Monday, September 26, 2022
HomeBusinessಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿ |mushrooms

ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿ |mushrooms

ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿ

 

ಅಣಬೆಯ ಕುರಿತು ಮಾಹಿತಿ ?

ಅಣಬೆಯಿಂದ ಏನೇನು ಮಾಡಬಹುದು?

ಆಣಬೆಯಲ್ಲಿರುವ ಪೋಷಕಾಂಶಗಳು

ಅಣಬೆ ಬೆಳೆಯುವುದು ಹೇಗೆ?

ಎಷ್ಟು ಬಂಡವಾಳ ಬೇಕು ?

ಬೀಜ ಎಲ್ಲಿ ಸಿಗುತ್ತದೆ ?

ಮಾರ್ಕೆಟಿಂಗ್ ಮಾಡುವುದು ಹೇಗೆ ?

ಅಣಬೆ ಸಂಸ್ಕರಣೆ ಮತ್ತು ಮಾರುಕಟ್ಟೆ:

ಎಷ್ಟು ಲಾಭ ಗಳಿಸಬಹುದು ?

500 ರೂ ಹಣ ಗಳಿಸಲು ಇಲ್ಲಿ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಕೊಟ್ಟು ಲಾಗಿನ್ ಆಗಿ 500ರೂ ಪಡೆಯಿರಿ

FREE 500 Rs CLICK HERE

ಅಣಬೆಯ ಕುರಿತು ಮಾಹಿತಿ ?

ಅಣಬೆ ಕೃಷಿ ಪ್ರಕೃತಿಯಲ್ಲಿ ಅಣಬೆಗಳ ಪರಿಚಯ ಮಾನವನಿಗೆ ಅವನ ಚರಿತ್ರೆಯಷ್ಟೇ ಹಳಿಯದು . ಇದನ್ನು ಮನವನು ಪುರಾತನ ಕಾಲದಿಂದ ಉಪಯೋಗಿಸಿಕೊಂಡು ಬಂದಿದ್ದಾನೆ . ಅಣಬೆಯನ್ನು ಒಂದು ಆಹಾರ ಪದಾರ್ಥವಾಗಿ ಗುರುತಿಸಿ ವಾಣಿಜ್ಯ ಬೆಳೆಯಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತಿದೆ .

ಹೆಚ್ಚಿನ ಜನಸಂಖ್ಯೆ ಇರುವ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಸಾರಜನಕ ಭರಿತ ಆಣಬೆಯನ್ನು ಆಹಾರ ಪದ್ಧತಿಯಲ್ಲಿ ಅಳವಡಿಸುವುದು ಅತ್ಯಾವಶ್ಯಕವಾಗಿದೆ . ನಮ್ಮ ದೇಶದಲ್ಲಿ ಮುಖ್ಯವಾಗಿ ಉಪಯೋಗಿಸುವ ಏಕದಳ ಧಾನ್ಯಗಳಲ್ಲಿ ಸಸಾರಜನಕದ ಕೊರತೆ ಹೆಚ್ಚು ಇರುತ್ತದೆ . ಆದುದರಿಂದ ಹೆಚ್ಚಿನ ಸಾರಜನಕವನ್ನು ಪೂರೈಸುವ ಅಣಬೆಯು ಮುಚ್ಚಿವಾಗಿ ಸಸ್ಯಹಾರಿಗಳಿಗೆ ಒಂದು ಅಮೂಲ್ಯ ಆಹಾರವಾಗುತ್ತಿದೆ .

ಅಣಬೆ ಭೂಮಿಯ ಮೇಲ್ಸ್ ಮತ್ತು ಕೆಲವೊಮ್ಮೆ ಭೂ ಒಳ ಪದರ ದಿಂದ ಹೊರಚಿಮ್ಮುವ ರಸವತ್ತಾದ ಶಿಲೀಂಧ್ರದ ಹೂ ಗೋಧಿಶ es ಗಳೆಂದು ಪರಿಗಣಿಸಬಹುದು . ಅಣಬೆಯಲ್ಲಿ ಖಾದ್ಯ ಅಣಬೆಗಳು , ಔಷಧಿ ಆಬೆಗಳು ಮತ್ತು ವಿಷಾಣಬೆಗಳು ಎಂದು ಮೂರು ವಿಧಗಳು .

ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿರುತ್ತವೆ . ವಿಷಾಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ . ಅನೇಕ ಜಾತಿಯ ವಿಷಾಣಜಿಗಳು ಜೀವಕ್ಕೆ ಮಾರಕವಾಗಿರುತ್ತವೆ . ಸ್ವಾಭಾವಿಕವಾಗಿ ಬೆಳೆಯುವ ಅಣಬೆಗಳನ್ನು ತಿನ್ನಲು ಯೋಗವೆಂದು ತಿಳಿಯದೇ ಸೇವಿಸಬಾರದು .

mushrooms business ideas

 

ಅಣಬೆಯಿಂದ ಏನೇನು ಮಾಡಬಹುದು?

ಅಣಬೆಯನ್ನು ಹಸಿಯಾಗಿಯೇ ನಾನಾ ರೀತಿಯ ಅಡುಗೆಯಲ್ಲಿ ಬಳಸಬಹುದು. ಅಣಬೆಯಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳು ಇರುವುದರಿಂದ ನೀರಿನಲ್ಲಿ 20 ನಿಮಿಷ ಬೇಯಿಸಿ ಕುಡಿಯಬಹುದು.

ಇಲ್ಲದಿದ್ದರೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವ ಬಗೆಯ ಅಡುಗೆಯಲ್ಲಾದರೂ ಪುಡಿ ಬೆರೆಸಬಹುದು. ಶೇಂಗಾ, ಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಪುಡಿ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

ಅಣಬೆ ಹೆಚ್ಚು ಮೃದುವಾಗಿರುವುದರಿಂದ ಎಲ್ಲಾ ವಿಧದ ಮಸಾಲೆ ಪರಿಮಳವನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹಾಗಾಗಿ ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಹುದು. ಅತ್ಯಧಿಕ ಪ್ರೊಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.

mushrooms business ideas

ಆಣಬೆಯಲ್ಲಿರುವ ಪೋಷಕಾಂಶಗಳು

1. ಅಣಬೆಯಲ್ಲಿ ಶೇ . 30 ರಷ್ಟು ಸಸಾರಜನಕವಿದ್ದು , ಹೆಚ್ಚು ಆವಶ್ಯಕ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ .

2. ಹೆಚ್ಚಿನ ಮಟ್ಟದಲ್ಲಿ ಅತ್ಯುತ್ತಮ ಜೀವಸತ್ವ ಬಿ . ( ಥೈಯಾಮಿನ್ ) , ಜೀವಸತ್ವ ಬೈ , ( ರೈಬೋಪ್ಲೇವಿನ್ ) , ಜೀವಸತ್ವ ಬಿ . ( ನಿಯಾಸಿನ್ ) ಮತ್ತು ಜೀವಸತ್ವ ಸಿ ( ಆಸ್ಕಾರ್ಬಿಕ್ ಆಮ್ಲ ) ಗಳು ಇವೆ .

3 . 100 ಗ್ರಾಂ . ಅಣಬೆಯಲ್ಲಿ ದೇಹಕ್ಕೆ ಬೇಕಾದ ಅವಶ್ಯಕ ಧಾತು ಗಳಾದ ರಂಜಕ ( 1.42 ಗ್ರಾಂ . ) , ಪೊಟ್ಯಾಷ್ ( 4.20 ಗ್ರಾಂ . ) , ತಾಮ್ರ , ( 1.35 ಗ್ರಾಂ . ) , ಕಬ್ಬಿಣಾಂಶ ( 10.೧ ಗ್ರಾಂ . ) , ಕ್ಯಾಲ್ಸಿಯಂ ( 70.0 ಮಿ.ಗ್ರಾಂ . ) , ಜೊತೆಗೆ ಇತರೆ ಲವಣಗಳು ಇರುತ್ತವೆ .

4. ಬೇರೆ ಯಾವುದೇ ಸಸ್ಯಜನ್ಯ ವಸ್ತುಗಳಲ್ಲಿ ಸಾಮಾನ್ಯವಾಗಿ ಸಿಗದಿರುವಂತಹ ಪೊಲಿಕ್ ಆಮ್ಲ ಅಣಬೆಯಲ್ಲಿದ್ದು , ಹಾನಿಕಾರಕ ರಕ್ತಹೀನತೆಯನ್ನು ನಿವಾರಿಸುವುದು .

5. ಅಣಬೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಶರ್ಕರಪಿಷ್ಟ ಇರುವುದರಿಂದ ಎಲ್ಲಾ ವಯಸ್ಸಿನ ಜನರು , ಸಕ್ಕರೆ ಕಾಯಿಲೆ ಇರುವವರು ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಚಿಸುವ ಜನರು ಪಯೋಗಿಸಬಹುದು .

6. ಇದರಲ್ಲಿ ನಾರಿನಂಶವು ಹೆಚ್ಚಾಗಿರುತ್ತದೆ .

7. ಆಣಬೆಗಳಲ್ಲಿ ಕೊಲೆಸ್ಟ್ರಾಲ್ ಬದಲಾಗಿ ಇ‌ಗೋಸ್ಟಿರಾಲ್ ಎಂಬ ರಾಸಾಯನಿಕವಿದ್ದು , ಇದು ಮನುಷ್ಯನ ದೇಹದಲ್ಲಿ ‘ D ‘ ಜೀವಸತ್ವ ವಾಗಿ ಪರಿವರ್ತನೆಯಾಗಬಲ್ಲದು .

ಅಣಬೆ ತನ್ನದೇ ಆದ ಸುವಾಸನೆಯನ್ನು ಹೊಂದಿರುವ ಒಂದು ಅತ್ಯುತ್ತಮ ವಾದ ಆಹಾರ . ಇದನ್ನು ದಿನನಿತ್ಯದ ಆಹಾರದ ಜೊತೆಯಲ್ಲಿ ಬಳಸಿದರೆ ಆಹಾರದ ಪೌಷ್ಟಿಕಾಂಶವನ್ನು ಹೆಚ್ಚಿಸಬಹುದು . ಅಣಬೆ ಕೇವಲ ಸೇವಿಸಲಿಕ್ಕೆ ಮಾತ್ರ  ಯೋಗ್ಯವೆಂದು  ತಿಳಿಯಬೇಡಿ , ಇದು ಇತರ ಉದ್ದಿಮೆಗಳಲ್ಲಿಯೂ ಸಹ ಪ್ರಾಮುಖ್ಯತೆಯನ್ನು ಪಡೆದಿದೆ .

ಇದು ಅನೇಕ ಔಷಧಿಗಳ ತಯಾರಿಕೆಯಲ್ಲಿ ಗಿಡಮೂಲಿಕೆಯಾಗಿ ಬಳಸಲ್ಪಡುತ್ತದೆ . ಆಚೆಯಿಂದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ದಿನನಿತ್ಯ ಸೇವಿಸುವುದರ ಜೊತೆಗೆ ಕೆಲವೊಂದು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು , ಹಾಗಾಗಿ ಅಣಬೆ ಬೇಸಾಯ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲದೇ ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು , ಆರ್ಥಿಕ ಸಬಲತೆಯನ್ನು ಹೊಂದಲು ಉತ್ತಮ ಮಾರ್ಗ ಎಂದು ಹೇಳಿದರೆ ತಪ್ಪಾಗಲಾರದು .

ಗ್ರಾಮೀಣ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬೇಕಾದರೆ ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಂಡು , ಆದಾಯ ತರುವಂತಹ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದರಿಂದ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಹಾಗೂ ಕುಟುಂಬ ಸದಸ್ಯರ ಆರೋಗ್ಯಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ .

ಭೂರಹಿತ ಕಾರ್ಮಿಕರು , ನಿರುದ್ಯೋಗಿ ಯುವಕ – ಯುವತಿಯರು ಮತ್ತು ಮಹಿಳೆಯರು ಅತಿ ಕಡಿಮೆ ಖರ್ಚಿನಲ್ಲಿ ಲಭ್ಯವಿರುವಷ್ಟು ಜಾಗದಲ್ಲಿಯೇ ಕೃಷಿಗೆ ಪೂರಕವಾಗಿ ಅಣಬೆ ಬೇಸಾಯದಿಂದ ಹೆಚ್ಚಿನ ಆದಾಯ ಪಡೆಯಬಹುದು .

ಅಣಬೆ ಬೆಳೆಯಲ್ಲಿ ಬರುವ ಮುಖ್ಯ ಹಂತ ಗಳೆಂದರೆ ಅಣಬೆ ಬೀಜ ಬಿತ್ತನೆ , ಬೆಳೆ ನಿರ್ವಹಣೆ , ಬೆಳೆ ಕಟಾವು ಮತ್ತು ಮಾರಾಟ .. ಬೀಜಗಳನ್ನು ರೈತರೇ ತಯಾರಿಸಿಕೊಳ್ಳುವುದು ಕಷ್ಟವಾಗುತ್ತದೆ . ಆದ್ದರಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಹತ್ತಿರದ ಆಣಬೆ ಪ್ರಯೋಗಾಲಯಗಳಿಂದ ಕೊಂಡುಕೊಂಡು ಬೇಸಾಯ ಮಾಡುವುದು ಸೂಕ್ತ .

ಅಣಬೆ ಬೇಸಾಯದಲ್ಲಿ ಲಾಭಾಂಶವಿದ್ದರೂ , ಆಣಬೆ ಮಾಂಸಾಹಾರ ವೆಂಬ ತಪ್ಪು ಕಲ್ಪನೆ , ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದಿರುವುದು , ಹೆಚ್ಚಿನ ರೈತರಲ್ಲಿ ಈ ಬೇಸಾಯದ ಬಗ್ಗೆ ಅರಿವಿಲ್ಲದಿರುವುದರಿಂದ ಆಣಬೆ ಕೃಷಿ ಜನಪ್ರಿಯ ವಾಗುತ್ತಿಲ್ಲ . ಇದಕ್ಕಾಗಿ ಹತ್ತಿರದ ತೋಟಗಾರಿಕೆ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಸೂಕ್ತ ತಾಂತ್ರಿಕ ಮಾಹಿತಿಯನ್ನು ಪಡೆದು ಚಟುವಟಿಕೆ ಪ್ರಾರಂಭಿಸಬಹುದು .

mushrooms business ideas

ಆಣಬೆ ಬೇಸಾಯ ವಿಧಾನಗಳು

ಅಣಬೆ ಬೆಳೆಯಲು ಕೃಷಿ ಭೂಮಿ ಬೇಕು ಅಂತ ಇಲ್ಲ ನಿಮ್ಮ ಮನೆಯ ತಾರಸಿ ಮೇಲೆ ಬೆಳೆಯಬಹುದು ಅಥವಾ ನಿಮ್ಮ ಮನೆಯಪಕ್ಕ ಇರುವ ಕಾಲಿ ಜಮೀನಲ್ಲಿ ಶೇಡ್ ನಿರ್ಮಿಸಿ ಬೆಳೆಯಬಹುದು . ಅದರ ಸುತ್ತಮುತ್ತಲ ಸ್ಥಳವನ್ನು ಸ್ವಚ್ಛವಾಗಿ ಇಡಬೇಕು .

ಅಣಬೆ ಬೆಳೆಯುವ ಸ್ಥಳವನ್ನು ಬೆಳೆ ಇಡುವುದಕ್ಕೆ 2 ದಿವಸಗಳಿಗೆ ಮುನ್ನ ಶೇ . 5 ರ ಫಾರಲಿನ್ ದ್ರಾವಣ ಮತ್ತು ಶೇ . 0.6 ನುವಾನ್‌ನಿಂದ ಸಿಂಪಡಿಸಿ ಸ್ವಚ್ಛಗೊಳಿಸ ಬೇಕು . ಕೊಠಡಿಯ ವಾತಾವರಣದಲ್ಲಿ ತೇವಾಂಶವನ್ನು ಹೆಚ್ಚಿಸುವ / ಕಡಿಮೆ ಮಾಡುವ ವ್ಯವಸ್ಥೆ ಇರಬೇಕು ಮತ್ತು ಕೊಠಡಿಯ ಕಿಟಕಿಗಳನ್ನು ನೈಲಾನ್ ಪರದೆಗಳಿಂದ ಮುಚ್ಚಬೇಕು .

ಮೊದಲು ಬತ್ತದ ಹುಲ್ಲನ್ನು ೪ರಿಂದ ೫ ಸೆಂ.ಮೀ. ಉದ್ದದ ತಂಡುಗಳಾಗಿ ಕತ್ತರಿಸಿ ಸುಮಾರು ೩ರಿಂದ ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಹುಲ್ಲಿನಲ್ಲಿರುವ ನೀರನ್ನೆಲ್ಲಾ ಬಸಿದು ಕುದಿಯುವ ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಬೇಕು. ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದನ್ನು ಒಣಗಿಸಿ ಹೆಚ್ಚಿನ ನೀರಿನ ಅಂಶವನ್ನು ತೆಗೆಯಬೇಕು.

ಒಣಗಿದ ಹುಲ್ಲನ್ನು ಪಾಲಿಥೀನ್ ಚೀಲಗಳಿಗೆ ತುಂಬಬೇಕು, ಒಂದು ಚೀಲಕ್ಕೆ ಒಂದು ಕೆ.ಜಿ.ಯಷ್ಟು ಹುಲ್ಲು ಹಾಗೂ ೫೦೦ ಗ್ರಾಮ್ ಅಣಬೆ ಬೀಜವನ್ನು ಹಂತ ಹಂತವಾಗಿ ಸಮಾನಾಗಿ ಹರಡಿ ತಂಬಬೇಕು. ಚೀಲದ ಬಾಯನ್ನು ಭದ್ರವಾಗಿ ಕಟ್ಟಬೇಕು. ನಂತರ ಚೀಲಗಳನ್ನು ತಂಪಾಗಿರುವ ಸ್ಥಳದಲ್ಲಿ ೨೦ರಿಂದ ೩೦ ದಿನಗಳ ಕಲ ಇಡಬೇಕು. ಆಗ ಅಣಬೆ ಬೀಜ ಮೊಳಕೆಯೊಡೆದು ಬೆಳೆದಿರುತ್ತದೆ.

ಚೀಲಗಳಿಗೆ ಬ್ಲೇಡ್‌ನಿಂದ ರಂಧ್ರಗಳನ್ನು ಮಾಡಬೇಕು. ದಿನಕ್ಕೆ ೨ರಿಂದ ೩ ಬಾರಿ ನೀರು ಚಿಮುಕಿಸುತ್ತಿರಬೇಕು. ಚೀಲಕ್ಕೆ ರಂಧ್ರಗಳನ್ನು ಮಾಡಿದ ಒಂದು ವಾರದ ಒಳಗೆ ಹುಲ್ಲಿನ ಪಿಂಡಿಯ ಸುತ್ತಲೂ ಅಣಬೆ ಕಾಣಸಿಗುತ್ತದೆ. ಪ್ರತಿ ೩ ದಿನಕ್ಕೊಮ್ಮೆ ಅಣಬೆ ಕೊಯಿಲು ಮಾಡಬಹುದು.

 ಬೇರೆ ಬೇರೆ ಅಣಬೆಗೆ ತನ್ನದೇ ಆದ ಹವಾಗುಣ ಬೇಕಾಗುತ್ತದೆ ಮತ್ತು ಬೇಸಾಯ ಕ್ರಮವು ಪ್ರತಿ ಅಣಬೆಗೆ ಬೇರೆ ಬೇರೆಯಾಗಿರುತ್ತದೆ . ಅವುಗಳಲ್ಲಿ ಚಿಪ್ಪು ಅಣಬೆ ಮತ್ತು ಹಾಲಣಬೆ ಬೇಸಾಯ ಮಾಡುವ ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ .

mushrooms business ideas

mushrooms business ideas

ಚಿಪ್ಪು ಆಣಬೆಯ ಬೇಸಾಯ:

ಈ ಅಣಬೆ ಬೇಸಾಯವನ್ನು ಸುಲಭವಾಗಿ ಹೆಚ್ಚು ಖರ್ಚಿಲ್ಲದೇ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಮಾಡಬಹುದಾಗಿದ್ದು , ಇದನ್ನು ಬೇಸಾಯ ಮಾಡುವ ಶಕ್ತಿ ಈ ಕೆಳಗಿನಂತಿದೆ .

ಒಣ ಭತ್ತದ ಹುಲ್ಲನ್ನು 2 ರಿಂದ 3 ಇಂಚಿನಷ್ಟು ಚಿಕ್ಕ ತುಂಡುಗಳಾಗಿ ಕತ್ತರಿಸಿ 8-10 ಗಂಟೆಗಳ ಕಾಲ ಶುಚಿಯಾದ ತಣ್ಣೀರಿನಲ್ಲಿ ನೆನೆಸಬೇಕು .

ನೆನೆಸಿದ ಹುಲ್ಲನ್ನು ಕುದಿಯುವ ನೀರಿನಲ್ಲಿ ಅರ್ಧಗಂಟೆ ಕಾಲ ಕುದಿಸಿ , ಕ್ರಿಮಿಕೀಟಗಳ ಭಾದೆಯಿಂದ ಮುಕ್ತಗೊಳಿಸಬೇಕು .

ನಂತರ ನೆರಳಿನಲ್ಲಿ ಒಣಗಿಸಿದ ಹುಲ್ಲನ್ನು , ಪಾಲಿಥಿನ್ ಚೀಲದಲ್ಲಿ ಪದರ ಪದರವಾಗಿ ತುಂಬಿ ಪ್ರತಿ ಬಾರಿ ಬೀಜವನ್ನು ಸುತ್ತಲು ಹಾಕಬೇಕು . ಕೊನೆಯದಾಗಿ ಬೀಜಗಳನ್ನು ಮೆಲ್ಪದರಿನ ಮೇಲೆ ಹರಡಬೇಕು .

ಪಾಲಿಥಿನ್ ಚೀಲದ ಬಾಯನ್ನು ನೂಲಿನ ದಾರದಿಂದ ಕಟ್ಟಬೇಕು ಅಥವಾ ಪಿವಿಸಿ ಪೈಪಿನ ತುಂಡನ್ನು ಹಾಕಿ ಅದರ ಬಾಯಿಗೆ ಹತ್ತಿಯನ್ನು ಸುತ್ತಿಡಬೇಕು

ದಾರದಿಂದ ಕಟ್ಟಿದರೆ ತುಂಬಿದ ಚೀಲದ ತಳಭಾಗದಲ್ಲಿ ಹಾಗೂ ಮೇಲೆ ಮೇಲೆ 5 ರಿಂದ 6 ಸಣ್ಣ ರಂಧ್ರಗಳನ್ನು ಮಾಡಬೇಕು . ಪಿವಿಸಿ ಪೈಪು ಹಾಕಿದರೆ ರಂಧ್ರಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ . ನಂತರ ಈ ಚೀಲಗಳನ್ನು ತಂಪಾದ ಕತ್ತಲೆಯ ಕೊಠಡಿಯಲ್ಲಿ

20 ದಿನಗಳ ಕಾಲ ಇಡಬೇಕು ಕೊಠಡಿಯ ತಾಪಮಾನ 24 = 26 ಡಿ.ಸೆ. ಮತ್ತು ತೇವಾಂಶ ಶೇ . 80-85 ಇರುವಂತೆ ನೋಡಿಕೊಳ್ಳಬೇಕು . ಈ ಅವಧಿಯಲ್ಲಿ ಶಿಲೀಂಧ್ರವು ಹುಲ್ಲಿನ ಮೇಲೆ ಹಕ್ಕಿಯಂತೆ ಬೆಳೆದಿರುತ್ತದೆ . 20 ದಿನಗಳ ನಂತರ ಪಾಲಿಥಿನ್ ಚೀಲವನ್ನು ಕತ್ತರಿಸಿ ತೆಗೆದು ನಂತರ ಹುಲ್ಲಿನ ಮುದ್ದೆಯ ಮೇಲೆ ಪ್ರತಿದಿನ 2-3 ಬಾರಿ ತಣ್ಣೀರನ್ನು ಚಿಮುಕಿಸಬೇಕು .

ಚೀಲವನ್ನು ಬಿಚ್ಚಿದ 4-5 ದಿನಗಳಲ್ಲಿ ಅಣಬೆ ಮೊಳಕಿಗಳು ಕಾಣಿಸಿಕೊಂಡು ನಂತರ ಒಂದೆರಡು ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ .

ಚೆನ್ನಾಗಿ ಅರಳಿದ ಆಣಬೆಯನ್ನು ಚಾಕುವಿನ ಸಹಾಯದಿಂದ ನಿಧಾನವಾಗಿ ಇತರೆ ಭಾಗಕ್ಕೆ ತೊಂದರೆಯಾಗದಂತೆ ಕೆಯ್ದು ಮಾಡಿ , ಮತ್ತೆ ಹುಲ್ಲಿನ ಮುದ್ದೆಯ ಮೇಲೆ ನೀರು ಚಿಮುಕಿಸುತ್ತಿದ್ದರೆ , 5-6 ದಿನಗಳಲ್ಲಿ ಎರಡನೇ ಬಾರಿ ಮೊಳಕೆಗಳು ಬಂದು , ಅಣಬೆಗಳು ಕೊಯ್ಲಿಗೆ ಬರುತ್ತವೆ . ಪ್ರತಿ ಚೀಲದಿಂದ 2 ರಿಂದ 3 ಬೆಳೆಗಳನ್ನು ತೆಗೆಯಬಹುದು .

mushrooms business ideas

mushrooms business ideas

ಹಾಲಣಬೆ ಬೇಸಾಯ:

ಚಿಪ್ಪಣಬೆಯ ರೀತಿ ಹಾಲು ಅಣಬೆಯನ್ನು ಬೇಸಾಯ ಮಾಡಬಹುದು , ಆದರೆ ಅಣಬೆ ಬೀಜ ಹಾಕಿ ಶಿಲೀಂಧ್ರ ಹುಲ್ಲಿನ ಮೇಲೆ ಬೆಳೆದಾದ 20 ದಿನಗಳ ನಂತರ ಚೀಲದ ಬಾಯಿ ತೆರೆದು ಆ ಹುಲ್ಲಿನ ಪೆಂಡಿಯ ಮೇಲೆ ಪಾಶ್ಚರೀಕರಿಸಿದ ಮಣ್ಣಿನ ಮಿಶ್ರಣ ( ಶೇ . 20 ರಷ್ಟು ಮರಳು ಹಾಗೂ ಶೇ . 60-70 ತೇವಾಂಶ ಹೊಂದಿರುವ ಮಣ್ಣು ಮತ್ತು ಶೇ . 5 ರಷ್ಟು ಕ್ಯಾಲ್ಸಿಯಂ ಕಾರ್ಬೋನೇಟ್ ಸೇರಿಸಿದ ಮಿಶ್ರಣ ) ವನ್ನು 1 ರಿಂದ 1.5 ಅಂಗುಲ ದಪ್ಪದ ಹೊದಿಕೆ ಹೊದಿಸಬೇಕು .

ಇದು ಹಾಲಣಬೆ ಬೆಳೆಯಲು ಪೂರಕ ಮೇಲ್ಸ್ ಒದಗಿಸಿ ಕೊಡುತ್ತದೆ . 15 ರಿಂದ 20 ದಿನಗಳ ನಂತರ ಆಣಬೆ ಮೊಳಕೆ ಯೊಡೆಯಲು ಪ್ರಾರಂಭಿಸುತ್ತದೆ . ಈ ಹಂತದಲ್ಲಿ 28 ರಿಂದ 35 ಡಿ.ಸೆ. ಉಷ್ಣಾಂಶ ಮತ್ತು ಶೇ . 80 ರಿಂದ 90 ರಷ್ಟು ತೇವಾಂಶವಿರುವಂತೆ ನೋಡಿಕೊಳ್ಳಬೇಕು . 5 ರಿಂದ 7 ದಿವಸಗಳಲ್ಲಿ ಅಣಬೆ ಬಲಿತು ಕಲಾವು ಮಾಡಲು ಸಿದ್ಧವಾಗುತ್ತದೆ .

ಎಷ್ಟು ಬಂಡವಾಳ ಬೇಕು ?

ಪ್ರಾರಂಭದಲ್ಲಿ ಅಣಬೆ ಬೀಜ ಖರೀದಿ ಮಾಡಲು -Rs.5000

ಪ್ಲಾಸ್ಟಿಕ್ ಕವರ್ ಹಾಗೆ ಇತರೆ ಖರ್ಚು- Rs.5000

ಬೀಜ ಎಲ್ಲಿ ಸಿಗುತ್ತದೆ ?

ಕೃಷಿ ಇಲಾಖೆ ಹಾಗೆ ನಿಮ್ಮ ಹತ್ತಿರದ ಬೀಜ ದೊರೆಯುವ ಸ್ಥಳದಲ್ಲಿ ಖರೀದಿಸಬಹುದು

 

ಅಣಬೆ ಸಂಸ್ಕರಣೆ ಮತ್ತು ಮಾರುಕಟ್ಟೆ:

ಅಣಬೆಗಳು ಕೊಯ್ದು ಮಾಡಿದೆ ನಂತರ ತಾಜಾ ಸ್ಥಿತಿಯಲ್ಲಿ ಉಳಿಯುವುದಿಲ್ಲ . ಅವುಗಳನ್ನು ಸಂರಕ್ಷಿಸಿಡಬೇಕು ಇಲ್ಲವೇ ತಕ್ಷಣ ಮಾರುಕಟ್ಟೆಗೆ ರವಾನಿಸಬೇಕು . ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸಬೇಕಾದರೂ ಸಂರಕ್ಷಣೆ ಕ್ರಮಗಳನ್ನು ನಿರ್ವಹಿಸಬೇಕು .

1. ಒಣಗಿಸುವುದು : ಅಣಬೆಗಳನ್ನು ಬಿಸಿಲು ಅಥವಾ ಓವನ್ ಉಪಯೋಗಿಸಿ ಸುಮಾರು 45-50 ಡಿಗ್ರಿ ಸೆ.ನಲ್ಲಿ ಒಣಗಿಸಿ ಪುಡಿ ಮಾಡಿ , ಆಣಬೆಯ ಸೂಪರ್ ತಯಾರಿಸಲು ಉಪಯೋಗಿಸಬಹುದು ..

mushrooms business ideas

mushrooms business ideas

ಮಾರ್ಕೆಟಿಂಗ್ ಮಾಡುವುದು ಹೇಗೆ ?

ನಿಮ್ಮ ಹತ್ತಿರದ ಹಾಪ್ಕಾಮ್ಸ್ ಸೇರಿದಂತೆ ತರಕಾರಿ ಅಂಗಡಿ ಸೇರಿದಂತೆ ಹೋಟೆಲ್ ಗಳಿಗೆ ಮಾರಾಟ ಮಾಡಿ ಆದಾಯಗಳಿಸಬಹುದು

ಎಷ್ಟು ಲಾಭ ಗಳಿಸಬಹುದು?

 ವೈಟ್ ಓಯಿಸ್ಟರ್ (ಚಿಪ್ಪಣಬೆ) ಪ್ರಭೇದದ ಒಂದು ಕೆ.ಜಿ ಅಣಬೆ ಬೀಜಕ್ಕೆ ₹ 70ರಿಂದ 150 ದರವಿದೆ. ಒಂದು ಕೆ.ಜಿ. ಬೀಜದಲ್ಲಿ ಕನಿಷ್ಠ ಎಂಟು, ಗರಿಷ್ಠ 10 ಕೆ.ಜಿ ಹಸಿ ಅಣಬೆ ದೊರೆಯುತ್ತದೆ. ಕೊಯ್ದ ಅಣಬೆಗಳನ್ನು ಪೇಪರ್ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ. ಒಂದು ಕೆ.ಜಿ ಅಣಬೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ₹ 250 ಬೆಲೆಯಿದೆ. ಒಣಗಿಸಿದ ಅಣಬೆಗೆ ₹ 3000 ತನಕ ಬೆಲೆಯಿದೆ.

mushrooms business ideas

new business ideas

ಖಾರದ ಪೌಡರ್ ಮೇಕಿಂಗ್ ಬ್ಯುಸಿನೆಸ್ | Chilli Powder Making Business

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments