Tuesday, September 20, 2022
HomeAgricultureಪೇರಳೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ | Guava Fruit Farming | Agriculture...

ಪೇರಳೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ | Guava Fruit Farming | Agriculture Business Ideas

ಪೇರಳೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ

ಪೇರಳೆ ಕೃಷಿ ಮಾಡುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಾರ್ಕೆಟಿಂಗ್ ಮಾಡುವುದು ಹೇಗೆ ?

ಎಷ್ಟು ಲಾಭವನ್ನು ಗಳಿಸಬಹುದು?

ಪೇರಳೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ | Guava Fruit Farming | Agriculture Business Ideas

ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಆರಾಮವಾಗಿ ಬೆಳೆಸಬಹುದಾದಂತಹ ಲಾಭದಾಯಕ ತೋಟಗಾರಿಕಾ ಹಣ್ಣಿನ ಬೆಳೆಗಳಲ್ಲಿ ಪೇರಳೆಯೂ ಒಂದು. ಸಾಮಾನ್ಯವಾಗಿ ಎಲ್ಲೆಡೆಯೂ ಬೆಳೆಯಲಾಗುತ್ತದೆ. ಪೇರಳೆ ಮೂಲತಃ ಅಮೆರಿಕದ ಉಷ್ಣವಲಯದ ಬೆಳೆ. ತಿನ್ನಲು ಹಾಗೂ ಸಂಸ್ಕರಿತ ಉತ್ಪನ್ನ ತಯಾರಿಸಲು ಇದು ಬಳಕೆಯಾಗುತ್ತದೆ. ಇದರ ಆರೋಗ್ಯಕರ ಗುಣ ಅಗಣಿತ.

ರೈತನು ಯಾವಾಗಲೂ ಒಂದೇ ಬೆಳೆಗೆ ಅಂಟಿಕೊಂಡಿರಬಾರದು. ಆಹಾರ ಬೆಳೆಗಳಾದ ಭತ್ತ, ರಾಗಿ, ಜೋಳ, ಗೋಧಿ ಮುಂತಾದವುಗಳನ್ನು ಮಾತ್ರ ಬೆಳೆದರೆ ಅವನು ಅಭಿವೃದ್ಧಿ ಹೊಂದಿದ ರೈತನಾಗುವುದು ಅಸಾಧ್ಯ. ತನ್ನ ಹೊಲದಲ್ಲಿ ವೈವಿಧ್ಯಮಯ ಬೆಳೆಗಳನ್ನು ಕೂಡಿಸಿಕೊಂಡು ಅಭಿವೃದ್ಧಿಪಡಿಸಿದರೆ ಮಾತ್ರ ಅವನ ಆರ್ಥಿಕ ಸ್ಥಿತಿಗತಿ ಅಭಿವೃದ್ಧಿಯಾಗಲು ಸಾಧ್ಯ. ಇದನ್ನು ಪುಷ್ಟೀಕರಿಸುವ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಕೃಷಿಕ ಇಂದು ಸ್ವಲ್ಪವಾದರೂ ಸಂಪಾದನೆಯ ರುಚಿ ಕಾಣದಿದ್ದರೆ ಕೃಷಿ ಕ್ಷೇತ್ರದಲ್ಲಿ ಬೆಳೆಯಲು ಅಸಾಧ್ಯ.

ಪೇರಲ ಒಂದು ಸ್ವಾದಿಷ್ಟಕರವಾದ , ಸಮಶೀತೋಷ್ಣ ವಲಯದ ಹಣ್ಣಿನ ಬೆಳೆಯಾಗಿದ್ದು , ನಮ್ಮ ರಾಜ್ಯದಲ್ಲಿ ಬಹಳ ಜನಪ್ರಿಯವಾಗುತ್ತಿದೆ . ಈ ಹಣ್ಣಿನಲ್ಲಿ “ ” ಜೀವಸತ್ವದ ಪ್ರಮಾಣ ಹೆಚ್ಚಾಗಿದ್ದು ಕ್ಯಾಲ್ಸಿಯಂ ಮತ್ತು ರಂಜಕ ಮುಂತಾದ ಖನಿಜಾಂಶಗಳು ಕೂಡ ಇವೆ , ಉತ್ತರ ಕರ್ನಾಟಕದಲ್ಲಿ ಈ ಬೆಳೆ ಬಹಳ ಚೆನ್ನಾಗಿ ಬರುತ್ತದೆ . ಪೇರಲ ಹಣ್ಣನ್ನು ಸಂಸ್ಕರಿಸಿ ಜಾಮ್ , ಜೆಲ್ಲಿ ಮತ್ತು ನೆಕ್ಟರ್‌ ತಯಾರಿಸುತ್ತಾರೆ.

ಈ ಕೃಷಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಈ ಲೇಖನದಲ್ಲಿ ಮಾಡುತ್ತೇನೆ. ಈ ಲೇಖನ ಇಷ್ಟವಾದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗು ಶೇರ್ ಮಾಡಿ.

ಪೇರಳೆ ಕೃಷಿ ಮಾಡುವುದು ಹೇಗೆ?

ಪೇರಳೆ ಕೃಷಿಯನ್ನು ಮಾಡಲು ಮಣ್ಣು ಸೇರಿದಂತೆ ಅದರ ತಳಿ ಹಾಗೆ ಆ ತಳಿಗಳು ಎಲ್ಲಿ ಸಿಗುತ್ತವೆ ಅದಕ್ಕೆ ಬೇಕಾಗುವ ಗೊಬ್ಬರ ಹೀಗೆ ಹಲವಾರು ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಹಾಗೆ ಮಾರ್ಕೆಟಿಂಗ್ ಮಾಡುವುದು ಹೇಗೆ , ಲಾಭ ಗಳಿಸಬಹುದು ಎಲ್ಲ ತಿಳಿದುಕೊಳ್ಳಬೇಕು.

Guava Fruit Farming

ಹವಾಗುಣ ಮತ್ತು ನಾಟಿಕಾಲ :

ಒಣ ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ .

ಹೆಚ್ಚಾಗಿ ಮಳೆ ಬರುವ ಪ್ರದೇಶದಲ್ಲಿ ಗಿಡದ ಬೆಳವಣಿಗೆ ಉತ್ತಮವಾಗಿದ್ದು ಹಣ್ಣುಗಳು ಕಳಪೆ ಮಟ್ಟದ್ದಾಗಿರುತ್ತವೆ .

ಜೂನ್ – ಜುಲೈ ತಿಂಗಳುಗಳು ನಾಟಿಗೆ ಯೋಗ್ಯ .

ಎಷ್ಟು ಬಂಡವಾಳಬೇಕು?

2 ಎಕರೆ ಗೆ ಸುಮಾರು 1 ಲಕ್ಷ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ.

ಮಣ್ಣು :

ಇದು ಚೆನ್ನಾಗಿ ನೀರು ಬಸಿದು ಹೋಗುವಂತಹ ಯಾವುದೇ ತರಹದ ಮಣ್ಣಿನಲ್ಲಿ ಬೆಳೆಯುತ್ತದೆ .

ಕೆಂಪಗೋಡು ಮಣ್ಣು ಅತೀ ಸೂಕ್ಷ.

Guava Fruit Farming

Guava Fruit Farming

ತಳಿಗಳು

1 , ಅಲಹಾಬಾದ್ ಸಫೇದ :

ಇದರ ಹಣ್ಣುಗಳು ಗುಂಡಾಗಿದ್ದು ,

ಅವು ನುಣುಪಾದ ಸಿಪ್ಪೆ , ಬಿಳಿ ತಿರುಳು ಮತ್ತು ಕಡಿಮೆ ಬೀಜಗಳನ್ನು ಹೊಂದಿವೆ .

 

2. ಸರ್ಬಾರ ( ಲಕ್ಕೋ -49 ) :

ತಳಿಯ ಗಿಡಗಳು ಗಿಡ್ಡದಾಗಿ ಹರಡಿ ಬೆಳೆಯುತ್ತವೆ ಮತ್ತು ಹೆಚ್ಚಿನ ಇಳುವರಿ ಕೊಡುತ್ತವೆ ,

ಹಣ್ಣಿನ ಗಾತ್ರ ದೊಡ್ಡದಿದ್ದು , ಗುಂಡನೆಯ ಆಕಾರ , ತಿಳಿ ಹಸಿರು ಬಣ್ಣ , ಬಿಳಿ ತಿರುಳು ಮತ್ತು ಕಡಿಮೆ ಹಾಗೂ ಮೃದುವಾದ ಬೀಜಗಳನ್ನು ಹೊಂದಿರುತ್ತವೆ .

 

3 , ಅರ್ಕಾ ಮೃದುಲ ( ಹೈಬ್ರಿಡ್ -1 ) :

ಇದು ಸೀಡ್ಲೆಸ್ ಮತ್ತು ಅಲಹಾಬಾದ್ ಸಫೇದ್ ತಳಿಗಳಿಂದ ಪಡೆದ ಸಂಕರಣ ತಳಿ ,

ಮಧ್ಯಮ ಎತ್ತರವಾಗಿದ್ದು , ಹೆಚ್ಚು ಫಸಲು ನೀಡುವಂತಹ ತಳಿ ,

ಹಣ್ಣುಗಳು ಮಧ್ಯಮ ಗಾತ್ರವಿದ್ದು , ತಿರುಳು ಬಿಳುಪು ಮತ್ತು ಮೃದುವಾದ ಕೆಲವು ಬೀಜಗಳನ್ನೊಳಗೊಂಡಿರುತ್ತವೆ .

ಹಣ್ಣುಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದು ಗುಣಮಟ್ಟ ಉತ್ತಮವೆನ್ನಿಸಿದೆ .

ಕೊಯ್ಲಿನ ನಂತರದಲ್ಲಿ ಹಣ್ಣು ಬೇಗ ಹಾಳಾಗುವುದಿಲ್ಲ .

 

4. ನವಲೂರು :

ಇದು ಧಾರವಾಡ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾದ ತಳಿ .

ಹಣ್ಣು ರುಚಿಕರವಾಗಿರುತ್ತದೆ .

ಸಸಿಗಳು ಎಲ್ಲಿ ಸಿಗುತ್ತದೆ:

ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ ಪಡೆಯಬಹುದು ಹಾಗೆ ನಿಮ್ಮ ಹತ್ತಿರದ ನರ್ಸರಿಯಲ್ಲೂ ಗಿಡವನ್ನು ಪಡೆದು ನಾಟಿ ಮಾಡಬಹುದು.

ಎಷ್ಟು ವರ್ಷಕ್ಕೆ ಕಾಯಿ ಬಿಡುತ್ತದೆ:

ಸೂಕ್ತ ಆರೈಕೆ ದೊರೆತ ಗಿಡಗಳು ಕೇವಲ 2 ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತವೆ.

 

ಬೇಸಾಯ ಕ್ರಮಗಳು ನಾಟಿ ಮಾಡುವುದು :

Guava Fruit Farming

ಬೆಳೆ ಪ್ರದೇಶವನ್ನು ಚನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿ ಮಣ್ಣಿನ ಫಲವತ್ತತೆಗನುಗುಣವಾಗಿ 6-7.5 ಮೀ . ಆಂತರದಲ್ಲಿ 90 x 90 x 90 ಸೆಂ.ಮೀ. ಗಾತ್ರದ ಗುಣಿಗಳನ್ನು ತೆಗೆಯಬೇಕು .

ಈ ಗುಣಿಗಳನ್ನು ಮೇಲ್ಮಣ್ಣು ಮತ್ತು ಕಾಂಪೋಸ್ಟ್‌ಗಳ ಮಿಶ್ರಣದಿಂದ ತುಂಬಬೇಕು .

ಕಸಿ ಸಸಿಗಳನ್ನು ನಾಟಿ ಮಾಡುವಾಗ ಕಸಿ ಮಾಡಿದ ಭಾಗ ಭೂಮಿಯ ಮೇಲಿರುವಂತೆ ಜಾಗ್ರತೆ ವಹಿಸಿ ,

ಗಿಡಗಳಿಗೆ ಕೋಲಿನ ಆಸರೆ ಕೊಟ್ಟು ಕಟ್ಟಬೇಕು.

ಅಂತರ                     ಪ್ರತಿ ಹೆಕ್ಟರ್ ಗೆ 

6ಮೀ × 6ಮೀ                   277 ಸಸಿಗಳು 

7.5ಮೀ × 7.5ಮೀ            177 ಸಸಿಗಳು 

5ಮೀ × 5ಮೀ                  400 ಸಸಿಗಳು 

ಗೊಬ್ಬರ ಹಾಕುವುದು ಮತ್ತು ಅಂತರ ಬೇಸಾಯ :

Guava Fruit Farming

ಉತ್ತಮ ಇಳುವರಿಗಾಗಿ ಮಳೆಗಾಲಕ್ಕೆ ಪ್ರಾರಂಭದಲ್ಲಿ ಗಿಡಗಳಿಗೆ ಗೊಬ್ಬರಗಳನ್ನು ಒದಗಿಸಿ ಹದಿನೈದು ದಿನಗಳಿಗೊಮ್ಮೆ ನೀರು ಹಾಯಿಸಿ ,

ಗಿಡಗಳ ಪಾತಿಗಳನ್ನು ಕಳೆಯಿಂದ ಮುಕ್ತವಾಗಿಡಬೇಕು .

ನಾಟಿ ಮಾಡಿದ ಮೊದಲ 3-4 ವರ್ಷಗಳ ತನಕ ತರಕಾರಿ ಮತ್ತು ದ್ವಿದಳ ಧಾನ್ಯದ ಬೆಳೆಗಳನ್ನು ಪೇರಲ ತೋಟದಲ್ಲಿ ಅಂತರ ಬೆಳೆಗಳನ್ನಾಗಿ ಬೆಳೆಯಬಹುದು .

ಗಿಡಗಳು ಒಂದು ಮೀಟರ್ ಎತ್ತರ ಬೆಳೆಯುವವರೆಗೆ ಕಾಂಡದ ಮೇಲೆ ಯಾವುದೇ ಕವಲುಗಳು ಬೆಳೆಯದಂತೆ ನೋಡಿಕೊಳ್ಳಬೇಕು ,

ಕಪ್ಪು ಮಣ್ಣಿನಲ್ಲಿ ಹನಿ ನೀರಾವರಿ ಮೂಲಕ ಪ್ರತಿ ಪೇರಲ ಗಿಡಕ್ಕೆ ( ಆರು ವರ್ಷದವರೆಗೆ ) ಕ್ರಮವಾಗಿ ಪ್ರತಿ ದಿನ ಮುಂಗಾರಿನಲ್ಲಿ 5 ಲೀಟರ್ , ಒಂಗಾರಿನಲ್ಲಿ 9 ಲೀಟರ್ ಮತ್ತು ಬೇಸಿಗೆಯಲ್ಲಿ 12 ಲೀಟರ್ ನೀರು ಒದಗಿಸುವುದರಿಂದ ಮೇಲ್ಮ ನೀರಾವರಿಗಿಂತ ಶೇ . 28 ರಷ್ಟು ನೀರು ಉಳಿತಾಯ ಆಗಿ ಅಧಿಕ ಇಳುವರಿಯನ್ನು ಪಡೆಯಬಹುದು .

 

ಕಳೆ ನಿರ್ವಹಣೆ :

ಪಾತಿಗಳಿಗೆ ಹೊದಿಕೆ ಮಾಡುವದು ಹಾಗೂ ಇನ್ಸಿಟು ಎರೆಹುಳುಗಳನ್ನು ಬಿಡುವದು

ಯೋಗ್ಯ ಅಥವಾ ರಾಸಾಯನಿಕ ಉಪಯೋಗಿಸಿ ನಿರ್ವಹಣೆ ಮಾಡಬಹುದು

ಮಾರ್ಕೆಟಿಂಗ್ ಮಾಡುವುದು ಹೇಗೆ ?

ನೀವು ಬೆಳೆದಿರುವಂತ ಪೇರಳೆ ಹಣ್ಣುಗಳನ್ನು ಹೋಲ್ಸೇಲ್ ಡೀಲರ್ಸ್ ಗೆ ಸೇಲ್ ಮಾಡಬಹುದು ಅಥವಾ ನೀವೇ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು.

ಸೂಚನೆ :

ಕರಾವಳಿ ಪ್ರದೇಶದಲ್ಲಿ ಪ್ರತಿ ಗಿಡಕ್ಕೆ 0.5 ಕಿ.ಗ್ರಾಂ ನಷ್ಟು ಸುಣ್ಣ ಹಾಕಬೇಕು .

ಗೋಮೂತ್ರದಲ್ಲಿ ಪೇರಲ ಹಣ್ಣಿನ ಬೀಜಗಳನ್ನು 24 ಗಂಟೆಗಳವರೆಗೆ ನೆನೆಸುವುದರಿಂದ ಅವುಗಳ ಶೇಕಡಾವಾರು ಮೊಳಕೆ ಪ್ರಮಾಣ , ಸಸಿಗಳ ಎತ್ತರ ಮತ್ತು ಎಲೆಗಳ ಸಂಖ್ಯೆ ಹೆಚ್ಚಾಗುವುದಲ್ಲದೇ , ಮೊಳಕೆಯೊಡೆಯಲು ಕಡಿಮೆ ದಿನಗಳನ್ನು ತೆಗೆದುಕೊಳ್ಳುತ್ತದೆ .

ಎಷ್ಟು ಲಾಭವನ್ನು ಗಳಿಸಬಹುದು?

ಉತ್ತಮ ಗುಣಮಟ್ಟದ ಒಂದು ಪೇರಳೆ ಹಣ್ಣಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 5 ರಿಂದ 10 ರೂಪಾಯಿ ಇದೆ ನೀವು 2 ವರ್ಷದ ನಂತರ ನೀವು ಎಕರೆಗೆ 2 ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸಬಹುದು.

ಕೋವಾ ಮೇಕಿಂಗ್ ಬ್ಯುಸಿನೆಸ್ ಐಡಿಯಾ | kova making business in karnataka | Business Ideas

business ideas

Guava Fruit Farming

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments