ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಎಂಎಲ್ಎಂ network marketing news in kannada
ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಎಂಎಲ್ಎಂ ಎಂದರೇನು?
ಕಂಪನಿಗಳು ತಮ್ಮ ಕಂಪನಿಯ ಮ್ಯಾನಿಫೆಕ್ಟುರಿಂಗ್ ಯುನಿಟ್ ನಲ್ಲಿ ತಯಾರಾದ ಪ್ರಾಡಕ್ಟ್ ಗಳನ್ನೂ ಕಸ್ಟಮರ್ ವರೆಗೂ ತಲುಪಿಸಲು ಡಿಸ್ಟಿಬ್ಯುಟರ್ ಅನ್ನು ಬಳಸಿಕೊಂಡು ದೊಡ್ಡ ಚೈನ್ ಅನ್ನು ರೆಡಿ ಮಾಡುತ್ತವೆ .ಈ ಡಿಸ್ಟಿಬ್ಯುಟರ್ ಬಳಸಿಕೊಂಡು ಕಂಪನಿಗಳು ತಮ್ಮ ಪ್ರಾಡಕ್ಟ್ ಗಳನ್ನೂ ಈಸಿಯಾಗಿ ಸೆಲ್ ಮಾಡುತ್ತವೆ.
ಇದಕ್ಕೆ ಮಲ್ಟಿ ಲೆವೆಲ್ ಮಾರ್ಕೆಟಿಂಗ್ , ಚೈನ್ ಮಾರ್ಕೆಟಿಂಗ್ ಎಂದು ಕರೆಯುತ್ತಾರೆ.
ಈ ನೆಟವರ್ಕ್ ಮಾರ್ಕೆಟಿಂಗ್ ಬಿಸಿನೆಸ್ ನಲ್ಲಿ ಟಾಪ್ ನಲ್ಲಿರುವ ಡಿಸ್ಟಿಬ್ಯುಟರ್ ಗೆ ಮತ್ತು ನೆಟವರ್ಕ್ ಮಾರ್ಕೆಟಿಂಗ್ ಏಜೆಂಟ್ ಗಳಿಗೆ ಕಂಪನಿಕಡೆಯಿಂದ ಜ್ಯಾಸ್ತಿ ಮಾರ್ಜಿನ್ ಸಿಗುತ್ತದೆ ಆದರೆ ಕೆಳಗಿರುವ ಏಜೆಂಟ್ ಹಾಗು ಡಿಸ್ಟ್ರಿಬ್ಯುಟರ್ ಗೆ ತುಂಬಾನೇ ಕಡಿಮೆ ಮಾರ್ಜಿನ್ ಸಿಗುತ್ತದೆ
ಏಜೆಂಟ್ ಹಾಗು ಡಿಸ್ಟ್ರಿಬ್ಯುಟರ್ ಗಳು ಜ್ಯಾಸ್ತಿ ಲಾಭಕೋಸ್ಕರ ಹೆಚ್ಚು ಹೆಚ್ಚು ಪ್ರೊಡಕ್ಟ್ ಸೆಲ್ ಮಾಡುತ್ತಾರೆ ಇದರಿಂದ ಕಂಪನಿಗೆ ಲಾಭ ಆಗುತ್ತದೆ ಇದಕ್ಕೆ ಹೇಳೋದು ನೆಟ್ವರ್ಕ್ ಮಾರ್ಕೆಟಿಂಗ್ .
network-marketing
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಇದು ಭಾರತದಲ್ಲಿ ಮನೆಯಿಂದಲೇ ಮಾಡಬಹುದಾದ ಅತಿ ಪ್ರಮುಖ ಬಿಸಿನೆಸ್ ಆಗಿದೆ.
ಆರೋಗ್ಯ, ಪೌಷ್ಟಿಕಾಂಶ ಆಹಾರ, ಸೌಂದರ್ಯವರ್ಧಕ ವಸ್ತುಗಳು ಹೀಗೆ ಹಲವಾರು ಕ್ಷೇತ್ರಗಳ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ಜಾಲವನ್ನು ವೃದ್ಧಿಸುತ್ತಿರುವುದರಿಂದ
ಎಂಎಲ್ಎಂ ವಲಯದಲ್ಲಿನ ಅವಕಾಶಗಳು ಹೆಚ್ಚಾಗುತ್ತಿವೆ.
ನೀವು ಈ ಬಿಸಿನೆಸ್ ಮಾಡಬೇಕಾದರೆ ತುಂಬಾನೇ ಎಚ್ಚರದಿಂದ ವ್ಯವಹರಿಸಬೇಕು ಯಾಕೆಂದರೆ ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಫೇಕ್ ಎಂ ಎಲ್ ಎಂ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಆದ್ದರಿಂದ ನೀವು ಇದರ ಬಗ್ಗೆ ಎಚ್ಚರದಿಂದ ಇರಬೇಕು .
ಫ್ರಾಡ್ ಕಂಪನಿಯಲ್ಲಿ ಫ್ರಾಡ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಕಂಪನಿಜೊತೆ ಕೈ ಜೋಡಿಸಿ ಮೋಸ ಹೋಗುತ್ತಿದ್ದಾರೆ ಈ ಕಂಪನಿಗೆ ಜಾಯಿನ್ ಆಗುವವರಲ್ಲಿ ೯೯ ಪರ್ಸೆಂಟ್ ಜನರಿಗೆ ಯಾವ ಜ್ಞಾನವು ಇಲ್ಲದೆ ಜಾಯಿನ್ ಆಗುತ್ತಾರೆ ನಂತರ ಮೋಸ ಹೋಗುತ್ತಾರೆ.
ಇಷ್ಟೇ ಅಲ್ಲದೆ ಈ ಫ್ರಾಡ್ ಕಂಪನಿಗೆ ತಮ್ಮ ಸ್ನೇಹಿತರನ್ನು ಹಾಗು ಸಂಬಂಧಿಕರನ್ನು ಸೇರಿಸಿ ಅವರಿಗೂ ಮೋಸ ಮಾಡಿ ಅವರಿಗೆ ಮುಖಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ನೀವು ಸರಿಯಾದ ಕಂಪನಿ ಜೊತೆ ಕೈ ಜೋಡಿಸಿ ಸರಿಯಾಗಿ ವ್ಯವಹರಿಸಿದರೆ ಕೋಟ್ಯಧಿಪತಿ ಆಗಬಹುದು ಆದ್ರೆ ಷರತ್ತುಗಳು ಅನ್ವಯವಾಗುತ್ತದೆ .
ನೆಟ್ವರ್ಕ್ ಮಾರ್ಕೆಟಿಂಗ್ ಗೆ ಪ್ರಸ್ತುತ ಮೊದಲಿನಂತೆ ಡಿಮ್ಯಾಂಡ್ ಇಲ್ಲ ಮುಂದೆ ಫ್ಯೂಚರ್ ಕೂಡ ಇಲ್ಲ ಯಾಕಂದರೆ ಮೊದಲಿನಿಂದಲೂ ಕೆಲವೊಂದಿಷ್ಟು ಫ್ರಾಡ್ ಕಂಪನಿಗಳು ಸಾಕಷ್ಟು ಜನರಿಗೆ ಮೋಸ ಮಾಡಿರುವುದರಿಂದ ಯಾರು ಈಗ ಜಾಯಿನ್ ಆಗಲು ಹಿಂದೆ ಮುಂದೆ ನೋಡುತ್ತಾರೆ
ನೆಟ್ವರ್ಕ್ ಮಾರ್ಕೆಟಿಂಗ್ ಮಾಡಲು ನಿಮ್ಮದೇ ಆಗಿರುವಂತಹ ಸ್ಕಿಲ್ ಬೇಕಾಗುತ್ತದೆ ಮಾರ್ಕೆಟಿಂಗ್ ಸ್ಕಿಲ್ಸ್ ಸೇರಿದಂತೆ , ಸೇಲ್ಸ್ ಸ್ಕಿಲ್ಸ್ ಬೇಕಾಗುತ್ತದೆ ಹಾಗೆ ಯಾವುದೇ ಪ್ರಾಡಕ್ಟ್ ಕೊಟ್ಟರು ಮಾರಾಟ ಮಾಡಬೇಕಾಗುತ್ತದೆ ನಿಮಗೆ ಈ ಎಲ್ಲ ಸ್ಕಿಲ್ಸ್ ಇದ್ದರೆ ನೀವು ಜಾಯಿನ್ ಆಗಬಹುದು
network-marketing
ಗ್ರೋಸರಿ ಇ – ಕಾಮರ್ಸ್ ಬ್ಯುಸಿನೆಸ್ ರಂಭಿಸುವುದು ಹೇಗೆ? | online grocery business ideas in kannada