Wednesday, November 30, 2022
HomeKannada Newsಕಾರ್ಡ್​​​​ಬೋರ್ಡ್​​ ಮಂಚದ ಮೇಲೆ ಸೆಕ್ಸ್​​​ ಮಾಡೋಕೆ ಆಗಲ್ಲ | ಜು. 21ರವರೆಗೆ ರಾಜ್ಯಾದ್ಯಂತ ಭಾರಿ ಮಳೆ

ಕಾರ್ಡ್​​​​ಬೋರ್ಡ್​​ ಮಂಚದ ಮೇಲೆ ಸೆಕ್ಸ್​​​ ಮಾಡೋಕೆ ಆಗಲ್ಲ | ಜು. 21ರವರೆಗೆ ರಾಜ್ಯಾದ್ಯಂತ ಭಾರಿ ಮಳೆ

ಜು. 21ರವರೆಗೆ ರಾಜ್ಯಾದ್ಯಂತ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮಳೆ ಹೊಡೆತಕ್ಕೆ ನೀರಿನಲ್ಲಿ ಕೊಚ್ಚಿ ಹೋದ ಕಾರುಗಳು

ವರುಣನ ಆರ್ಭಟಕ್ಕೆ ವಾಣಿಜ್ಯ ನಗರಿ ಮುಂಬೈ ಅಕ್ಷರಶಹಃ ತತ್ತರಿಸಿ ಹೋಗಿದೆ. ಭಾರೀ ಮಳೆ ಹೊಡೆತಕ್ಕೆ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಂಧೇರಿ, ಬೋರಿವಾಲಿ, ಕುರ್ಲಾ, ಮಲದ್, ವಿಕ್ರೋಲಿ ಸೇರಿದಂತೆ ಅನೇಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ

ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಸರ್ವಪಕ್ಷ ಸಭೆ; ಆರೋಗ್ಯಕರ ಚರ್ಚೆಗೆ ಆಗ್ರಹ!

ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆ ನಡೆಸಿದ್ದಾರೆ. 33 ಪಕ್ಷಗಳ 40ಕ್ಕೂ ಹೆಚ್ಚು ಮುಖಂಡರ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಮೋದಿ, ಆರೋಗ್ಯಕರ ಚರ್ಚೆಗೆ ಒತ್ತಾಯಿಸಿದ್ದಾರೆ.

#July18 Updanews in kannada

ಕಾರ್ಡ್​​​​ಬೋರ್ಡ್​​ ಮಂಚದ ಮೇಲೆ ಸೆಕ್ಸ್​​​ ಮಾಡೋಕೆ ಆಗಲ್ಲ: ಟೊಕಿಯೋ ಒಲಿಂಪಿಕ್ಸ್​​​​ ವ್ಯವಸ್ಥೆ ಬಗ್ಗೆ ತಕರಾರು

#July18 Updanews in kannada

ಟೊಕಿಯೋ ಒಲಿಂಪಿಕ್ಸ್​ಗೆ ದಿನಗಳಣೆ ಶುರುವಾಗಿದೆ. ಜು.23ರಿಂದ ಆ.8ರವರೆಗೂ ನಡೆಯುವ ವಿಶ್ವ ಕ್ರೀಡಾ ಹಬ್ಬಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಟೊಕಿಯೋದಲ್ಲಿ ಈ ಬಾರಿಯ ಒಲಿಂಪಿಕ್ಸ್​​ ನಡೆಯುತ್ತಿದ್ದ ಜಪಾನ್​​​​​​​ ಆತಿಥ್ಯ ವಹಿಸಿದೆ. ಹೀಗಾಗಲೇ ವಿವಿಧ ದೇಶಗಳ ಸಾವಿರಾರ ಕ್ರೀಡಾಪಟುಗಳು, ಕೋಚ್​​ಗಳು, ಸಿಬ್ಬಂದಿ ಒಲಿಂಪಿಕ್ಸ್​​​​​​ ನಡೆಯುವ ಪ್ರದೇಶವನ್ನು ತಲುಪಿಸಿದ್ದಾರೆ. ತಾಲೀಮು ನಿರತರಾಗಿರುವ ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಜಪಾನ್​​ ವಸ್ತುಗಳ ಬಗ್ಗೆ ವಿದೇಶದ ಕ್ರೀಡಾಪಟುಗಳು ತಕರಾರು ತೆಗೆದಿದ್ದಾರೆ. ಕ್ರೀಡಾಳುಗಳಿಗೆ ಕಾರ್ಡ್​​ಬೋರ್ಡ್​ನಿಂದ ಮಾಡಿದ ಮಂಚವನ್ನು ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕಾದ ಓಟಗಾರ ಪೌಲ್​ ಕೆಲಿಮೋ ತನಗೆ ನೀಡಿರುವ ಕಾರ್ಡ್​​ಬೋರ್ಡ್​​​ ಮಂಚದ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಶೇರ್​​ ಮಾಡಿದ್ದಾರೆ. ಇಂಥ ಬೆಡ್​ಗಳ ಮೇಲೆ ಸೆಕ್ಸ್​ ಮಾಡುವುದು ನಿಜಕ್ಕೂ ಅಪಾಯಕಾರಿ. ಇನ್ಮುಂದೆ ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ. ಓಟದ ಜೊತೆಗೆ ನೆಲದ ಮೇಲೂ ಮಲಗುವುದು ನನ್ನ ಅಭ್ಯಾಸ ಭಾಗವಾಗಲಿದೆ ಎಂದು ತಮಾಷೆ ಮಾಡಿದ್ದಾರೆ. 

ಟೋಕಿಯೋ ತಲುಪಿದ ಭಾರತದ 88 ಕ್ರೀಡಾಪಟುಗಳು ತಂಡ

ಜುಲೈ 23 ರಿಂದ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಇದರಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಈಗಾಗಲೇ ಭಾರತವನ್ನು ಪ್ರತಿನಿಧಿಸಲಿರುವ ಆರ್ಚರಿ, ಬ್ಯಾಡ್ಮಿಂಟನ್ ತಂಡ ಸೇರಿದಂತೆ ಒಟ್ಟು 88 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ.

#July18 Updanews in kannada

ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ಲಂಕಾ ತಬ್ಬಿಬ್ಬು

ಭಾನುವಾರ ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಜಾಲ್ತಿಯಾದ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ಬಲಿಷ್ಠ ಟೀಮ್ ಇಂಡಿಯಾ ಬೌಲಿಂಗ್‌ ಎದುರು ಉತ್ತಮ ಆರಂಭವನ್ನೇ ಪಡೆದಿತ್ತು.
ವೇಗಿಗಳಿಗೆ ಪಿಚ್‌ ನೆರವಾಗುತ್ತಿಲ್ಲ ಎಂಬುದನ್ನು ಬಹುಬೇಗನೆ ಅರಿತುಕೊಂಡ ಟೀಮ್ ಇಂಡಿಯಾ ಕ್ಯಾಪ್ಟನ್‌ ಶಿಖರ್‌ ಧವನ್‌, ಕೂಡ ತಮ್ಮ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿದರು.

#July18 Updanews in kannada

ಸಕಲ ಸರ್ಕಾರಿ ಗೌರವದೊಂದಿಗೆ ಜಿ ಮಾದೇಗೌಡರ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಲೀನರಾದ ರೈತ ಹೋರಾಟಗಾರ

ನಿನ್ನೆ ಕೊನೆಯುಸಿರೆಳೆದಿದ್ದ ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವ ಜಿ ಮಾದೇಗೌಡ ಅವರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಇದಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಕ ಮಾಡಿಕೊಡಲಾಗಿತ್ತು.

#July18 Update news in kannada
#July18 Updanews in kannada

ಮತ್ತೆ ಏರಿದ ಕೊರೊನಾ:

#July18 Updanews in kannada
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,157 ಕೇಸ್​ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 518 ಮಂದಿ ಸೋಂಕಿಗೆ ಬಲಿಯಾಗಿದ್ದು,

ಈ ಮೂಲಕ ಮೃತಪಟ್ಟವರ ಸಂಖ್ಯೆ 4,13,609 ಕ್ಕೆ ಏರಿದೆ.

#July18 Update news in kannada

low budget business in karnataka | ಪೆಪ್ಪರ್ ಪೌಡರ್ ಮೇಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

 

business ideas kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments