ಡ್ರಾಗನ್ ಫ್ರೂಟ್ ಕೃಷಿ ಉದ್ಯಮ ಮಾಡುವುದು ಹೇಗೆ?
ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ?
ಸಾವಿರಾರು ಮೈಲಿ ದೂರವಿರುವ ನೆಲದಲ್ಲಿ ಬೆಳೆಯುವ ಈ ಹಣ್ಣು ವಿಶ್ವದಾದ್ಯಂತ ಮಾರುಕಟ್ಟೆಯನ್ನು ಕಂಡುಕೊಂಡಿದೆ ಎಂದರೆ ಇದರಲ್ಲಿ ಏನೋ ಮಹತ್ವವಿರಲೇಬೇಕು.
ಹೌದು, ಇದರ ಗುಣಗಳಿಂದಾಗಿಯೇ ಇದಕ್ಕೆ ಸುಪರ್ ಫುಡ್ (superfood) ಎಂದು ಕರೆಯಲಾಗುತ್ತಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಗಳು ನಿರ್ಲಕ್ಶಿಸಲು ಸಾಧ್ಯವೇ ಇಲ್ಲದಂತಹ ಗುಣಗಳನ್ನು ಪಡೆದಿದೆ.
ಇಂದು ಈ ಹಣ್ಣುಗಳು ನಮ್ಮ ನಗರಗಳ ಸುಪರ್ ಮಾರ್ಕೆಟ್ಟುಗಳಿಗೂ ಆಗಮಿಸಿದ್ದು ಕೊಂಚ ದುಬಾರಿ ಎನಿಸಿದರೂ ಸರಿ, ಕೊಳ್ಳಲು ಸಾಧ್ಯವಾಗಿಸಿದೆ.
ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ. ನೋಡಲು ಮುಳ್ಳಾಗಿರುತ್ತದೆ. ಹೊರ ಭಾಗ ಗುಲಾಬಿ ಬಣ್ಣ ಹಾಗೂ ಒಳಗಡೆ ಬಿಳಿ ಜೊತೆ ಕಪ್ಪು ಚುಕ್ಕಿಯ ಬೀಜಗಳಿರುತ್ತವೆ ಈ ಹಣ್ಣಿಗೆ.
ಈ ಡ್ರಾಗನ್ ಫ್ರೂಟ್ ತಿಂದರೇನು ಲಾಭ? ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್ ಮಾಡುವವರಿಗೆ ಸಿಕ್ಕಾಪಟ್ಟೆ ಫೆವರೇಟ್. ದೇಹದಲ್ಲಿರುವ ಅನ್ಸ್ಯಾಚುರೇಟೆಡ್ ಫ್ಯಾಟ್ / ಕೆಟ್ಟ ಫ್ಯಾಟ್ಗಳನ್ನು ಕರಗಿಸುತ್ತದೆ. ಹೃದಯಕ್ಕೆ ಹರಿಯುವ ರಕ್ತವನ್ನು ಈ ಹಣ್ಣು ಶುದ್ಧೀಕರಿಸುತ್ತದೆ.
ಡ್ರಾಗನ್ ಫ್ರೂಟ್ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು. ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರಾಗನ್ ಫ್ರೂಟ್ಗಿದೆ. ಫೇಸ್ ಮಾಸ್ಕ್ ಹೆಚ್ಚಾಗಿ ಮಾರಾಟವಾಗುತ್ತಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.
ಹೊರಗೆ ಕೆಂಪಗಿನ ದಪ್ಪ ಸಿಪ್ಪೆ, ಕತ್ತರಿಸಿದಾಗ ಮೊಸರಿನಲ್ಲಿ ಚಿಕ್ಕ ಬೀಜಗಳನ್ನು ಕಲೆಸಿಟ್ಟಂತೆ ಕಾಣುವ ತಿರುಳು ಇರುವ ಡ್ರ್ಯಾಗನ್ ಫ್ರುಟ್ಗೆ ಪಿತ್ತಾಯ ಅಥವಾ ಸ್ಟ್ರಾಬೆರಿ ಪೇರ್ (strawberry pear) ಎಂಬ ಹೆಸರುಗಳೂ ಇವೆ.
ಡ್ರ್ಯಾಗನ್ ಫ್ರೂಟ್ ಕೃಷಿ?:-
ಮಣ್ಣು ಮರಳು ಎರಡು ಮಿಶ್ರಣ ಮಾಡಿ ಒಂದು ಕೆಜಿ ಪಾಲಿ ಬ್ಯಾಗ್ ನಲ್ಲಿ ಡ್ರ್ಯಾಗನ್ ಫ್ರೂಟ್ ಗಿಡವನ್ನು ಕತ್ತರಿಸಿ ನೆಡಬೇಕು 3 ರಿಂದ 4 ತಿಂಗಳಲ್ಲಿ ಚಿಗುರುತ್ತವೆ ಕವರ ನಲ್ಲಿ ಚಿಗಿರಿದ ನಂತರ ನೀವು ನಾಟಿ ಮಾಡಬಹುದು ನಾಟಿ ಮಾಡುವಾಗ ಪಾಲಿ ಬ್ಯಾಗ್ ಒಡೆಯದಂತೆ ಅಚ್ಚುಕಟ್ಟಾಗಿ ಕವರ್ ತೆಗೆದು ಮಣ್ಣು ಸಮೇತ ನಾಟಿ ಮಾಡಬೇಕು .ಇದನ್ನು ರೈತನೇ ಮಾಡಿಕೊಳ್ಳಬಹುದು .
ಒಂದು ಎಕರೆಯಲ್ಲಿ 10×10 ಅಡಿ ಸುತ್ತಳತೆಯಲ್ಲಿ ಕಲ್ಲು ಕಂಬವನ್ನು ಅಥವಾ ಸಿಮೆಂಟ್ ಕಂಬವನ್ನು ನೆಟ್ಟು ಒಂದು ಕಂಬಕ್ಕೆ 3 ರಿಂದ 4 ಸಸಿಗಳನ್ನು ನೆಡಬೇಕು ಹೀಗೆ ಮಾಡಿದರೆ1 ವರ್ಷ 3 ತಿಂಗಳಿಗೆ ಫಸಲು ಬರುವುದಕ್ಕೆ ಪ್ರಾರಂಭವಾಗುತ್ತದೆ
ಒಂದು ಎಕರೆಗೆ ಸುಮಾರು 450 ರಿಂದ 500 ಸಸಿಯನ್ನು ನಾಟಿ ಮಾಡಬಹುದು. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ 10 ಅಡಿ ಅಂತರವಿರಬೇಕು. ಸಸಿಗಳು ದೊಡ್ಡದಾಗುತಿದ್ದಂತೆ ಅದರ ಸೈಡ್ ರೆಕ್ಕೆ ಯನ್ನು ಕಟ್ ಮಾಡಿ ತೆಗಿಯಬೇಕು . ನಂತರ ಹೀಗೆ ತೆಗೆದು ಅವುಗಳನ್ನು ಹ್ಯಾಂಗ್ ಮಾಡ್ತಾ ಇರಬೇಕು .
How to Cultivate Dragon Fruit
ಡ್ರ್ಯಾಗನ್ ಫ್ರೂಟ್ ಕೃಷಿ – ಭೂಮಿ ಸಿದ್ಧತೆ ಹೇಗೆ?
ತುಮಕೂರಿನ ಈರಳ್ಳಿಯಲ್ಲಿರುವ ಕೇಂದ್ರಿಯ ತೋಟಗಾರಿಕೆ ಸಂಶೋಧನೆ ಕೇಂದ್ರ (ಸಿಎಚ್ಇಎಸ್) ಡ್ರ್ಯಾಗನ್ ಫ್ರುಟ್ ಬೆಳೆಯುವ ಆಸಕ್ತ ರೈತರನ್ನು ಆಕರ್ಷಿಸುತ್ತಿದೆ. ಈ ಕೇಂದ್ರದ 1 ಎಕರೆಯಲ್ಲಿ 3 ವರ್ಷಗಳಿಂದ ಡ್ರ್ಯಾಗನ್ ಹಣ್ಣಿನ ಬೇಸಾಯದ ಸಂಶೋಧನೆ ಕೈಗೊಂಡಿದ್ದಾರೆ ಅಲ್ಲಿನ ಮುಖ್ಯ ವಿಜ್ಞಾನಿ ಡಾ.ಜಿ. ಕರುಣಾಕರನ್. ”ಫೀಲ್ಡ್ ಡೇ” ಆಯೋಜಿಸಿದ ರೈತರಿಗೆ ಈ ಬೆಳೆಯ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ.
”38 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆಯುವುದು ಸೂಕ್ತವಲ್ಲ. ಉಷ್ಣಾಂಶ ಜಾಸ್ತಿಯಾದರೆ ಗಿಡಗಳು ಸನ್ ಬರ್ನ್ಗೆ ತುತ್ತಾಗುತ್ತವೆ. ಇದಕ್ಕೆ ಔಷಧ ಇದ್ದರೂ ಇಳುವರಿ ದೃಷ್ಟಿಯಿಂದ ಇಷ್ಟು ಪ್ರಮಾಣದ ಉಷ್ಣಾಂಶ ಉತ್ತಮವಲ್ಲ. ಡ್ರ್ಯಾಗನ್ ಫ್ರುಟ್ ಮಾರುಕಟ್ಟೆಯ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು. ಇಲ್ಲವಾದರೆ ಯಾರೂ ಈ ಬೆಳೆ ಬೆಳೆಯಲು ಮುಂದಾಗ ಬಾರದು” ಎಂಬುದು ಡಾ.ಜಿ. ಕರುಣಾಕರನ್ ಅವರ ಸಲಹೆ. ”ಈ ಬೆಳೆಗೆ ಬೆಳಕು ಜಾಸ್ತಿ ಬೇಕು.
ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಡ್ರ್ಯಾಗನ್ ಬೆಳೆಯಲು ಸಾಧ್ಯವೇ ಎಂದು ಹಲವು ರೈತರು ಪ್ರಶ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಶೇಡ್ನೆಟ್ನಲ್ಲಿ ಡ್ರ್ಯಾಗನ್ ಬೆಳೆಯುತ್ತಿದ್ದೇವೆ” ಎನ್ನುತ್ತಾರೆ ಡಾ.ಕರುಣಾಕರನ್. ಹೆಚ್ಚಿನ ಮಾಹಿತಿಗೆ ಮೊ. 9483233804.
ನೀರು ಎಷ್ಟು ಬೇಕಾಗಬಹುದು:
ಬೇಸಿಗೆ ಸಮಯದಲ್ಲಿ ವಾರಕ್ಕೆ ಒಂದು ದಿನ 2 ರಿಂದ 3 ಲೀಟರ್ ನೀರು ಕೊಡಬೇಕು . ಇದಕ್ಕೆ ಡ್ರಿಪ್ ಪೈಪ್ ನ ಮೂಲಕ ನೀರನ್ನು ಹಾಯಿಸಿದರೆ ಉತ್ತಮ .
ಹಾಗೆ ನೀವು ರಾಸಾಯನಿಕ ಗೋಬರವನ್ನು ಎಷ್ಟು ಕಡಿಮೆ ಕೊಡ್ತಿರೋ ಹಾಗೆ ಅಷ್ಟು ಚೆನ್ನಾಗಿ ಪಸಲು ಬರುತ್ತದೆ ಅಂದರೆ ಹೆಚ್ಚಾಗಿ ನೀವು ಸಾವಯುವ ಗೊಬ್ಬರವನ್ನೇ ಕೊಟ್ಟರೆ ತುಂಬ ಒಳ್ಳೆಯದು . ಇದಕ್ಕೆ ಹೆಚ್ಚು ಖರ್ಚು ಬರುವುದಿಲ್ಲ ಆದ್ದರಿಂದ ನೀವು ಈ ಕೃಷಿ ಮಾಡಿ ಉತ್ತಮ ಲಾಭ ಗಳಿಸಬಹುದು.
ಡ್ರ್ಯಾಗನ್ ಫ್ರೂಟ್ ಕೃಷಿ – ಬಂಡವಾಳ ಮತ್ತು ಖರ್ಚು:
ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಆನ್ಲೈನ್ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಡ್ರ್ಯಾಗನ್ ಹಣ್ಣು ಇದೀಗ ಮಾರಾಟಕ್ಕೆ ಸಿದ್ಧವಾಗಿದೆ. ಡ್ರ್ಯಾಗನ್ ಹಣ್ಣಿನ ತಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಲು ಸಿದ್ಧವಾಗಿದೆ. ಒಂದು ಕೆಜಿಗೆ (3 ಹಣ್ಣು) 150 ರಂತೆ ಮಾರಾಟ ಮಾಡಲು ಸಿದ್ಧಗೊಂಡಿದ್ದಾರೆ.
ಒಂದು ಎಕರೆಗೆ 3 ರಿಂದ 4 ಲಕ್ಷ ಖರ್ಚು ಬರುತ್ತದೆ
ಡ್ರ್ಯಾಗನ್ ಫ್ರೂಟ್ ಕೃಷಿ – ಕಟಾವು ಮತ್ತು ಸಂಗ್ರಹ:-
ಎಂಟು ತಿಂಗಳಿಂದ ಫಸಲು ಆರಂಭ ಈ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ ಒಂದೂವರೆ ವರ್ಷದ ಹೊತ್ತಿಗೆ ಫಸಲು ಬಿಡಲು ಆರಂಭವಾಗುತ್ತದೆ. ರಾಜಶೇಖರ್ ಅವರ ತೋಟದಲ್ಲೂ ಈಗಾಗಲೇ ಹಣ್ಣು ಕೊಯ್ಲು ಶುರುವಾಗಿದೆ.
ಮೊದಲ ಪ್ರಯತ್ನದಲ್ಲೇ ಗಾತ್ರದಲ್ಲಿ ಉತ್ತಮ ಎನ್ನಿಸುವಂತಹ ಹಣ್ಣುಗಳನ್ನು ಪಡೆದಿದ್ದಾರೆ. ಎರಡು–ಮೂರು ಹಣ್ಣುಗಳು ಸೇರಿದರೆ ಒಂದು ಕೆ.ಜಿ ತೂಕ ಬರುತ್ತದೆಯಂತೆ.
How to Cultivate Dragon Fruit
ಡ್ರ್ಯಾಗನ್ ಫ್ರೂಟ್ ನ ಆರೋಗ್ಯ ಪ್ರಯೋಜನಗಳು:-
ಅಧಿಕ ಪೋಷಕಾಂಶಗಳನ್ನು ಹೊಂದಿದೆ
ಮೀನು ಸಾಕಾಣಿಕೆ ಉದ್ಯಮ ಸಂಪೂರ್ಣ ಮಾಹಿತಿ | Fish farming industry complete information
[…] […]