independence day speech in kannada | ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಹೀಗಿರಲಿ
ವೇದಿಕೆ ಮೇಲಿರುವ ಅಧ್ಯಕ್ಷರೇ, ಅತಿಥಿಗಳೇ, ಮುಖ್ಯ ಗುರುಗಳೇ, ಹಾಗೂ ನನ್ನ ಎಲ್ಲ ಶಿಕ್ಷಕ ವೃಂದವೇ ಮತ್ತು ಊರಿನ ಗ್ರಾಮಸ್ಥರೇ
ನನ್ನ ಎಲ್ಲ ಸಹೋದರರೇ ಮತ್ತು ಸಹೋದರಿಯರೇ
7೫ನೇ ಸ್ವಾತಂತ್ರ್ಯ ದಿನಾಚರಣೆಯ ಸಂತಸದ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ.
ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ .
ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ…..
ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ
ನಮಗೆ 1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು . ಅದಕ್ಕಿಂತ ಮೊದಲು ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದರು .ಬ್ರಿಟಿಷರು ಅಲ್ಲದೆ ಪೋರ್ಚುಗೀಸರು ಡಚ್ಚರು ಫ್ರೆಂಚರು ನಮ್ಮ ದೇಶವನ್ನು ಆಳಿದ್ದಾರೆ .
independence day speech in kannada
ಆದರೆ ಇವರಿಂದ ನಮ್ಮ ದೇಶ ಹೇಗೆ ಸ್ವಾತಂತ್ರವಾಯಿತು ಎಂಬುದನ್ನು ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಬೇಕು .
ನಮ್ಮ ದೇಶ ಸಂಪದ್ಭರಿತ ದೇಶ ಹಲವಾರು ಯುರೋಪಿನ ಸಮುದ್ರಮಾರ್ಗದ ಮೂಲಕ ವ್ಯಾಪಾರ ಮಾಡಲು ಬಂದರು . ನಮ್ಮ ದೇಶದ ರಾಜರು ಅವರಿಗೆ ಅನುಮತಿಯನ್ನು ನೀಡಿದರು .ಆದರೆ ಅವರು ಸುಮ್ಮನೆ ವ್ಯಾಪಾರ ಮಾಡಿಕೊಂಡು ಇರಲಿಲ್ಲ .ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಭಾಗವಹಿಸಲು ಶುರುಮಾಡಿದರು . ನಮ್ಮ ನಮ್ಮಲ್ಲಿ ಯೆ ದ್ವೇಷ ಹುಟ್ಟುವಂತೆ ಮಾಡಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿದರು .
ನಮ್ಮ ದೇಶದಲ್ಲಿರುವ ಸಂಪತ್ತನ್ನು ಅವರ ದೇಶಗಳಿಗೆ ಸಾಗಿಸಿದರು . ಹಲವಾರು ಭಾರತದ ವಿರೋಧಿ ಕಾನೂನುಗಳನ್ನು ತಂದು ನಮ್ಮ ದೇಶವನ್ನು ಸಂಪೂರ್ಣ ತಮ್ಮ ಕೈವಶ ಮಾಡಿಕೊಂಡರು . ಇದೆಲ್ಲದರ ನಡುವೆ ನಮ್ಮ ದೇಶದಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದಂಗೆ ಏಳಲು ಪ್ರಾರಂಭವಾಯಿತು .ಅನೇಕ ಸ್ವಾತಂತ್ರ್ಯ ಸೇನಾನಿಗಳ ಉಗಮವಾಯಿತು . ಇದರ ಸಾಕ್ಷಿಯಾಗಿ 1857 ರಲ್ಲಿ ಮೊದಲ ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು .ಇದಕ್ಕೆ ಕಾರಣ ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಮತ್ತು ಸಹಾಯಕ ಸೈನ್ಯ ಪದ್ಧತಿ ಯಂತಹ ಭಾರತ ವಿರೋಧಿ ನೀತಿಗಳು .
ಇದರ ಸಾಕ್ಷಿಯಾಗಿ 1857 ರಲ್ಲಿ ಮೊದಲ ಭಾರತದ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು .ಇದಕ್ಕೆ ಕಾರಣ ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಮತ್ತು ಸಹಾಯಕ ಸೈನ್ಯ ಪದ್ಧತಿ ಯಂತಹ ಭಾರತ ವಿರೋಧಿ ನೀತಿಗಳು . ಈ ಕಾಯ್ದೆಗಳಿಂದ ಅನೇಕ ರಾಜರು ತಮ್ಮ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು . ಕಿತ್ತೂರುರಾಣಿಚೆನ್ನಮ್ಮ ಜಾನ್ಸಿರಾಣಿ ಲಕ್ಷ್ಮೀಬಾಯಿ ಅನೇಕರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರು . ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ದಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಅಂತ್ಯವಾಗಿ ಬ್ರಿಟಿಷ್ ಸರ್ಕಾರದ ಆಳ್ವಿಕೆ ಪ್ರಾರಂಭವಾಯಿತು
ಮುಂದೆ ಅನೇಕ ಹೋರಾಟಗಳು ನಡೆದವು ಹಲವಾರು ಮಹಾನ್ ನಾಯಕರು ಪ್ರಾಣವನ್ನು ಕಳೆದುಕೊಂಡರು .ಬ್ರಿಟಿಷರ ಆಳ್ವಿಕೆ ಅಂತ್ಯ ಕಾಣಿಸಲೇಬೇಕು ಎಂದು ಪಣತೊಟ್ಟರು .
independence day speech in kannada

ಬಾಲಗಂಗಾಧರ್ ತಿಲಕ್ , ಲಾಲಾ ಲಜಪತ್ ರಾಯ್ , ಚಂದ್ರಶೇಖರ್ ಆಜಾದ್ ಸುಭಾಷ್ ಚಂದ್ರಬೋಸ್ , ಭಗತ್ ಸಿಂಗ ಮಹಾತ್ಮ ಗಾಂಧೀಜಿ ದಾದಾಬಾಯಿ ನವರೋಜಿ ಅಂತಹ ಹಲವಾರು ಮಹಾನ್ ನಾಯಕರು ಹೋರಾಟಕ್ಕೆ ಧುಮುಕಿದರು .
ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಬ್ರಿಟೀಷರಲ್ಲಿ ನಡುಕ ಹುಟ್ಟಿಸಿದರು . ಸುಭಾಷ್ ಚಂದ್ರ ಬೋಸರು ಎರಡನೇ ಮಹಾಯುದ್ಧದಲ್ಲಿ ಸೆರೆಸಿಕ್ಕ ಭಾರತದ ಸೈನಿಕರ ಸಹಾಯದಿಂದ ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಡಿದರು . ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾರತ ದೇಶದ ಸ್ವಾತಂತ್ರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು . 1942 ರಲ್ಲಿ ಭಾರತಬಿಟ್ಟು ತೊಲಗಿ ಎಂಬ ಕ್ರಾಂತಿ ಮೊಳಗಿತ್ತು ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಎಂಬ ಕರೆಕೊಟ್ಟರು . ಹೀಗೆ ಸ್ವಾತಂತ್ರ್ಯದ ಜ್ವಾಲೆ ಇಡೀ ದೇಶದ ತುಂಬಾ ಹರಡಿತು .
ಕೊನೆಗೆ 1947 ಆಗಸ್ಟ್ 15 ರಂದು ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ವಾಯಿತು .
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಹಲವಾರು ಮಹನೀಯರು ಶ್ರಮಿಸಿದ್ದಾರೆ . ಹಲವು ಜನ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ . ಅವರೆಲ್ಲರ ತ್ಯಾಗ ಮತ್ತು ಬಲಿದಾನದ ಪರಿಣಾಮವಾಗಿ ನಾವು ಇಂದು ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ . ಈ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವುದು ಹಾಗೂ ದೇಶವನ್ನು ಶಕ್ತಿಯುತಗೊಳಿಸುವುದು ನಮ್ಮ ಕರ್ತವ್ಯ ಆಗಿದೆ .
ಕೊನೆಯದಾಗಿ ಮತ್ತೊಮ್ಮೆ ತಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿ ಇಷ್ಟೋತ್ತು ಮಾತನಾಡಲು ಅವಕಾಶ ಮಾಡಿಕೊಟ್ಟ ತಮ್ಮೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತಾ ನನ್ನ ಮಾತನ್ನ ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಕರ್ನಾಟಕ.
ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ ೧೫ ರಂದು ಆಚರಿಸಲಾಗುತ್ತದೆ.
ಬ್ರಿಟೀಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು.
ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ.
ದೇಶದ ಹಲವೆಡೆ |ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ.
ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ.
ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು
ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ.
ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.
krushi mahiti kannada । ಉಪ್ಪು ನೀರಿನ ದ್ರಾವಣದಿಂದ ಬೀಜದ ಆಯ್ಕೆ ( Seed selection by using salt water )
busines in karnataka | Waterproofing Membrane ಬ್ಯುಸಿನೆಸ್