- ಶ್ರೀಗಂಧ ಕೃಷಿ ಮಾಡುವುದು ಹೇಗೆ ?
- ಎಷ್ಟು ಬಂಡವಾಳ ಬೇಕು ?
- ಶ್ರೀಗಂಧ ಸಸಿ ಎಲ್ಲಿ ಸಿಗುತ್ತದೆ ?
- ಕೃಷಿ ಮಾಡುವುದು ಹೇಗೆ ?
- ಶ್ರೀಗಂಧ ಕ್ಕೆ ರಕ್ಷಣೆ ಹೇಗೆ ?
- ಲಾಭ ಎಷ್ಟು ಗಳಿಸಬಹುದು ?
ಶ್ರೀಗಂಧ ಕೃಷಿ ಮಾಡುವುದು ಹೇಗೆ ?
ಶ್ರೀಗಂಧ ಮರವು ಅತ್ಯಂತ ಶ್ರೇಷ್ಠ ಮರವಾಗಿದೆ ಹಾಗೆ ಅತ್ಯಂತ ಬೆಲೆ ಬಾಳುವ ಮರವಾಗಿದೆ , ಕಾಂಡ ಬೀರು , ಎಲೆ, ಬೀಜ, ಪ್ರತಿಯೊಂದು ಭಾಗವು ತುಂಬಾನೇ ಬೆಲೆಬಾಳುವಂತವಾಗಿವೆ.
ಇದಕ್ಕಿಂತ ಮುಂಚೆ ಶ್ರೀಗಂಧ ಬೆಳೆಯುವುದು ಕಾನೂನು ಪ್ರಕಾರ ನಿಷಿದ್ಧವಾಗಿತ್ತು ಆದರೆ ಈಗ ಕಾನೂನನ್ನು ಸಡಿಲಿಕೆ ಮಾಡಿದ್ದೂ ಈಗ ಖಾಸಗಿ ಭೂಮಿಯಲ್ಲಿ ಬೆಳೆಸಬಹುದು ಇದನ್ನು ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತದೆ.
ಶ್ರೀಗಂಧ ಮರವು ಪರಾವಲಂಬಿ ಆಗಿದ್ದು ನೀವು ಈ ಮರವನ್ನು ನೆಡಬೇಕಾದರೆ ಪಕ್ಕದಲ್ಲಿ ರೈತರು ಬೇರೆಲ್ಲಾ ರೀತಿಯ ಕೃಷಿಯ ಮೂಲಕ ಲಕ್ಷಗಳ ಆದಾಯವನ್ನು ಗಳಿಸಲು ಸಾಧ್ಯವಿದೆಯೋ ಅದೇ ರೀತಿ ಶ್ರೀಗಂಧದ ಮರವನ್ನು ಬೆಳೆಸುವ ಮೂಲಕ ಕೂಡಾ ಆದಾಯವನ್ನು ಗಳಿಸಬಹುದಾಗಿದ್ದು, ಒಂದು ಮರದಿಂದ ಸುಮಾರು ಐದು ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಬಹುದಾಗಿದೆ.
ಎಷ್ಟು ವರ್ಷದ ಶ್ರೀಗಂಧದ ಸಸಿ ನೆಡಲು ಸೂಕ್ತ ?
ಒಂದೂವರೆ ವರ್ಷದ ಶ್ರೀಗಂಧದ ಸಸಿ ಗಳು ನೆಡಲು ಉಪಯುಕ್ತ ವಾಗಿರುತ್ತವೆ . ಇದು ಆ ವೇಳೆಗೆ ಎರಡೂ ವರೆ ಅಡಿಗಳಷ್ಟು ಬೆಳೆದಿರುತ್ತದೆ. ಇದನ್ನು ಯಾವ ಕಾಲದಲ್ಲಾದರೂ ನೆಡಬಹುದು. ಆದರೆ ಚಳಿಗಾಲದಲ್ಲಿ ನೆಡಲು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಈ ಸಸಿಯ ಮೇಲೆ ನೀರು ಹರಿಯದಂತೆ ಎಚ್ಚರ ವಹಿಸಬೇಕಾಗುತ್ತದೆ . ಈ ಗಿಡಕ್ಕೆ ವಾರ ಒಂದಕ್ಕೆ ಸುಮಾರು ಎರಡರಿಂದ ಮೂರು ಲೀಟರ್ ನೀರಿನ ಅವಶ್ಯಕತೆಯಷ್ಟೇ ಇರುತ್ತದೆ.
ಶ್ರೀಗಂಧ ಸಸಿ ಎಲ್ಲಿ ಸಿಗುತ್ತದೆ ? :
ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ಸಿಗುತ್ತದೆ ಹಾಗೆ ನರ್ಸರಿಗಳಲ್ಲಿ ಸಿಗುತ್ತವೆ.
ಶ್ರೀಗಂಧ ಬೆಳೆಯುವ ಕ್ರಮ :-
ಶ್ರೀಗಂಧ ಬೆಳೆಯುವ ಕ್ರಮ ಹೀಗಿದೆ ‘8 ರಿಂದ 10 ಅಡಿಗಳ ಅಂತರದಲ್ಲಿ ಶ್ರೀಗಂಧ ಸಸಿ ನೆಡಬೇಕು. ಮೂರು ಅಡಿ ಆಳದ ಗುಂಡಿಯಲ್ಲಿ ಸಸಿ ನಾಟಿ ಮಾಡಬೇಕು. ಸಸಿ ನೆಟ್ಟು ಎರಡು ಅಡಿ ಮಾತ್ರ ಗುಂಡಿಯನ್ನು ಸಾವಯವ ಗೊಬ್ಬರದಿಂದ ಮುಚ್ಚಬೇಕು. ಶ್ರೀಗಂಧ ಆರಂಭದಲ್ಲಿ ಪರಾವಲಂಬಿಯಾಗಿದ್ದು ಪಕ್ಕದಲ್ಲೇ ಬೇರೆ ಜ್ಯಾತಿಯ ಮರವನ್ನು ನೆಡಬೇಕು ಅಂದರೆ ತೊಗರಿ ಅಥವಾ ನುಗ್ಗೆ ಗಿಡ , ಬೇವು ಅಥವಾ ಸಿಲ್ವರ್ ಟೀಕ್, ರಕ್ತ ಚಂದನ, ಹಾಗೆ ಇತರೆ ಶ್ರೀಗಂಧದ ಮರಕ್ಕಿಂತ ಕಡಿಮೆ ಎತ್ತರ ಬೆಳೆಯುವ ಮರವನ್ನು ಬೆಳೆಸಬೇಕಾಗುತ್ತದೆ. ಅವುಗಳ ಸಹಾಯದಿಂದ ಶ್ರೀಗಂಧ ಸಸಿ ಬೆಳೆಯುತ್ತದೆ’
ನೀರು ಪೂರೈಕೆ?
ಶ್ರೀಗಂಧದ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ, ಆದ್ದರಿಂದಲೇ ಇದನ್ನು ನೀರು ನಿಲ್ಲುವಂತಹ ಪ್ರದೇಶದಲ್ಲಿ ಶ್ರೀಗಂಧದ ಕೃಷಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಮಾಡಿದರೆ ಸಸಿಗಳು ಕೊಳೆತು ಹೋಗುವ ಸಾಧ್ಯತೆಗಳಿರುತ್ತವೆ.
‘2ರಿಂದ ಮೂರು ವರ್ಷಗಳ ಕಾಲ ನಿಯಮಿತವಾಗಿ ನೀರು ಹಾಕಬೇಕು. ನಂತರ ವಾರಕ್ಕೊಮ್ಮೆ ನೀರು ಹಾಕಿದರೂ ಗಿಡ ಸಹಿಸಿಕೊಳ್ಳುತ್ತದೆ. ಆರಂಭಿಕ ಪೋಷಣೆ ಅತಿ ಮುಖ್ಯ. ಮೂರು ವರ್ಷಗಳ ನಂತರ ಆಸರೆ ಇರುವ ತೊಗರಿ, ನುಗ್ಗೆ ಗಿಡಗಳನ್ನು ಕಟಾವು ಮಾಡಬಹುದು. ನಂತರ ಸ್ವಾವಲಂಬಿಯಾಗಿ ಬೆಳೆದುಕೊಳ್ಳುತ್ತದೆ.
how to cultivate sandalwood
ಶ್ರೀಗಂಧ ಬೆಳೆಯಲು ಎಷ್ಟು ವರ್ಷ ಬೇಕು ?
ಶ್ರೀಗಂಧದ ಮರಗಳು ಬೆಳೆದು ಸಿದ್ಧವಾಗಲು 12 ರಿಂದ 15 ವರ್ಷಗಳ ಕಾಲಾವಧಿ ಬೇಕಾಗುತ್ತದೆ .
ಶ್ರೀಗಂಧ ಮಾರಾಟ ಮಾಡುವುದು ಹೇಗೆ ?
. ಇವುಗಳ ಮಾರಾಟವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಹಾಗೂ ಇಲ್ಲಿ ಖಾಸಗಿ ಏಜನ್ಸಿಗಳ ಯಾವುದೇ ಪಾತ್ರವೂ ಕೂಡಾ ಇರುವುದಿಲ್ಲ. ಖಾಸಗಿ ಏಜನ್ಸಿಗಳು ಶ್ರೀಗಂಧವನ್ನು ರಫ್ತು ಮಾಡುವಂತಿಲ್ಲ. ಇದನ್ನು ಕೇವಲ ಸರ್ಕಾರವೇ ನಿರ್ವಹಣೆ ಮಾಡುವುದು. ಶ್ರೀಗಂಧದ ಮರಗಳು ಬೆಳೆದು ಸಿದ್ಧವಾದ ಮೇಲೆ ಇದರ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ. ಅವರ ನಿರ್ದೇಶನದಂತೆ ಮರಗಳನ್ನು ಕತ್ತರಿಸಲಾಗುತ್ತದೆ.
ಶ್ರೀಗಂಧ ಕ್ಕೆ ರಕ್ಷಣೆ ಹೇಗೆ ?
5ರಿಂದ 6 ವರ್ಷದ ನಂತರ ಅರಣ್ಯ ಇಲಾಖೆಯಲ್ಲಿ ಮಾಹಿತಿಯನ್ನು ಪಡೆದು ಸೂಕ್ತವಾದ ಭದ್ರತೆಯನ್ನು ಮಾಡಿಕೊಳ್ಳಬೇಕು.
ಎಷ್ಟು ಲಾಭ ಗಳಿಸಬಹುದು?
೧೨ ವರ್ಷದಿಂದ ೧೫ ವರ್ಷಗಳಲ್ಲಿ ಈ ಮರಗಳು ಕಟಾವಿಗೆ ಬರುತ್ತದೆ ಆ ಸಮಯದಲ್ಲಿ ಒಂದು ಮರಕ್ಕೆ ೪ ರಿಂದ ೫ ಲಕ್ಷ ಆದಾಯವನ್ನು ಗಳಿಸಬಹುದು
೩ ರಿಂದ ೪ ವರ್ಷ ಆದನಂತರ ಶ್ರೀಗಂಧದ ಮರದಲ್ಲಿ ಬಿಡುವಂತ ಬೀಜದಿಂದ ಲಕ್ಷ ಲಕ್ಷ ಆದಾಯವನ್ನು ಗಳಿಸಬಹದು.
how to cultivate sandalwood
ಮಿಶ್ರ ಬೇಸಾಯವಾಗಿ ಏನು ಕೃಷಿ ಮಾಡಬಹುದು?
ಚೆಂಡು ಹೂವು , ನುಗ್ಗೆಗಿಡ ಹೀಗೆ ಬೇರೆ ಬೇರೆ ಮಿಶ್ರ ಬೇಸಾಯ ಮಾಡುವುದರಿಂದ ನೀವು ಉತ್ತಮ ಆದಾಯವನ್ನು ಪಡೆಯಬಹುದು ಈ ಮರಕ್ಕೆ ಕಾಳುಮೆಣಸು ಬಳ್ಳಿ ಬೆಳೆಸಬಹುದು ಇದರಿಂದ ನೀವು ೩ ವರ್ಷದನಂತರ ಲಕ್ಷ ಲಕ್ಷ ಹಣವನ್ನು ಇದರಲ್ಲೂ ಗಳಿಸಬಹುದು .
ಬಾಳೆ ಎಲೆ ಮಾರಾಟ ಬ್ಯುಸಿನೆಸ್ ಐಡಿಯಾ | Banana Leaf Business Idea
[…] […]
[…] […]
Good