Sunday, May 22, 2022
HomeKannada Newstoday news in kannada -17-07-2021

today news in kannada -17-07-2021

today news in kannada -17-07-2021

 

ಕೋರೋನ  ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್ : ಮಂಕಿಪಾಕ್ಸ್‌ನ ಅಪರೂಪದ ಪ್ರಕರಣ ಪತ್ತೆಯಾಗಿದೆ:

today news in kannada -17-07-2021

ಸುಮಾರು  ಎರಡು ದಶಕಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಟೆಕ್ಸಾಸ್‌ನಲ್ಲಿ ಮಾನವ ಮಂಕಿಪಾಕ್ಸ್‌ನ ಅಪರೂಪದ ಪ್ರಕರಣ ಪತ್ತೆಯಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಸನ್ ( ಸಿಡಿಸಿ ) ಶುಕ್ರವಾರ ತಿಳಿಸಿದೆ ಎಂದು ಲೈವ್ ಸೈನ್ಸ್ ವರದಿ ಮಾಡಿದೆ . ರೋಗಿಯು ಯುಎಸ್ ನಿವಾಸಿಯಾಗಿದ್ದು , ಅವರು ನೈಜೀರಿಯಾದಿಂದ ಒಂದೆರಡು ದಿನಗಳ ಹಿಂದೆ ಮರಳಿದ್ದರು.ಈ ವ್ಯಕ್ತಿಯನ್ನು ಪ್ರಸ್ತುತ ಡಲ್ಲಾಸ್‌ನಲ್ಲಿ ಪ್ರತ್ಯೇಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಎರಡು ವಿಮಾನಯಾನಗಳಲ್ಲಿ ರೋಗಿಯೊಂದಿಗೆ ಸಂಪರ್ಕ ಹೊಂದಿರಬಹುದಾದ ವಿಮಾನಯಾನ ಪ್ರಯಾಣಿಕರು ಮತ್ತು ಇತರರನ್ನು ಸಂಪರ್ಕಿಸಲು ಸಿಡಿಸಿ ಕೇಂದ್ರವು ವಿಮಾನಯಾನ ಮತ್ತು ರಾಜ್ಯ ಮತ್ತು ಸ್ಥಳೀಯ ಆರೋಗ್ಯ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ .

ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ ದರ್ಶನ್ ಸವಾಲು: 

today news in kannada -17-07-2021

ಮೈಸೂರಿನ ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಪ್ರಕರಣ ನಾನಾ ತಿರುವು ಪಡೆದುಕೊಂಡಿದೆ. ಆರೋಪ ಪ್ರತ್ಯಾರೋಪ ಮುಂದುವರಿಯುತ್ತಲೇ ಇದೆ.

ಇಂದ್ರಜಿತ್ ಲಂಕೇಶ್ ಗಂಡಸಾಗಿದ್ರೆ ನನ್ನ ಆಡಿಯೋ ಕ್ಲಿಪ್ ಬಿಡಲಿ ದರ್ಶನ್ ಸವಾಲು ಹಾಕಿದ್ದಾರೆ. 

ಪ್ರವಾಹದಿಂದ ಕಂಗಾಲಾದ ಯುರೋಪ್:

ಹದಿನೈದೇ ನಿಮಿಷದಲ್ಲಿ ಎಲ್ಲವೂ ಮುಳುಗಿ ಹೋದವು ಪಶ್ಚಿಮ ಯುರೋಪ್‌ನ ಅನೇಕ ದೇಶಗಳಲ್ಲಿ ಭಾರಿ ಮಳೆ , ಪ್ರವಾಹ ಜರ್ಮನಿಯಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರ ಹಳ್ಳಿಗೆ ಹಳ್ಳಿಗಳೇ ಸರ್ವನಾಶ , ರಕ್ಷಣಾ ಕಾರ್ಯಕ್ಕೂ ಅಡ್ಡಿ. 

ಮೊಬೈಲ್ ಸ್ಪೋಟದಿಂದ ಮಗುವಿಗೆ ಗಾಯ : 

today news in kannada -17-07-2021

ಸವಣೂರ ನಲ್ಲಿ ನಡೆದ ಘಟನೆ ಇದಾಗಿದ್ದು  ಮೊಬೈಲ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿ  ಸ್ಫೋಟಗೊಂಡು 10 ವರ್ಷದ ಬಾಲಕನ ಮುಖಕ್ಕೆ ಬಲವಾದ ಪೆಟ್ಟು ಬಿದ್ದು , ಬಲಗೈನ ಮೂರು ಬೆರಳುಗಳು ಕತ್ತರಿಸಿರುವ ಘಟನೆ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ .

ತ್ತೀಚಿನ ದಿನಗಳಲ್ಲಿ ಮೊಬೈಲ್ ಬಿಟ್ಟು  ಬೇರೇನೂ ಗೊತ್ತಿಲ್ಲ ಅನ್ನೋ ಹಾಗೆ ಮಕ್ಕಳು ಮೊಬೈಲ್ ಗೀಳು ಬೆಳೆಸಿಕೊಂಡಿದ್ದಾರೆ . ಸ್ವಲ್ಪ ಹೊತ್ತೂ ಮಕ್ಕಳು ಮೊಬೈಲ್ ಬಿಟ್ಟಿರಲಾರದ ಸ್ಥಿತಿಗೆ ತಲುಪಿದ್ದಾರೆ . ಹೀಗಾಗಿ ಪದೇ ಪದೇ ಅನಾಹುತಗಳು ಆಗುತ್ತಿವೆ . ಪೋಷಕರು ಇದರ ಕುರಿತು ಎಚ್ಚರ ವಹಿಸುವುದು ಅತ್ಯಂತ ಅಗತ್ಯವಾಗಿದೆ . 

ಕರ್ನಾಟಕ ರ್ಜ್ಯ ಸರ್ಕಾರದಿಂದ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ಪರಿಸರ ಸ್ನೇಹಿ ವಾತಾವರಣಕ್ಕೆ ನಿರ್ಮಾಣಕ್ಕೆ  ಆದ್ಯತೆ : 

today news in kannada -17-07-2021

ಈ ಬಂದ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ . ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ . ಯೋಜನೆ – 2021 ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ . ಈ ಯೋಜನೆಯಿಂದ ಇಂಧನ ಉಳಿತಾಯ ಸಾಧ್ಯವಾಗಲಿದ್ದು , ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಸಾಧ್ಯವಾಗಲಿದೆ . ರಾಜ್ಯದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಯಾಗಲಿದ್ದು , ಪ್ರಯಾಣಿಕರ ಪ್ರಮವನ್ನು ಇದು ಕಡಿಮೆ ಮಾಡಲಿದೆ.

SSC  GD CONSTABLE ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ :

today news in kannada -17-07-2021

ಹುದ್ದೆಯ ಹೆಸರು : SSC CONSTABLE GD ಒಟ್ಟು ಹುದ್ದೆಗಳು : 25.271 ಬೃಹತ್ ನೇಮಕಾತಿ ವಿದ್ಯಾರ್ಹತೆ : SSLC PASS ಅರ್ಜಿ ಶುಲ್ಕ ವಿವರ : ಸಾಮಾನ್ಯ ವರ್ಗ ಒಬಿಸಿ ಅಭ್ಯರ್ಥಿಗಳಿಗೆ 100 ರೂ SC ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೇ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2021 .

ವಿಜಯ್‌ ಮಲ್ಯರ ಶೇ.81 ಸಾಲ ಮರು ವಸೂಲು..! 792 ಕೋಟಿ ರೂ. ಮೌಲ್ಯದ ಷೇರು ಮಾರಾಟ:

ಮಲ್ಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಹುತೇಕ ಷೇರುಗಳು ಯುನೈಟೆಡ್‌ ಬ್ರೇವರೀಸ್‌ ಮತ್ತು ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಸೇರಿದಂತೆ 7 ಭಿನ್ನ ಕಂಪನಿಗಳದ್ದಾಗಿದೆ.

ರಾಜ್ಯದಲ್ಲಿ ಸೋಂಕಿತರ ಇಂದು ನಿನ್ನೆಗಿಂತ ಕಡಿಮೆಯಾಗಿದೆ.

today news in kannada -17-07-2021

ಇಂದು ರಾಜ್ಯದಲ್ಲಿ 1,869 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 28,82,239ಕ್ಕೆ ಏರಿಕೆ ಕಂಡಿದೆ.

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 42 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 36,121ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇಂದು ಬೆಂಗಳೂರಿನಲ್ಲಿ 432 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ನಗರದಲ್ಲಿ 12,21,803ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 6 ಜನ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು 3,144 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,16,013ಕ್ಕೆ ಏರಿಕೆ ಕಂಡಿದೆ. ಇನ್ನು 30,082 ಸಕ್ರೀಯ ಪ್ರಕರಣಗಳಿವೆ.

ಗೆಳತಿ ಅಂಜುಮ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ: 

today news in kannada -17-07-2021

today news in kannada -17-07-2021

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಿವಂ ದುಬೆ ಶುಕ್ರವಾರ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ದುಬೆ, ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

best business ideas in village karnataka | ಅಗರಬತ್ತಿ ಸ್ಟಿಕ್ ಮೇಕಿಂಗ್ ಬ್ಯುಸಿನೆಸ್

today news in kannada -17-07-2021

business ideas in kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments