Thursday, June 23, 2022
HomeAgriculturepineapple in kannada | ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ

pineapple in kannada | ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ

ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ 

pineapple in kannada | ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ

ಈ ಕೃಷಿಯನ್ನು ಮಾಡುವುದು ಹೇಗೆ
ಎಷ್ಟು ಬಂಡವಾಳಬೇಕು
ಹವಾಗುಣ ಮತ್ತು ನಾಟಿ ಕಾಲ
ತಳಿಗಳ ಕುರಿತು ಮಾಹಿತಿ
ಬೇಸಾಯ ಕ್ರಮ
ಮಾರ್ಕೆಟಿಂಗ್
ಇಳುವರಿ ಎಷ್ಟು ಗಳಿಸಬಹುದು
pineapple in kannada
pineapple in kannada
ಅನಾನಸ್ ಕೃಷಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .
ಅನಾನಸ್ ರುಚಿಕರವಾದ ಉಷ್ಣವಲಯದ ಮತ್ತು ರಸಭರಿತವಾದ ಆಹ್ಲಾದಕರ ಸುವಾಸನೆಯುಳ್ಳ ಹಣ್ಣು
ಈ ಹಣ್ಣಿನಲ್ಲಿ ‘ ಎ ‘ , ‘ ಬಿ ‘ ಮತ್ತು ‘ ಸಿ ‘ ಜೀವಸತ್ವಗಳು ಮತ್ತು ಕೆಲ ಖನಿಜಗಳು ಹೇರಳವಾಗಿವೆ ,
ಕರಾವಳಿ ಪ್ರದೇಶಗಳಲ್ಲಿ ಅನಾನಸ್ ಚೆನ್ನಾಗಿ ಬೆಳೆಯುತ್ತದೆ ,
ಮಲೆನಾಡು ಪ್ರದೇಶಗಳಾದ ಶಿರಸಿ , ಸಾಗರ , ಸೊರಬ ತಾಲ್ಲೂಕುಗಳಲ್ಲಿ ಸಹ ಇದನ್ನು ಚೆನ್ನಾಗಿ ಬೆಳೆಯಬಹುದು ,
ಹವಾಗುಣ ಮತ್ತು ನಾಟಿ ಮಾಡುವ  ಕಾಲ :
ಬೆಚ್ಚಗಿರುವ ಹಾಗೂ ತೇವಾಂಶವಿರುವ ಎರಡೂ ಹವಾಮಾನಗಳಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ .
ಈ ಬೆಳೆಯನ್ನು 600-4000 ಮಿ.ಮೀ. ಮಳೆ ಬರುವ ಪ್ರದೇಶಗಳಲ್ಲಿ ಬೆಳೆಯಬಹುದು .
ಜೂನ್ ತಿಂಗಳು ಅನಾನಸ್ ನಾಟಿಗೆ ಸೂಕ್ತ .
ಗುಡ್ಡಗಾಡು ಪ್ರದೇಶಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಸೂಕ್ತ .
ಅನಾನಸ್ ಬೆಳೆಯಲು  ಮಣ್ಣು ಹೇಗಿರಬೇಕು :
ಗುಡ್ಡಗಾಡು ಪ್ರದೇಶಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಸೂಕ್ತ .
ಜೇಡಿ ಮಣ್ಣು ಉತ್ತಮವಲ್ಲ .
ಅನಾನಸ್ ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಹಗುರ ಮಣ್ಣು ಈ ಬೆಳೆಗೆ ಸೂಕ್ತ .
ಇದಕ್ಕೆ ಉತ್ತಮ ನೀರಾವರಿ ಸೌಲಭ್ಯ ಮತ್ತು ಚೆನ್ನಾಗಿ ನೀರು ಬಸಿದು ಹೋಗುವಂತಹ ಮಣ್ಣು ಬೇಕು ,
ಭೂಮಿಯೊಳಗಿನ ನೀರಿನ ಮಟ್ಟ ಮೇಲಿರುವಂತಹ ತಗ್ಗು ಪ್ರದೇಶಗಳು ಯೋಗ್ಯವಲ್ಲ .
pineapple in kannada
ತಳಿಗಳು:
ಕ್ಲೀನ್ :
ಈ ತಳಿಯ ಹಣ್ಣು ತಾಜಾ ಸೇವನೆಗೆ ಒಳ್ಳೆಯದಿದ್ದು ,
ಹಣ್ಣಿನ ಗಾತ್ರ ಚಿಕ್ಕದಾಗಿದ್ದು ಬಹಳ ರುಚಿಯಾಗಿರುತ್ತದೆ .
ಎಲೆಗಳಲ್ಲಿ ಮುಳ್ಳುಗಳಿದ್ದು , ಹಣ್ಣಿನ ತೂಕ 0.5 ರಿಂದ 10 ಕಿ.ಗ್ರಾಂ ಇರುತ್ತದೆ . 36
ಕ್ಕೂ :
ಈ ತಳಿಯ ಹಣ್ಣುಗಳನ್ನು ಸಂಸ್ಕರಿಸಿ ಡಬ್ಬಗಳಲ್ಲಿ ಶೇಖರಿಸಿಡಲು ಯೋಗ್ಯವಾಗಿದೆ .
ಹಣ್ಣಿನ ಗಾತ್ರ ದೊಡ್ಡದಾಗಿದ್ದು ( 1.5 ರಿಂದ 3 ಕಿ.ಗ್ರಾಂ ) , ಎಲೆಗಳಲ್ಲಿ ಮುಳ್ಳುಗಳಿರುವುದಿಲ್ಲ ,

ನಾಟಿ ಮಾಡಲು ಬೇಕಾದ ವಸ್ತುಗಳು  :

ಕಂದುಗಳು , ಸ್ಲಿಪ್ ( ಬಗಲು ಮರಿ ) ಮತ್ತು ಕೌನ್ ( ತುದಿ ಮರಿ ) ಇವು ನಾಟಿಗೆ ಬಳಸುವ ಪ್ರಮುಖ ಸಸ್ಯ ಭಾಗಗಳು .
ಕಂದುಗಳು ಗಿಡದ ಪಕ್ಕದಲ್ಲಿ ಬುಡದಿಂದ ಬರುವ ಕವಲುಗಳು .
ಸ್ಲಿಪ್‌ಗಳು ಹಣ್ಣಿನ ಕೆಳಭಾಗದಲ್ಲಿ ಕವಲುಗಳಂತೆ ಬರುತ್ತವೆ .
ಕೌನ್‌ಗಳು ಹಣ್ಣಿನ ಮೇಲ್ಬಾಗದಲ್ಲಿ ಇರುತ್ತವೆ .
ಕಂದು ಮತ್ತು ಸ್ಲಿಪ್‌ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಕೌನ್‌ಗಳಿಗಿಂತ ಬೇಗ ಇಳುವರಿ ಬರುತ್ತದಲ್ಲದೇ ಹಣ್ಣಿನ ಗಾತ್ರ ಕೂಡ ದೊಡ್ಡದಿರುತ್ತದೆ .
ದೊಡ್ಡಗಾತ್ರದ ಕಂದುಗಳು ಮತ್ತು ಸ್ಲಿಪ್‌ಗಳು ನಾಟಿಗೆ ಯೋಗ್ಯವಲ್ಲ .
ನಾಟಿಗೆ ಮುಂಚೆ ಕಂದು ಮತ್ತು ಸ್ಲಿಪ್‌ಗಳನ್ನು ಕೆಳಮುಖವಾಗಿ ನೆರಳಿನಲ್ಲಿ ಜೋಡಿಸಿಡಬೇಕೆ ವಿನಃ ಒತ್ತಾಗಿ ಗುಂಪು ಮಾಡಿ ಇಡಬಾರದು .
ನಾಟಿಗೆ ಮುಂಚೆ ಕೆಳಗಿನ ಒಂದೆರಡು ಎಲೆಗಳನ್ನು ತೆಗೆದು ಹಾಕಿ ಕೆಳಭಾಗವನ್ನು ಕೀಟನಾಶಕ ಮತ್ತು ಶಿಲೀಂದ್ರನಾಶಕಗಳಿಂದ ಉಪಚರಿಸಿದರೆ ಹಿಟ್ಟು ತಿಗಣೆ ಮತ್ತು ಕಾಂಡ ಕೊಳೆ ರೋಗವನ್ನು ತಡೆಗಟ್ಟಬಹುದು .

ಬೇಸಾಯ ಮಾಡುವ  ಕ್ರಮಗಳು:

ನಾಟಿ ಮಾಡುವುದು :

ಅನಾನಸ್ ನಾಟಿ ಮಾಡಲು ಬೆಳೆ ಪ್ರದೇಶವನ್ನು ಹರಿ ಮತ್ತು ಬೋದುಗಳನ್ನು ಒಂದಾದ ನಂತರ ಒಂದರಂತೆ ತಯಾರಿಸಬೇಕು .
ಬೆಟ್ಟ ಪ್ರದೇಶಗಳಲ್ಲಿ ಇಳುಕಲಿಗೆ ಅಡ್ಡವಾಗಿ ಹರಿಗಳನ್ನು ತೆಗೆಯಬೇಕು .
ಹರಿಗಳ ಅಳತೆ 90 ಸೆಂ.ಮೀ. ಅಗಲ 22-30 ಸೆಂ.ಮೀ. ಆಳ ಮತ್ತು ಅನುಕೂಲಕ್ಕೆ ತಕ್ಕ ಉದ್ದವಿರುವಂತೆ ತೆಗೆಯಬೇಕು .
ನಂತರ ಹರಿ ಮತ್ತು ಬೋದುಗಳನ್ನು ಮಾಡಿಕೊಳ್ಳಬೇಕು .
ಹರಿಗಳಲ್ಲಿ ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಹಾಕಿ ಚೆನ್ನಾಗಿ ಬೆರೆಸಬೇಕು ,
ಹರಿಗಳು ಒಂದಕ್ಕೊಂದು 60 ಸೆಂ.ಮೀ. ಅಂತರದಲ್ಲಿರಬೇಕು .
ನಂತರ ಪ್ರತಿ ಹರಿಯಲ್ಲಿ ಕಂದು / ಸ್ಲಿಪ್‌ಗಳನ್ನು ಎರಡು ಸಾಲುಗಳಲ್ಲಿ , ಸಾಲುಗಳ ಮಧ್ಯೆ 60 ಸೆಂ.ಮೀ. ಮತ್ತು ಸಾಲುಗಳ ಒಳಗೆ 30 ಸೆಂ.ಮೀ. ಅಂತರ ಇರುವಂತೆ ಕರ್ಣಾಕೃತಿಯಲ್ಲಿ ನಾಟಿ ಮಾಡಬೇಕು . ನಂತರ ಮಣ್ಣನ್ನು ಸಸಿಗಳ ಸುತ್ತಲೂ ಚೆನ್ನಾಗಿ ಒತ್ತಬೇಕು .
ನಾಟಿ ಮಾಡುವಾಗ ಮಣ್ಣು ಸಸಿಯ ಸುಳಿಯಲ್ಲಿ ಬೀಳದಂತೆ ಎಚ್ಚರ ವಹಿಸಿ ,
ನಾಟಿ ಮಾಡಿದ ನಂತರ ನೀರು ಒದಗಿಸಬೇಕು .
pineapple in kannada
pineapple in kannada

ಅಂತರ ಬೇಸಾಯ :

ಗೊಬ್ಬರಗಳನ್ನು ಒದಗಿಸುವುದು ,
ಕಳೆ ತೆಗೆಯುವುದು ,
ಮಣ್ಣು ಏರಿಸುವುದು ಮತ್ತು ನೀರಾವರಿ ಮುಂತಾದವು ಪ್ರಮುಖ ಬೇಸಾಯ ಕ್ರಮಗಳು ,
ನಾಟೆ ಸಮಯದಲ್ಲಿ ಪೂರ್ತಿ ಪ್ರಮಾಣದ ರಂಜಕ ಕೊಡಬೇಕು .

ಸಾರಜನಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ನಾಲ್ಕು ಸಮಕಂತುಗಳಲ್ಲಿ , ನಾಟಿ ಮಾಡಿದ ಮೂರು ತಿಂಗಳ ನಂತರ ಮೂರು ತಿಂಗಳ ಅವಧಿಯಲ್ಲಿ ಒದಗಿಸಬೇಕು .

ಪ್ರತಿ ಸಾರಿ ಗೊಬ್ಬರ ಒದಗಿಸಿದಾಗ ಸಸಿಗಳ ಸುತ್ತಲೂ ಮಣ್ಣು ಏರಿಸಬೇಕು .

ಇದರಿಂದ ಸಸಿಗಳಿಗೆ ಉತ್ತಮ ಆಸರೆ ಸಿಗುತ್ತದೆಯಲ್ಲದೇ ಬೇರುಗಳು ಬೆಳೆಯುತ್ತವೆ .

ಹೊದಿಕೆ ಉಪಯೋಗಿಸಿ ಭೂಮಿಯಲ್ಲಿನ ನೀರು ಸಂರಕ್ಷಣೆ ,
ಕಳೆ ನಿಯಂತ್ರಣ ಮಾಡಬೇಕು .
ಮಣ್ಣಿನ ಗುಣಧರ್ಮಕ್ಕನುಸಾರವಾಗಿ ಬೇಸಿಗೆಯಲ್ಲಿ ಪ್ರತಿ 15-20 ದಿನಗಳಿಗೊಮ್ಮೆ ನೀರು ಒದಗಿಸಬೇಕು .

ಸಸ್ಯ ಪ್ರಚೋದಕಗಳ ಉಪಯೋಗ :

ಅನಾನಸ್‌ದಲ್ಲಿಯ ಅಸಮ ಹೂ ಬಿಡುವಿಕೆಯನ್ನು ಹೋಗಲಾಡಿಸಲು ನಾಟಿ ಮಾಡಿದ 13-14 ತಿಂಗಳ ನಂತರ ಅಥವಾ ಸಸಿಗಳು 37-38 ಎಲೆಗಳನ್ನು ಹೊಂದಿದಾಗ ಅವುಗಳಿಗೆ ಉಪಚರಿಸಬೇಕು . ನ್ಯಾಪ್ತಲಿನ್ ಅಸಿಟಿಕ್ ಆಮ್ಲವನ್ನು ( ಎನ್.ಎ.ಎ. ) 10 ಪಿ . ಪಿ . ಎಮ್ ಪ್ರಮಾಣದಲ್ಲಿ ಶೇ . 2 ರ ಯೂರಿಯಾ ಜೊತೆಗೆ ಅಥವಾ 100 ಪಿ.ಪಿ.ಎಮ್ ಇಸ್ರೇಲ್ ( 1 ಗ್ರಾಂ ಪ್ರತಿ 10 ಲೀಟರ್ ನೀರಿಗೆ ) ಅಥವಾ 25 ಪಿ.ಪಿ.ಎಮ್ . ಎಥೈಲ್ , ಶೇ . 2 ರ ಯೂರಿಯಾ ಹಾಗೂ ಶೇ . 0.04 ರ ಸೋಡಿಯಂ ಕಾರ್ಬೊನೇಟ್‌ಗಳ ಮಿಶ್ರಣವನ್ನು ಬಳಸಿ ಸಸಿಗಳನ್ನು ಉಪಚರಿಸಬೇಕು .
ಪ್ರತಿ ಸಸಿಯ ಸುಳಿಯಲ್ಲಿ 50 ಮಿ.ಲೀ. ದ್ರಾವಣವನ್ನು ಹಾಕಬೇಕು .
ಸಸ್ಯ ಪ್ರಚೋದಕಗಳ ಉಪಚಾರದ ನಂತರ 40-45 ದಿನಗಳಲ್ಲಿ ಸಸಿಗಳು ಹೂ ಬಿಡಲು ಆರಂಭಿಸುತ್ತವೆ .
ಹಣ್ಣಿನ ಗಾತ್ರ ಹೆಚ್ಚಿಸಲು 200 ಪಿ.ಪಿ.ಎಮ್ ನ್ಯಾಪ್ತಲಿನ್ ಅಸಿಟಿಕ್ ಆಮ್ಲವನ್ನು ಕಾಯಿ ಕಟ್ಟಿದ 2-3 ತಿಂಗಳುಗಳ ನಂತರ ಉಪಯೋಗಿಸಿ ,
ಕಳೆ ನಿರ್ವಹಣೆ :
ಕರಿಕೆ ಮತ್ತು ಜೇಕು ಅನಾನಸ್ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಳೆಗಳು ,
ಪ್ರತಿ ತಿಂಗಳು ಕಳೆ ಕಸ ತೆಗೆಯಬೇಕು .
ಇತ್ತೀಚೆಗೆ ರಾಸಾಯನಿಕ ಕಳೆನಾಶಕಗಳ ಬಳಕೆ ಜನಪ್ರಿಯವಾಗುತ್ತಿದೆ .
ಪ್ರತಿ ಹೆಕ್ಟೇರಿಗೆ 2 ಕಿ.ಗ್ರಾಂ . ಬೊಮೊಸಿಲ್ ಎ.ಐ. ಅಥವಾ 2 ಕಿ.ಗ್ರಾಂ . ಡೈಯುರಾನ್ ( ಎ.ಐ ) 900 ಲೀಟರ್ ನೀರಿನಲ್ಲಿ ಕರಗಿಸಿ , ನಾಟಿಮಾಡುವ ಮುಂಚೆ ಸಿಂಪರಣೆ ಮಾಡಬಹುದು .
ನಾಟಿ ಮಾಡಿದ 45 ದಿವಸಗಳ ನಂತರ ಇನ್ನೂ ಹೆಚ್ಚು ಕಳೆಗಳಿದ್ದಲ್ಲಿ , ಪ್ರತಿ ಲೀಟರ್ ನೀರಿನಲ್ಲಿ 8 ರಿಂದ 10 ಮಿ.ಲೀ. ಗೋಮೋಸೇಟ್ 41 ಎಸ್ . ಎಲ್ . 10-20 ಗ್ರಾಂ ಯೂರಿಯಾ ಅಥವಾ ಅಮೋನಿಯಂ ಸಲ್ವೇಟ್ ಮತ್ತು ಎರಡು ತೊಟ್ಟು ನಿಂಬೆ ಹುಳಿ ರಸ ಚೆನ್ನಾಗಿ ಮಿಶ್ರಣ ಮಾಡಿ , ಕಳೆ ಗಿಡಗಳ ಮೇಲೆ ಬೀಳುವ ಹಾಗೆ ಸಿಂಪರಿಸಬೇಕು .
ಸಿಂಪರಣೆಯ ದ್ರವ್ಯ ಯಾವ ಕಾರಣಕ್ಕೂ ಅನಾನಸ್ ಗಿಡದ ಎಲೆಯ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿ , ಅನಂತರ 45 ದಿನಗಳ ಅಂತರದಲ್ಲಿ ಸಿಂಪರಣೆಯನ್ನು ಪುನ : ಕೈಗೊಳ್ಳಬೇಕು .
ಈ ಸಿಂಪರಣೆ ಎಲ್ಲಾ ತರದ ಕಳೆಗಳನ್ನು 9-15 ತಿಂಗಳುಗಳವರೆಗೂ ನಿಯಂತ್ರಿಸುತ್ತದೆ .
pineapple in kannada

ಹಣ್ಣು ಬೆಳವಣಿಗೆ ಮತ್ತು ಕೊಯ್ಲು  :

ನಾಟಿ ಮಾಡಿದ 12 ತಿಂಗಳ ನಂತರ ಅನಾನಸ್ ಬೆಳೆ ಹೂ ಬಿಡುತ್ತದೆ .
ನಂತರ ನಾಲ್ಕೂವರೆಯಿಂದ ಐದುವರೆ ತಿಂಗಳುಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧವಾಗುತ್ತದೆ .
ಸಂಸ್ಕರಿಸಿದ ಡಬ್ಬಿಗಳಲ್ಲಿ ಶೇಖರಿಸಿಡಲು ಹಣ್ಣುಗಳ ಬಣ್ಣ ಹಳದಿ ವರ್ಣಕ್ಕೆ ತಿರುಗಿದಾಗ ಕೊಯ್ಲು  ಮಾಡಬೇಕು .
ನೇರ ಸೇವನೆಗೆ ಹಣ್ಣು ಪೂರ್ಣ ಪಕ್ವವಾಗುವವರೆಗೆ ಗಿಡದಲ್ಲಿ ಬಿಡುವುದೊಳಿತು .
ಹಣ್ಣುಗಳನ್ನು ಚಾಕುವಿನಿಂದ ತಳಭಾಗದಲ್ಲಿ 2-4 ಸೆಂ.ಮೀ. ಉದ್ದ ಕಾಂಡದೊಂದಿಗೆ ಕತ್ತರಿಸಿ ಕೊಯ್ಲು  ಮಾಡಬೇಕು .
ಕೊಯ್ಲಿನ ನಂತರ ಹಣ್ಣುಗಳನ್ನು ಕೌನ್‌ಗಳೊಂದಿಗೆ 3-4 ವಾರ ಕೆಡದಂತಿಡಬಹುದು .
ಮಾರ್ಕೆಟಿಂಗ್ ಮಾಡುವುದು ಹೇಗೆ : 
ಹೋಲ್ಸೇಲ್ ಡೀಲರ್ಸ್ ಗೆ ಸೆಲ್ ಮಾಡಬಹುದು  ಅಥವಾ ನೀವೇ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸೆಲ್ ಮಾಡಬಹುದು. 
ಇಳುವರಿ ಎಷ್ಟು ಗಳಿಸಬಹುದು:
ನೀವು ಬೆಳೆದಿರುವ ಅನಾನಸ್ ಪ್ರತಿ ಹೆಕ್ಟೇರಿಗೆ 60-70 ಟನ್ ಹಣ್ಣಿನ ಇಳುವರಿ ನಿರೀಕ್ಷಿಸಬಹುದು.
pineapple in kannada
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments