ಗೋಡಂಬಿ ಉದ್ಯಮ ಪ್ರಾರಂಬಿಸುವುದು ಹೇಗೆ?
- ಗೋಡಂಬಿ ಉದ್ಯಮ ಪ್ರಾರಂಬಿಸುವುದು ಹೇಗೆ?
- ಗೋಡಂಬಿಯನ್ನು ಎಲ್ಲಿ ಬೆಳೆಯಬಹುದು?
- ಗೋಡಂಬಿ ಬೆಳೆಯನ್ನು ಕೃಷಿ ಮಾಡುವುದು ಹೇಗೆ?
- ಮಣ್ಣು ಮತ್ತು ಹವಾಗುಣ ಹೇಗಿರಬೇಕು?
- ಭೂಮಿಯ ಸಿದ್ಧತೆ ಮತ್ತು ನಾಟಿ?
- ನೀರಾವರಿ ?
- ಮಣ್ಣು ಮತ್ತು ಹವಾಗುಣ
- ಭೂಮಿಯ ಸಿದ್ಧತೆ ಮತ್ತು ನಾಟಿ
- ಕರ್ನಾಟಕಕ್ಕೆ ಶಿಫಾರಸ್ಸು ಮಾಡಿರುವ ಗೋಡಂಬಿ ತಳಿಗಳು
- ಗಿಡಗಳಿಗೆ ಆಕಾರ ಕೊಡುವುದು / ಸವರುವಿಕೆ
ಸಾಮಾನ್ಯವಾಗಿ ಕರಾವಳಿ ಹಾಗು ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಗೇರು ಬೆಳೆ ಅಂದರೆ ಗೋಡಂಬಿಯನ್ನು ಶ್ರೀಮಂತ ಕೃಷಿ ಅಂತಾನೆ ಹೇಳಬಹುದು . ಗೋಡಂಬಿಗೆ ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ತುಂಬಾನೇ ಡಿಮ್ಯಾಂಡ್ ಹೆಚ್ಚಾಗ್ತಾ ಇದೆ.
ಇಂತಹ ಬೆಳೆಯನ್ನು ಬೇರೆ ಬೇರೆ ಪ್ರದೇಶದಲ್ಲಿ ಮಣ್ಣಿನ ಗುಣವನ್ನು ಆದರಿಸಿ ಬೆಳೆಯಬಹುದು ಇದಕ್ಕೆ ಅಳವಡಿಸಿಕೊಳ್ಳಬಹುದುದಾದ ಸುಧಾರಿತ ತಾಂತ್ರಿಕತೆಗಳು ಯಾವುದು ಅಂತ ಈ ಲೇಖನದಲ್ಲಿ ನೀವು ಓದಬಹುದು.
ಗೋಡಂಬಿಯು ಉಷ್ಣವಲಯದ ಒಂದು ಮುಖ್ಯವಾದ ಬೆಳೆ . ಇದು ರಫ್ತು ಗುಣಮಟ್ಟ ಹೊಂದಿರುವ ಮುಖ್ಯ ಬೆಳೆಯಾಗಿದ್ದು ರೂ . 2515 ಕೋಟಿ ಅಂದರೆ ಶೇ . 1.5 ರಷ್ಟು ಭಾರತದಿಂದ ರಫ್ತಾಗುವ ಬೆಳೆಗಳಲ್ಲಿ ಮೌಲ್ಯವನ್ನು ಹೊಂದಿದೆ . ಕಳೆದ 20 ವರ್ಷದಿಂದ ತೋಟಗಾರಿಕೆ ಬೆಳೆಗಳಲ್ಲಿ ಗೋಡಂಬಿಯು ತನ್ನ ಪ್ರಾಮುಖ್ಯತೆಯನ್ನು ಮೆರೆದಿದೆ . ಅಲ್ಲದೇ , ಭಾರತವು ವಿಶ್ವದಲ್ಲಿ ಗೋಡಂಬಿ ಬೆಳೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ . ಮಹಾರಾಷ್ಟ್ರ , ಆಂಧ್ರಪ್ರದೇಶ , ಕರ್ನಾಟಕ , ಗುಜರಾತ್ , ಓರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಭಾರತದಲ್ಲಿ ಗೋಡಂಬಿ ಬೆಳೆಯುವ ಪ್ರಮುಖ ಪ್ರಮುಖ ರಾಜ್ಯಗಳಾಗಿ ಪ್ರಸಿದ್ಧಿಯನ್ನು ಹೊಂದಿವೆ . ಭಾರತದಲ್ಲಿ ಗೋಡಂಬಿ ಬೆಳೆಯುವ ಒಟ್ಟು ಪ್ರದೇಶ 10.55 ಲಕ್ಷ ಹೆಕ್ಟೇರ್ಗಳಿದ್ದು , ವರ್ಷಕ್ಕೆ 8.73 ವರ್ಷಕ್ಕೆ 8.73 ಲಕ್ಷ ಮೆಟ್ರಿಕ್ ಟನ್ ಗೋಡಂಬಿಯು ಉತ್ಪಾದನೆಗೊಳ್ಳುತ್ತಿದೆ .
ಮಣ್ಣು ಮತ್ತು ಹವಾಗುಣ :
ಗೋಡಂಬಿಯನ್ನು ಎಲ್ಲಾ ವಿಧದ ಮಣ್ಣಿನಲ್ಲಿ ಬೆಳೆಯಬಹುದಾದರೂ , ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು , ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣು ಸೂಕ್ತ . ಗೋಡಂಬಿಯನ್ನು ಬೆಳೆಯಲು ಸಮುದ್ರ ಮಟ್ಟದಿಂದ 1000 ಮೀ . ಎತ್ತರದ ಎಲ್ಲಾ ಪ್ರದೇಶಗಳು ಸೂಕ್ತ . ಈ ಬೆಳೆಯು 25 ಸೆ . ನಿಂದ 40 ಸೆ . ರಷ್ಟು ತಾಪಮಾನದವರೆಗೂ ಒಗ್ಗಿಕೊಳ್ಳುತ್ತದೆ . ಈ ಬೆಳೆಯು ಮಣ್ಣಿನಲ್ಲಿ ಕಡಿಮೆ ತೇವಾಂಶವಿದ್ದರೂ ಹೊಂದಿಕೊಂಡು ಬೆಳೆಯಬಲ್ಲದು .
ಭೂಮಿಯ ಸಿದ್ಧತೆ ಮತ್ತು ನಾಟಿ:-
ಹೊಸ ಗೋಡಂಬಿ ತೋಟವನ್ನು ನಿರ್ಮಿಸುವಾಗ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕಳೆಗಳನ್ನು ತೆಗೆದು ಹದಗೊಳಿಸಬೇಕು . ಇದನ್ನು ಮಳೆಗಾಲದ ಮುಂಚಿತವಾಗಿ ಅಂದರೆ ಏಪ್ರಿಲ್ – ಮೇ ತಿಂಗಳಿನಲ್ಲಿ ಕೈಗೊಳ್ಳಬೇಕು . ಭೂಮಿಯ ಸ್ಥಳಾಕೃತಿ , ಫಲವತ್ತತೆ ಮತ್ತು ಮಣ್ಣಿನ ವಿಧವನ್ನು ಆಧರಿಸಿ ಗೋಡಂಬಿಯನ್ನು ವಿವಿಧ ಆಕಾರ ವಿನ್ಯಾಸದಲ್ಲಿ ಬೆಳೆಸಬಹುದು . ಸಾಮಾನ್ಯವಾಗಿ ಚೌಕಾಕಾರ , ಆಯತಾಕಾರ ಮತ್ತು ತ್ರಿಕೋನಾಕಾರ ನಾಟಿ ಪದ್ಧತಿಗಳನ್ನು ಗೋಡಂಬಿಯಲ್ಲಿ ಅನುಸರಿಸುತ್ತಾರೆ .
1. ಚೌಕಾಕಾರ ನಾಟಿ ಪದ್ಧತಿ : ಇದರಲ್ಲಿ ಗಿಡಗಳ ಮತ್ತು ಸಾಲಿನ ಅಂತರ ಸಮಾನವಾಗಿರುತ್ತದೆ . ನಾಲ್ಕು ದಿಕ್ಕುಗಳಲ್ಲೂ ಬೆಳೆದ ಗಿಡಗಳ ಅಂತರವು ಸಮನಾಗಿರುತ್ತದೆ .
2. ಆಯತಾಕಾರ ನಾಟಿ ಪದ್ಧತಿ :
ಈ ಪದ್ಧತಿಯಲ್ಲಿ ಸಾಲು ಮತ್ತು ಗಿಡಗಳ ಅಂತರ ಸಮನಾಗಿರುವುದಿಲ್ಲ . ಗಿಡಗಳನ್ನು ಆಯಾತಾಕಾರದಲ್ಲಿ ನಾಟಿ ಮಾಡಲಾಗುತ್ತದೆ .
ಕರ್ನಾಟಕಕ್ಕೆ ಶಿಫಾರಸ್ಸು ಮಾಡಿರುವ ಗೋಡಂಬಿ ತಳಿಗಳು :-
ಉಳ್ಳಾಲ -1: ಹೆಚ್ಚು ಇಳುವರಿ ( ಗಿಡಕ್ಕೆ 20 ಕಿ.ಗ್ರಾಂ ) ಕೊಡುವ ತಳಿಯಾಗಿದ್ದು ಹಣ್ಣುಗಳು ಹಳದಿ ಮಿಶ್ರಿತ ಕೆಂಪು ಬಣ್ಣದಿಂದಿರುತ್ತವೆ . ಬೀಜಗಳು ಮಧ್ಯಮ ಗಾತ್ರದ್ದಾಗಿರುತ್ತವೆ . ಟೀ ಸೊಳ್ಳೆಯ ಬಾಧೆಯನ್ನು ತಪ್ಪಿಸಿಕೊಳ್ಳುವ ಗುಣ ಹೊಂದಿದೆ .
ಉಳ್ಳಾಲ -2: ಕಡಿಮೆ ಅವಧಿಯಲ್ಲಿ ಕೊಯ್ದು ಮುಕ್ತಾಯವಾಗುವುದು . ಈ ತಳಿಯು ಸರಾಸರಿ 18.5 ಕಿ.ಗ್ರಾಂ ಇಳುವರಿ ಕೊಡುತ್ತದೆ .
ಉಳ್ಳಾಲ -3: ಬೇಗನೆ ಕೊಯ್ಲಿಗೆ ಬರುವ ತಳಿಯಾಗಿದ್ದು ಸರಾಸರಿ 14.5 ಕಿ.ಗ್ರಾಂ ಇಳುವರಿ ಕೊಡುತ್ತದೆ .
ಚಿಂತಾಮಣಿ -1 : ತಡವಾಗಿ ಹೂ ಬಿಡುವ ಈ ತಳಿ ಹಳದಿ ಬಣ್ಣದ ಹಣ್ಣುಗಳನ್ನು ಹೊಂದಿದ್ದು , ಉತ್ತಮ ಗಾತ್ರದ ಬೀಜಗಳನ್ನು ಹೊಂದಿದೆ . 7.50 ಕಿ.ಗ್ರಾಂ ಇಳುವರಿ ಕೊಡುತ್ತದೆ ( ಬಯಲು ಸೀಮೆಗೆ ) ,
ಧನ : ಇದು ಒಂದು ಸಂಕರಣ ತಳಿ ,
ಭಾಸ್ಕರ : ಈ ತಳಿಯನ್ನು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದವರು ಕರಾವಳಿ ಪ್ರದೇಶಕ್ಕೆ ಸೂಕ್ತವೆಂದು ಬಿಡುಗಡೆ ಮಾಡಿರುತ್ತಾರೆ . ಒಂದು ಮರ ಸರಾಸರಿ ವಾರ್ಷಿಕ ಇಳುವರಿ 10 ಕಿ.ಗ್ರಾಂ ಕೊಡುತ್ತದೆ . ` ಚೀ ‘ ಸೊಳ್ಳೆಗಳ ಬಾಧೆಯನ್ನು ತಪ್ಪಿಸಿಕೊಳ್ಳುವಂತಹ ಗುಣ ಹೊಂದಿದೆ .
ವೆಂಗುರ್ಲಾ -4 : ಇದೊಂದು ಸಂಕರಣ ತಳಿಯಾಗಿದ್ದು ಮರವೊಂದರಿಂದ ಸುಮಾರು 20 ಕಿ.ಗ್ರಾಂ . ಬೀಜದ ಇಳುವರಿ ಪಡೆಯಬಹುದಾಗಿದೆ.
ನೀರಾವರಿ : ನಾಟಿ ಮಾಡಿದ ಮೊದಲೆರಡು ವರ್ಷ ಗಿಡಗಳಿಗೆ ನಿಯಮಿತವಾಗಿ ನೀರು ಒದಗಿಸುವುದರಿಂದ ( 10-15 ದಿನಗಳಿಗೊಮ್ಮೆ ಗಿಡಗಳ ಬೆಳವಣಿಗೆ ಉತ್ತಮವಾಗಿರುತ್ತದೆ . ಇದೇ ರೀತಿಯಾಗಿ ಇಳುವರಿ ಪ್ರಾರಂಭವಾದ ನಂತರದ ದಿನಗಳಲ್ಲಿ ಮುಖ್ಯವಾಗಿ ಬೇಸಿಗೆಯಲ್ಲಿ 15 ದಿನಕೊಮ್ಮೆ ನೀರು ಒದಗಿಸುವುದರಿಂದ ಇಳುವರಿ ಚೆನ್ನಾಗಿ ಬರುತ್ತದೆ .
ಗಿಡಗಳಿಗೆ ಆಕಾರ ಕೊಡುವುದು / ಸವರುವಿಕೆ :
ನಾಟಿಯ ನಂತರ ಪ್ರಾರಂಭದ 2 ರಿಂದ 3 ವರ್ಷಗಳಲ್ಲಿ ಭೂಮಿಯಿಂದ 3 ಅಡಿ ಎತ್ತರದವರೆಗೆ ಬರುವ ಎಲ್ಲಾ ಕವಲುಗಳನ್ನು ತೆಗೆಯುವುದರಿಂದ ಗಿಡದ ಬೆಳವಣಿಗೆ ಬಲಿಷ್ಠವಾಗಿ ಗಿಡಕ್ಕೆ ಉತ್ತಮ ಆಕಾರ ದೊರೆಯುವುದು , ಹಳೆ ಗೋಡಂಬಿ ತೋಟದಲ್ಲಿ ಕಂಡು ಬರುವ ಅಡ್ಡಾ – ದಿಡ್ಡಿ ಬೆಳೆದ , ಹೆಚ್ಚು ಒತ್ತಾಗಿ ಬೆಳೆದ ಮತ್ತು ಕೀಟ – ರೋಗದ ಬಾಧೆಗೆ ತುತ್ತಾದ ಗೆಲ್ಲುಗಳನ್ನು ತೆಗೆಯುತ್ತಾ ಇರಬೇಕು . ಇದರಿಂದ ಗಾಳಿ – ಬೆಳಕು ಗಿಡಗಳಿಗೆ ಚೆನ್ನಾಗಿ ದೊರತು ಹೆಚ್ಚಿನ ಇಳುವರಿಗೆ ಸಹಕಾರಿಯಾಗುವುದು .
ಅಂತರ ಬೆಳೆ : ನಾಟಿ ಮಾಡಿದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಗಿಡಗಳು ನೇರವಾಗಿ ಬೆಳೆಯಲು ಕೆಳಗಿನ ರೆಂಬೆಗಳನ್ನು ತೆಗೆದು , ಸ್ಥಳೀಯ ಹವಾಗುಣ ಮತ್ತು ಭೂ ಗುಣ ಗಳಿಗೆ ಸೂಕ್ತವಾದ ತರಕಾರಿಗಳಾದ ಹುರುಳಿ , ಬಟಾಣಿ , ಶೇಂಗಾ , ಗೆಣಸು , ಶುಂಠಿ ಮತ್ತು ಉದ್ದು ಬೆಳೆಗಳನ್ನು ಪ್ರಾರಂಭಿಕ 4 ವರ್ಷಗಳಲ್ಲಿ ಆದಾಯ ಪಡೆಯಲು ಬೆಳೆಯಬಹುದು . ಅಲ್ಲದೇ , ಮರಗಳು ದೊಡ್ಡದಾದ ಮೇಲೆ ಕರಿಮೆಣಸು ಮತ್ತು ವೆನಿಲ್ಲಾ ಬಳ್ಳಿಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು ,
ಕೊಯ್ಲು ಮತ್ತು ಇಳುವರಿ : ನಾಟಿ ಮಾಡಿದ ಮೂರನೇ ವರ್ಷದಿಂದ ಇಳುವರಿ ಪ್ರಾರಂಭಗೊಂಡು ಸುಮಾರು 8-10 ವರ್ಷದ ಪ್ರತಿ ಮರದಿಂದ ವರ್ಷವೊಂದಕ್ಕೆ ಸರಾಸರಿ 8-10 ಕಿ.ಗ್ರಾಂ ಗೇರು ಬೀಜವನ್ನು ಯಬಹುದು . ಪ್ರತಿ ಹೆಕ್ಟೇರಿಗೆ 1.5 ರಿಂದ 1.7 ಟನ್ ಗೋಡಂಬಿ ಬೀಜ ಪಡೆಯಬಹುದು . ಬಿದ್ದ ಹಣ್ಣುಗಳಿಂದ ಬೀಜಗಳನ್ನು ಬಿಡಿಸಿ , ಎರಡರಿಂದ ಮೂರು ದಿವಸ ಬಿಸಿಲಿನಲ್ಲಿ ಒಣಗಿಸಿ , ಸಂಗ್ರಹಣೆ ಮಾಡುವುದು ಸೂಕ್ತ .
ಗೋಡಂಬಿ ಉದ್ಯಮ ಪ್ರಾರಂಬಿಸುವುದು ಹೇಗೆ?
Vermiculture Business Ideas In Kannada | ಎರೆಹುಳು ಗೊಬ್ಬರವನ್ನು ತಯಾರಿಸುವ ಬ್ಯುಸಿನೆಸ್ ಐಡಿಯಾ
[…] […]
[…] […]
[…] […]
[…] […]