Monday, September 26, 2022
HomeFinanceಪುಳಿಯೋಗರೆ ಗೊಜ್ಜಿಗೆ ಪುಡಿ | Puliyogare Powder

ಪುಳಿಯೋಗರೆ ಗೊಜ್ಜಿಗೆ ಪುಡಿ | Puliyogare Powder

ಪುಳಿಯೋಗರೆ ಗೊಜ್ಜು ಮತ್ತು ಮಾಡುವ ವಿಧಾನ 

 

ಪುಳಿಯೋಗರೆ ಗೊಜ್ಜು ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಒಂದು. ಈ ಗೊಜ್ಜನ್ನು ಅನ್ನದೊಂದಿಗೆ ಬೆರೆಸಿ ವಿಶೇಷವಾದ ರೈಸ್ ಬಾತ್ ಆಗಿ ತಯಾರಿಸಬಹುದು. ದಕ್ಷಿಣ ಭಾರತದ ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ಒಂದಾದ ಈ ಪಾಕವಿಧಾನವನ್ನು ನಿತ್ಯದ ತಿಂಡಿ, ಊಟ ಹಾಗೂ ದೇವರ ನೈವೇದ್ಯಕ್ಕೆ ಪ್ರಸಾದವನ್ನಾಗಿಯೂ ತಯಾರಿಸಬಹುದು. ಕಟುವಾದ ಹುಳಿ, ಖಾರ ಹಾಗೂ ಪರಿಮಳ ಭರಿತ ಮಸಾಲ ಪದಾರ್ಥಗಳಿಂದ ಕೂಡಿರುವ ಈ ಪಾಕವಿಧಾನ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು. ಈ ಗೊಜ್ಜನ್ನು ಒಮ್ಮೆ ತಯಾರಿಸಿ ಇಟ್ಟುಕೊಂಡರೆ ತಿಂಗಳು ಕಾಲ ಕೆಡದಂತೆ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಿ.

Puliyogare Powder

Puliyogare Powder

Business ideas

ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು:
ಧನಿಯ
ಬ್ಯಾಡಗಿ ಮೆಣಸಿನಕಾಯಿ
ಕೆಂಪು ಮೆಣಸಿನಕಾಯಿ
ಜೀರಗೆ
ಮೆಣಸು
ಕರಿಬೇವು
ಮೆಂತ್ಯ.
ಸಾಸಿವೆ
ಇಂಗು.
ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ.

ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಹುಣಸೆಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ
ಎಣ್ಣೆ
ಕೊಬ್ಬರಿ ತುರಿ
ಹುರಿದ ಕಪ್ಪು/ಬಿಳಿ ಎಳ್ಳು
ಬೆಲ್ಲ

Puliyogare Powder

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
ಎಣ್ಣೆ.
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಕರಿಬೇವು
ಒಣಮೆಣಸಿನ ಕಾಯಿ
ಇಂಗು

ಪುಳಿಯೋಗರೆ ಮಾಡುವ ವಿಧಾನ :

 ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ ಮತ್ತು ಹುಣಿಸೆಹಣ್ಣನ್ನು  ನೀರಿನಲ್ಲಿ ನೆನೆಸಿಡಿ .

ಪುಳಿಯೋಗರೆ ಪುಡಿಗೆ ಬೇಕಾಗುವ ಎಲ್ಲ ಪದಾರ್ಥಗಳನ್ನು ಹುರಿಯಿರಿ . ಎಳ್ಳನ್ನು ಪ್ರತ್ಯೇಕವಾಗಿ ಎಣ್ಣೆ ಹಾಕದೆ ಹುರಿಯಿರಿ . ನಂತರ ಕೊಬ್ಬರಿ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು  ಅಡುಗೆ ಎಣ್ಣೆ ಹಾಕಿ ಹುರಿಯಿರಿ .

ಕೊನೆಯಲ್ಲಿ ಕೊಬ್ಬರಿಯನ್ನು ಹುರಿಯಿರಿ .ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ .

ನಂತರ ಹುಣಿಸೆರಸ , ಅರಶಿನ ಪುಡಿ , ಉಪ್ಪು ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಕುದಿಯಲು ಇಡಿ .

ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಮಸಾಲೆ ಪುಡಿ ಮತ್ತು  ಎಣ್ಣೆ ಹಾಕಿ .

ಎಣ್ಣೆ ಬಿಡುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ . ಪುಳಿಯೋಗರೆ ಗೊಜ್ಜು ತಯಾರಾಯಿತು .

ಈಗ ಇನ್ನೊಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ .

ನಂತರ ಬೇಯಿಸಿಟ್ಟ ಅನ್ನಕ್ಕೆ , ಒಗ್ಗರಣೆ ಮತ್ತು  ಗೊಜ್ಜು ಹಾಕಿ ಕಲಸಿ . ಬೇಕಾದಲ್ಲಿ ರುಚಿಗೆ ತಕ್ಕಷ್ಟು ಗೊಜ್ಜು ಸೇರಿಸಿ . ಚೆನ್ನಾಗಿ ಕಲಸಿ ಬಡಿಸಿ .

Puliyogare Powder

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ | Rice business Ideas full Details in Kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments