Monday, September 26, 2022
HomeBusinessಬಿಲ್ ಗೇಟ್ಸ್ ಸಾಧನೆಯ ರೋಚಕ ಕಥೆ | motivational success story of bill gates

ಬಿಲ್ ಗೇಟ್ಸ್ ಸಾಧನೆಯ ರೋಚಕ ಕಥೆ | motivational success story of bill gates

ಬಿಲ್ ಗೇಟ್ಸ್ ಸಾಧನೆಯ ರೋಚಕ ಕಥೆ

 

motivational success story of bill gates

ಬಿಲ್ ಗೇಟ್ಸ್ ಪ್ರಪಂಚದ ಅತಿದೊಡ್ಡ ಧನವಂತರು ಸಾಫ್ಟ್ವೇರ್ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿದ ರಾಜ ಒಂದಲ್ಲ ಎರಡಲ್ಲ 18 ವರ್ಷಗಳಿಂದ ಪ್ರಪಂಚದ ಅತಿದೊಡ್ಡ ಧನವಂತರಲ್ಲಿ ಮೊದಲ ಸ್ಥಾನ ಪಡೆದ ವ್ಯಕ್ತಿ . ಅವರು ಒಂದು ದಿನಕ್ಕೆ 6 ಕೋಟಿಯನ್ನು ಖರ್ಚು ಮಾಡುವುದಕ್ಕೆ ಪ್ರಾರಂಭಿಸಿದರೆ ಅವರ ಆಸ್ತಿಯನ್ನು ಕಾಲಿಮಾಡುವುದಕ್ಕೆ 218 ವರ್ಷ ಬೇಕಾಗುತ್ತಂತೆ 4 ಲಕ್ಷ 76 ಸಾವಿರ ಕೋಟಿ ಆಸ್ತಿಯಿಂದ ಈಗಲೂ ಅವರು ಪ್ರಪಂಚದ ಅತಿದೊಡ್ಡ ಧನವಂತರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ .

success story of bill gates

ಇಂತಹ ವ್ಯಕ್ತಿಯ ಜೀವನ ಚರಿತ್ರೆಯ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ . ಬಿಲ್ ಗೇಟ್ಸ್ 1985 ಅಕ್ಟೊಬರ್ 28 ರಂದು ಅಮೇರಿಕಾದ ವಾಷಿಂಗ್ಟನ್ ನಲ್ಲಿ ಜನಿಸುತ್ತಾರೆ .

ಚಿಕ್ಕಂದಿನಿಂದಲೂ ಇವರಿಗೆ ಗಣಿತ ಮತ್ತು ಕಂಪ್ಯೂಟರ್ ಅಂದರೆ ತುಂಬಾನೇ ಇಷ್ಟ ಇವರು ಕೇವಲ 13 ವರ್ಷದವನಿದ್ದಾಗಲೇ ಒಂದು ಗೇಮ್ ಗೆ ಪ್ರೋಗ್ರಾಮ್ ಬರೆಯುತ್ತಾರೆ.

ಆತ ಹೈಸ್ಕೂಲ್ ಓದುತ್ತಿರುವಾಗ ಪಾಲ್ ಅಲೆನ್ ಎಂಬ ವ್ಯಕ್ತಿಯ ಜೊತೆ ಸ್ನೇಹ ಆಗುತ್ತದೆ ಈತನಿಗೂ ಕೂಡ ಕಂಪ್ಯೂಟರ್ ಅಂದರೆ ತುಂಬಾನೇ ಇಷ್ಟ, ಇಬ್ಬರು ಕೂಡ ಕಂಪ್ಯೂಟರ್ ಬಗ್ಗೆ ಸಾಕಷ್ಟು ಯೋಚನೆ ಮಾಡುತ್ತಿರುತ್ತಾರೆ. ಕೆಲವು ಕಂಪ್ಯೂಟರ್ ಗೆ ಸಂಬಂಧ ಪಟ್ಟಂತೆ ಪ್ರೋಗ್ರಾಮ್ ಬರೆಯುತ್ತಿರುತ್ತಾರೆ.

ಬಿಲ್ ಗೇಟ್ಸ್ ತಂದೆ ತಾಯಿಗೆ ಅವರನ್ನು ವಕೀಲರನ್ನು ಮಾಡುವ ಆಸೆ , ಆದರೆ ಬಿಲ್ ಗೇಟ್ಸ್ ಗೆ ಕಂಪ್ಯೂಟರ್ ಅಂದರೆ ತುಂಬಾನೇ ಇಷ್ಟ ಆದರೆ ತಂದೆ ತಾಯಿಯ ಆಸೆ ಮೇರೆಗೆ ಹಾರ್ವಾರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ .

ಒಂದು ದಿನ ಆಕಸ್ಮಿಕವಾಗಿ ಪಾಪ್ಯೂಲರ್ ಎಲೆಕ್ಟ್ರಾನಿಕ್ ಎಂಬ ಮ್ಯಾಗಜಿನ್ ನೋಡುತ್ತಾರೆ ಅದರ ಮೇಲೆ  ALT8-8000-800  ಅನ್ನುವ ಜಾಹಿರಾತು ನೋಡುತ್ತಾರೆ . ಆ ಕಂಪ್ಯೂಟರ್ ಗೆ ಸಾಫ್ಟ್ವೇರ್ ಹುಡುಕುತ್ತಿದ್ದಾರೆ ಅನ್ನುವುದು ಬಿಲ್ ಗೇಟ್ಸ್ ಗೆ ತಿಳಿಯುತ್ತದೆ.

success story of bill gates

ನಂತರ ಪಾಲ್ ಅಲೆನ್ ಮತ್ತು ಬಿಲ್ ಗೇಟ್ಸ್ ಸೇರಿ ಆಲ್ಟೆರ್ ಕಂಪನಿಯನ್ನು ಬೇಟಿಮಾಡಿ ಆ ಸಾಫ್ಟ್ವೇರ್ ಕೊಡುವುದಾಗಿ ತಿಳಿಸುತ್ತಾರೆ ಆಗ ಸ್ನೇಹಿತರಿಬ್ಬರು ಸೇರಿ ಹಾರ್ಡ್ವರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೆಂಟರ್ ನಲ್ಲಿ ಎರಡು ತಿಂಗಳಗಳಕಾಲ ಹಗಲು ರಾತ್ರಿಯೆನ್ನದೆ ಶ್ರಮಿಸಿ ಸಾಫ್ಟ್ವೇರ್ ಅನ್ನು ರೆಡಿ ಮಾಡುತ್ತಾರೆ.

ಅದು ಆಲ್ಟೆರ್ ಎಂಬ ಕಂಪ್ಯೂಟರ್ ನಲ್ಲಿ ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ ಅಂದಿನ ಕಾಲದಲ್ಲಿ ಅದು ತುಂಬಾ ಖ್ಯಾತಿ ಪಡೆದಿತ್ತು , ಆ ಇಬ್ಬರು ಸ್ನೇಹಿತರಿಗೆ ಒಳ್ಳೆ ಹೆಸರು ಕೂಡ ಬರುತ್ತದೆ . ನಂತರ ಇಬ್ಬರು ಸೇರಿ 1975 ವರ್ಷದಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಪ್ರಾರಂಭ ಮಾಡುತ್ತಾರೆ.

ಆಗ ಬಿಲ್ ಗೇಟ್ಸ್ ನ ವಯಸ್ಸು ಕೇವಲ 19 ವರ್ಷ ಆಗಿನ ಕಾಲದಲ್ಲಿ ಹೆಚ್ಚು ಕಂಪ್ಯೂಟರ್ ಸೆಲ್ ಮಾಡುವ ಐ ಬಿ ಎಂ ಕಂಪನಿ ಅವರು ಬಿಡುಗಡೆ ಮಾಡುವ ಪರ್ಸನಲ್ ಕಂಪ್ಯೂಟರ್ ಗೆ ಒಂದು ಆಪರೇಟಿಂಗ್ ಸಿಸ್ಟಮ್ ಬೇಕು ಎಂದು ಬಿಲ್ ಗೇಟ್ಸ್ ಹತ್ತಿರ ಹೇಳುತ್ತಾರೆ ಆಗ ಬಿಲ್ ಗೇಟ್ಸ್ ಆಗ ಪ್ರಚಲಿತದಲ್ಲಿದ್ದ ಆಪರೇಟಿಂಗ್ ಸಿಸ್ಟಮ್ ಅನ್ನು 50 ಸಾವಿರ ಡಾಲರ್ ಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿ ಮಾಡಿ ಮೈಕ್ರೋಸಾಫ್ಟ್ ಎಂ ಯಸ್ ದಾಸ್ ಆಪರೇಟಿಂಗ್ ಸಿಸ್ಟಮ್ ಎಂಬ ಹೆಸರಿನೊಂದಿಗೆ ಐ ಬಿ ಎಂ ಕಂಪನಿಗೆ ಕೊಡುತ್ತಾರೆ.

ಹೀಗೆ ಮೈಕ್ರೋಸಾಫ್ಟ್ ಕಂಪನಿ ಬೆಳೆಯುತ್ತ ಕೆಲವೇ ಕೆಲವು ದಿನಗಲ್ಲಿ ಮಿಲಿಯನ್ ಡಾಲರ್ ಕಂಪನಿ ಆಗುತ್ತದೆ. ಮೈಕ್ರೋಸಾಫ್ಟ್ ಕಂಪನಿಯ ಅಭಿವೃದ್ಧಿಗಾಗಿ ಹಾರ್ಡ್ವರ್ಡ್ ವಿಶ್ವವಿದ್ಯಾಲಯದ ದಲ್ಲಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು .

success story of bill gates

ನಂತರ 1986 ರಲ್ಲಿ ಬಿಲ್ ಗೇಟ್ಸ್ ರವರು ಮೈಕ್ರೋಸಾಫ್ಟ್ ವಿಂಡೋಸ್ ಅನ್ನು ಮಾರ್ಕೆಟಿಗೆ ತರುತ್ತಾರೆ ವಿಂಡೋಸ್ ಬಿಡುಗಡೆಯ ನಂತರ ಸಾಫ್ಟ್ವೇರ್ ಸಾಮ್ರಾಜ್ಯವನ್ನು

ಅವರ ಸ್ವಂತ ಮಾಡಿಕೊಳ್ಳುತ್ತಾರೆ . ಬಿಲ್ ಗೇಟ್ಸ್ ಗೆ 30 ವರ್ಷಗಳ ಒಳಗೆ ಮಿಲಿಯನೇರ್ ಆಗುವ ಅಸೆ ಆದರೆ ಅವರು 31 ನೇ ವರ್ಷಕ್ಕೆ ಬಿಲಿಯನೇರ್ ಆಗುತ್ತಾರೆ.

ಆಗಿನ ದಿನಗಳಲ್ಲಿ 95 ಪರ್ಸೆಂಟ್ ಆಪರೇಟಿಂಗ್ ಸಿಸ್ಟಮ್ ಮಾರ್ಕೆಟ್ ಮೈಕ್ರೋಸಾಫ್ಟ್ ಕೈಯಲ್ಲಿ ಇತ್ತು ಬಿಲ್ ಗೇಟ್ಸ್ ಮಾರ್ಕೆಟ್ ಗೆ ಮೈಕ್ರೋಸಾಫ್ಟ್ ಬಿಟ್ಟು

ಬೇರೆ ಯಾವ ಆಪರೇಟಿಂಗ್ ಸಿಸ್ಟಮ್ ಮಾರ್ಕೆಟ್ ಗೆ ಬಾರದ ಹಾಗೆ ಮಾಡುತ್ತಿದ್ದಾರೆ ಅಂತ ತುಂಬ ಕಂಪನಿಗಳು ಕೋರ್ಟ್ ಮೆಟ್ಟಿಲು ಏರುತ್ತವೆ .

ತುಂಬ ದಿನಗಳ ಕಾಲ ಕೇಸ್ ಕೂಡ ನಡೆಯುತ್ತದೆ ಆದರೆ ಇದಕೆಲ್ಲ ಗೇಟ್ಸ್ ತಲೆ ಕೆಡಿಸಿಕೊಂಡಿಲ್ಲ ಆಗ ಇಂಟರ್ನೆಟ್ ಹೊಸದಾಗಿ ಜನಗಳಿಗೆ ಪರಿಚಯ ಆಗೋ ದಿನಗಳು ಆ ಸಮಯದಲ್ಲೇ ಇಂಟರ್ನೆಟ್ ಎಕ್ಸ್ ಫ್ಲೋರಲ್ ಅನ್ನೋ ಸರ್ಚ್ ಇಂಜಿನ್ ಮತ್ತು ಬ್ರೌಜರ್ ಅನ್ನು ಪ್ರಾರಂಭ ಮಾಡುತ್ತಾರೆ .

ಈ ರೀತಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಕಂಪನಿಯನ್ನು ಅಭಿವೃದ್ಧಿ ಪಡಿಸುತ್ತಾರೆ ಹೀಗೆ 1994 ರಲ್ಲಿ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡೋ ಮೆಲಿಂಡಾ ಗೇಟ್ಸ್ ರನ್ನು ಮದುವೆ ಆಗುತ್ತಾರೆ .

success story of bill gates

ಬಿಲ್ ಗೇಟ್ಸ್ ಮತ್ತು  ಮೆಲಿಂಡಾ ಗೇಟ್ಸ್

ಕಾಲಕ್ಕೆ ತಕ್ಕಂತೆ ಮಾಡೋ ಅವರ ಕೆಲಸದ ಜೊತೆಗೆ ಅವರ ಆಸ್ತಿಯು ಕೂಡ ಬೆಳೆಯುತ್ತ ಬರುತ್ತದೆ. ಎಷ್ಟು ಅಂದರೆ ಇಂದಿನ 23 ವರ್ಷಗಲ್ಲಿ 18 ಭಾರಿ ಪ್ರಪಂಚದ ಅತಿ ದೊಡ್ಡ ಧನವಂತರಾಗುವಷ್ಟು.

ಇವರಿಗೆ ಸಂಪಾದನೆ ಒಂದು ದಾರಿ ಆದರೆ ಜನರ ಸೇವೆ ಮಾಡುವುದು ಕೂಡ ಒಂದು ದಾರಿ.

ತಾನು ಮಾಡೋ ಸಂಪಾದನೆ ಪ್ರಪಂಚದ ಅಭಿವೃದ್ಧಿಗೆ ಬಳಸಿದರೇನೇ ನಾನು ಮಾಡುವ ಸಂಪಾದನೆಗೆ ಒಂದು ಅರ್ಥ ಇರುತ್ತದೆ ಅಂತ ಭಾವಿಸಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್  ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ . ಪ್ರಪಂಚದಾದ್ಯಂತ , ವಿದ್ಯಾಭ್ಯಾಸ , ಬಡತನ , ಹಸಿದವರಿಗೆ , ಹಾಗೆ ವ್ಯವಸಾಯ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.

ಈ ರೀತಿ ಪ್ರಪಂಚದ ಎಷ್ಟೋ ಜನರ ಬಾಳಿನಲ್ಲಿ ಬೆಳಕುತ್ತಾರೆ 2035 ರ ಒಳಗೆ ಪ್ರಪಂಚದ ಎಲ್ಲ ದೇಶಗಳಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎನ್ನುವುದು ಅವರ ಅಸೆ ಆಗಿದೆ .
ಗೇಟ್ಸ್ ಹತ್ತಿರ ಲಕ್ಷಾಂತರ ಕೋಟಿ ಆದಾಯ ಇದ್ದರೂಕೂಡ ತನ್ನ ಮಕ್ಕಳಿಗೆ ಒಬ್ಬೊಬ್ಬರಿಗೆ 10 ಮಿಲಿಯನ್ ಡಾಲರ್ ಸಿಗುವಹಾಗೆ ವಿಲ್ ಬರೆಯುತ್ತಾರೆ .

success story of bill gates

success story of bill gates

ಉಳಿದ ಹಣವನ್ನು ಅವರ ಫೌಂಡೇಶನ್ ಗೆ ಬರೆಯುತ್ತಾರೆ ಯಾಕೆ ಅಂದರೆ ಅವರ ಮಕ್ಕಳು ಅವರ ಸ್ವಂತ ಬುದ್ದಿಯಿಂದ ಹಣವನ್ನು ಗಳಿಸಿಕೊಳ್ಳಬೇಕು

ಅನ್ನುವುದೇ ಅವರ ಅಸೆ ಅಷ್ಟೇ ಅಲ್ಲ ಬಿಲ್ ಗೇಟ್ಸ್ ತನ್ನ ಸ್ನೇಹಿತನಾದ ಪ್ರಪಂಚದ 2ನೇ ಅತಿದೊಡ್ಡ ಶ್ರೀಮಂತರಾದ ವಾರೆನ್ ಬಫಿಟ್ ಜೊತೆ ಸೇರಿ ದಿ ಗಿವಿಂಗ್ ಪ್ಲೆಡ್ಜ್ ಆರ್ಗನೈಜೇಶನ್ ಅನ್ನು ಪ್ರಾರಂಭ ಮಾಡುತ್ತಾರೆ.

ಇದಕ್ಕೆ ಪ್ರಪಂಚದಲ್ಲಿರುವ ಎಲ್ಲ ಧನವಂತರಿಗೆ ಈ ಸಂಸ್ಥೆಗೆ ದಾನಮಾಡಿ ಅಂತ ಕರೆಯುತ್ತಾರೆ ಆಗ 170 ಮಂದಿಗಿತ ಹೆಚ್ಚು ಧನವಂತರು ಮುಂದೆ ಬರುತ್ತಾರೆ. ಹೀಗೆ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಎಂಬ ದೊಡ್ಡ ಸಂಸ್ಥೆ ಯನ್ನು ಹುಟ್ಟುಹಾಕಿ ಪ್ರಪಂಚದ ಅತಿ ದೊಡ್ಡ ಧನವಂತರಾದ ಕಥೆ.
ಸ್ನೇಹಿತರೆ ಇದಿಷ್ಟು ಬಿಲ್ ಗೇಟ್ಸ್ ಬಗ್ಗೆ ಇರುವಂತಹ ಮಾಹಿತಿ ನಿಮಗೆ ಈ ಲೇಖನ ಇಷ್ಟ ಆದರೆ ತಪ್ಪದೆ ಶೇರ್ ಮಾಡಿ.

ಪೇರಳೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ | Guava Fruit Farming | Agriculture Business Ideas

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments