ಡಿಜಿಟಲ್ ಮಾರ್ಕೆಟಿಂಗ್ ಟ್ರೆಂಡ್ ಸಂಪೂರ್ಣ ಮಾಹಿತಿ
2021 Digital Marketing Trends | Business Ideas
ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಯಾವುದೇ ಒಂದು ಉತ್ಪನ್ನ ಅಥವ ಸೇವೆಯನ್ನು ಮಾರುಕಟ್ಟೆ ಮಾಡಲು ಅಂದರೆ ಗ್ರಾಹಕನಿಗ ಪರಿಚಯಿಸಲು
ಪತ್ರಿಕಾ ಮಾಧ್ಯಮ, ಟಿವಿ ಮಾಧ್ಯಮ, ರೆಡಿಯೊ, ಹೊರಾಂಗಣ ಬೋರ್ಡು ಸೇರಿದಂತೆ ನಾನಾ ರೀತಿಯ
ವಿಧಾನಗಳ ಮೂಲಕ ಪ್ರಚಾರ ಅಥವ ಜಾಹಿರಾತು ಮಾಡಲಾಗುತಿತ್ತು. ಪ್ರತಿಯೊಂದು ಮಾರ್ಕೆಟಿಂಗ್ ಮಾಧ್ಯಮಕ್ಕೆ ಅದರದ್ದೇ ಆದ ಪ್ರಯೋಜನ ಮತ್ತು ಕೊರತೆಗಳು ಇವೆ.
ನಿಮಗೆ ಈಗಾಗಲೇ ಮಾರ್ಕೆಟಿಂಗ್ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ . ಸಾಮಾನ್ಯವಾಗಿ ಹೇಳಬೇಕು ಅಂದರೆ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಮಾರ್ಕೆಟಿಂಗ್ ಎಂದು ಕರೆಯುತ್ತೇವೆ .
ಇದೆ ವಸ್ತುಗಳನ್ನು ಇಂಟರ್ನೆಟ್ ಮುಖಾಂತರ ಡಿಜಿಟಲ್ ಟೆಕ್ನಲಾಜಿ ಹಾಗೆ ಸಾಮಾಜಿಕ ಜಾಲತಾಣಗಳಾದ
ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್, ಲಿಂಕ್ಡ್ಇನ್ ಇತ್ಯಾದಿಗಳಲ್ಲಿ ಹಣ ಪಾವತಿಸದೆ ಆರ್ಗೇನಿಕ್ ಆಗಿ ಅಥವ ಹಣ ನೀಡಿ ಜಾಹಿರಾತು ಮೂಲಕ ಮಾರ್ಕೆಟಿಂಗ್ ಮಾಡುವುದು ಪ್ರಮುಖ ವಿಧಾನ.
ಇದಕ್ಕೆ ಪೂರಕವಾಗಿ ನಿಮ್ಮ ಉತ್ಪನ್ನಗಳ ಬಗ್ಗೆ ವೈಬ್ ಸೈಟ್ ಅಥವ ಬ್ಲಾಗ್ ಮೂಲಕ ಪರಿಚಯಿಸುವುದು. ಆ ಮೂಲಕ ಸರ್ಚ್ ಎಂಜಿನ್ ಮೂಲಕ ನಿಮ್ಮ ಉತ್ಪನ್ನಗಳು ಗ್ರಾಹಕನಿಗೆ ಕಾಣಿಸುವಂತೆ ಮಾಡುವುದು. ಗೂಗಲ್ ,ಯಾಹೂ, ಬಿಂಗ್ ಮುಂತಾದ ಸರ್ಚ್ ಎಂಜಿನುಗಳನ್ನು ಕೂಡ ಮಾರ್ಕೆಟಿಂಗಿಗೆ ಬಳಸಲಾಗುತ್ತದೆ.
ಇವುಗಳ ಮುಖಾಂತರ ಸೆಲ್ ಮಾಡಿದರೆ ಅದಕ್ಕೆ ನಾವು ಡಿಜಿಟಲ್ ಮಾರ್ಕೆಟಿಂಗ್ ಎಂದು ಕರೆಯುತ್ತೇವೆ . ಡಿಜಿಟಲ್ ಮಾರ್ಕೆಟಿಂಗ್ ಎಂದರೆ ನಮ್ಮಬಳಿ ಇರುವಂತಹ ವಸ್ತುಗಳನ್ನು ಇಂಟರ್ನೆಟ್ ಹಾಗೆ ಆನ್ಲೈನ್ ಮಾಧ್ಯಮವನ್ನು ಬಳಸಿಕೊಂಡು ಮಾರ್ಕೆಟಿಂಗ್ ಮಾಡುವುದು ಇದನ್ನೇ ಡಿಜಿಟಲ್ ಮಾರ್ಕೆಟಿಂಗ್ ಎಂದು ಕರೆಯುತ್ತಾರೆ.
ನೀವು ನಿಮ್ಮ ಬ್ಯುಸಿನೆಸ್ ನ ಹೆಸರಿನಲ್ಲಿ ಒಂದು ವೆಬ್ಸೈಟ್ ಅನ್ನು ಕ್ರೆಯೆಟ್ ಮಾಡಿದರೆ ಸಾಕು ನಿಮ್ಮ ಬ್ಯುಸಿನೆಸ್ ಆನ್ಲೈನ್ ಗೆ ಅಪಡೇಟ್ ಆದಂತೆ . ಆದರೆ ಬರಿ ವೆಬ್ಸೈಟ್ ಕ್ರೆಯೆಟ್ ಮಾಡಿದರೆ ನಿಮ್ಮ ವೆಬ್ಸೈಟ್ ಗ್ರೋಥ್ ಆಗುವುದಿಲ್ಲ . ನಿಮ್ಮ ವೆಬ್ಸೈಟ್ ಗೆ ಲಕ್ಷಾಂತರ ಕ್ವಾಲಿಟಿ ಟ್ರಾಫಿಕ್ ಬಂದರೆ ನಿಮ್ಮ ಬ್ಯುಸಿನೆಸ್ ಬೆಳವಣಿಗೆ ಹೊಂದಲಕ್ಷಾಂತರ ಜನ ನಿಮ್ಮ ವೆಬ್ಸೈಟ್ ಗೆ ಭೇಟಿ ಮಾಡಿ ನಿಮ್ಮ ಪ್ರಾಡಕ್ಟ್ ಗಳನ್ನೂ ಹಾಗೆ ನಿಮ್ಮ ಸೇವೆಯನ್ನು ಖರೀದಿ ಮಾಡಿದಾಗಲೇ ನಿಮ್ಮ ಬ್ಯುಸಿನೆಸ್ ಅಭಿವೃದ್ಧಿ ಆಗುತ್ತದೆ ಅದಕ್ಕಾಗಿ ನಿಮ್ಮ ವೆಬ್ಸೈಟ್ ಗೆ ಕ್ವಾಲಿಟಿ ಟ್ರಾಫಿಕ್ ಅನ್ನು ತರಬೇಕಾಗುತ್ತದೆ . ಇದಕ್ಕೆ ನೀವು ನಿಮ್ಮ ಕಸ್ಟಮರ್ ಗೆ ನಿಮ್ಮ ವೆಬ್ಸೈಟ್ ಇರುವುದು ತಿಳಿಸಬೆಕಾಗುತ್ತದೆ ಇಂತಹ ಸಂದರ್ಭದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನಿಮಗೆ ತುಂಬಾ ಸಹಾಯಕ್ಕೆ ಬರುತ್ತದೆ.


ಉದಾಹರಣೆಗೆ ನೋಡೋದಾದ್ರೆ
ನಿಮ್ಮ ವೆಬ್ಸೈಟ್ ನಲ್ಲಿ ಲೇಡಿಸ್ ಲೇಡಿಸ್ ಡ್ರೆಸ್ ಮಾರಾಟ ಮಾಡುತ್ತಿದ್ದರೆ ಆಗ ನಿಮಗೆ ಸಾವಿರಾರು ಜನ ಹುಡುಗರು ಭೇಟಿ ನೀಡಿದರೆ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ .
ಯಾವುದೇ ವಸ್ತುಗಳು ಮಾರಾಟವಾಗುವುದಿಲ್ಲ ಬರೀ ಹುಡುಗಿಯರು ಭೇಟಿನೀಡಿದಾಗ ಮಾತ್ರ ಲೇಡಿಸ್ ಡ್ರೆಸ್ ಗಳು ಸೆಲ್ ಆಗುತ್ತವೆ ಆಗ ನಿಮಗೆ ಹೆಚ್ಚುಲಾಭ ಆಗುತ್ತದೆ . ಹಾಗೆ ನಿಮ್ಮ ಬ್ಯುಸಿನೆಸ್ ಚೆನ್ನಾಗಿ ಆಗುತ್ತದೆ ಇದು ಡಿಜಿಟಲ್ ಮಾರ್ಕೆಟಿಂಗ್ ನಿಂದ ಮಾತ್ರ ಸಾಧ್ಯ .
ಇದಕ್ಕೆ ನೀವು ಡಿಜಿಟಲ್ ಮಾರ್ಕೆಟಿಂಗ್ ಕಲಿಯಬೇಕಾಗುತ್ತದೆ ನೀವು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ತಿಳಿದುಕೊಂಡು ಬ್ಯುಸಿನೆಸ್ ಮಾಡಿದ್ದೆ ಆದಲ್ಲಿ ನಿಮ್ಮ ಬ್ಯುಸಿನೆಸ್ ನಲ್ಲಿ ಸಕ್ಸಸ್ ಆಗಬಹುದು.
network marketing meaning in kannada
ಕಿತ್ತಳೆ ಮತ್ತು ಮೋಸಂಬಿಯನ್ನು ಕೃಷಿ ಮಾಡುವ ವಿಧಾನ | cultivating oranges and mosambi in kannada