ .
ಈ ಹಂತದಲ್ಲಿ ವೆನಿಲ್ಲಾ ಕಾಯಿಗಳನ್ನು ದಾರದಂತೆ ಬೆರಳಿಗೆ ಸುತ್ತಬಹುದು .
ಹೀಗೆ ನಿಧಾನವಾಗಿ ಒಣಗಿ ಸುಸ್ಥಿತಿಗೊಳ್ಳಲು ತಯಾರಾದ ಕಾಯಿಗಳು ಮೂಲ ತೂಕದ ಮೂರನೇ ಒಂದು ಭಾಗದಲ್ಲಿರುತ್ತವೆ .
vanilla cultivation in karnataka
vanilla cultivation in karnataka
ಸುಸ್ಥಿತಿಗೊಳಿಸುವುದು ( ಕಂಡಿಷನಿಂಗ್ ) :
ಸರಿಯಾಗಿ ಸಂಸ್ಕರಿಸಲ್ಪಟ್ಟ ವೆನಿಲ್ಲಾ ಕಾಯಿಗಳು ಕಂದು ಬಣ್ಣದ್ದಾಗಿರುತ್ತವೆ .
ಈ ಕೋಡುಗಳನ್ನು 50 ರಿಂದ 100 ರ ಕಟ್ಟುಗಳಲ್ಲಿ ಉದ್ದಕ್ಕೆ ಅನುಗುಣವಾಗಿ ವರ್ಗಿಕರಿಸಿ ಎರಡೂ ತುದಿಗಳಲ್ಲಿ ಕಟ್ಟುಗಳನ್ನು ಕಪ್ಪು ದಾರದಿಂದ ಸುತ್ತುವುದು ಕ್ರಮ .
ಈ ಕಟ್ಟುಗಳನ್ನು ಬಟರ್ ಪೇಪರ್ ಅಥವಾ ಸೆಲ್ಲೋಫೆನ್ ಕಾಗದದಿಂದ ಸುತ್ತಿ ಉಣ್ಣೆ ಬಟ್ಟೆಯಲ್ಲಿ ಕಟ್ಟಿ ಗಾಳಿಯಾಡದ ಮರದ ಪೆಟ್ಟಿಗೆಯಲ್ಲಿಡಬೇಕು .
ಇದರಿಂದ ಪೂರ್ಣ ಪ್ರಮಾಣದ ಸುವಾಸನೆ ವೃದ್ಧಿಯಾಗುತ್ತದೆ .
ಸರಿಯಾಗಿ ಹದ ಮಾಡಿದ ವೆನಿಲ್ಲಾ ಕಾಯಿಗಳಲ್ಲಿ ಶೇಕಡ 2.5 – 3,0 ರಷ್ಟು ವೆನಿಲಿನ್ ಅಂಶ ಹಾಗೂ ಶೇಕಡ 18-20 ರಷ್ಟು ತೇವಾಂಶವಿರುತ್ತದೆ . 
ಇಳುವರಿ :
ಇಳುವರಿಯು ಗಿಡದ ಪ್ರಾಯ ಹಾಗೂ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ .
ಇಳುವರಿಯು 3 ನೇ ವರ್ಷಕ್ಕೆ ಆರಂಭವಾಗಿ 5 – 6 ವರ್ಷಕ್ಕೆ ಸ್ಥಿರಗೊಂಡು ,
12-13 ವರ್ಷಗಳ ನಂತರ ಕಡಿಮೆಯಾಗುತ್ತದೆ . ಈ ಹಂತದಲ್ಲಿ ಮರು ನಾಟಿ ಅವಶ್ಯಕ .
ಉತ್ತಮ ನಿರ್ವಹಣೆಯ ಮಧ್ಯಮ ವಯಸ್ಸಿನ ಬಳ್ಳಿಯಿಂದ ಪ್ರತಿ ಹೆಕ್ಟೇರಿಗೆ ವಾರ್ಷಿಕ ಸರಾಸರಿ 250-300 ಕಿ . ಗ್ರಾಂ ಸಂಸ್ಕರಿಸಿದ ಕೋಡುಗಳನ್ನು ಪಡೆಯಬಹುದು .
ಡಿಸಂಬರ್ -ಫೆಬ್ರುವರಿ ಯಲ್ಲಿ ಹೂ ಬಿಡುತ್ತದೆ .
ಬಳ್ಳಿಯ ತುದಿಯನ್ನು 7.5 ರಿಂದ 10 ಸೆಂ . ವರೆಗೆ ಹೂ ಬಿಡುವ 6-8 ತಿಂಗಳ ಮೊದಲು ಚಿವುಟುವುದರಿಂದ ಹೆಚ್ಚು ಹೂ ಬರಲು ಅನುಕೂಲವಾಗುತ್ತದೆ .
vanilla cultivation in karnataka
RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments