ಚಿಕ್ಕು (ಸಪೋಟ)
ಸಪೋಟ ಕೃಷಿ ಮಾಡುವುದು ಹೇಗೆ
ಚಿಕ್ಕು ಸಸಿ ಎಲ್ಲಿ ಸಿಗುತ್ತದೆ?
ಪ್ರತಿ ಹೆಕ್ಟೇರಿಗೆ ಎಷ್ಟು ಸಸಿ ನಾಟಿ ಮಾಡಬಹುದು ?
ಎಷ್ಟು ವರ್ಷಕ್ಕೆ ಫಸಲು ಬರುತ್ತದೆ?
ಎಷ್ಟು ಬಂಡವಾಳ ಬೇಕು ?
ಮಾರ್ಕೆಟಿಂಗ್ ಮಾಡುವುದು ಹೇಗೆ ?
ಲಾಭ ಎಷ್ಟು ಗಳಿಸಬಹುದು ?
ಸಪೋಟ ಹೆಚ್ಚು ಸಿಹಿ ಇರುವ ಹಣ್ಣು
ಇದನ್ನು ಪ್ರಸ್ತುತ ಮುಖ್ಯ ಬೆಳೆಯಾಗಿ ಬೆಳೆಯಲು ಆರಂಭಿಸಿದ್ದಾರೆ
ಸಾಮಾನ್ಯವಾಗಿ ಸಪೋಟ ಹಣ್ಣಿಗೆ ಕೀಟಗಳ ಹಾವಳಿ ಹೆಚ್ಚು ಅಂದೇ ಹೇಳಬಹುದು.
ಈ ಕೀಟಗಳನ್ನು ನಿರ್ವಹಣೆ ಮಾಡಿ ಹೆಚ್ಚು ಲಾಭವನ್ನು ಗಳಿಸಲು ವೈಜ್ಞಾನಿಕ ಬೇಸಾಯ ಪದ್ದತ್ತಿಯನ್ನು ಅಳವಡಿಸಿಕೊಂಡು ಮಾಡಿದರೆ ಉತ್ತಮ ಲಾಭವನ್ನು ಗಳಿಸಬಹುದು .
ಸಪೋಟ ಕೃಷಿಯ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಕೃಷಿಯನ್ನು ಮಾಡಬಹುದು ಹಾಗೆ ಈ ಲೇಖನ ನಿಮಗೆ ಇಷ್ಟ ಆದೆರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .
ಚಿಕ್ಕು ,ಉಷ್ಣವಲಯದ ಮುಖ್ಯವಾದ ಬೆಳೆಗಳಲ್ಲೊಂದು .
ಇದರ ಕ್ಷೇತ್ರವು ನಮ್ಮ ರಾಜ್ಯದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ .
ವಿಶೇಷವಾಗಿ ಇದು ರಾಜ್ಯದ ಅರೆಮಲೆನಾಡು ಪ್ರದೇಶಗಳಲ್ಲಿ ಅತೀ ಹೆಚ್ಚಿನ ಉತ್ಪಾದನೆ ಕೊಡುತ್ತದೆ .
ಎಷ್ಟು ಬಂಡವಾಳ ಬೇಕು ?
ಸಸಿಗಳನ್ನು ಖರೀದಿ ಮಾಡುವುದು ಸೇರಿದಂತೆ ಹಾಗೆ ಇತರೆ ಖರ್ಚು ಅಂತ ಹೆಕ್ಟೇರಿಗೆ – 1ಲಕ್ಷ ಬಂಡವಾಳಬೇಕು
ತಳಿಗಳು
1 , ಕ್ರಿಕೆಟ್ ಬಾಲ್ :
ಹಣ್ಣುಗಳು ದೊಡ್ಡವಾಗಿದ್ದು , ದುಂಡನೆಯ ಆಕಾರ ಹೊಂದಿರುತ್ತವೆ ,
ತಿರುಳು ಸಾಧಾರಣ ಗುಣಮಟ್ಟ ಹೊಂದಿರುತ್ತದೆ ,
2 , ಕಾಲಿಪತ್ತಿ :
ಗಿಡಗಳು ದಟ್ಟ ಹಸಿರು ಎಲೆಗಳಿಂದ ಕೂಡಿದ್ದು , ಟೊಂಗೆಗಳು ಹೆಚ್ಚಾಗಿರುತ್ತದೆ .
ಹಣ್ಣುಗಳು ಮೊಟ್ಟೆಯಾಕಾರದಲ್ಲಿದ್ದು , ಕಡಿಮೆ ಬೀಜಗಳನ್ನು ಒಳಗೊಂಡಿರುತ್ತವೆ .
ತಿರುಳು ಸಿಹಿಯಾಗಿದ್ದು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ ,
ಇದು ಎಲೆ ಚುಕ್ಕೆ ರೋಗವನ್ನು ತಡೆದುಕೊಳ್ಳಬಲ್ಲದು .
3 , ಡಿ.ಎಚ್ . ಎಸ್ . – 1 ( ಧಾರವಾಡ ಹೈಬ್ರಿಡ್ ಸಹೋಟ -1 ) :
ಕೃಷಿ ವಿಶ್ವವಿದ್ಯಾಲಯ , ಧಾರವಾಡದಲ್ಲಿ ಅಭಿವೃದ್ಧಿ ಪಡಿಸಿದ ಈ ಸಂಕರಣ ತಳಿ ,
ಕಾಲಿಪತ್ತಿ ಮತ್ತು ಕ್ರಿಕೆಟ್ ಬಾಲ್ ತಳಿಗಳಿಗಿಂತ ಶೇ . 30-40 ರಷ್ಟು ಹೆಚ್ಚು ಇಳುವರಿ ಕೊಡುವುದು ,
ಹಣ್ಣಿನ ಗುಣಮಟ್ಟ ಎರಡೂ ತಳಿಗಳಿಗಿಂತ ಅತ್ಯುತ್ತಮವಾಗಿದೆ .
ಹಣ್ಣುಗಳ ಗಾತ್ರ ದೊಡ್ಡದಾಗಿದ್ದು ( 150 ಗ್ರಾಂ ) ತತ್ತಿಯಾಕಾರವನ್ನು ಹೋಲುತ್ತದೆ .
ಹಣ್ಣಿನ ತಿರುಳು ಮೃದು ಮತ್ತು ಸಿಹಿಯಾಗಿದ್ದು ( ಶೇ .25 ಟಿ , ಎಸ್.ಎಸ್ . ) ೨೪ ಕಿತ್ತಳೆ ಬಣ್ಣಹೊಂದಿದೆ .
ಹಣ್ಣುಗಳಿಗೆ ಉತ್ತಮ ಬಾಳಿಕೆ ಕೂಡ ಇದೆ .
4 . ಡಿ.ಎಚ್.ಎಸ್ . – 2 ( ಧಾರವಾಡ ಹೈಬ್ರಿಡ್ ಸಮೀಟಿ -2 ) :
ಕೃಷಿ ವಿಶ್ವವಿದ್ಯಾಲಯ , ಧಾರವಾಡದಲ್ಲಿ ಅಭಿವೃದ್ಧಿಪಡಿಸಿದ ಈ ಸಂಕರಣ ತಳಿ ಕಾಲಿಪತ್ತಿ ಮತ್ತು ಕ್ರಿಕೆಟ್ ಬಾಲ್ ತಳಿಗಳಿಗಿಂತ ಶೇ . 30-35 ರಷ್ಟು ಹೆಚ್ಚು ಇಳುವರಿ ಕೊಡುವುದು ,
ಹಣ್ಣುಗಳು ಗೋಲಾಕಾರ ಹೊಂದಿದ್ದು ಕ್ರಿಕೆಟ್ ಬಾಲ್ ತಳಿಗಿಂತ ದೊಡ್ಡದಾಗಿದೆ ( ISO ಗಾಲಿ ) ,
ಹಣ್ಣಿನ ತಿರುಳು ಮೃದು ಮತ್ತು ಸಿಹಿಯಾಗಿದ್ದು ( ಶೇ . 23 ಟಿ.ಎಸ್.ಎಸ್ . ) ಕಿತ್ತಳೆ ಕಂದು ಬಣ್ಣ ಹೊಂದಿದೆ .
ಹಣ್ಣುಗಳಿಗೆ ಉತ್ತಮ ಬಾಳಿಕೆ ಕೂಡ ಇದೆ .
sapota farming
ಸೂಚನೆ :
ಕಾಲಿನಲ್ಲಿ ಮತ್ತು ಡಿ.ಎಚ್ , ಎಸ್ -2 ತಳಿಗಳಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಕ್ರಮವಾಗಿ 10 ಕಿ . ಗ್ರಾಂ ಎರೆಹುಳುಗೊಬ್ಬರ ಮತ್ತು 400 : 80 : 300 ಗ್ರಾಂನಷ್ಟು ಸಾರಜನಕ : ರಂಜಕ : ಪೊಟ್ಯಾಷ್ಗಳನ್ನು ಸಂಯುಕ್ತವಾಗಿ ಒದಗಿಸಿದಲ್ಲಿ ಚಿಕ್ಕು ಗಿಡಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು ,
ಒಂದು ಪ್ರತಿ ಹೆಕ್ಟೇರಿಗೆ ಎಷ್ಟು ಸಸಿ ನಾಟಿ ಮಾಡಬಹುದು ?
ಕಸಿಗಿಡಗಳು / ಮದುಕಾಂಡ ಕಸಿ ಗಿಡಗಳು ಪ್ರತಿ ಹೆಕ್ಟೇರಿಗೆ
ಆಂತರ 10 ಮೀ X 10 ಮೀ ( ಪೂರ್ಣ ಬೆಳಿ ) 100
12 ಮೀ , X 12 ಮೀ ( ಮಿಶ್ರ ಬೆಳಿ ) 70
ಹವಾಗುಣ ಮತ್ತು ನಾಟಿ ಕಾಲ :
ಒಣ ಹಾಗೂ ತೇವಾಂಶವುಳ್ಳ ಪ್ರದೇಶಗಳಲ್ಲಿ ಚಿಕ್ಕು ಚೆನ್ನಾಗಿ ಬೆಳೆಯುತ್ತದೆ . ಇದನ್ನು ರಾಜ್ಯದ ಎಲ್ಲ ಭಾಗಗಳಲ್ಲಿಯೂ ಬೆಳೆಯಬಹುದು . ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ .
ಮಣ್ಣು :
ಇದು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾದರೂ , ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಮತ್ತು ಮಧ್ಯಮ ಕಪ್ಪು ಮಣ್ಣುಗಳು ಇದರ ಕೃಷಿಗೆ ಅತೀ ಸೂಕ್ತ . ಬಿರುಸಾದ ಒಳಪದರುಗಳನ್ನು ಹೊಂದಿದ ಮತ್ತು ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಲ್ಲ .
sapota farming
ಬೇಸಾಯ ಕ್ರಮಗಳು :
ನಿಮ್ಮ ಹತ್ತಿರ ಕೃಷಿ ಇಲಾಖೆಯಲ್ಲಿ ಅಥವಾ ನಿಮ್ಮ ಹತ್ತಿರದ ನರ್ಸರಿಯಲ್ಲಿ ಉತ್ತಮ ತಳಿಯ ಗಿಡಗಳನ್ನು ಖರೀದಿಸಿ ನಾಟಿ ಮಾಡಬಹದು ಇದಕ್ಕಿಂತ ಮೊದಲು ತಜ್ಞರೊಂದಿಗೆ ಸೂಕ್ತ ಸಲಹೆಯನ್ನು ಪಡೆದುಕೊಂಡು ಹಾಗೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ನಾಟಿ ಮಾಡಿದರೆ ಸೂಕ್ತ .
ಸಸ್ಯಾಭಿವೃದ್ದಿ :
ಅಂಟು ಅಥವಾ ಮೃದುಕಾಂಡ ಕಸಿ ಗಿಡಗಳು ನಾಟಿ ಮಾಡಲು ಯೋಗ್ಯ ಬೆರ್ನಿ ಗಿಡಗಳನ್ನು ಬೇರು ಸಸಿಗಳಾಗಿ ಉಪಯೋಗಿಸುವುದು ಸೂಕ್ತ .
ನಾಟಿ ಮಾಡುವುದು :
ಬೆಳೆ ಪ್ರದೇಶವನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು .
ಫಲವತ್ತಾದ ಭೂಮಿಯಲ್ಲಿ 12 ಮೀ X 12 ಮೀ , ಅಂತರದಲ್ಲಿ ಮತ್ತು ಸಾಧಾರಣ ಭೂಮಿಯಿದ್ದಲ್ಲಿ 10 ಮೀ X 10 ಮೀ . ಅಂತರದಲ್ಲಿ ಒಂದು ಘನ ಮೀಟರ್ ಗಾತ್ರದ ಗುಣಿಗಳನ್ನು ತೆಗೆಯಿರಿ .
ಈ ಗುಣಿಗಳಲ್ಲಿ ಮೇಲ್ಮಣ್ಣು ಮತ್ತು ಕಾಂಪೋಸ್ಟ್ ಮಿಶ್ರಣಮಾಡಿ ಮುಚ್ಚಬೇಕು .
ಗುಣಿಯ ಮಧ್ಯದಲ್ಲಿ ಕಸಿ ಗಿಡವನ್ನು ಕಸಿ ಮಾಡಿದ ಭಾಗ ಭೂಮಿಯ ಮೇಲಿರುವಂತೆ ಇಟ್ಟು ನಾಟಿ ಮಾಡಿ
ಕೋಲನ್ನು ಕಟ್ಟಿ ಗಿಡಕ್ಕೆ ಆಸರೆ ಕೊಡಬೇಕು ,
ಬೇರು ಸಸಿಯ ಮೇಲೆ ಚಿಗುರುಗಳು ಕಂಡುಬಂದಾಗ ತೆಗೆದುಹಾಕಬೇಕು
ಮೊದಲೆರಡು ವರ್ಷ ಬೇಸಿಗೆಯಲ್ಲಿ ರಕ್ಷಣಾತ್ಮಕ ನೀರು ಕೊಡಬೇಕು . ಇದರಿಂದ ಗಿಡಗಳು ಚೆನ್ನಾಗಿ ಹತ್ತಿಕೊಳ್ಳುತ್ತವೆ .
ನಾಟಿ ನಂತರದ ಬೇಸಾಯ :
ಮಳೆಗಾಲದ ಪ್ರಾರಂಭಕ್ಕೆ ಗಿಡಗಳಿಗೆ ಗೊಬ್ಬರ ಒದಗಿಸಬೇಕು .
ಗಿಡದ ಬುಡದಿಂದ 60 ಸೆಂ.ಮೀ , ದೂರದಲ್ಲಿ ರಸಗೊಬ್ಬರಗಳನ್ನು ಹಾಕಬೇಕು ,
ಸಕಾಲದಲ್ಲಿ ಕಳೆ ತೆಗೆದು ಕ್ಷೇತ್ರವನ್ನು ಸ್ವಚ್ಛವಾಗಿಡಬೇಕು .
ಪ್ರಾರಂಭದಲ್ಲಿ 7-8 ವರ್ಷಗಳ ತನಕ ಗಿಡಗಳು ಇಡೀ ಪ್ರದೇಶವನ್ನು ಆಕ್ರಮಿಸಿಕೊಳ್ಳುವವರೆಗೆ ಅಂತರ ಬೆಳೆಗಳನ್ನು ಬೆಳೆಯಬಹುದು .
ಮಳೆಯ ಆಶ್ರಯದಲ್ಲಿ ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು .
ನೆಲದಿಂದ ಒಂದು ಮೀಟರ್ ಎತ್ತರದವರೆಗೆ ಮುಖ್ಯ ಕಾಂಡದ ಮೇಲೆ ಯಾವುದೇ ಕವಲುಗಳು ಬೆಳೆಯದಂತೆ ನೋಡಿಕೊಳ್ಳಬೇಕು .
ಕಪ್ಪು ಮಣ್ಣಿನಲ್ಲಿ ಹನಿ ನೀರಾವರಿ ಮೂಲಕ ಪ್ರತಿ ಚಿಕ್ಕು ಗಿಡಗಳಿಗೆ ( ಆರು ವರ್ಷದವರೆಗೆ ) ಕ್ರಮವಾಗಿ ಪ್ರತಿ ದಿನಕ್ಕೆ ಮುಂಗಾರಿನಲ್ಲಿ 11 ಲೀಟರ್ ,
ಒಂಗಾರಿನಲ್ಲಿ 18 ಲೀಟರ್ ಮತ್ತು ಬೇಸಿಗೆಯಲ್ಲಿ 25 ಲೀಟರ್ ನೀರು ಒದಗಿಸುವುದರಿಂದ ಮೇಲ್ಮ ನೀರಾವರಿಗಿಂತ ಶೇ 29 ) ರಷ್ಟು ನೀರು ಉಳಿತಾಯ ಆಗಿ ಅಧಿಕ ಇಳುವರಿಯನ್ನು ಪಡೆಯಬಹುದು ,
ಕಳೆ ನಿರ್ವಹಣೆ :
ನಾಟಿ ಮಾಡಿದ ಪ್ರಾರಂಭದ ವರ್ಷಗಳಲ್ಲಿ ಅಂತರ ಬೇಸಾಯ ಮಾಡಿ ಕಳೆ ನಿರ್ವಹಣೆ ಮಾಡಬಹುದಾಗಿದೆ .
ಪಾತಿಗಳಲ್ಲಿ ಮಲ್ಲಿಗೆ ಹೊದಿಕೆ ಮಾಡಬಹುದು
ಎಷ್ಟು ವರ್ಷಕ್ಕೆ ಫಸಲು ಬರುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ ?
ಸಪೋಟ ಹಣ್ಣಿಗೆ ಎಲ್ಲಕಡೆ ಬೇಡಿಕೆ ಹೆಚ್ಚು ಇರುವುದರಿಂದ ನೀವೇ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು ಅಥವಾ ಹೋಲ್ಸೇಲ್ ಡೀಲರ್ಸ್ ಗೆ ಮಾರಾಟ ಮಾಡಬಹುದು.
ಲಾಭ ಎಷ್ಟು ಗಳಿಸಬಹುದು ?
ನಾಟಿ ಮಾಡಿದ 4 ನೇ ವರ್ಷದ ನಂತರ ಪ್ರತಿ ವರ್ಷ ಒಂದು ಹೆಕ್ಟಾರ್ ಗೆ ಕನಿಷ್ಠ ಅಂದರು 3 ಲಕ್ಷದ ವರೆಗೆ ಹಣವನ್ನು ಗಳಿಸಬಹುದು . ಇದು ನೀವು ಹೇಗೆ ಕೃಷಿ ಮಾಡುತ್ತೀರಾ , ಹೇಗೆ ವೈಜ್ಞಾನಿಕ ಬೇಸಾಯ ಪದ್ದತ್ತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತೀರಾ ಅನ್ನುವುದರಮೇಲೆ ಈ ಲಾಭ ನಷ್ಟವೆಲ್ಲವು ಅವಲಂಬಿಸಿರುತ್ತದೆ .
[…] […]