ಉಪ್ಪು ನೀರಿನ ದ್ರಾವಣದಿಂದ ಬೀಜದ ಆಯ್ಕೆ ( Seed selection by using salt water )
ಯಾವುದೇ ಒಬ್ಬ ರೈತ ಆಗಿರಲಿ ತಾನು ಬೆಳೆಯನ್ನು ಬೆಳೆಯಬೇಕು ಅಂದರೆ ಪ್ರಮುಖ ವಾಗಿ ಬೀಜದ ಆಯ್ಕೆ ಅತ್ಯಂತ ಪ್ರಮುಖವಾಗುತ್ತದೆ.
ಆದ್ದರಿಂದ ನಿಮಗೆ ಈ ಲೇಖನದಲ್ಲಿ ಉತ್ತಮ ಗುಣಮಟ್ಟದ ಬೀಜದ ಆಯ್ಕೆ ಹೇಗೆ ಮಾಡಿಕೊಳ್ಳಬೇಕು ಅನ್ನುವುದರ
ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಈ ಮಾಹಿತಿ ನಿಮಗೆ ಇಷ್ಟ ಆದರೆ ತಪ್ಪದೆ ಎಲ್ಲ ರೈತರಿಗೂ ಲೇಖನವನ್ನು ಶೇರ್ ಮಾಡಿ.
ಬಳಸುವ ಬೀಜದ ಪ್ರಮಾಣಕ್ಕನುಗುಣವಾಗಿ ಒಂದು ಬಕೆಟ್ ಅಥವಾ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಒಂದು ಆರೋಗ್ಯವಂತ ಮೊಟ್ಟೆಯನ್ನು ಅದರಲ್ಲಿ ಬಿಡಿ ,
ಕಲ್ಲು ಉಪ್ಪು ಸೇರಿಸಿ ಮಿಶ್ರಣ ಮಾಡಿ . ಒಂದು ಲೀಟರ್ ನೀರಿಗೆ ಸಾಮಾನ್ಯವಾಗಿ 200 ಗ್ರಾಂ ಉಪ್ಪು ಬೇಕಾಗುತ್ತದೆ .
ಮೊಟ್ಟೆ ನಾಲ್ಕಾಣೆ ಅಗಲದಷ್ಟು ನೀರಿನ ಮೇಲೆ ತೇಲುವವರೆಗೂ ಉಪ್ಪನ್ನು ಮಿಶ್ರಣ ಮಾಡಿ . ಮೊಟ್ಟೆ ಮೇಲೆ ತೇಲಿದರೆ ಆಗ ಬೀಜದ ಆಯ್ಕೆಗೆ ದ್ರಾವಣ ತಯಾರಿದೆ ಎಂದರ್ಥ . ಈಗ ಭತ್ತ / ರಾಗಿ ಬೀಜವನ್ನು ದ್ರಾವಣದಲ್ಲಿ ನೆನೆಸಿ , ಜೋಳು ಮತ್ತು ರೋಗಗ್ರಸ್ತ ಬೀಜಗಳು ಮೇಲೆ ತೇಲುತ್ತವೆ ,
ಅವನ್ನು ಪ್ರತ್ಯೇಕಿಸಿ , ಗುಣಮಟ್ಟದ ಬೀಜವನ್ನು ಸಾಮಾನ್ಯ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಿ.
ಹೀಗೆ ನೀವು ಮಾಡುವುದರಿಂದ ಉತ್ತಮ ಗುಣಮಟ್ಟದ ಬೀಜವನ್ನು ಬಿತ್ತನೆ ಮಾಡಿ ಒಳ್ಳೆಯ ಇಳುವರಿ ಪಡೆಯಬಹುದು.