Monday, September 26, 2022
HomeAgricultureಜೀವಾಮೃತವನ್ನು ಮನೆಯಲ್ಲಿ ತಯಾರಿಸುವುದು ಹೇಗೆ ? how to make jeevamrut at home

ಜೀವಾಮೃತವನ್ನು ಮನೆಯಲ್ಲಿ ತಯಾರಿಸುವುದು ಹೇಗೆ ? how to make jeevamrut at home

ಜೀವಾಮೃತವನ್ನು ಮನೆಯಲ್ಲಿ ತಯಾರಿಸುವುದು ಹೇಗೆ ?

ಬೀಜೋಪಚಾರ ಮಾಡಲು ನಿಮಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಆಗುತ್ತಿಲ್ಲವೇ? ಹಾಗಾದರೆ ನೀವೇ ಮನೆಯಲ್ಲಿ ಬೀಜಾಮೃತವನ್ನು ತಯಾರಿಸಿಕೊಳ್ಳಿ ಹಾಗೂ ಬೀಜಗಳಿಗೆ ಶಕ್ತಿ ನೀಡಿ ಹೆಚ್ಚಿನ ಇಳುವರಿ ಪಡೆಯಿರಿ.
ಸಸ್ಯಗಳು, ಮೊಳಕೆ ಅಥವಾ ಬಿತ್ತನೆ ಮಾಡುವ ಬೀಜಗಳಿಗೆ ಮಾಡುವ ಬೀಜೋಪಚಾರದ ದ್ರಾವಣಕ್ಕೆ ಬೀಜಾಮೃತ ಎನ್ನಲಾಗುತ್ತದೆ. 
ಇದನ್ನು ಜೀವಾಮೃತ ತಯಾರಿಸುವ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ. 
how to make jeevamrut at home
how to make jeevamrut at home
ರೈತರಿ ಸಾಕಷ್ಟು ಸಹಾಯ ಮಾಡುವಂತಹ ಜೀವಾಮೃತವನ್ನು ಅದೆಷ್ಟೋ ರೈತರಿಗೆ ಖರೀದಿಸಲು ಹಣವಿರುವುದಿಲ್ಲ , ಹಣವಿಲ್ಲ ಎಂದು ಸುಮ್ಮನೆ ಕುಳಿತರೆ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ ಆದ್ದರಿಂದ ರೈತ ಅಲ್ಲೋ ಇಲ್ಲೋ ಒಂದಿಷ್ಟು ಹಣವನ್ನು ಸಾಲ ಮಾಡಿ ತಂದು ಕೃಷಿ ಮಾಡವುವಂತಹ ಪರಿಸ್ಥಿತಿ ರೈತನದ್ದು . ಹೀಗೆ ಸಾಲ ಮಾಡಿ ತಂಡ ಹಣವನ್ನು ತೀರಿಸುತ್ತೀನಿ ಅನ್ನುವ ನಂಬಿಕೆ ಕೂಡ ಇರುವುದಿಲ್ಲ ಯಾಕಂದರೆ ತಾನು ಬೆಳೆದ ಬೆಳೆಗೆ ಒಂದುವರ್ಷ ಬೆಲೆ ಇದ್ದರೆ ಇನ್ನೊಂದು ವರ್ಷ ಬೆಲೆ ಇರುವುದಿಲ್ಲ ಅದರ ಮದ್ಯೆ ಪ್ರಕೃತಿ ವಿಕೋಪ . ಆದ್ದರಿಂದ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡಬೇಕು ಅಂದರೆ ನೀವು ನಿಮ್ಮ ಕೃಷಿಗೆ ಬೇಕಾದ ವಸ್ತುವನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿಕೊಳ್ಳುವುದರಿಂದ ನೀವು ಒಂದಿಷ್ಟು ಹಣವನ್ನು ಉಳಿಸಬಹುದು. ಅದರಂತೆಯೇ ನೀವು ನಿಮಗೆ ಬೇಕಾದ ಜೀವಾಮೃತವನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ ಬಳಸಿ ಅನ್ನುವುದು ನಮ್ಮ ಸಲಹೆ.

ಬೀಜಾಮೃತ ಬಳಸುವಿಕೆ:

ಬೀಜಾಮೃತವನ್ನು ಯಾವುದೇ ಬೆಳೆಗಳ ಬೀಜಗಳಿಗೆ ಬೀಜೋಪಚಾರಕ್ಕಾಗಿ ಬಳಸಿ.
ಬೀಜಗಳಿಗೆ ಹಚ್ಚಿ ಕೈಯಿಂದ ಚೆನ್ನಾಗಿ ಕಲಸಿ
ಚೆನ್ನಾಗಿ ಒಣಗಿಸಿ ಮತ್ತು ಬಿತ್ತನೆಗಾಗಿ ಬಳಸಿ.
ದ್ವಿದಳ ಧಾನ್ಯದ ಬೀಜಗಳನ್ನು, ಅದ್ದಿ ಮತ್ತು ಒಣಗಿಸಿ.
how to make jeevamrut at home
how to make jeevamrut at home
 ಬೀಜಾಮೃತದಿಂದ ಬೀಜಗಳಿಗೆ ಅಥವಾ ಯಾವುದೇ ಸಸಿಗಳಿಗೆ ಬಳಸುವ ಚಿಕಿತ್ಸೆಯಾಗಿದೆ.
ಮಳೆಗಾಲದ ನಂತರ ಸಸ್ಯಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ಶಿಲೀಂಧ್ರದಿಂದ ಹಾಗೂ ಮಣ್ಣಿನಿಂದ ಹರಡುವ ಮತ್ತು ಬೀಜದಿಂದ ಹರಡುವ ರೋಗಗಳಿಂದ ಯುವ ಬೇರುಗಳನ್ನು ರಕ್ಷಿಸುವಲ್ಲಿ ಬಿಜಾಮೃತ ಪರಿಣಾಮಕಾರಿಯಾಗಿದೆ.
ಬೀಜಾಮೃತ ತಯಾರಿಸಲು ಬೇಕಾಗುವ ಸಾಮಗ್ರಿಗಳು: 
ನೀರು
ದೇಸಿ ಹಸುವಿನ ಗಂಜಲ
ದೇಸಿ ಹಸುವಿನ ಸಗಣಿ
ಸುಣ್ಣ
ಒಂದು ಹಿಡಿ ಫಲವತ್ತಾದ ಮಣ್ಣು

ಬೀಜಾಮೃತ ತಯಾರಿಸುವ ವಿಧಾನ :

how to make jeevamrut at home

50 ಲೀಟರ್ ಡ್ರಮ್ ಅಥವಾ ಮಣ್ಣಿನ ಮಡಿಕೆ ತೆಗೆದುಕೊಳ್ಳಿ

ಅದಕ್ಕೆ 50 ಲೀಟರ್ ನೀರು ಹಾಕಿ

5 ಕೆ.ಜಿ. ಸಗಣಿಯನ್ನು ಬಟ್ಟೆಯಲ್ಲಿ ಕಟ್ಟಿ ಒಂದು ರಾತ್ರಿ ನೆನೆ ಹಾಕಿ .

1 ಲೀಟರ್ ನೀರಿನಲ್ಲಿ 100 ಗ್ರಾಂ ಸುಣ್ಣವನ್ನು ಇದೇ ರೀತಿ ನೆನೆ ಹಾಕಿ .

ಮರು ದಿನ 5 ಲೀಟರ್ ಗಂಜಲ ಹಾಗೂ ನೆನೆ ಹಾಕಿದ ಸುಣ್ಣವನ್ನು ಸಗಣಿ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ .

ತಯಾರಾದ ದ್ರಾವಣವನ್ನು ಭತ್ತ , ರಾಗಿ , ಕಾಳುಗಳು , ಸಸಿಗಳು , ಬಾಳೆಕಂದು ಇತ್ಯಾದಿಗಳ ಉಪಚಾರಕ್ಕೆ ಬಳಸಿ .

ನೀವು ಇದರ ಕುರಿತು ಇನ್ನಷ್ಟು ಹೆಚ್ಚಿನಮಾಹಿತಿ ಕೃಷಿ ಇಲಾಖೆಯಲ್ಲಿ ತಿಳಿದುಕೊಂಡು ಈ ಜೀವಾಮೃತವನ್ನು ತಯಾರಿಸಿ ಬಳಸಬಹುದು .

ಕಾಳುಮೆಣಸು  (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್ | black pepper powder making business ideas in kannada

new business ideas

20 business ideas for village or small town in kannada

wholesale business ideas in kannada

wholesale business ideas in kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments