Monday, September 26, 2022
HomeAgricultureದಾಳಿಂಬೆ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿ | pomegranate cultivation in...

ದಾಳಿಂಬೆ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಗಳಿಸಿ | pomegranate cultivation in kannada | Business ideas

ದಾಳಿಂಬೆ ಕೃಷಿ ಮಾಡುವ ವಿಧಾನ

ದಾಳಿಂಬೆಯನ್ನು ತಂಪಾದ , ಪುನಶ್ವೇತನಗೊಳಿಸುವ ಹಣ್ಣಿನ ರಸಕ್ಕಾಗಿ ಜನ ಇಷ್ಟಪಡುತ್ತಾರೆ.

ಅದನ್ನು ಹೆಚ್ಚಾಗಿ ಕೈ ತೋಟದಲ್ಲಿ ಬೆಳೆಯಲಾಗುತ್ತಿದ್ದರೂ ಚೆನ್ನಾಗಿ ಬೆಳೆಸಿದಲ್ಲಿ ಅತ್ಯುತ್ತಮ ಆದಾಯ ಕೊಡಬಲ್ಲದು .

ಕಲಾದಗಿ , ಬಾಗಲಕೋಟೆ , ಬಿಜಾಪುರ , ರಾಯಚೂರು , ಕಲ್ಬುರ್ಗಿ, ಕೊಪ್ಪಳ , ಚಿತ್ರದುರ್ಗ , ಬಳ್ಳಾರಿ ಮುಂತಾದ ಪ್ರದೇಶಗಳು ದಾಳಿಂಬೆ ಬೆಳೆಯಲು ಅತೀ ಸೂಕ್ತ ,

ಹೆಚ್ಚು ಮಳೆ ಬೀಳುವ ಪ್ರದೇಶಗಳು ಈ ಬೆಳೆಗೆ ಯೋಗ್ಯವಲ್ಲ.

pomegranate cultivation in kannada

pomegranate cultivation in kannada

ತಳಿಗಳು

1. ಗಣೇಶ ( ಜಿ.ಬಿ.ಜಿ- l ) :

ಮಹಾರಾಷ್ಟ್ರದ ಪೂನಾ ಪ್ರಾಂತ್ಯದಿಂದ ಬಿಡುಗಡೆ ಮಾಡಿದ ಈ ತಳಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ .

ಕಾಳಿನ ಬೀಜ ಮೃದು ರಸಭರಿತ ತಳಿ , ‘ ಜಿ -137 ” ಎಂಬ ಸುಧಾರಿತ ಗಣೇಶ್ ಕೋನನ್ನು ಕಂಡು ಹಿಡಿದಿದ್ದು , ಈ ಹಣ್ಣುಗಳು ನೋಡಲು ಹೆಚ್ಚು ಆಕರ್ಷಕ ಮತ್ತು ತೆಳುವಾದ ಸಿಪ್ಪೆ ಹೊಂದಿವೆ .

ಹಣ್ಣುಗಳ ಗಾತ್ರ ದೊಡ್ಡದು ( 400-600 ಗ್ರಾಂ ) , ಸಿಪ್ಪೆ ಸಾಧಾರಣ ದಪ್ಪ , ಸಿಪ್ಪೆ ಹಳದಿ ಬಣ್ಣದಿಂದ ಕೂಡಿದ್ದು ಭುಜಗಳ ಮೇಲೆ ಕೆಂಪು ವರ್ಣದ ಪಟ್ಟೆಯನ್ನು ಕಾಣಬಹುದು .

ಹಣ್ಣಿನ ಬೀಜಗಳು ಮೃದುವಾಗಿದ್ದು , ಗುಲಾಬಿ ವರ್ಣದಿಂದ ಕೂಡಿದ್ದು ಹೆಚ್ಚು ರಸಭರಿತ ಹಾಗೂ ರುಚಿಕರವಾಗಿವೆ .

ಕಾಳುಗಳು ದೃಢವಾಗಿದ್ದು ನಸುಗೆಂಪು ಬಣ್ಣದಿಂದ ಕೂಡಿದೆ .

ಆದರೆ ಬೇಸಿಗೆಯಲ್ಲಿನ ಇಳುವರಿಯ ಕಾಳುಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ .

2. ಮೃದುಲಾ / ಅರಕ್ತ :

ಇದು ಗಣೇಶ X ಗುಲ್ಶನ್ – ರಡ್ ತಳಿಗಳ ಸಂಕರಣ ತಳಿಯಿಂದ ಬೆಳೆಸಿದ ಗಿಡಗಳಿಂದ ಆಯ್ಕೆ ಮಾಡಲಾಗಿದೆ .

ಹಣ್ಣುಗಳು ಮಧ್ಯಮ ಗಾತ್ರದವಾಗಿದ್ದು , ಕಡುಗೆಂದು ಸಿಪ್ಪೆ ಮತ್ತು ಬೀಜಗಳನ್ನು ಹೊಂದಿದೆ .

ಬೀಜಗಳು ಮೃದುವಾಗಿದ್ದು ತಿರುಳು ಮತ್ತು ರಸದ ಅಂಶ ಹೆಚ್ಚು ಇರುವುದು .

3. ಜ್ಯೋತಿ :

ಈ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಸಿನ್ ಸೀಡ್ಲೆಸ್ ತಳಿಯಿಂದ ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಲಾಗಿದೆ .

ಹಣ್ಣುಗಳು ದೊಡ್ಡವಾಗಿದ್ದು ಆಕರ್ಷಕ ಬಣ್ಣದಿಂದ ಕೂಡಿವೆ .

ಬೀಜಗಳು ಮೃದುವಾಗಿದ್ದು , ಕಡುಗೆಂಪು ಬಣ್ಣ ಹೊಂದಿದ್ದು ಹೆಚ್ಚಿನ ಸಕ್ಕರೆ ಅಂಶವನ್ನು ಪಡೆದಿವೆ ( ಶೇ . 16 ಟಿ.ಎಸ್.ಎಸ್ . ) , ತಿರುಳು ಮತ್ತು ರಸದ ಅಂಶ ಹೆಚ್ಚು ಇದೆ .

4. ಜಿ . – 137 :

ಇದು ಗಣೇಶ ತಳಿಯಿಂದ ಆಯ್ಕೆಯಾಗಿದ್ದು ತಿರುಳು ಮತ್ತು ಸಕ್ಕರೆ ಅಂಶವನ್ನು ಹೆಚ್ಚಾಗಿ ಹೊಂದಿದೆ .

ಹಣ್ಣು ಗಾತ್ರದಲ್ಲಿ ಗಣೇಶ ತಳಿಗಿಂತ ದೊಡ್ಡದಾಗಿದೆ .

5. ರುಬಿ ರೆಡ್ :

ಇದು ಸಂಕರಣ ತಳಿಯಾಗಿದ್ದು ಪೂರ್ತಿ ಬೆಳೆದ ಗಿಡವು ಸಾಮಾನ್ಯವಾಗಿ 2.72 ಮೀಟರವರೆಗೆ ಬೆಳೆಯುತ್ತದೆ ಮತ್ತು ಕಡಿಮೆ ವ್ಯಾಪಕತೆ ( 4.7 ಮೀಟರ್ ) ಹೊಂದಿದೆ ,

ಪಕ್ವತೆ ಹೊಂದಿದ ಹಣ್ಣುಗಳು ಆಕಾರ ಮತ್ತು ಗಾತ್ರದಲ್ಲಿ ಗಣೇಶ ತಳಿಯನ್ನು ಹೋಲುತ್ತವೆ .

ಆದರೆ ತೊಗಟೆಯ ಬಣ್ಣ ಕೆಂಪು ಕಂದು ಬಣ್ಣದೊಂದಿಗೆ ಹಸಿರು ಗೆರೆಗಳನ್ನು ಹೊಂದಿರುತ್ತದೆ .

ತೊಗಟೆ ತೆಳುವಾಗಿದ್ದು ಹಣ್ಣು ಒಳಗಡೆ ಕೆಂಪು ಮತ್ತು ದೊಡ್ಡ ಗಾತ್ರದ ಬೀಜಗಳನ್ನು ಹೊಂದಿರುತ್ತದೆ .

ಬೀಜಗಳು ಮೃದುವಾಗಿದ್ದು , ಪ್ರತಿ ಹಣ್ಣು ಸಾಧಾರಣವಾಗಿ 270 ಗ್ರಾಂ ತೂಕ ಹೊಂದಿರುತ್ತದೆ .

ಪ್ರತಿ ಹೆಕ್ಟೇರಿಗೆ 16 ರಿಂದ 18 ಟನ್ ಇಳುವರಿ ಪಡೆಯಬಹುದಾಗಿದೆ .

6. ಕೇಸರ್ / ಭಗವಾ / ಸಿಂಧೂರ :

ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು , ಮೇಲ್ಸ್ ಮತ್ತು ತಿರುಳು ಕೆಂಪು ಬಣ್ಣ ಹೊಂದಿರುತ್ತದೆ .

ರಫ್ತು ಮಾಡಲು ಸೂಕ್ತವಾದ ತಳಿಯಾಗಿದೆ .

7. ಭಾಗ್ಯ :

‘ ಕೇಸರ್‌ ‘ ಎಂದೂ ಕರೆಯಲ್ಪಡುವ ಈ ತಳಿಯ ಹಣ್ಣುಗಳು ಹೊಳೆಯುವ ನಸುಗೆಂಪು ಬಣ್ಣ ಹೊಂದಿದ್ದು , ಹಣ್ಣಿನ ಗಾತ್ರ ಸಾಧಾರಣದಿಂದ ದೊಡ್ಡದು .

ಕಾಳುಗಳೂ ಸಹ ಹೊಳೆಯುವ ಕಡುಗೆಂಪು ಬಣ್ಣ ಮತ್ತು ಮೃದು .

ಕಾಳಿನ ರುಚಿ ಹೆಚ್ಚು ( ಸಕ್ಕರೆ ಅಂಶ 17 ಬಿ ) ಮತ್ತು ರಸಭರಿತ ,

pomegranate cultivation in kannada

pomegranate cultivation in kannada

ನಾಟಿ ಮಾಡುವ ವಿಧಾನ: 

ನಾಟಿ ಸಸಿಗಳು                                           ಪ್ರತಿ ಹೆಕ್ಟರ್

ಗೂಟಿ ಗಿಡಗಳು / ಬೇರು ಸಹಿತ ಕಡ್ಡಿಗಳು
ಅಂತರ 5ಮೀ Χ 5ಮೀ                                    400
6 ಮೀ Χ 6 ಮೀ                                            277
4.7ಮೀ Χ 4.5 ಮೀ                                       493

ಬೇಸಾಯ ಕ್ರಮಗಳು :

ಹವಾಗುಣ ಮತ್ತು ನಾಟಿ ಕಾಲ :

ಈ ಬೆಳೆಗೆ ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶವಿರುವ ಮತ್ತು ಚಳಿಗಾಲದಲ್ಲಿ ತಂಪಾಗಿರುವ ಹವಾಗುಣಬೇಕು .

ಬೇಸಿಗೆಯಲ್ಲಿ ಹೆಚ್ಚು ಉಷ್ಣಾಂಶದಿಂದ ಕೂಡಿದ ವಾತಾವರಣವಿರುವ ಕಡೆ ಉತ್ತಮ ದರ್ಜೆಯ ಹಣ್ಣುಗಳು ದೊರೆಯುತ್ತವೆ .

ದಾಳಿಂಬೆ ಗಿಡಕ್ಕೆ ಶುಷ್ಕ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿಯಿದೆ .

ಆದರೂ ನೀರಾವರಿ ಸೌಕರ್ಯವಿರುವ ಕಡೆ ಉತ್ತಮ ಇಳುವರಿ ಪಡೆಯಬಹುದು .

ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸರಿಯಾದ ಕಾಲ .

ಮಣ್ಣು :

ದಾಳಿಂಬೆಯನ್ನು ಹಲವಾರು ವಿಧದ ಮಣುಗಳಲ್ಲಿ ಬೆಳೆಯಬಹುದು .

ಮರಳು ಮಿಶ್ರಿತ ಗೋಡು ಮಣ್ಣಿನಿಂದ ಹಿಡಿದು ಆಳವಾದ ಕಷ್ಟು ಭೂಮಿಯಲ್ಲಿ ದಾಳಿಂಬೆ ಬೆಳೆಯಬಹುದು .

ಆಳವಾದ ಗೋಡು ಮಣ್ಣು ಈ ಬೆಳೆಗೆ ಬಹಳ ಸೂಕ್ತ .

ಈ ಬೆಳೆ ಸ್ವಲ್ಪ ಮಟ್ಟಿಗೆ ಮಣ್ಣಿನಲ್ಲಿರುವ ಚೌಳಿನಾಂಶವನ್ನು ಸಹ ಸಹಿಸಿಕೊಳ್ಳಬಹುದು .

ಸಸ್ಯಾಭಿವೃದ್ಧಿ :

ಸಾಮಾನ್ಯವಾಗಿ ದಾಳಿಂಬೆಯಲ್ಲಿ ಗೂಟಿ ವಿಧಾನ ಹೆಚ್ಚು ಪ್ರಚಲಿತವಾಗಿದೆ .

ಇದರಲ್ಲಿ ಪೆನ್ಸಿಲ್‌ ಗಾತ್ರದ , ಆರೋಗ್ಯವಂತ ಕಡ್ಡಿಗಳನ್ನು ಆಯ್ಕೆ ಮಾಡಿಕೊಂಡು ಗೂಟಿ ಕಟ್ಟಬೇಕು .

ಇದಕ್ಕೆ ಸೂಕ್ತ ಸಮಯ ಜೂನ್ -ಸೆಪ್ಟೆಂಬರ್‌ವರೆಗೆ , ಗೂಟ ಕಟ್ಟಲು ಸ್ಪಾಗ್ನಮ್ ಮಾಸ್ ಉಪಯೋಗಿಸಿ .

ಐ.ಬಿ.ಎ. ( 5000 ಪಿ.ಪಿ.ಎಂ. ) ದ್ರಾವಣ ಹಚ್ಚಿದಲ್ಲಿ , ಗೂಟ ಗಿಡಗಳಲ್ಲಿ ಬೇರಿನ ಪ್ರಮಾಣ ಹೆಚ್ಚಿ ಆರೋಗ್ಯವಂತ ಗಿಡಗಳು ದೊರೆಯುತ್ತವೆ .

ದಾಳಿಂಬೆಯನ್ನು ಕಾಂಡಗಳ ಮುಖಾಂತರ ಸಸ್ಯಾಭಿವೃದ್ಧಿ ಮಾಡುವಾಗ ಕಾಂಡದ ತುಂಡುಗಳ ಕೆಳಭಾಗವನ್ನು ಒಂದು ತಿಂಗಳ ಹಳೆಯ ಟ್ರೈಕೊಡರ್ಮಾ ಹಾರ್ಜಿಯಾನಂ ಎಂಬ ಶೀಲಿಂಧ್ರವಿರುವ ದ್ರಾವಣದಲ್ಲಿ 25 ಗಂಟೆಗಳ ಕಾಲ ಅದ್ದಿ ತೆಗೆದು ಮಡಿಯಲ್ಲಿ ನೆಡಬೇಕು .

ಇದರಿಂದ ಶೀಘ್ರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬೇರುಗಳನ್ನು ಪಡೆಯಲು ಸಹಾಯವಾಗುವುದು .

ನೀರಾವರಿ :

ಹೊಸದಾಗಿ ನಾಟಿ ಮಾಡಿದ ಸಸಿಗಳಿಗೆ ಸಕಾಲದಲ್ಲಿ ಮಳೆ ಆಗದಿದ್ದಾಗ ನಿಯಮಿತವಾಗಿ ನೀರು ಒದಗಿಸಬೇಕು .

6-7 , ತಿಂಗಳುಗಳ ನಂತರ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಹಾಗೂ ನಂತರ ನೀರಿನ ಕೊರತೆಯನ್ನು ಸಹಿಸಿಕೊಂಡು ಬೆಳೆಯಬಲ್ಲವು .

ಮಣ್ಣು ಮತ್ತು ಹವಾಗುಣ ಹಾಗೂ ಅಂತರ ಬೆಳೆಗಳನ್ನನುಸರಿಸಿ ಪ್ರತಿ 2-4 ವಾರಕೊಮ್ಮೆ ನೀರು ಕೊಡಬೇಕು .

ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ನೀರಿನ ಉಳಿತಾಯ ಮಾಡಿ ಹದವನ್ನರಿತು ನೀರು ಕೊಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು .

ಅನಿಯಮಿತವಾಗಿ ನೀರನ್ನು ಒದಗಿಸುವುದರಿಂದ ದಾಳಿಂಬೆ ಹಣ್ಣುಗಳು ಗಿಡದಲ್ಲಿಯೇ ಒಡೆಯಲು ಪ್ರಾರಂಭಿಸುತ್ತವೆ .

ಬಹಳ ದಿವಸಗಳವರೆಗೆ ಮಳೆ ಆಗದಿದ್ದಾಗ ನೀರು ಒದಗಿಸಿ ಇದನ್ನು ಕಡಿಮೆಗೊಳಿಸಬಹುದು .

ಗಾಳಿ ತಡೆಯನ್ನು ನಿರ್ಮಿಸಿ ಕೂಡಾ ಈ ಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು .

ಬೋರಾನ್ ಕೊರತೆಯಿಂದಲೂ ಸಹ ಹಣ್ಣು ಸೀಳುತ್ತವೆ .

ಇದಕ್ಕೆ ಬೋರಾಕ್ಸ್ ಶೇ . 0,1 ( 1 ಗ್ರಾಂ ಒಂದು ಲೀ . ನೀರಿನಲ್ಲಿ ಬೆರೆಸಿ ) ಸಿಂಪಡಿಸಬೇಕು .

ಕಪ್ಪು ಮಣ್ಣಿನ ನೀರಿನ ಅಭಾವ ಪ್ರದೇಶದಲ್ಲಿ , ಹನಿ ನೀರಾವರಿಯಲ್ಲಿ ಮುಂಗಾರು , ಹಿಂಗಾರು ಹಾಗೂ ಬೇಸಿಗೆಯಲ್ಲಿ ಕ್ರಮವಾಗಿ 11 , 12 ಮತ್ತು 22 ಲೀ . ಪ್ರತಿ ಗಿಡಕ್ಕೆ ಪ್ರತಿ ದಿನಕ್ಕೆ ನೀರು ಒದಗಿಸುವದರಿಂದ ಶೇ . 31 ರಷ್ಟು ಹೆಚ್ಚಿನ ಇಳುವರಿಯೊಂದಿಗೆ ಶೇ . 40 ರಷ್ಟು ನೀರನ್ನು ಉಳಿತಾಯ ಮಾಡಬಹುದು .

ನಾಟಿ ಮಾಡುವುದು :

ಬೆಳೆಯ ಪ್ರದೇಶವನ್ನು 2-3 ಬಾರಿ ಚನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು .

ಶಿಫಾರಸು ಮಾಡಿದ ಅಂತರದಲ್ಲಿ 60 X 60 X 60 ಸೆಂ.ಮೀ , ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಸಮಪ್ರಮಾಣದಲ್ಲಿ ಬೆರೆಸಿದ ಮೇಲ್ಮಣ್ಣು , ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣಿನ ಮಿರ್ಶಣ ಹಾಕಿ ತುಂಬಿಕೊಳ್ಳಬೇಕು .

ಜೂನ್ – ಜುಲೈ ತಿಂಗಳಲ್ಲಿ ಗೂಟಿ ಗಿಡಗಳನ್ನು ಅಥವಾ ಬೇರು ಸಹಿತ ಕಡ್ಡಿಗಳನ್ನು ನಾಟಿ ಮಾಡಿ ಕೋಲಿನ ಆಸರೆ ಕೊಟ್ಟು ಸಸಿಗಳನ್ನು ರಕ್ಷಿಸಬೇಕು .

pomegranate cultivation in kannada

pomegranate cultivation in kannada

ಗೊಬ್ಬರ ಹಾಕುವದು :

ನಿಯಮಿತವಾಗಿ ಗೊಬ್ಬರ ಹಾಕುವುದರಿಂದ ಗಿಡಗಳು ಉತ್ತಮ ಇಳುವರಿ ಕೊಡುತ್ತವೆ .

ಶಿಫಾರಸು ಮಾಡಿದ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಮಳೆಗಾಲದ ಆರಂಭಕ್ಕೆ ಪಾತಿಗಳಲ್ಲಿ ಗಿಡದಿಂದ ಒಂದು ಮೀಟರ್ ದೂರದಲ್ಲಿ ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು .

ಅನಂತರ ನೀರು ಹಾಯಿಸಲೇಬೇಕು .

ಮಣ್ಣಿನ ತೇವಾಂಶವು ಕಡಿಮೆಯಿರುವಾಗ ಇಸ್ರೇಲ್ ಶೇ . 39 ಎಸ್ . ಎಲ್ . ( 2.5 ಮಿಲಿ ! ಲೀಟರ್ ) ದ್ರಾವಣವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿಂಪಡಿಸುವುದರಿಂದ ದಾಳಿಂಬೆ ಇಳುವರಿ ಹೆಚ್ಚುತ್ತದೆ .

ಅಂತರ ಬೆಳೆ :

ಅಲಸಂದ , ಸೌತೆ , ಕೋಸು , ಹುರುಳಿ , ಬಟಾಣಿ , ಈರುಳ್ಳಿ ಬೆಳೆಗಳನ್ನು ನಾಟಿ ಮಾಡಿದ 5-6 ವರ್ಷಗಳ ತನಕ ಅಂತರ ಬೆಳೆಯಾಗಿ ಬೆಳೆಯಬಹುದು .

ಹಸಿರು ಎಲೆ ಗೊಬ್ಬರಗಳಾದ ಸೆಣಬು ಮುಂತಾದವುಗಳನ್ನು ಮುಂಗಾರಿನಲ್ಲಿ ಬೆಳೆದು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದಲ್ಲದೆ , ಇಳುವರಿ ಹೆಚ್ಚಾಗುತ್ತದೆ .

ಗಿಡ ಕತ್ತರಿಸುವುದು ( ಚಾಟನಿ ಮಾಡುವುದು ) :

ಸಾಮಾನ್ಯವಾಗಿ ದಾಳಿಂಬೆ ಗಿಡಗಳನ್ನು ಬುಡದಲ್ಲಿ ಬರುವ ಮುಖ್ಯ ರೆಂಬೆಗಳೊಂದಿಗೆ ಮೊದೆಯಾಕಾರದಲ್ಲಿರುವಂತೆ ಬೆಳೆಸುತ್ತಾರೆ .

ಆದರೆ ಒಂದೇ ಮುಖ್ಯ ರೆಂಬೆಯ ಮೇಲೆ ಎಲ್ಲಾ ದಿಕ್ಕುಗಳಲ್ಲಿ ಪಸರಿಸಿದ ಉಪರೆಂಬೆಗಳಿರುವಂತೆ ಆಕಾರ ಕೊಟ್ಟು ಬೆಳೆಸುವುದು ಒಳ್ಳೆಯದೆಂದು ತಿಳಿದು ಬಂದಿದೆ .

ಪೊದೆಯಾಕಾರದಲ್ಲಿ ಬೆಳೆಸಿದ ಸಸಿಗಳಲ್ಲಿ ನೆಲದಿಂದ ಕೇವಲ 3-4 ಮುತ್ತು ರೆಂಬೆಗಳಿರುವಂತೆ ನೋಡಿಕೊಳ್ಳಬೇಕು .

ದಾಳಿಂಬೆ ದುಂಡಾಣು ಅಂಗಮಾರಿ ರೋಗದ ಸಮಗ್ರ ನಿರ್ವಹಣೆಗಾಗಿ ಅನುಸರಿಸಬೇಕಾದ ಕ್ರಮಗಳು

ನಾಟಿ ಪೂರ್ವದಲ್ಲಿ ಅನುಸರಿಸಬೇಕಾದ ಕ್ರಮಗಳು:

ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು .

ಶಿಫಾರಸ್ಸು ಮಾಡಿದ ಪೋಷಕಾಂಶಗಳ ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳುವಿನ ಗೊಬ್ಬರವನ್ನು ಹೆಚ್ಚಾಗಿ ಬಳಸುವದರಿಂದ ರೋಗ ನಿರೋಧಕತೆ ಹೆಚ್ಚಾಗಿ ರೋಗದ ತೀವ್ರತೆಯನ್ನು ಕಡಿಮೆಗೊಳಿಸಬಹುದು .

ಚಾಟನಿ ಪೂರ್ವ ಮತ್ತು ನಂತರದಲ್ಲಿ ಅನುಸರಿಸಬೇಕಾದ ಕ್ರಮಗಳು:

ಪ್ರತಿ ಜೀವನಾಶಕ ( ದುಂಡಾಣು ನಾಶಕ ) ದ ಸಿಂಪರಣೆಯ ನಂತರ , ಸತುವಿನ ಸಲೈಟ್ 1 ಗ್ರಾಂ ಮೆಗ್ನಿಶಿಯಂ ಸಲ್ವೇಟ್ 1 ಗ್ರಾಂ ಸುಣ್ಣದ ಸಲೈಟ್ 1 ಗ್ರಾಂ ಹಾಗೂ ಬೋರಾನ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವದರಿಂದ ಸಸ್ಯಗಳಲ್ಲಿ ರೋಗ ನಿರೋಧಕತ ಹೆಚ್ಚಿಸಿ , ರೋಗದ ತೀವ್ರತೆಯನ್ನು ಕಡಿಮೆಗೊಳಿಸಬಹುದು ,

ದಾಳಿಂಬೆ ತೋಟವನ್ನು ಸ್ವಚ್ಛವಾಗಿಡುವದು , ರೋಗ ಪೀಡಿತ ಎಲೆ , ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು .

ಇದರಿಂದ ರೋಗ ಪ್ರಸಾರವನ್ನು ತಡೆಗಟ್ಟಬಹುದು .

ಚಾಟನಿಯ ಪೂರ್ವದಲ್ಲಿ ರೋಗ ತಗುಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು ಶೇ . 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸುವದು .

ನಂತರ ಪ್ರತಿ ಲೀಟರ್ ನೀರಿಗೆ 2.0 ರಿಂದ 2.5 ಇಸ್ರೇಲ್ ಬೆರೆಸಿ ಸಿಂಪಡಿಸಿ ಎಲೆ ಉದುರಿಸಬೇಕು ,

ಉದುರಿಸಿದ ಎಲೆಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು ,

ಚಾಟನಿ ಮಾಡುವಾಗ , ಚಾಟನಿಯ ಕತ್ತರಿಯನ್ನು ಪ್ರತಿ ಲೀಟರ್ ನೀರಿಗೆ 25 ಮಿ.ಲೀ ಸೋಡಿಯಂ ಹೈಪೋಕ್ಲೋರೈಡ್ ಬೆರೆಸಿದ ದ್ರಾವಣದಲ್ಲಿ ಅದ್ದಿ ಚಾಟನಿ ಮಾಡುವುದರಿಂದ ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಬಹುದು .

ಚಾಟನಿ ನಂತರ ರೋಗ ತಗುಲಿದ ಗಿಡದ ಕಾಂಡಕ್ಕೆ ಸ್ಪಷ್ಟೊಸೈಕೀನ್ ಅಥವಾ ಸ್ಪಷ್ಟೊಮೈಸಿನ್ ಸಿಟ್ ( 0.5 ಗ್ರಾಂ ) ಅಥವಾ ಪ್ರೋಮೋ , ಅಥವಾ ನೈಟ್ರೋಪೇನ್ , ಅಥವಾ ಡಯೋಲ್ ( ಬ್ಯಾಕ್ಷಿನಾಶಕ್ 0.5 ಗ್ರಾಂ ) ಮತ್ತು ತಾಮ್ರದ ಆಕ್ಸಿಕ್ಲೋರೈಡ್ ( 3.0 ಗ್ರಾಂ ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡಕ್ಕೆ ಲೇಪಿಸಬೇಕು ,

ಲೇಪನಕ್ಕೆ ಅನುಕೂಲವಾಗಲು ಕೆಂಪು ಹುರುಮಂಜ ಅಥವಾ ಕೆಂಪು ಮಣ್ಣು ಕೂಡಿಸಬೇಕು ,

ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ದಾಳಿಂಬೆ ಬೆಳೆಯನ್ನು ಹಸ್ತ ಬಹಾರ್ ( ಸೆಪ್ಟೆಂಬರ್ – ಅಕ್ಟೋಬರ್‌ನಲ್ಲಿ ಚಾಟನಿ ಮಾಡುವದು ) ನಲ್ಲಿ ತೆಗೆದುಕೊಳ್ಳುವದು .

ಜೂನ್ – ಜುಲೈ ತಿಂಗಳಲ್ಲಿ ಚಾಟನಿ ಮಾಡುವ ಬೆಳೆಗೆ ಡಿಸೆಂಬರ್‌ದಿಂದ ಮೇ ತಿಂಗಳವರೆಗೆ ವಿಶ್ರಾಂತಿ ಕೊಡುವುದರಿಂದ ರೋಗದ ಬಾಧೆಯನ್ನು ಕಡಿಮೆ ಮಾಡಬಹುದು .

ಭೂಮಿಯ ಮೇಲೆ ಬಿದ್ದ ಅಳಿದುಳಿದ ಎಲೆಗಳ ಮೇಲೆ ಹೆಕ್ಟೇರಿಗೆ 20-25 ಕಿ.ಗ್ರಾಂ . ಬೀಚಿಂಗ ಪೌಡರನ್ನು ಧೂಳೀಕರಿಸಬೇಕು .

ರೋಗ ತಗುಲಿದ ಗಿಡಗಳಿಗೆ ರೋಗದ ಪ್ರಾರಂಭಿಕ ಹಂತದಲ್ಲಿ ಬ್ಲೂಮೋ- ನೈಟ್ರೋಪ್ರೋಪೇನ್ , ಡಯಲ್ ( ಬ್ಯಾಕ್ಷಿನಾಶಕ್ 0.5 ಗ್ರಾಂ ) ಅಥವಾ ಸ್ಟೆಷ್ಟೋಮೈಸಿನ್ ಸಿಟ್ ಅಥವಾ ಸ್ಪಷ್ಟೊಸೈಕ್ಲಿನ್ 0.5 ಗ್ರಾಂ . ಮತ್ತು ತಾಮ್ರದ ರೈಡ್ 3.0 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು , ಹವಾಮಾನ ಹಾಗೂ ರೋಗ ಬಾಧೆಗೆ ಅನುಸಾರವಾಗಿ 5 ರಿಂದ 6 ಸಿಂಪರಣೆಗಳನ್ನು 10 ದಿನಗಳ ಅಂತರದಲ್ಲಿ ಕೈಗೊಳ್ಳುವುದು .

ಮೇಲೆ ತಿಳಿಸಿದ ಹತೋಟಿ ಕ್ರಮವನ್ನು ಸಾಮೂಹಿಕವಾಗಿ ಎಲ್ಲ ರೈತರು ಅಳವಡಿಸಿದಲ್ಲಿ ಈ ರೋಗದ ನಿರ್ವಹಣೆ ಪರಿಣಾಮಕಾರಿಯಾಗುವದು , ದಾಳಿಂಬೆಯ ಕಾಂಡದ ಗುಂಡು ರಂಧ್ರ ಕೊರಕ ಮತ್ತು ಸೊರಗು ರೋಗ ಕಾಂಡ ಗುಂಡು ರಂಧ್ರ ಕೊರಕ ಹಾನಿಯ ಲಕ್ಷಣಗಳು : ದುಂಬಿಗಳು ಕಾಂಡದ ಮೇಲೆ ಸಣ್ಣ ಸಣ್ಣ ರಂಧ್ರಗಳನ್ನು ಮಾಡುತ್ತವೆ . ಈ ರಂಧ್ರಗಳಿಂದ ಮರದ ಮಡಿ ಉದುರುತ್ತದೆ .

pomegranate cultivation in kannada

pomegranate cultivation in kannada

ಸೊರಗು ರೋಗದ ಲಕ್ಷಣಗಳು :

ರೋಗ ತಗುಲಿದ ಗಿಡದಲ್ಲಿ ಒಂದು ಟೊಂಗೆ ಹಳದಿ ಬಣ್ಣಕ್ಕೆ ತಿರುಗಿ ಸುಮಾರು 15 ದಿವಸಗಳ ನಂತರ ಒಣಗಲು ಪ್ರಾರಂಭಿಸುತ್ತದೆ .

ಈ ಟೊಂಗೆ ಒಣಗಿದ 15 ದಿನಗಳ ನಂತರ ಮತ್ತೊಂದು ಟೊಂಗೆ ಒಣಗುತ್ತಾ ಹೀಗೆ ಮುಂದುವರೆದು ಇಡಿ ಗಿಡವೂ ಒಣಗುತ್ತದೆ .

ಕಾಯಿ ಕಟ್ಟುವ ಹಂತದಲ್ಲಿ ಈ ಲಕ್ಷಣಗಳು ಹೆಚ್ಚಿಗೆ ಕಂಡುಬರುತ್ತವೆ .

ಒಣಗಿದ ಗಿಡದ ಕಾಂಡವನ್ನು ಕತ್ತರಿಸಿ ನೋಡಿದಾಗ ಕಂದು ಬಣ್ಣದ ಅಥವಾ ನೇರಳೆ ಬಣ್ಣದ ಮಚ್ಚೆಗಳು ಕಂಡು ಬರುವವು .

ಗಿಡ ಸಾಯುವುದಕ್ಕೆ ಮುಂಚೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವವು .

ಬುಡಭಾಗದ ಕಾಂಡವು ನೇರವಾಗಿ ಸೀಳುವ ಲಕ್ಷಣಗಳನ್ನು ಕಾಣಬಹುದು .

ಒಣಗುತ್ತಿರುವ ದಾಳಿಂಬೆ ಗಿಡಗಳಲ್ಲಿ ಕಾಂಡದ ಗುಂಡು ರಂಧ್ರ ಕೊರಕಗಳು ( ಶಾಟ್ ಹೋಲ್ ಬೋರ‌ ) ಮತ್ತು ಸೊರಗು ರೋಗಕ್ಕೆ ಕಾರಣವಾಗುವ ಶಿಲೀಂದ್ರ ರೋಗಾಣು ( ಸೆರಟೊಸಿಸ್ಟಿಸ್ ಪಿಂಬ್ರಿಯೇಟ್ ) ಒಟ್ಟಿಗೆ ಕಂಡು ಬರುವುದರಿಂದ , ಕೀಟ ಮತ್ತು ಶಿಲೀಂದ್ರ ಎರಡರ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು .

ತೋಟದಲ್ಲಿನ ಎಲ್ಲಾ ದಾಳಿಂಬೆ ಗಿಡಗಳಿಗೆ ಪ್ರತಿ ಗಿಡಕ್ಕೆ ನೆಲದಿಂದ ಮೇಲೆ ಎರಡು ಅಡಿ ಎತ್ತರದ ಕಾಂಡದ ಸುತ್ತಲೂ 4 ಮಿ.ಲೀ ಕ್ಲೋರೋಫೈರಿಫಾಸ್ 20 ಇ.ಸಿ. ಔಷಧದ ಜೊತೆಗೆ 2 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ . ಅಥವಾ 1 ಮಿ.ಲೀ ಪ್ರೋಪಿಕೋನೋಜೋಲ್ 25 ಇಸಿ ಬೆರೆಸಿ ಕಾಂಡ ತೊಯ್ಯವಂತ ಹಾಗೂ ಬೇರುಗುಂಟ ಬುಡದ ಮಣ್ಣಿನಲ್ಲಿ ಸೇರುವಂತೆ ಚೆನ್ನಾಗಿ ಉಣಿಸಬೇಕು .

ಇದೇ ಉಪಚಾರವನ್ನು ಒಂದು ತಿಂಗಳ ನಂತರ ಮತ್ತೊಮ್ಮೆ ಮಾಡಬೇಕು , ಮೂರು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಪ್ರತಿ ಗಿಡಕ್ಕೆ ಸುಮಾರು 5-8 ಲೀಟರ್ ಸಿದ್ಧಪಡಿಸಿದ ದ್ರಾವಣ ಬೇಕಾಗುತ್ತದೆ ,

ಉಪಚಾರದ ಪೂರ್ವದಲ್ಲಿ ಕನಿಷ್ಟ ಒಂದು ವಾರ ಮುಂಚೆ ಮತ್ತು ಉಪಚರಿಸಿದ ನಂತರ ಎರಡು ದಿನಗಳವರೆಗೆ ಗಿಡಗಳಿಗೆ ನೀರು ಉಣಿಸಬಾರದು .

ಬಾಧಿತ ಪ್ರದೇಶದಲ್ಲಿ ಈ ಉಪಚಾರವನ್ನು ವರ್ಷದಲ್ಲಿ ಕನಿಷ್ಠ ಎರಡು ಸಲ ಅಂದರೆ ಮೇ – ಜೂನ್ ಹಾಗೂ ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ತಪ್ಪದೇ ಅನುಸರಿಸಬೇಕು .

ದಾಳಿಂಬೆ ತೋಟದ ಪುನಚೇತನಾ ಕ್ರಮಗಳು :

ಬಾಧೆಗೊಳಗಾಗಿ ಪೂರ್ತಿ ಒಣಗಿದ ಗಿಡಗಳನ್ನು / ಸಸಿಗಳನ್ನು ಕಿತ್ತು ನಾಶಪಡಿಸಿ ನಂತರ ಆ ಸ್ಥಳದಲ್ಲಿ ಪ್ರತಿ ಲೀಟರ್ ನೀರಿನಲ್ಲಿ 30 ಮಿ.ಲೀ ಫಾರ್ಮೋಲಿನ್ ಬೆರೆಸಿ ತಯಾರಿಸಿದ 10 ಲೀಟರ್ ದ್ರಾವಣವನ್ನು ಉಪಚರಿಸಬೇಕು ,

ನಂತರ ಆ ಸ್ಥಳದ ಮೇಲೆ ಪಾಲಿಥಿನ್ ಹಾಳೆಯಿಂದ ಮುಚ್ಚಬೇಕು .

15 ದಿವಸಗಳ ನಂತರ ಪಾಲಿಥಿನ್ ಹಾಳೆಯನ್ನು ತೆಗೆದು ಹೊಸ ರೋಗಮುಕ್ತ ಸಸಿಗಳನ್ನು ನಾಟಿ ಮಾಡಬೇಕು .

ನಂತರ ಪಕ್ಕದ ಗಿಡಗಳ ಮಧ್ಯೆ ಕಂದಕವನ್ನು ತೆಗೆದು ಬಿಡಬೇಕು .

ಇದರಿಂದ ರೋಗ ಪಸರಿಸುವುದನ್ನು ತಡೆಯಬಹುದು .

pomegranate cultivation in kannada

ಕೊಯ್ಲು ಮತ್ತು ಇಳುವರಿ :

ಗಿಡಗಳು ನಾಟಿ ಮಾಡಿದ 2 ನೇ ವರ್ಷದಿಂದ ಹಣ್ಣು ಬಿಡಲು ಪ್ರಾರಂಭಿಸುತ್ತವೆ .

ಮೊದಲು ಪ್ರತಿ ಗಿಡಕ್ಕೆ 20-25 ಹಣ್ಣುಗಳು ದೊರೆಯುತ್ತವೆ .

ನಿಧಾನವಾಗಿ ಇಳುವರಿ ಹೆಚ್ಚುತ್ತಾ ಹೋಗಿ 10 ವರ್ಷದ ಗಿಡವು 100-150 ಹಣ್ಣುಗಳನ್ನು ಪ್ರತಿ ವರ್ಷ ಕೊಡುತ್ತದೆ .

ಚೆನ್ನಾಗಿ ನಿರ್ವಹಣೆ ಮಾಡಿದ ದಾಳಿಂಬೆ ತೋಟದಲ್ಲಿ ಪ್ರತಿ ಗಿಡವು 200-250 ಹಣ್ಣುಗಳ ಸರಾಸರಿ ಇಳುವರಿ ಕೊಡುತ್ತದೆ . ( 10-13 ಟನ್ ಪ್ರತಿ ಹೆಕ್ಟೇರಿಗೆ )

ಜೀವಾಮೃತವನ್ನು ಮನೆಯಲ್ಲಿ ತಯಾರಿಸುವುದು ಹೇಗೆ ? how to make jeevamrut at home

business ideas in kannada

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments