Tuesday, September 27, 2022
HomeAgricultureಪಪಾಯ ಕೃಷಿ ಮಾಡುವ ವಿಧಾನ | papaya cultivation in kannada | News In...

ಪಪಾಯ ಕೃಷಿ ಮಾಡುವ ವಿಧಾನ | papaya cultivation in kannada | News In kannada

ಪಪಾಯ ಕೃಷಿ ಮಾಡುವ ವಿಧಾನ

ಕಡಿಮೆ ಅವಧಿಯಲ್ಲಿ ಹಾಗು ವರ್ಷದ ಎಲ್ಲ ಸಮಯದಲ್ಲಿ ಬೆಳೆಯಬಹುದಾದಗಿರುವುದರಿಂದ ಇದು ಲಾಭದಾಯಕವಾಗಿದೆ ಹಲವಾರು ಧಾರ್ಮಿಕ ಹಬ್ಬ ಹರಿದಿನಗಲ್ಲಿ ಪಾಪಾಯಿ ಹಣ್ಣಿಗೆ ಅಧಿಕ ಬೇಡಿಕೆ ಇರುತ್ತದೆ ಇದರ ಕುರಿತು ಒಂದಿಷ್ಟು ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿ ಕೊಡುವ ಪ್ರಯತ್ನ ನಾವು ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
ಪಪಾಯ ( ಪರಂಗಿ ) ಹಣ್ಣು , ಒಂದು ಮಹತ್ವದ ಶೀಘ್ರ ಕೊಡುವ ಹಣ್ಣಿನ ಬೆಳೆ , ಹಣ್ಣು ದೇಹದ ಪೋಷಣೆಗೆ ಬೇಕಾದ ಮತ್ತು ಸಿ ಜೀವಸತ್ವಗಳಿಂದ ಸಂಪದ್ಭರಿತವಾಗಿದೆ , ಪಪೇನ್ ಎಂಬ ಬೆಲೆ ಬಾಳುವ ಕಿಣ್ವವನ್ನು ಪರಂಗಿ ಕಾಯಿಯ ಹಾಲಿನಿಂದ ತಯಾರಿಸುತ್ತಾರೆ . ಈ ಪಪೇನ್‌ನ್ನು ಔಷಧಿಗಳ ತಯಾರಿಕೆ ಮತ್ತು ಇನ್ನಿತರ ಹಲವಾರು ಉದ್ದೇಶಗಳಿಗಾಗಿ ಬಳಸುತ್ತಾರೆ .
papaya cultivation in kannada
ಪಪಾಯಿ ಸಸ್ಯಗಳ ಬೆಳೆಸುವ ವಿಧಾನ :
ಸಸಿ ಬೆಳೆಯಲು 8 ಮೀ . ಉದ್ದ 1.25 ಮೀ . ಅಗಲ ಮತ್ತು 10 ಸೆಂ.ಮೀ ಎತ್ತರದ  2-3 ಏರು ಸಸಿ ಮಡಿಗಳನ್ನು ತಯಾರಿಸಬೇಕು
ಪ್ರತಿ ಮಡಿಗೆ 10-15 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧ ಕಿ . ಗ್ರಾಂ , 15:15:15 ಕಾಂಪ್ಲೆಕ್ಸ್ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು .
ಸೆರೆಸಾನ್ ದ್ರಾವಣದಿಂದ ( 2 ಗ್ರಾಂ ಪ್ರತಿ ಲೀಟರ್‌ಗೆ ) ಸಸಿ ಮಡಿಗಳನ್ನು ನಡೆಸಬೇಕು 
ತಾಜಾ ಬೀಜಗಳನ್ನು 2.5 ಸೆಂ.ಮೀ. ಅಂತರದಲ್ಲಿ 2 ಸಂ . ಮೀ . ಆಳದಲ್ಲಿ 15 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು
ಪಪಾಯ ಬೀಜಗಳನ್ನು ಬಿತ್ತುವ ಪೂರ್ವದಲ್ಲಿ ರಾತ್ರಿಯಿಡಿ ಬೀಜಗಳನ್ನು ಗೋಮೂತ್ರದಲ್ಲಿ ನೆನೆಸಿ ನಂತರ ಬಿತ್ತನೆ ಮಾಡುವುದರಿಂದ ಬೀಜಗಳು ಸಮನಾಗಿ ಹಾಗೂ ಉತ್ತಮವಾಗಿ ಮೊಳಕೆಯೊಡೆಯುತ್ತವೆ . ಮಾರ್ಚ – ಏಪ್ರಿಲ್ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳಿತು .
ಇದರಿಂದ ಜೂನ್ – ಜುಲೈ ತಿಂಗಳಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ .
ಸಸಿ ಮಡಿಗಳಿಗೆ ನಿಯಮಿತವಾಗಿ ನೀರು ಒದಗಿಸಿ , ಚಿಕ್ಕ ಸಸಿಗಳಿಗೆ ಬೇಸಿಗೆಯಲ್ಲಿ ನೆರಳು ಒದಗಿಸಬೇಕು .
ನಾಟಿ ಮಾಡಿದಾಗ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿದ ಸಸಿಗಳು ಸಸಿಮಡಿಗಳಲ್ಲಿ ಬೆಳೆಸಿದ ಸಸಿಗಳಿಗಿಂತ ಚೆನ್ನಾಗಿ ಬೆಳೆಯುತ್ತವೆ .
ರಂಧ್ರ ಮಾಡಿದ 150 ಗೇಜ್ ದಪ್ಪ 22 ಸೆಂ.ಮೀ. ಉದ್ದ ಮತ್ತು 14 ಸೆಂ.ಮೀ. ಅಗಲವಿರುವ ಪಾಲಿಥಿನ್ ಚೀಲಗಳನ್ನು ಸಸಿ ಬೆಳೆಸಲು ಉಪಯೋಗಿಸಬಹುದು .
ಚೀಲಗಳಲ್ಲಿ ಸಮಪ್ರಮಾಣದಲ್ಲಿ ಸಾವಯವ ಗೊಬ್ಬರ , ಮಣ್ಣು ಮತ್ತು ಮರಳು ಮಿಶ್ರಮಾಡಿ ತುಂಬಬೇಕು .
ನಂತರ ಬೀಜವನ್ನು ನಾಟಿ ಮಾಡುವಾಗ ಪ್ರತಿ ಚೀಲಕ್ಕೆ 5 ಗ್ರಾಂ . ಗೋಮೋಸ್ ಫ್ರಾಸಿಕ್ಯುಲೇಟಮ್ ಎಂಬ ವ್ಯಾಮ್ ಶೀಲಿಂದ್ರದ ಕಲ್ಬರನ್ನು ಹಾಕುವುದರಿಂದ ಬೆಳೆಗೆ ಶಿಫಾರಸು ಮಾಡಿದ ರಂಜಕದ ಪ್ರಮಾಣದಲ್ಲಿ ಶೇ . 25 ರಷ್ಟು ಕಡಿಮೆ ಮಾಡಬಹುದು .
ಪ್ರತಿ ಚೀಲದಲ್ಲಿ ಎರಡು ಬೀಜ ಬಿತ್ತನೆ ಮಾಡಿ , ಮೊಳಕೆಯೊಡೆದ ನಂತರ ಒಂದೇ ಸಸಿಯನ್ನು ಉಳಿಸಿಕೊಳ್ಳಬೇಕು .
ಪಪಾಯ ಕೃಷಿ ಮಾಡಲು ಮಣ್ಣು ಹೇಗಿರಬೇಕು :
ಪಪಾಯ ಹಣ್ಣನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು .
ಚೆನ್ನಾಗಿ ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮಣ್ಣಿನಿಂದ ಹಿಡಿದು ಕೆಂಪುಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ 
ನೀರು ನಿಲ್ಲುವಂತಹ ತಗ್ಗು ಕೆಳ ಪ್ರದೇಶಗಳು ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ 
ಹವಾಗುಣ ಮತ್ತು ನಾಟಿ ಕಾಲ :
ತೇವಾಂಶವಿರುವ ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ .
ಹೆಚ್ಚಿನ ಮಳೆ ಮತ್ತು ಜವುಗು  ಪ್ರದೇಶಗಳು ಈ ಬೆಳೆಗೆ ಸೂಕ್ತವಲ್ಲ .
ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ .
papaya cultivation in kannada
papaya cultivation in kannada

ಪಪಾಯಿ ತಳಿಗಳು: 

 ವಾಷಿಂಗ್ಟನ್ :
ಗಿಡಗಳು ಬಹಳ ಗಡುಸಾಗಿದ್ದು ಕಾಂಡದ ಮೇಲೆ , ಗೆಣ್ಣುಗಳ ಹತ್ತಿರ , ದಟ್ಟ ನೀಲಿ ಬಣ್ಣದ ಉಂಗುರಗಳಿರುತ್ತವೆ .
ಹಣ್ಣುಗಳು ದುಂಡಗೆ ಹಾಗೂ ಅಂಡಾಕಾರದಲ್ಲಿದ್ದು ದೊಡ್ಡ ಗಾತ್ರ ಹೊಂದಿರುತ್ತವೆ .
ಇದರಲ್ಲಿ ಗಂಡು ಮತ್ತು ಹೆಣ್ಣು ಹೂ ಬಿಡುವ ಪ್ರತ್ಯೇಕ ಗಿಡಗಳಿರುತ್ತವೆ .
ಪೂರ್ತಿ ಹಣ್ಣಾದಾಗ ಹಣ್ಣುಗಳು ಆಕರ್ಷಕ ಹಳದಿ ಬಣ್ಣ ಪಡೆಯುತ್ತವೆ . 

 ಸಿ , ಒ , ಕೋ -1 :

ಗಿಡಗಳು ಗಿಡ್ಡವಾಗಿದ್ದು ಭೂಮಿಯಿಂದ 1.3 ಮೀ . ಎತ್ತರದೊಳಗೆ ಹಣ್ಣು ಕೊಡುತ್ತವೆ .
ಹಣ್ಣುಗಳು ಸಾಧಾರಣ ಗಾತ್ರ ಹೊಂದಿದ್ದು ಸಿಹಿಯಾಗಿರುತ್ತವೆ ,
ಇದರಲ್ಲಿ ಕೂಡ ಹೆಣ್ಣ ಮತ್ತು ಗಂಡು ಹೂ ಕೊಡುವ ಗಿಡಗಳು ಬೇರೆ ಬೇರೆಯಾಗಿರುತ್ತವೆ
ಕೂರ್ಗ್ ಹನಿಡ್ಯೂ :
ಹಣ್ಣುಗಳು ಉದ್ದವಾಗಿದ್ದು ಸುವಾಸನೆಯಿಂದ ಕೂಡಿದೆ .
ಇದು ಹನಿಡ್ಯೂ ತಳಿಯಿಂದ ಆಯ್ಕೆ ಮಾಡಿ ಅಭಿವೃದ್ಧಿಪಡಿಸಿದ ತಳಿಯಾಗಿದ್ದು , ಅಧಿಕ ಇಳುವರಿ ಕೊಡುತ್ತದೆ .
ಈ ತಳಿಯಲ್ಲಿ ಹೆಣ್ಣು ಮತ್ತು ಉಭಯ ದ್ವಿ – ಲಿಂಗಕ್ಕೆ ಸೇರಿದ ಎರಡು ತರಹದ ಹೂಗಳು ಮಾತ್ರ ಇರುತ್ತವೆ ,

ಸಿ , ಒ 2 :

ಈ ತಳಿಗಳು ಪೆಪೇನ್ ತಯಾರಿಕೆಗೆ ಸೂಕ್ತವಾಗಿದೆ .
 ಸೋಲೊ : ಹಣ್ಣುಗಳ ಗಾತ್ರ ಚಿಕ್ಕವಿದ್ದು , ತಿರುಳು ದಟ್ಟ ಕೆಂಪು ಬಣ್ಣದಿಂದ ಕೂಡಿದ್ದು ಬಹಳ ರುಚಿಕರವಾಗಿರುತ್ತವೆ .
ಕೈತೋಟದಲ್ಲಿ ಬೆಳೆಯಲು ಯೋಗ್ಯವಾಗಿದ್ದು , ಹೆಣ್ಣು ಮತ್ತು ದ್ವಿ – ಲಿಂಗ ಹೂಗಳನ್ನು ಮಾತ್ರ ಉತ್ಪಾದಿಸುತ್ತದೆ .
ಸೂರ್ಯ :
ಈ ತಳಿಯನ್ನು ಸನ್ ರೈಸ್ ಸೋಲೋ ಮತ್ತು ಪಿಂಕ್ ಕ್ಲಿಕ್ ಸ್ವೀಟ್ ತಳಿಗಳಿಂದ ಅಭಿವೃದ್ಧಿಪಡಿಸಲಾಗಿದೆ ,
ಈ ತಳಿಯು Q ಲಿಂಗ ಹೂಗಳನ್ನು ಹೊಂದಿದ್ದು , ಗಂಡುಗಿಡಗಳು ಇರುವುದಿಲ್ಲ
ಹಣ್ಣುಗಳು ಆಕಾರದಲ್ಲಿ ಸನ್ ರೈಸ್ ಸೋಲೋ ತಳಿಯನ್ನು ಹೋಲುತ್ತವೆ .
ಗಿಡಗಳು ಸೊಲೊ ತಳಿಗಿಂತ ಭಿನ್ನವಾಗಿರುತ್ತವೆ .
papaya cultivation in kannada
papaya cultivation in kannada

ಪಪಾಯಿ ಬೇಸಾಯ ಕ್ರಮಗಳು:

ಕಳೆ ನಿರ್ವಹಣೆ :

ಅಂತರ ಬೇಸಾಯ ಮಾಡಿ ಪಾತಿಗಳಲ್ಲಿರುವ ಕಳೆಗಳನ್ನು ಕೈಯಿಂದ ತೆಗೆದು ಇಲ್ಲವೆ ರಾಸಾಯನಿಕಗಳನ್ನು ಉಪಯೋಗಿಸಿ ನಿರ್ವಹಣೆ ಮಾಡಬಹುದು .
ಬೆಳೆ ಪ್ರದೇಶವನ್ನು ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಿ ,
ಶಿಫಾರಸ್ಸು ಮಾಡಿದ ಅಂತರದಲ್ಲಿ 45 X 45 X 45 ಸೆಂ.ಮೀ , ಗಾತ್ರದ ಗುಣಿಗಳನ್ನು ತಯಾರಿಸಿ ಅವುಗಳಲ್ಲಿ ಮೇಲ್ಮಣ್ಣು ಮತ್ತು ಕಾಂಪೋಸ್ಟ್ಗಳ ಮಿಶ್ರಣವನ್ನು ಹಾಕಿ ತುಂಬಬೇಕು .
ಒಂದೂವರೆಯಿಂದ ಎರಡು ತಿಂಗಳ ವಯಸ್ಸಿನ ಸಸಿಗಳನ್ನು ನಾಟಿ ಮಾಡಿ ಅವುಗಳಿಗೆ ಕೋಲಿನ ಆಸರೆ ಹಾಯಿಸಬೇಕು ,
ಮಣ್ಣು ಮತ್ತು ಹವಾಗುಣಕ್ಕನುಸರಿಸಿ 5-7 , ದಿನಗಳ ಅಂತರದಲ್ಲಿ ನೀರನ್ನು ಒದಗಿಸಿ ,
ಪ್ರಾರಂಭದಲ್ಲಿ 6-8 ತಿಂಗಳುಗಳ ತನಕ ತರಕಾರಿ ( ಕುಂಬಳ ಜಾತಿಗೆ ಸೇರಿದ ತರಕಾರಿ ಹೊರತುಪಡಿಸಿ ) ಮತ್ತು ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು .
ಶಿಫಾರಸು ಮಾಡಿದ ಪ್ರಮಾಣದ ರಸಗೊಬ್ಬರಗಳನ್ನು ನಾಟಿ ಮಾಡಿದ ಎರಡನೇ ತಿಂಗಳಿನಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಆರು ಸಮಕಂತುಗಳಲ್ಲಿ ಒದಗಿಸಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು .
ಕೊಯ್ಲು ಮತ್ತು ಇಳುವರಿ :
ನಾಟಿ ಮಾಡಿದ 9-10 ತಿಂಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುತ್ತವೆ  
ವರ್ಷದ ಎಲ್ಲ ಕಾಲದಲ್ಲೂ ಹಣ್ಣುಗಳು ಸಿಗುತ್ತದೆ .
ಪ್ರತಿ ಹೆಕ್ಟೇರಿಗೆ 75-100 ಟನ್‌ಗಳಷ್ಟು ಹಣ್ಣಿನ ಇಳುವರಿ ಸಿಗುತ್ತದೆ .
ಪಪಾಯಿ ಗಿಡದ ಆರ್ಥಿಕ ವಯಸ್ಸು ೩ ವರ್ಷಗಳು
papaya cultivation in kannada
papaya cultivation in kannada
ಪಪೇನ್ ತಯಾರಿಕೆ :
ಸುಮಾರು ಅರ್ಧದಿಂದ ಮುಕ್ಕಾಲು ಭಾಗ ಮಾಗಿದ ( ಕಾಯಿ ಕಚ್ಚಿದ 7-100 ದಿನಗಳ ನಂತರ ) ಪವಾಯಿ ಕಾಯಿಗಳನ್ನು ಪಪೇನ್ ತೆಗೆಯಲು ಆರಿಸಬೇಕು ,
ಕಾಯಿಯ ಸಿಪ್ಪೆಯ ಮೇಲೆ ಮೇಲಿನಿಂದ ಕೆಳಗೆ ಉದ್ದವಾಗಿ ನಾಲ್ಕಾರು ಗೀರುಗಳನ್ನು ಹರಿತವಾದ ಬ್ಲೇಡ್ ಅಥವಾ ಚಾಕುವಿನ ಸಹಾಯದಿಂದ ಎಳೆಯಬೇಕು ( ಬಿದಿರಿಗೆ ಭೇಡ್ ಸಿಕ್ಕಿಂ ಬಳಸಬಹುದು ) ಈ ಕಾರ್ಯವನ್ನು ಬೆಳಗಿನ 10 ಗಂಟೆಯೊಳಗಾಗಿ ಮಾಡಬೇಕು ,
ಗೀರಿನ ಆಳ 0.3 ಸೆಂ.ಮೀ. ಗಿಂತ ಹೆಚ್ಚಿಗೆ ಇರಬಾರದು .
ಗೆರೆ ಹಾಕಿದ ಕೂಡಲೇ ಹಾಲು ಹೊರಬರುತ್ತದೆ .
ಇದೇ ಪಪೇನ್ . ಇದನ್ನು ಅಡಿಕೆ ಹಾಳೆಗಳಲ್ಲಿ , ಅಥವಾ ಅಲ್ಯೂಮಿನಿಯಂ ಅಥವಾ  ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸಬೇಕು 
ಗೀರುಗಳ ಮೇಲೆ ಒಣಗಿದ ಪಪೇನ್ ಕರೆರು ಶೇಖರಿಸಬೇಕು .
ಪ್ರತಿ 3-4 ದಿನಗಳಿಗೊಮ್ಮೆ ನಾಲ್ಕು ಬಾರಿ ಗೀರು ಕೊರೆದು ಹಣ್ಣಿನಿಂದ ಪಪೇನ್ ತೆಗೆಯಬೇಕು .
RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments