ಮಜ್ಜಿಗೆ ಮೆಣಸಿನಕಾಯಿ ಮೇಕಿಂಗ್ ಬ್ಯುಸಿನೆಸ್
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ರಾ ಮೆಟೀರಿಯಲ್ ಎಲ್ಲಿ ಸಿಗುತ್ತದೆ
ಯಾವ ಮಷಿನ್ ಬೇಕು
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ:-
ನಿಮ್ಮ ಮನೆಯಲ್ಲೇ ಇರುವ ಸ್ಥಳಾವಕಾಶದಲ್ಲಿ ಮಾಡಬಹುದು ಇದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ ಹಾಗೆ ಈ ಬ್ಯುಸಿನೆಸ್ ಮಾಡುವುದು ಕೂಡ ತುಂಬಾನೇ ಸರಳ ಆದ್ದರಿಂದ ನೀವು ಈ ಬಿಸಿನೆಸ್ ಮಾಡಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹುದು , ಇದಕ್ಕೆ ಒಂದೇ ಒಂದು ಮಷಿನ್ ಖರೀದಿ ಮಾಡಿದರೆ ಸಾಕು ಅದು ಯಾವ ಮಷಿನ್ ಅಂದರೆ ಪ್ಯಾಕಿಂಗ್ಮಷಿನ್ ಅಂದರೆ ಸೀಲಿಂಗ್ ಮಷಿನ್ ಇದಕ್ಕೆ ಹೆಚ್ಚು ಬಂಡವಾಳಬೇಕಾಗಿಲ್ಲ ಹಾಗೆ ಹೋಲ್ಸೇಲ್ ಮೆಣಸಿನಕಾಯಿ ಖರೀದಿ ಮಾಡಮಾಡಬೇಕು ಹಾಕೇ ಪ್ಯಾಕ್ ಮಾಡಲು ಪ್ಯಾಕಿಂಗ್ ಕವರ್ ಬೇಕಾಗುತ್ತದೆ ಇಷ್ಟು ಇದ್ದರೆ ಈ ಬ್ಯುಸಿನೆಸ್ ಅನ್ನು ಆರಾಮಾಗಿ ನಿಮ್ಮ ಮನೆಯಲ್ಲೆ ಮಾಡಿ ಉತ್ತಮ ಆದಾಯ ಗಳಿಸಬಹುದು. ಹಾಗಾದರೆ ಈ ಬ್ಯುಸಿನೆಸ್ ಪ್ರಾರಂಭ ಮಾಡುವುದು ಹೇಗೆ ಅಂತ ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೆ ಈ ಲೇಖನ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಡ್ಸ್ ಗೆ ಶೇರ್ ಮಾಡಿ .
ಇದಕ್ಕೆ ಹೋಲ್ಸೇಲ್ ಹಸಿ ಮೆಣಸಿನಕಾಯಿ ಬೇಕಾಗುತ್ತದೆ
ಪ್ಯಾಕಿಂಗ್ ಕವರ್
ಸೀಲಿಂಗ್ ಮಷಿನ್
ಎಷ್ಟು ಬಂಡವಾಳ ಬೇಕು:-
ಈ ಬಿಸಿನೆಸ್ ಅನ್ನು ಅತಿ ಕಡಿಮೆ ಬಂಡವಾಳದಲ್ಲಿ ಮಾಡಬಹುದು ಇದಕ್ಕೆ ಯಾವುದೇ ರೀತಿಯ ಲೆಸೆನ್ಸ್ ಬೇಕಾಗಿಲ್ಲ ಹಾಗೆ ದೊಡ್ಡ ದೊಡ್ಡ ಮಷಿನ್ ಕೂಡ ಖರೀದಿ ಮಾಡಬೇಕಾಗಿಲ್ಲ ಆದ್ದರಿಂದ ಇದಕ್ಕೆ ಕಡಿಮೆ ಬಂಡವಾಳದಲ್ಲಿ ನಿಮ್ಮ ಮನೆಯಿಂದಲೇ ತಯಾರಿಸಿ ಮಾರಾಟ ಮಾಡಬಹುದು ಹಾಗಿದ್ದರೆ ಎಷ್ಟು ಬಂಡವಾಳಬೇಕು ಅಂತ ನೋಡೋಣ .
ಮೆಣಸಿನ ಕಾಯಿ ಖರೀದಿ – ₹1000
ಸೀಲಿಂಗ್ ಮಷಿನ್ – ₹1000
ಕವರ್ ಖರೀದಿ – ₹500
ಇತರೆ -₹ 500
ಒಟ್ಟು -₹3000
ಮಷಿನ್ ಎಲ್ಲಿ ಸಿಗುತ್ತದೆ:
ಈ ಮೇಲೆ ತಿಳಿಸಿದಂತೆ ಅತ್ಯಂತ ಕಡಿಮೆ ಬಂಡವಾಳದ ಮಷಿನ್ ಖರೀದಿಸಿದರೆ ಸಾಕಾಗುತ್ತದೆ , ನಿಮಗೆಲ್ಲ ಗೊತ್ತಿರುವ ಹಾಗೆ ಪ್ಯಾಕ್ ಮಾಡಲು ಅಟೋಮ್ಯಾಟಿಕ್ ಮಷಿನ್ ಕೂಡ ಮಾರ್ಕೆಟ್ ನಲ್ಲಿ ಲಭ್ಯವಿವೆ ಇದಕ್ಕೆ ತುಂಬ ಬಬಂಡವಾಳವನ್ನು ಹೂಡಿಕೆ ಮಾಡಬೇಕಾಗುತ್ತದೆ . ನೀವು ಪ್ರಾರಂಭದಲ್ಲಿ ಅಷ್ಟೆಲ್ಲ ಬಂಡವಾಳವನ್ನು ಹೂಡಿಕೆ ಮಾಡದೇ ಕೇವಲ ಒಂದು ಮ್ಯಾನುಯಲ್ ಮಷಿನ್ ಖರೀದಿಸಿದರೆ ಸಾಕು ಆ ಮಷಿನ್ ಎಲ್ಲಿ ಖರೀದಿಸಬಹುದು ಅಂತ ನೋಡೋಣ .
ನಿಮ್ಮ ಹತ್ತಿರದ ಶಾಪ್
ಅಥವಾ
ಆನ್ಲೈನ್
ರಾ ಮೆಟೀರಿಯಲ್ ಎಲ್ಲಿ ಸಿಗುತ್ತದೆ:
ನೀವು ಈ ಬಿಸಿನೆಸ್ ಮಾಡಬೇಕು ಅಂದರೆ ಹೋಲ್ಸೇಲ್ ದರದಲ್ಲಿ ಹಸಿ ಮೆಣಸಿನ ಕಾಯಿಯನ್ನು ಖರೀದಿಸಬೇಕಾಗುತ್ತದೆ ಈ ಮೆಣಸಿನಕಾಯಿಯನ್ನು ನೀವು ನೇರವಾಗಿ ರೈತರ ಹತ್ತಿರ ಖರೀದಿಮಾಡಿದರೆ ನಿಮಗೆ ಅತ್ಯಂತ ಕಡಿಮೆ ಬಂಡವಾಳದಲ್ಲಿ ಸಿಗುತ್ತದೆ ಹೀಗೆ ಕಡಿಮೆ ಬಂಡವಾಳಕ್ಕೆ ಮೆಣಸಿನ ಕಾಯಿ ನಿಮಗೆ ದೊರೆತರೆ ಲಾಭಕೂಡ ಹೆಚ್ಚು ದೊರೆಯುತ್ತದೆ .
ಹೋಲ್ಸೇಲ್ ಮಾರ್ಕೇಟ್
ರೈತರಿಂದ ಖರೀದಿ
ಮಾಡುವ ವಿಧಾನ:
ಮಜ್ಜಿಗೆ ಮೆಣಸಿನಕಾಯಿ ತಯಾರಿಸುವುದು ಹೇಗೆ ಅಂತ ಈ ಇಲ್ಲಿ ತಿಳಿಸಿ ಕೊಡುತ್ತೇನೆ ನಿಮಗೆ ಒಂದುವೇಳೆ ಈ ಮಜ್ಜಿಗೆ ಮೆಣಸಿನ ಕಾಯಿ ರೆಸಿಪಿ ಮಾಡಲು ಗೊತ್ತಿಲ್ಲ ಅಂತ ಆದರೆ ನೀವು ಯೌಟ್ಯೂಬ್ ನಲ್ಲಿ ಸಾಕಷ್ಟು ವಿಡಿಯೊಗಳು ಇದ್ದವೇ ನೀವು ಅವುಗಳನ್ನು ನೋಡಿಕೊಂಡು ಮಜ್ಜಿಗೆ ಮೆಣಸಿನಕಾಯಿ ತಯಾರಿಸಿ ಮಾರಾಟ ಮಾಡಾಬಹದು .
ಬೇಕಾಗುವ ಸಾಮಗ್ರಿಗಳು
ಹಸಿಮೆಣಸಿನಕಾಯಿ
ಉಪ್ಪು ರುಚಿಗೆ ತಕ್ಕಷ್ಟು
ಗಟ್ಟಿಯಾದ ಮಜ್ಜಿಗೆ
ಜೀರಿಗೆ ಪುಡಿ
ಇಂಗು ಸ್ವಲ್ಪ
ಮಾಡುವ ವಿಧಾನ:
ಮೆಣಸಿನಕಾಯಿಯನ್ನು ತೊಳೆದು ಮದ್ಯಕ್ಕೆ ಸೀಳಿ ಕೊಳ್ಳಿ. ಮಜ್ಜಿಗೆಗೆ ಉಪ್ಪು, ಜೀರಿಗೆಪುಡಿ ಇಂಗು ಸೇರಿಸಿ ಮಿಕ್ಸ್ ಮಾಡಿ ಇದಕ್ಕೆ ಸೀಳಿದ ಮೆಣಸಿನಕಾಯಿಯನ್ನು ಹಾಕಿ ಒಂದು ದಿನ ನೆನಸಿಡಿ.
ನಂತರ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಮತ್ತೆ ಅದೆ ಮಜ್ಜಿಗೆ ಯಲ್ಲಿ ನೆನೆಸಿಟ್ಟು ಬೆಳಿಗ್ಗೆ ಮತ್ತೆ ತೆಗೆದು ಒಣಗಿಸಿ. ಇದೆ ರೀತಿ ಮೂರು ದಿನ ತೆಗೆದು ಒಣಗಿಸಿ.
ಮೆಣಸಿನಕಾಯಿ ಹಸಿರು ಬಣ್ಣ ಬದಲಾಗಿ ಬಿಳಿಯಾಗುತ್ತದೆ. ನಂತರ ಇದನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೂ ಒಣಗಿಸಿ ಗಾಳಿಯಾಡದ ಡಬ್ಬಿ ಯಲ್ಲಿ ಹಾಕಿಡಿ. ಬೇಕಾದಾಗ ತೆಗೆದು ಎಣ್ಣೆ ಯಲ್ಲಿ ಕರಿಯಿರಿ.
ಇದನ್ನು ರೊಟ್ಟಿ ಚಪಾತಿ ಮೊಸರನ್ನ ಜೊತೆಗೆ ತಿನ್ನಬಹುದು.
ಮಾರ್ಕೆಟಿಂಗ್ ಮಾಡುವುದು ಹೇಗೆ:
ಯಾವುದೇ ಒಂದು ಬಿಸಿನೆಸ್ ಮಾಡಬೇಕು ಅಂದರೆ ಮಾರ್ಕೆಟಿಂಗ್ ಮಾಡುವುದು ಪ್ರಮುಖ ಆಗುತ್ತದೆ ಆದ್ದರಿಂದ ನೀವು ಕೂಡ ನೀವು ತಯಾರಿಸಿದ ಮೆಣಸಿನ ಕಾಯಿಯನ್ನು ನಿಮ್ಮ ಹತ್ತಿರದ ನಗರಗಳಿಗೆ ಹಾಗೆ ಹತ್ತಿರದ ಅಂಗಡಿಗಳಿಗೆ ಮಾರ್ಕೆಟಿಂಗ್ ಮಾಡಿ ಉತ್ತಮ ಲಾಭ ಗಳಿಸಬಹುದು.
ಹೋಲ್ಸೇಲ್ ಡೀಲರ್ಸ್
ದಿನಸಿ ಅಂಗಡಿ
ಬೇಕರಿ
ಹೋಟೆಲ್
ಸೂಪರ್ ಮಾರ್ಕೆಟ್
ಆನ್ಲೈನ್
ಲಾಭ ಎಷ್ಟು ಗಳಿಸಬಹುದು :
ನೀವು ಚೆನ್ನಾಗಿ ಮಾರ್ಕೆಟಿಂಗ್ ಮಾಡಿದ್ದೆ ಆದಲ್ಲಿ ಉತ್ತಮವಾದ ಲಾಭವನ್ನು ಗಳಿಸಬಹುದು ಹಾಗಾದರೆ ಪ್ರತಿದಿನ ಎಷ್ಟು ಲಾಭಗಳಿಸಬಹುದು ಅಂತ ಈ ಕೆಳಗೆ ನೋಡೋಣ .
ಹೋಲ್ಸೇಲ್ 1 ಕೆಜಿ ಗೆ 350ರೂ
ಕರ್ಚು ಕೆಜಿ ಗೆ – 150
ಲಾಭ : ₹200
ಇದನ್ನು ನೀವು
50 ಗ್ರಾಮ್
100 ಗ್ರಾಮ್
250 ಗ್ರಾಮ್
500 ಗ್ರಾಮ್
ಹೀಗೆ ಮಾಡಿ ಮಾರಾಟ ಮಾಡಬಹುದು
ದಿನಕ್ಕೆ 10 ಕೆಜಿ ಸೇಲ್ ಮಾಡಿದರೆ
₹2000 ಲಾಭ
ಮಜ್ಜಿಗೆ ಮೆಣಸಿನಕಾಯಿ ಮೇಕಿಂಗ್ ಬ್ಯುಸಿನೆಸ್
ಆಲೂಗಡ್ಡೆ ಚಿಪ್ಸ್ ಮೇಕಿಂಗ್ ಬ್ಯುಸಿನೆಸ್ | potato chips manufacturing business ideas in kannada
[…] […]
[…] […]