karnataka krishi । ಪಂಚಗವ್ಯ ತಯಾರಿಸುವ ವಿಧಾನ
ಹಸುವಿನ ಸಗಣಿ , ಗಂಜಲ , ಹಾಲು , ಮೊಸರು ಮತ್ತು ತುಪ್ಪದಿಂದ ತಯಾರಿಸಿದ ದ್ರಾವಣವೇ ಪಂಚಗವ್ಯ
ತಯಾರಿಕೆ ವಿಧಾನ :
10 ಲೀಟರ್ ಗಂಜಲ , 7 ಕೆ.ಜಿ ಸಗಣಿ , 3 ಲೀಟರ್ ಹಾಲು , 2 ಲೀಟರ್ ಮೊಸರು ಮತ್ತು 1 ಕೆ.ಜಿ ತುಪ್ಪವನ್ನು ಮಿಶ್ರಮಾಡಿ
ಒಂದು ಪಾತ್ರೆಗೆ ಹಾಕಿ 20-22 ದಿನ ಬಿಡಬೇಕು . ನಂತರ ಸೋಸಿಕೊಂಡು ದ್ರಾವಣ ಸಂಗ್ರಹಿಸಿ ,
100 ಲೀಟರ್ ನೀರಿಗೆ 3 ರಿಂದ 5 ಲೀಟರ್ ಪಂಚಗವ್ಯ ಮಿಶ್ರಮಾಡಿ ಬಳಸಬಹುದು .
ಉಪಯೋಗ :
ಎಲ್ಲಾ ರೀತಿಯ ಬೆಳೆಗಳಿಗೆ ಉಪಯುಕ್ತ . ಪೋಷಕಾಂಶ ಕೊರತೆ ನೀಗಿಸುತ್ತದೆ . ಕೀಟ – ರೋಗಬಾಧೆ ನಿರೋಧಕ ಶಕ್ತಿ ನೀಡುತ್ತದೆ .
ಇಳುವರಿ ವೃದ್ಧಿಸುತ್ತದೆ , ದ್ಯುತಿ ಸಂಶ್ಲೇಷಣೆ ಕ್ರಿಯೆ ವೇಗವಾಗುತ್ತದೆ . ತರಕಾರಿ ಮತ್ತು ಹಣ್ಣುಗಳ ರುಚಿ ಹೆಚ್ಚಾಗುತ್ತದೆ
ಹಾಗೂ ದೀರ್ಘಕಾಲದವರೆಗೆ ತಾಜಾತನ ಉಳಿಯುತ್ತದೆ.
best business ideas in karnataka । ಬಾದಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬಿಸಿನೆಸ್ ಐಡಿಯಾ