News In Kannada | ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ | curry leaves farming in karnataka

ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ

 
ಕರಿಬೇವು ಅಂದರೆ ಮನೆ ಮುಂದೆ ಬೆಳೆಯುವುದನ್ನು ನೋಡಿರ್ತಿರಾ ಆದರೆ  ಅದೇ ಕರಿಬೇವನ್ನು ನೀವು ನಿಮ್ಮ ಹೊಲದಲ್ಲಿ ಕೃಷಿ ಮಾಡಿದರೆ
ಹೆಚ್ಚು ಹೆಚ್ಚು ಲಾಭವನ್ನು ಗಳಿಸಬಹುದು ಕರಿಬೇವಿಗೆ ಎಲ್ಲ ಕಾಲದಲ್ಲೂ ಬೇಡಿಕೆ ಇರುವುದರಿಂದ ನಷ್ಟ ಸಂಭವಿಸುವುದಿಲ್ಲ ಇದು ಕೇವಲ 2 ವರ್ಷದ ಒಳಗೆ ಉತ್ತಮ ಫಸಲನ್ನು ಕೊಡುತ್ತದೆ ಒಂದು ವರ್ಷದಲ್ಲಿ 3 ಸಾರಿ ಕಟಾವಿಗೆ ಬರುತ್ತದೆ.
ಆದ್ದರಿಂದ ನೀವು ಈ ಕೃಷಿಯನ್ನು ಮಾಡಿದರೆ ಯಾವುದೇ ನಷ್ಟವಿಲ್ಲದೆ ಹೆಚ್ಚು ಆದಾಯವನ್ನು ಗಳಿಸಬಹುದು ಹಾಗೆ ಈ ಕೃಷಿಯನ್ನು ಮಿಶ್ರ ಕೃಷಿ ಪದ್ದತಿಯಲ್ಲಿ ಬೆಳೆಸಬಹುದು. 
ಈ ಕೃಷಿಯ ಕುರಿತು ಒಂದಿಷ್ಟು ಮಾಹಿತಿಯನ್ನುಈ ಲೇಖನದಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ , ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗು ಶೇರ್ ಮಾಡಿ.
ಇದು ಉಷ್ಣ ಹವಾಮಾನಕ್ಕೆ ಸೂಕ್ತವಾಗಿದ್ದು , ಇದರ ಎಲೆಗಳನ್ನು ವಿಶೇಷವಾಗಿ ಭಾರತೀಯ ಅಡುಗೆಗಳಲ್ಲಿ ವಾಸನೆ ಮತ್ತು ರುಚಿಗಾಗಿ ಉಪಯೋಗಿಸುತ್ತಾರೆ .
ಗಂಧಕಯುಕ್ತ ಎಣ್ಣೆಯ ಅಂಶವು ಇದರ ಸುವಾಸನೆಗೆ ಕಾರಣ , ಎಲೆಗಳಲ್ಲಿ ಹೇರಳವಾಗಿ ಪೋಷಕಾಂಶಗಳಾದ ‘ ಎ ‘ ಅನ್ನಾಂಗ , ಕಬ್ಬಿಣ ಮತ್ತು ಸುಣ್ಣದಂಶಗಳಿವೆ 
ಕರಿಬೇವನ್ನು ಆಯುರ್ವೇದ ಮತ್ತು ಯುನಾನಿ ಔಷಧ ತಯಾರಿಕೆಯಲ್ಲೂ ಸಹ ಉಪಯೋಗಿಸುತ್ತಾರೆ.
ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ

ಬಂಡವಾಳ ಎಷ್ಟು ಬೇಕು:

ಈ ಕೃಷಿಯನ್ನು ಮಾಡಲು ಹೆಚ್ಚು ಖರ್ಚು ಬರುವುದಿಲ್ಲ ಅತ್ಯಂತ ಕಡಿಮೆ ಬಂಡವಾಳದಲ್ಲಿ ಕೃಷಿ ಮಾಡಬಹುದು. ಒಂದು ಎಕರೆಯಲ್ಲಿ ಕೃಷಿ ಮಾಡಲು 50 ಸಾವಿರ ಬಂಡವಾಳ ಇದ್ದರೆ ಸಾಕಾಗುತ್ತದೆ. ನೀವು ಒಂದು ಸಾರಿ ನಾಟಿ ಮಾಡಿದಮೇಲೆ 2 ವರ್ಷಗಳ ನಂತರ ಪ್ರತಿ ದಿನ ಆದಾಯವನ್ನು ಪಡೆಯಬಹುದು .
ಕರಿಬೇವು ಕೃಷಿ ಮಾಡಲು ಸೂಕ್ತವಾದ  ಕಾಲ :
ಈ ಕೃಷಿಯನ್ನು ಮಾಡಲು ಯಾವುದೇ ಕಾಲ ಇಲ್ಲ ಆದ್ದರಿಂದ  ವರ್ಷದ ಯಾವುದೇ ಕಾಲದಲ್ಲಿ ಸಸಿಗಳನ್ನು ನಾಟಿ ಮಾಡಬಹುದು . ಅದರಲ್ಲೂ ಒಂದು ಸರಿಯಾದ ಸೂಕ್ತ ಸಮಯ ಹೇಳಬೇಕು ಅಂದರೆ  ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ  ಎಂದು ಹೇಳಬಹುದು . 
ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ
ಕರಿಬೇವು ಕೃಷಿ ಮಣ್ಣು ಹೇಗಿರಬೇಕು :
ಕರಿಬೇವು ಕೃಷಿ ಮಾಡಲು ಮಣ್ಣು ಹೇಗಿರಬೇಕು ಯಾವ ಮಣ್ಣಿನಲ್ಲಿ ಹೆಚ್ಚು ಚೆನ್ನಾಗಿ ಮರಗಳು ಚಿಗುರುತ್ತವೆ ಅನ್ನುವುದರ ಕುರಿತು
ನೋಡವುದಾದರೆ  ಇದು ಬಹುವಾರ್ಷಿಕ ಒರಟು ಬೆಳೆಯಾಗಿದ್ದು , ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ 
ಕರಿಬೇವು ಬೆಳೆಯಲು  ಆಳವಾದ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತದಲ್ಲ 
ಆದ್ದರಿಂದ ನೀವು ಕೃಷಿ ಮಾಡುವ ಮುನ್ನ ಮಣ್ಣನ್ನು ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಹೀಗೆ ನೀವು ಮಣ್ಣು ಪರೀಕ್ಷೆ ಮಾಡಿಸಿಕೊಂಡರೆ ನಿಮಗೆ ಯಾವ ಬೆಳೆ ಬೆಳೆಯಲು ಸೂಕ್ತವಾಗಿದೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ . 

 

ಕರಿಬೇವಿನ ತಳಿಗಳು :

ಎಲೆಯ ವಾಸನೆ , ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ತಳಿಗಳನ್ನು ವಿಂಗಡಿಸಬಹುದು , ಹಲವಾರು ಸ್ಥಳೀಯ ತಳಿಗಳು ಲಭ್ಯವಿವೆ .

 

ಸುಹಾಸಿನಿ ( ಧಾರವಾಡ -1 ) :

ಇದನ್ನು ಗುಲಾಬಿ ಪೊದೆಯಂತೆ ಬೆಳಸಬಹುದಾಗಿದೆ .
ಸುಮಾರು 90-120 ಸೆಂ . ಮೀ . ಎತ್ತರದವರೆಗೆ ಚಟ್ಟವಾಗಿ ಬೆಳೆಯುವ ಈ ಗಿಡದ ಎಲೆಗಳಲ್ಲಿ ಎಣ್ಣೆ ಜಾಸ್ತಿ .
ಇದು ಸಿಲೆಂಡೋಸೋರಿಯಮ್ ಶಿಲೀಂಧ್ರದಿಂದ ಬರುವ ಎಲೆ ಚುಕ್ಕೆ ರೋಗವನ್ನು ತಡೆದುಕೊಳ್ಳುವ ಗುಣ ಪಡೆದಿದೆ .
ಇದರ ಎಲೆಗಳು ಹೊಳೆಯುವ ಕಪ್ಪು ಹಸಿರು ಬಣ್ಣವನ್ನು ಹೊಂದಿದ್ದು ಹೆಚ್ಚು ವಾಸನೆಯುಕ್ತವಾಗಿದೆ .
ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ

ಸಸಿ ನೆಡುವುದು :

ಕರಿ  ಬೇವು ಕೃಷಿ ಮಾಡುವುದು ಅಂದರೆ ಹೇಗೆ ಬೇಕು ಹಾಗೆ ನಾಟಿ ಮಾಡುವುದಲ್ಲ ಅದಕ್ಕೆ ಸೂಕ್ತವಾದ ನಿರ್ದಿಷ್ಟವಾದ ಅಳತೆಯೊಂದಿಗೆ ನಾಟಿ ಮಾಡಬೇಕು.
ಭೂಮಿಯನ್ನು ತಯಾರು ಮಾಡಿದ ನಂತರ 60 X 60 X 60 ಸೆಂ . ಮೀ . ಗಾತ್ರದ ಗುಣಿಯನ್ನು 3 ಮೀ . ಅಂತರದ ಸಾಲುಗಳಲ್ಲಿ 15 ಮೀ . ಅಂತರದಲ್ಲಿ ತೆಗೆಯಬೇಕು .
ನಂತರ ಸಮ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಕಣ್ಣನ್ನು ಬೆರೆಸಿ , ಗುಣಿಯಲ್ಲಿ ತುಂಬಿ , ಗುಣಿಗೊಂದರಂತೆ ಸಸಿಯನ್ನು ಮಧ್ಯದಲ್ಲಿ ನೆಡಬೇಕು .
ಸಸಿಗಳು ಚಿಗುರುವವರೆಗೆ ನೀರನ್ನು ದಿನನಿತ್ಯ ಒದಗಿಸಬೇಕು ,

ಚಾಟನಿ ಮಾಡುವುದು :

ಸಸಿಗಳು 120 ಸೆಂ . ಮೀ . ಎತ್ತರದವರೆಗೆ ಬೆಳೆದ ಮೇಲೆ ಕುಡಿಯನ್ನು ಭೂಮಿಯಿಂದ 45 ಸೆಂ . ಮೀ . ಎತ್ತರದ ಮೇಲೆ ಚಿವುಟಿ , ಕವುಲು ಟೊಂಗೆಗಳು ಸದೃಢವಾಗಿ ಬೆಳೆಯಲು ಬಿಡಬೇಕು .
ಹೀಗೆ ಮಾಡಿದ ಪೊದೆಯು 150 ಸೆಂ . ಮೀ . ಎತ್ತರದವರೆಗೆ ಬೆಳೆದ ಮೇಲೆ ಟೊಂಗೆಗಳನ್ನು 100 ರಿಂದ 120 ಸೆಂ . ಮೀ . ಎತ್ತರದವರೆಗೆ ಬಿಟ್ಟು ಸವರಬೇಕು 
ಕವಲು ಟೊಂಗೆಗಳು ಬೆಳೆಯಲು ಅವಕಾಶ ಮಾಡಿಕೊಡಬೇಕು .
ನೆಟ್ಟ ಒಂದು ವರ್ಷದ ನಂತರ ಗಿಡವು ಗುಲಾಬಿ ಕಂಟೆಯ ಮೊದೆಯಂತೆ ಬೆಳೆಯುತ್ತದೆ .
ನಂತರ ಬೆಳೆಯನ್ನು ಈ ( 100 ರಿಂದ  120 ಸೆಂ . ಮೀ . ) ಎತ್ತರದವರೆಗೆ ಕಟಾವು ಮಾಡಬಹುದು ,
ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ

ಗೊಬ್ಬರ ಕೊಡುವುದು :

ಸಸಿಗಳನ್ನು ನೆಟ್ಟ ನಂತರ ಪ್ರತಿ ಗಿಡಕ್ಕೆ ಶಿಫಾರಸ್ಸು ಮಾಡಿದ ಶೇಕಡಾ 25 ರಷ್ಟು ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಮಿಶ್ರಣದ ಗೊಬ್ಬರವನ್ನು ನಾಲ್ಕು ಸಮ ಕಂತುಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಮವಾಗಿ ಗಿಡ ಸವರಿದ ಮೇಲೆ ಕೊಡಬೇಕು

ಕಳೆ ನಿಯಂತ್ರಣ :

ಹುಲ್ಲು ಹಾಗೂ ಇತರೆ ಕಳೆಗಳನ್ನು ಪ್ಯಾರಾಕ್ವಟ್ ( 3 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ) ಸಿಂಪರಣೆಯಿಂದ ಹತೋಟಿ ಮಾಡಬಹುದು .
ಸಿಂಪರಣೆ ಮಾಡುವಾಗ ಕಾಂಡಗಳಿಗೆ ಸಿಂಪರಣ ಔಷಧಿ ತಗುಲದಂತೆ ಮುಂಜಾಗ್ರತೆ ವಹಿಸಬೇಕು .
ನೀರಾವರಿ :
ಸಸಿಗಳು ಚೆನ್ನಾಗಿ ನೆಲೆಗೊಂಡ ಮೇಲೆ ಅವುಗಳಿಗೆ ಒಣ ಹವೆಯನ್ನು ತಡೆದುಕೊಳ್ಳುವ ಶಕ್ತಿಯಿರುತ್ತದೆ 
ತೋಟದಲ್ಲಿ ನೀರಾವರಿ ಸೌಲಭ್ಯಗಳಿದ್ದರೆ ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ನೀರನ್ನು ಒದಗಿಸುವುದು ಉತ್ತಮ 
ಸಸ್ಯ ಸಂರಕ್ಷಣೆ:
ಕೀಟಗಳು :
ಹೇನು , ಎಲೆ ತಿನ್ನುವ ಹುಳು ಮತ್ತು ಹಿಟ್ಟು ತಿಗಣೆ .
ರೋಗಗಳು :
ಎಲೆ ಚುಕ್ಕೆ ರೋಗ :
ಕೀಟ ಬಾಧೆ ತಡೆಗಟ್ಟಲು ಕಟಾವಿಗಿಂತ ಕನಿಷ್ಠ 15 ದಿವಸಗಳ ಮುಂಚೆ 2 ಮಿ . ಲೀ . ಮೆಲಾಥಿಯಾನ್ 1 ಲೀಟರ್ ನೀರಿನಲ್ಲಿ ಬಳಸಿ ಸಿಂಪಡಿಸಿರಿ ರೋಗ ತಡೆಗಟ್ಟಲು 2 ಗ್ರಾಂ ಮ್ಯಾಂಕೋಜೆಬ್ ಅಥವಾ 1 ಗ್ರಾಂ ಕಾರ್ಬೆಂಡೈಜಿಮ್ ಪ್ರತಿ ಲೀ , ನೀರಿಗೆ ಬೆರೆಸಿ ಸಿಂಪಡಿಸಿಬೇಕು .
ಕೊಯ್ಲು ಮತ್ತು ಇಳುವರಿ :
ಸಸಿ ನೆಟ್ಟ ಎರಡು ವರ್ಷಗಳ ನಂತರ ಗಿಡಗಳು ಉತ್ತಮ ಇಳುವರಿ ಕೊಡುತ್ತವೆ .
ಪ್ರತಿ ಗಿಡದಿಂದ ಪ್ರತಿ ಕಟಾವಿಗೆ 2-5 ಕಿ , ಗ್ರಾಂ ಎಲೆ ಪಡೆಯಲು ಸಾಧ್ಯ .
ವರ್ಷದಲ್ಲಿ ನಾಲ್ಕು ಬಾರಿ ಕಟಾವು ಮಾಡಬಹುದು .
ಮಾರ್ಕೆಟಿಂಗ್ ಮಾಡುವುದು ಹೇಗೆ:
ಬೇವು ಕೃಷಿ ಮಾಡಿದರೆ ೩೬೫ ದಿನಗಳು ಅದಕ್ಕೆ ಮಾರ್ಕೆಟ್ ಕಡಿಮೆ ಆಗಲ್ಲ ಪ್ರತಿಯೊಬ್ಬರ ಮನೆಯಲ್ಲೂ ಇದನ್ನು ಬಳಸುವುದರಿಂದ ಹೆಚ್ಚು ಬೇಡಿಕೆ ಇದೆ .
ನೀವು ಇದನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಂದರೆ ದಿನಸಿ ಅಂಗಡಿ ಸೇರಿದಂತೆ , ಹೋಟೆಲ್ ತರಕಾರಿ ಅಂಗಡಿ ಹಾಗೆ ಇತರ ಅಂಗಡಿಗಳಲ್ಲಿ , ಹೋಲ್ಸೇಲ್ ಡೀಲರ್ಸ್ ಗೆ ಅಥವಾ ನೀವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಬಹುದು.
ಲಾಭ ಎಷ್ಟು ಗಳಿಸಬಹುದು :
ಎರಡು ವರ್ಷದ ಒಳಗೆ ನೀವು ಪ್ರತಿ ದಿನ ಕಡಿಮೆ ಅಂದರು 800 ರೂ ರಿಂದ 1000 ರೂ ಸಾವಿರ ಹಣವನ್ನು ಗಳಿಸಬಹುದು ಅಂದರೆ ಒಂದು ತಿಂಗಳಿಗೆ 30 ಸಾವಿರದ ವರೆಗೆ ಲಾಭ ಗಳಿಸುವ ಎಲ್ಲ ಅವಕಾಶ ಈ ಕೃಷಿಯಲ್ಲಿದೆ.
ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ

2 thoughts on “News In Kannada | ಕರಿಬೇವು ಕೃಷಿ ಮಾಡಿ 365 ದಿನಗಳು ಹಣವನ್ನು ಗಳಿಸಿ | curry leaves farming in karnataka

  1. Pingback: areca nut peeling business, ಅಡಿಕೆ ಸುಲಿಯುವ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಿ

Leave a Reply

Your email address will not be published. Required fields are marked *

Enable Notifications    OK No thanks