ಲಿಂಬು ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ
ನಿಂಬೆ ಹಣ್ಣು ಬಹು ಉಪಯೋಗಿ ಹಣ್ಣಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ ಈ ತೋಟಗಾರಿಕಾ ಬೆಳೆಯಾದ ನಿಂಬೆಹಣ್ಣನ್ನು
ರೈತರು ಮುಖ್ಯವಾದ ಬೆಳೆಯಾಗಿ ಆರಂಭಿಸಿರುವುದರಿಂದ ನಿಂಬೆಹಣ್ಣಿಗೆ ಸುಧಾರಿತ ಬೇಸಾಯ ಕ್ರಮವನ್ನು ಅಳವಡಿಸಿಕೊಂಡು ಮಾಡಿದರೆ ಉತ್ತಮ
ಇಳುವರಿಯೊಂದಿಗೆ ಉತ್ತಮ ಆದಾಯ ಗಳಿಸಬಹದು.
ಲಿಂಬೆ ಮತ್ತು ಗಜಲಿಂಬೆ ಲಿಂಬೆ ಮತ್ತು ಗಜಲಿಂಬೆ ಪ್ರಮುಖ ಆಮ್ಲಯುಕ್ತ ಲಿಂಬೆ ಜಾತಿಯ ಹಣ್ಣುಗಳಾಗಿದ್ದು , ಇವುಗಳನ್ನು ಪಾನೀಯಗಳು ,
ಉಪ್ಪಿನಕಾಯಿ , ಸಿಟ್ರಿಕ್ ಆಮ್ಲ ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆ ಹಾಗೂ ಅಡಿಗೆಯಲ್ಲಿ ಉಪಯೋಗಿಸುತ್ತಾರೆ .
ಈ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ “ ಸಿ ” ಜೀವಸತ್ವವನ್ನು ಒಳಗೊಂಡಿವೆ .
ಮಣ್ಣು :
ಚೆನ್ನಾಗಿ ನೀರು ಬಸಿದು ಹೋಗುವಂತಹ 2-3 ಮೀ . ( 8-10 ಅಡಿ ) ಆಳವಿರುವ ಗೋಡು ಮಣ್ಣು ಪ್ರದೇಶಗಳನ್ನು ಈ ಬೆಳೆಗಳಿಗೆ ಆಯ್ಕೆ ಮಾಡಬೇಕು ,
ನೀರು ನಿಲ್ಲುವಂತಹ ಪ್ರದೇಶ ಮತ್ತು ಚೌಗು ಭೂಮಿ ಈ ಬೆಳೆಗೆ ಯೋಗ್ಯವಲ್ಲ . ನೀರಾವರಿಯು ಅವಶ್ಯವಾಗಿದ್ದು , ಗುಲಬರ್ಗಾ , ಬಿಜಾಪುರ , ಬಾಗಲಕೋಟೆ ,
ಕೊಪ್ಪಳ ಬಳ್ಳಾರಿ , ಚಿತ್ರದುರ್ಗ ಹಾಗೂ ಗದಗ ಜಿಲ್ಲೆ ಈ ಬೆಳೆಗಳನ್ನು ಬೆಳೆಯಲು ಅತೀ ಯೋಗ್ಯವಾಗಿವೆ .
ಹವಾಗುಣ ಮತ್ತು ನಾಟಿ ಕಾಲ :
ಲಿಂಬೆಗೆ ತೇವಾಂಶಯುಕ್ತ ಉಷ್ಣ ಹವಾಗುಣ ಸೂಕ್ತ . ಕಡಿಮೆ ತಾಪಮಾನ ಮತ್ತು ಬಿರುಗಾಳಿ ಬೀಸುವ ಪ್ರದೇಶಗಳು ಸೂಕ್ತವಲ್ಲ ,
ಒಣಹವೆಯಲ್ಲಿ ಇದು ಚೆನ್ನಾಗಿ ಬರುತ್ತದೆ . ಜೂನ್ – ಆಗಸ್ಟ್ ತಿಂಗಳುಗಳು ನಾಟಿಗೆ ಸಕಾಲ
ತಳಿಗಳು ಲಿಂಬೆ
1 , ಕಾಗಜಿ ಲಿಂಬೆ
2 , ಬೀಜ ರಹಿತ ಲಿಂಬೆ ( ತಾಹಿತಿ ಲಿಂಬೆ )
3 , ಬಾಲಾಜಿ
4 , ಪ್ರಮಾಲಿನಿ
5 ,ಎಕದು
6 , ಸಾಯಿಸರುತಿ ಗಜಲಿಂಬೆ
ಗಜನಿಂಬೆ
1 , ಇಟಾಲಿಯನ್ ಗಜನಿಂಬೆ
2. ಲಿಸ್ಟನ್ ಗಜನಿಂಬೆ
3 , ಸದಲ್ಲಿ ಗಜನಿಂಬೆ
4. ಯುರೇಕಾ
ಬೇಸಾಯ ಕ್ರಮಗಳು:
ಸಸಿ ತಯಾರಿಯವುದು :
ಸಸಿ ಬೆಳೆಸಲು ಬೇಕಾಗುವ ಬಿತ್ತನೆ ಬೀಜ ಪಡೆಯಲು ದೊಡ್ಡದಾದ ರಸಭರಿತ ತೆಳು ಸಿಪ್ಪೆಯ ಹಣ್ಣುಗಳನ್ನು ಆಯ್ಕೆ ಮಾಡಬೇಕು .
ಬಿತ್ತನೆಗಾಗಿ 8 ಮೀ . ಉದ್ದ ,
1 ಮೀ . ಅಗಲ ಮತ್ತು
10 ಸೆಂ.ಮೀ. ಎತ್ತರದ
ಏರು ಸಸಿಮಡಿಗಳನ್ನು ಸಿದ್ಧಪಡಿಸಿ ಪ್ರತಿ ಮಡಿಗೆ 6 ಬುಟ್ಟಿಗಳಷ್ಟು ಎಲೆ ಗೊಬ್ಬರ ಅಥವಾ ಕಾಂಪೋಸ್ಸನ್ನು ಹಾಕಿ ಮಣ್ಣಿನಲ್ಲಿ ಬೆರೆಸಬೇಕು ,
ಆಮೇಲೆ ಮರಳನ್ನು ಸಸಿ ಮಡಿಗಳ ಮೇಲೆ 2 ಸೆಂ.ಮೀ , ದಪ್ಪವಾಗಿ ಹರಡಬೇಕು , ನಂತರ ಬೀಜಗಳನ್ನು 10 ಸೆಂ.ಮೀ ಅಂತರದ ಸಾಲುಗಳಲ್ಲಿ 5 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು .
ಸಸಿಗಳು 5-7 ಸೆಂ.ಮೀ. ಎತ್ತರ ಬೆಳೆದು 3-4 ಎಲೆಗಳನ್ನು ಪಡೆದಾಗ ಅವುಗಳನ್ನು ಎರಡನೇ ಸಸಿ ಮಡಿಗೆ ವರ್ಗಾಯಿಸಿ 60 ಸೆಂ.ಮೀ. ಅಂತರದ ಸಾಲುಗಳಲ್ಲಿ 22 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು , ಅಶಕ್ತ ಗಿಡಗಳನ್ನು ತೆಗೆದು ಹಾಕಬೇಕು .
ಲಿಂಬೆಯಲ್ಲಿ ಬೀಜದಿಂದ ವೃದ್ಧಿಪಡಿಸಿದ ಸಸಿಗಳನ್ನು ಮತ್ತು ಗಜನಿಂಬೆಯಲ್ಲಿ ಕಣ್ಣು ಕಸಿ ಮಾಡಿದ ಗಿಡಗಳನ್ನು ನಾಟಿಗಾಗಿ ಉಪಯೋಗಿಸಬೇಕು .
ರಂಗಪೂರ ಲಿಂಬೆಯ ಮೇಲೆ ಕಣ್ಣು ಕಸಿ ಮಾಡಿದ ಗಿಡಗಳು ಕಪ್ಪು ಮಣ್ಣಿನ ಪ್ರದೇಶಗಳಿಗೆ ಮತ್ತು ಕಾಡು ಗಜನಿಂಬೆಯ ಮೇಲೆ ಕಣ್ಣು ಕಸಿ ಮಾಡಿದ ಗಿಡಗಳು ಹಗುರವಾದ ಕೆಂಪು ಮಣ್ಣಿನ ಪ್ರದೇಶಗಳಿಗೆ ಸೂಕ್ತ . ಸಾಧ್ಯವಾದಷ್ಟು ಮಟ್ಟಿಗೆ “ ಟ್ರಸೈಜಾ ” ಎಂಬ ನಂಜುರೋಗದಿಂದ ರಕ್ಷಿಸಲ್ಪಟ್ಟ ಹಾಗೂ ನಿರೋಧಕ ಶಕ್ತಿಯಿರುವ ಗಿಡಗಳನ್ನೇ ಉಪಯೋಗಿಸುವುದು ಒಳಿತು .
ಲಿಂಬು ಕೃಷಿ ಮಾಡಿ ಲಕ್ಷ ಸಂಪಾದಿಸಿ
ಲಿಂಬೆಯನ್ನು ಅಂತರ ಬೆಳೆಯಾಗಿ ಬೆಳೆಸುವುದು :
ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ . ತೆಂಗಿನ ತೋಟದಲ್ಲಿ ಲಿಂಬೆಯನ್ನು ಅಂತರ ಬೆಳೆಯಾಗಿ ಅಳವಡಿಸಬಹುದಾಗಿದೆ . ಎರಡು ತೆಂಗಿನ ಸಾಲುಗಳ ಮಧ್ಯೆ ಬಿಸಿಲು ಸಾಕಷ್ಟು ಬೀಳುವಲ್ಲಿ ಲಿಂಬೆಗಿಡಗಳನ್ನು ಬೆಳೆಸಬಹುದಾಗಿದೆ . ಇದೇ ರೀತಿ ಲಿಂಬೆಯನ್ನು ಕಾಫಿ ಮತ್ತು ಸಪೋಟ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಸಬಹುದಾಗಿದೆ .
ನಾಟಿ ಮಾಡುವುದು :
ಬೆಳೆ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು , ಶಿಫಾರಸ್ಸು ಮಾಡಿದ ಅಂತರದಲ್ಲಿ
ಆಳ -75 ಸೆಂ.ಮೀ
ಅಗಲ -75 ಸೆಂ.ಮೀ
ಉದ್ದ -75 ಸೆಂ.ಮೀ.
ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣ ಹಾಕಿ ತುಂಬಬೇಕು , ನಂತರ ಸಸಿಗಳನ್ನು ಗುಣಿಯ ಮಧ್ಯದಲ್ಲಿ ನಾಟಿ ಮಾಡಬೇಕು . ಕಣ್ಣು ಹಾಕಿದ ಗಿಡ ನಾಟಿ ಮಾಡುವುದಾದಲ್ಲಿ ಕಣ್ಣು ಹಾಕಿದ ಭಾಗ ಭೂಮಿಯ ಮಟ್ಟದಿಂದ ಮೇಲಿರುವಂತೆ ನಾಟಿ ಮಾಡಬೇಕು .
ನಾಟಿ ನಂತರದ ಬೇಸಾಯ :
ನಾಟಿ ಮಾಡಿದ ಕೂಡಲೇ ಸಸಿಗಳಿಗೆ ಕೋಲಿನ ಆಸರೆ ಕೊಟ್ಟು ಕಟ್ಟಬೇಕು . ಗಿಡ 0.6 ಮೀಟರ ಎತ್ತರ ಬೆಳೆಯುವವರೆಗೂ ಪಕ್ಕದಲ್ಲಿ ಬರುವ ಕವಲುಗಳನ್ನು ತೆಗೆಯುತ್ತಿರಬೇಕು , ಜೊತೆಗೆ ನೇರವಾಗಿ ಬೆಳೆದ ಕವಲು ಇರಲಾರದ ಮತ್ತು ಒಣಗಿದ ಕವಲುಗಳನ್ನು ಕತ್ತರಿಸಿ ಹಾಕಿ ಗಿಡದ ಸುತ್ತಲೂ ಮಣ್ಣನ್ನು ಸಡಿಲಗೊಳಿಸಿ ಪಾತಿಗಳಲ್ಲಿ ಹೊದಿಕೆ ಹಾಕಿ ನಿಯಮಿತವಾಗಿ ಪಾತಿಗಳಲ್ಲಿನ ಕಳೆ ನಿಯಂತ್ರಿಸುತ್ತಿರಬೇಕು . ಮಣ್ಣು ಮತ್ತು ಹವಾಗುಣಕ್ಕನುಸರಿಸಿ 7-10 ದಿನಗಳಿಗೊಮ್ಮೆ ನೀರು ಹಾಯಿಸಬೇಕು .
ಜೂನ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಒದಗಿಸಬೇಕು , ರಸಗೊಬ್ಬರಗಳನ್ನು ಮೂರು ಸಮ ಕಂತುಗಳಲ್ಲಿ ಹೊಸ ಬೆಳವಣಿಗೆಯ ಸಮಯದಲ್ಲಿ ಅಂದರೆ ಮಾರ್ಚ್ – ಏಪ್ರಿಲ್ , ಜೂನ್ – ಜುಲೈ ( ಮಳೆಗಾಲಕ್ಕೆ ಮುಂಚೆ ) ಮತ್ತು ಸೆಪ್ಟೆಂಬರ್- ಅಕ್ಟೋಬರ್ ( ಮಳೆಗಾಲದ ನಂತರ ) ತಿಂಗಳುಗಳಲ್ಲಿ ಒದಗಿಸಬೇಕು . ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಗಿಡಕ್ಕೆ 20 ರಿಂದ 30 ಲೀ . ನೀರು ಒದಗಿಸಿದರೆ ಉತ್ತಮ ಇಳುವರಿ ಬರುತ್ತದೆ .
ಸಾವಯುವ ಗೊಬ್ಬರವನ್ನು ಒಂದು ಸಸಿಗೆ ಪ್ರಾರಂಭದಲ್ಲಿ 5 ಕೆಜಿ ಕೊಡಬೇಕು ನಂತರ ವರ್ಷದಲ್ಲಿ ಜ್ಯಾಸ್ತಿ ಮಾಡಿಕೊಳ್ಳುತ್ತ ಹೋಗಬೇಕು. ಅಂದರೆ ವರ್ಷ ವರ್ಷ ೫ ಕೆಜಿ ಹೆಚ್ಚು ಮಾಡಿಕೊಳ್ಳುತ್ತಾ ಹೋಗಬೇಕು,
2 ನೇ ವರ್ಷ 10ಕೆಜಿ
3ನೇ ವರ್ಷ 15 ಕೆಜಿ
4 ನೇ ವರ್ಷ 20 ಕೆಜಿ
5 ನೇ ವರ್ಷ 25 ಕೆಜಿ
ಈ ತರ ಗಿಡದ ಬೆಳವಣಿಗೆಗೆ ತಕ್ಕಂತೆ ಸಾವಯುವ ಗೊಬ್ಬರವನ್ನು ಕೊಡಬೇಕು.
ರಾಸಾಯನಿಕ ಗೊಬ್ಬರ :
ಮೊದಲನೇ ವರ್ಷ :
ಸಾರಜನಕ – 100 ಗ್ರಾಂ
ರಂಜಕ – 60 ಗ್ರಾಂ
ಪೊಟ್ಯಾಷ್ – 100 ಗ್ರಾಂ
ಎರಡನೇ ವರ್ಷ :
ಸಾರಜನಕ – 200 ಗ್ರಾಂ
ರಂಜಕ – 120 ಗ್ರಾಂ
ಪೊಟ್ಯಾಷ್ – 200 ಗ್ರಾಂ
ಈ ರೀತಿ 3 ಸಮ ಕಂತು ಗಳಲ್ಲಿ ಕೊಡಬೇಕು
ಬರುವ ರೋಗ:
ಲಿಂಬೆ ಪತಂಗ – ಈ ಕೀಟದ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮವಾಗಿ
1 ಲೀಟರ್ ನೀರಿನಲ್ಲಿ 4 ಗ್ರಾಂ ಕಾರ್ಬೋರಿಲ್ ಬೆರೆಸಿ ಸಿಂಪಡಣೆ ಮಾಡುವುದರಿಂದ ಈ ಕೀಟ ನಿವಾರಣೆಯನ್ನು ಮಾಡಬಹುದು . ಬೇವಿನ ಕಷಾಯವನ್ನು ಸಿಂಪಡಣೆ ಮಾಡಿದರೆ ಒಳ್ಳೆಯದು .
ಎಷ್ಟು ವರ್ಷಕ್ಕೆ ಫಸಲು ಬರುತ್ತದೆ ಮತ್ತು ಇಳುವರಿ :
ಸಾಮಾನ್ಯವಾಗಿ ನಾಟಿ ಮಾಡಿದ 3 ನೇ ವರ್ಷದಿಂದ ಇಳುವರಿ ಪ್ರಾರಂಭವಾಗುತ್ತದೆ . ಲಿಂಬೆ ಹಣ್ಣುಗಳು ಹೂ ಬಿಟ್ಟ ಆರು ತಿಂಗಳ ನಂತರ ಕೊಯ್ಲಿಗೆ ಬರುತ್ತವೆ . ವರ್ಷದಲ್ಲಿ ಎರಡು ಬಾರಿ ಅಂದರೆ ಜುಲೈ – ಸಪ್ಟೆಂಬರ್ ಮತ್ತು ಮಾರ್ಚ ತಿಂಗಳುಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ . ಸುಮಾರು ಎಂಟು ವರ್ಷದ ಲಿಂಬೆ ಗಿಡದಿಂದ 1,000-1,200 ಹಣ್ಣುಗಳನ್ನು ( 25 ಟನ್ ಪ್ರತಿ ಹೆಕ್ಟೇರಿಗೆ ) ಮತ್ತು ಇಟಾಲಿಯನ್ ಹಾಗೂ ಇನ್ನಿತರ ಗಜನಿಂಬೆಯಿಂದ 600-800 ಹಣ್ಣುಗಳನ್ನು ಪ್ರತಿ ಗಿಡದಿಂದ ಪ್ರತಿ ವರ್ಷ ನಿರೀಕ್ಷಿಸಬಹುದು.
ಲಾಭ ಎಷ್ಟು ಗಳಿಸಬಹುದು:
3ವರ್ಷಗಳ ನಂತರ ಪ್ರತಿ ಒಂದು ಗಿಡದಲ್ಲಿ 800 ಹಣ್ಣುಗಳು ಬಿಟ್ಟರೆ 100 ಗಿಡಕ್ಕೆ 80 ಸಾವಿರ ಹಣ್ಣುಗಳು ಆಗುತ್ತದೆ ಒಂದು ಲಿಂಬೆ ಹಣ್ಣಿಗೆ 2 ರೂ ನಂತೆ ಸೆಲ್ ಮಾಡಿದರೆ 1.60,0000 ಸಾವಿರ ಗಳಿಸಬಹುದು . ಲಿಂಬು ಗಿಡವು ವರ್ಷ ಪೂರ್ತಿ ಕಾಯಿ ಬಿಡುವುದರಿಂದ ನೀವು 3 ವರ್ಷಗಳ ನಂತರ ಪ್ರತಿದಿನ ಆದಾಯವನ್ನು ಗಳಿಸಬಹುದು.
ಕೋತಂಬರಿ ಸೊಪ್ಪು ಬೆಳೆದು ಹಣಗಳಿಸಿ | Small Agriculture Business Ideas In Kannada
[…] ಲಿಂಬು ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ | Busin… […]
[…] ಸೈಡ್ ಬ್ಯುಸಿನೆಸ್ ಅಂತಾನೆ ಹೇಳಬಹುದು. ಲಿಂಬು ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ | Busin… new business […]