Monday, September 26, 2022
HomeAgricultureಕಿತ್ತಳೆ ಮತ್ತು ಮೋಸಂಬಿಯನ್ನು ಕೃಷಿ ಮಾಡುವ ವಿಧಾನ | cultivating oranges and mosambi in...

ಕಿತ್ತಳೆ ಮತ್ತು ಮೋಸಂಬಿಯನ್ನು ಕೃಷಿ ಮಾಡುವ ವಿಧಾನ | cultivating oranges and mosambi in kannada

ಕಿತ್ತಳೆ ಮತ್ತು ಮೋಸಂಬಿಯನ್ನು ಕೃಷಿ ಮಾಡುವ ವಿಧಾನ

ಮೂಸಂಬಿಯು ಚೈತನ್ಯ ನೀಡುವ ರುಚಿಕರವಾದ ಹಣ್ಣು . ಇದು “ ಸಿ ” ಜೀವಸತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿದ್ದು , ಮತ್ತು ಬಿ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬಲ್ಲದು .
ನಿಮಗೆ ಗೊತ್ತಿರುವ ಹಾಗೆ ಮುಸುಂಬಿ ಮತ್ತು ಕಿತ್ತಳೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.
ಇದಕ್ಕೆ ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇದೆ . ಸಾಮಾನ್ಯ ದಿನಗಳಿಗಿಂತ ಹಬ್ಬ ಹರಿದಿನಗಳಲ್ಲಿ ಸಾಕಷ್ಟು ಬೇಡಿಕೆ ಇರುವಂತಹ ಕಿತ್ತಲೆ ಮತ್ತು ಮೂಸುಂಬಿ ಕೃಷಿಯನ್ನು ನೀವು ವೈಜ್ಞಾನಿಕ ಪದ್ದತ್ತಿಯನ್ನು ಅಳವಡಿಸಿಕೊಂಡು ಮಾಡಿದ್ದೆ ಆದಲ್ಲಿ ಉತ್ತಮ ಲಾಭವನ್ನು ಗಳಿಸಬಹದು .
ಈ ಕೃಷಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ನಮ್ಮದು ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
ಕಿತ್ತಳೆ ಮತ್ತು ಮೋಸಂಬಿ ಕೃಷಿ
ಮಣ್ಣು :
ಮೋಸಂಬಿ ಮತ್ತು ಕಿತ್ತಳೆಯನ್ನು ಎಲ್ಲ ತರಹದ , ಚೆನ್ನಾಗಿ ನೀರು ಬಸಿದು ಹೋಗುವಂತಹ , ಆಳವಾದ ಗೋಡು ಮಣ್ಣುಗಳಲ್ಲಿ ಬೆಳೆಸಬಹುದಾದರೂ , ಕಂಪುಗೋಡು ಮಣ್ಣು ಅತೀ ಸೂಕ್ತ ,
ರಾಯಚೂರಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಈ ಬೆಳೆಗೆ ಸೂಕ್ತವಾಗಿದೆ .
ಕೊಡಗು ಕಿತ್ತಳೆ ಬೆಳೆಗೆ ಯೋಗ್ಯ ಪ್ರದೇಶವಾಗಿದೆ .
ಹವಾಗುಣ ಮತ್ತು ನಾಟಿ ಕಾಲ :
ಮೋಸಂಬಿ ಮತ್ತು ಕಿತ್ತಳೆಗೆ ತೇವಾಂಶವುಳ್ಳ ಶುಷ್ಕ ವಾತಾವರಣ ಸೂಕ್ತ ,
ಜೂನ್ – ಜುಲೈ ತಿಂಗಳುಗಳು ನಾಟಿಗೆ ಅತೀ ಯೋಗ್ಯ
ಕಿತ್ತಳೆ ಮತ್ತು ಮೋಸಂಬಿ ಕೃಷಿ
ತಳಿಗಳು
 ಮೋಸಂಬಿ :
1. ಸಾತ್‌ಗುಡಿ 
2. ವಾಷಿಂಗ್ಟನ್ ನೇವಲ್
3. ವಲನ್ಶಿಯಾ ಲೇಟ್
ಕಿತ್ತಳೆ :
1. ಕೊಡಗಿನ ಕಿತ್ತಳೆ
2. ಕಿನ್ನೊ
3. ಸತ್ಸುಮ
ಸಾವಯುವ ಗೊಬ್ಬರ ( ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ )
                                                     ಪ್ರತಿ ಗಿಡಕ್ಕೆ (ಕೀ. ಗ್ರಾಂ )            ಪ್ರತಿ ಹೆಕ್ಟರ್ (ಟನ್ )
ನಾಟಿಗೆ ಮೊದಲು                                          50                                        13.8
ಎರಡನೇ ವರ್ಷ                                            10                                         2.8
ಮೂರನೇ ವರ್ಷ                                           20                                         5.6
ನಾಲ್ಕನೇ ವರ್ಷ                                            30                                         8.4

ಬೇಕಾದ ಸಾಮಗ್ರಿಗಳು                        ಪ್ರತಿ ಹಕ್ಷೇರಿಗೆ

ಕಣ್ಣು ಕಸಿ ಮಾಡಿದ ಸಸಿಗಳು                                                277 
ಅಂತರ 6  ಮೀ. Χ  6  ಮೀ.

ಪೊಟ್ಯಾಷ್ ಐದನೇ ವರ್ಷ ಹಾಗೂ ನಂತರ ಪ್ರತಿ ಹೆಕ್ಟೇರಿಗೆ :

1.5 ಕಿ.ಗ್ರಾಂ . ಸತುವಿನ ಸಲೈಟ್ , 10 ಕಿ.ಗ್ರಾಂ , ಮ್ಯಾಗ್ನೆಸಿಯಂ ಸಿಟ್ , 0.5 ಕಿ.ಗ್ರಾಂ . ಮ್ಯಾಂಗನೀಸ್ ಸಿಟ್ , 1.5 ಕಿ.ಗ್ರಾಂ , ಸುಣ್ಣ ಇವುಗಳನ್ನು 450 ಲೀಟರ್ ನೀರಿನಲ್ಲಿ ಕರಗಿಸಿ ಮೇ – ಜೂನ್ ತಿಂಗಳಲ್ಲಿ ಸಿಂಪರಣೆ ಮಾಡಬೇಕು ,
ನಂತರ ಅಕ್ಟೋಬರ್ ತಿಂಗಳಲ್ಲಿ ಪ್ರತಿ ಹೆಕ್ಟೇರಿಗೆ 1.5 ಕಿ.ಗ್ರಾಂ . ಸತುವಿನ ಸಲೈಟ್ , 0.75 ಕಿ.ಗ್ರಾಂ , ಮ್ಯಾಗ್ನೆಸಿಯಂ ಸಿಟ್ , 0.75 ಕಿ.ಗ್ರಾಂ , ಮ್ಯಾಂಗನೀಸ್ ಸಿಟ್ , 1.5 ಕಿ.ಗ್ರಾಂ . ಸುಣ್ಣ , ಇವುಗಳನ್ನು 450 ಲೀಟರ್ ನೀರಿನಲ್ಲಿ ಕರಗಿಸಿ ಮತ್ತೊಮ್ಮೆ ಸಿಂಪರಣೆ ಮಾಡಬೇಕು .

ಬೇಸಾಯ ಕ್ರಮಗಳು

ನಾಟಿ ಮಾಡುವುದು :

ನಂಜು ರೋಗಾಣು ರಹಿತ ಆರೋಗ್ಯವಂತ ಕಣ್ಣು ಸಸಿಗಳನ್ನು ದೃಢೀಕರಿಸಿದ ನರ್ಸರಿಗಳಿಂದ ಪಡೆಯಬೇಕು ,
ಬೆಳೆ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು .
ನಂತರ ಶಿಫಾರಸ್ಸು ಮಾಡಿದ ಅಂತರದಲ್ಲಿ 1 ಘನ ಮೀ . ಗಾತ್ರದ ಗುಣಿಗಳನ್ನು ಏಪ್ರಿಲ್ – ಮೇ ತಿಂಗಳಲ್ಲಿ ತೆಗೆಯಬೇಕು .
ಈ ಗುಣಿಗಳಲ್ಲಿ ಮೇಲ್ಮಣ್ಣು ಮತ್ತು ಸಾವಯವ ಗೊಬ್ಬರಗಳ ಮಿಶ್ರಣ ಮಾಡಿ ತುಂಬಬೇಕು ,
ಕಣ್ಣು ಕಸಿ ಮಾಡಿದ ಗಿಡಗಳನ್ನು ಕಸಿ ಮಾಡಿದ ಭಾಗ ಭೂಮಿಯ ಮಟ್ಟಕ್ಕಿಂತ ಮೇಲಿರುವಂತೆ ನಾಟಿ ಮಾಡಬೇಕು .
ನಂತರ ಕೂಡಲೇ ಅವುಗಳಿಗೆ ಕೋಲಿನ ಆಸರೆ ಕೊಟ್ಟು ಕಟ್ಟಬೇಕು .

ಕಿತ್ತಳೆ ಮತ್ತು ಮೋಸಂಬಿ ಕೃಷಿ

ಕಿತ್ತಳೆ ಮತ್ತು ಮೋಸಂಬಿ ಕೃಷಿ

ನಾಟಿ ನಂತರದ ಬೇಸಾಯ :

ಕಣ್ಣು ಕಸಿ ಮಾಡಿದ ಭಾಗದ ಕೆಳಗೆ ಬರುವ ಎಲ್ಲಾ ಕವಲುಗಳನ್ನು ಮತ್ತು ನೀರು ಕಾಂಡಗಳನ್ನು ನಿಯಮಿತವಾಗಿ ತೆಗೆದು ಹಾಕುತ್ತಿರಬೇಕು .
ಅವಶ್ಯಕತೆಗನುಗುಣವಾಗಿ ನೀರನ್ನು ಒದಗಿಸಬೇಕು ,
ಲೊರಾಂಥಸ್ ಮತ್ತು ಮಂಗನಬಾಲ ಪರಾವಲಂಬಿ ಸಸ್ಯಗಳನ್ನು ಆಗಾಗ ಗಮನಿಸಿ ಕೂಡಲೇ ತೆಗೆದುಹಾಕಿ , ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರಗಳನ್ನು ಮೂರು ಸಮಕಂತುಗಳಲ್ಲಿ ( ಮಾರ್ಚ , ಜೂನ್ ಮತ್ತು ಸೆಪ್ಟೆಂಬರ್ ) ಒದಗಿಸಿ , ಪೂರ್ತಿ ಸಾವಯವ ಗೊಬ್ಬರವನ್ನು ಜೂನ್ ತಿಂಗಳಲ್ಲಿ ಕೊಡಬೇಕು.
ರಸಗೊಬ್ಬರವನ್ನು ಪಾತಿಗಳಲ್ಲಿ ಗಿಡದ ಸುತ್ತಲೂ ಗಿಡದ ಸುತ್ತಲೂ 25-30 ಸೆಂ.ಮೀ . ದೂರದಲ್ಲಿ ಸಮನಾಗಿ ದೊರೆಯುವಂತೆ ಕೊಟ್ಟು ಮಣ್ಣು ಮುಚ್ಚಿ ಹೊದಿಕೆ ಒದಗಿಸಿ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು. 

75 ಗ್ರಾಂ ಕಿತ್ತಳೆ ಸ್ಪೆಷಲ್ ಮಿಶ್ರಣವನ್ನು 15 ಲೀ . ನೀರಿನಲ್ಲಿ ಕರಗಿಸಬೇಕು .

ಇದಕ್ಕೆ 3 ಮಿ.ಲೀ , ಸಾಬೂನು ದ್ರಾವಣ ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಶಾಂಪೂ ಪೊಟ್ಟಣ ( 1-2 ಪೊಟ್ಟಣ ) ವನ್ನು ಹಾಗೂ ಒಂದು ಅಥವಾ ಎರಡು ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ದ್ರಾವಣವನ್ನು ತಯಾರಿಸಬೇಕು .

ಈ ಸಿದ್ಧಪಡಿಸಿದ ದ್ರಾವಣವನ್ನು ಗಿಡಗಳ ಎಲೆ , ಕೊಂಬೆ ಹಾಗೂ ಕಾಯಿಗಳ ಮೇಲೆ ನೇರವಾಗಿ ಸಿಂಪರಣೆ ಮಾಡಬೇಕು . ಈ ಕಿತ್ತಳೆ ಸ್ಪೆಷಲ್ ಮಿಶ್ರಣದ ಸಿಂಪರಣೆಯಿಂದ ಸುಮಾರು 20-30 ಪ್ರತಿಶತ ಹೆಚ್ಚಿನ ಇಳುವರಿಯನ್ನು ಪಡೆಯಬಹುದು , ಅಲ್ಲದೇ ಉಚ್ಛ ಗುಣಮಟ್ಟದ ಫಸಲನ್ನು ಪಡೆಯಬಹುದಾಗಿದೆ ,

ಕಿತ್ತಳೆ ಮತ್ತು ಮೋಸಂಬಿ ಕೃಷಿ

ಕೊಯ್ಲು ಮತ್ತು ಇಳುವರಿ :

ಸಸಿ ನಾಟಿ ಮಾಡಿದ 4 ನೇ ವರ್ಷದಿಂದ ಹಣ್ಣು ಬಿಡಲು ಪ್ರಾರಂಭಿಸುತ್ತದೆಯಾದರೂ ಉತ್ತಮ ಇಳುವರಿ , ನಾಟಿಯಾದ 7 ನೇ ವರ್ಷದಿಂದ ಮಾತ್ರ ಸಾಧ್ಯ .
ಪ್ರತಿ ಗಿಡದಿಂದ ವರ್ಷಕ್ಕೆ 1000 ಹಣ್ಣುಗಳನ್ನು ( ಪ್ರತಿ ಹೆಕ್ಟೇರಿಗೆ 25 ಟನ್ ) ನಿರೀಕ್ಷಿಸಬಹುದು .
ಆಕರ್ಷಕ ಹಳದಿ ಬಣ್ಣ ಬರಲು ಮೋಸಂಬಿ ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ 1000 ಪಿ.ಪಿ.ಎಂ. ಇಸ್ರೇಲ್ ದ್ರಾವಣದಲ್ಲಿ ( 2.2 ಮಿ.ಲೀ. ಇಥೆಲ್ ಒಂದು ಲೀಟರ್ ನೀರಿನಲ್ಲಿ ಅದ್ದಿ ತೆಗೆಯಬೇಕು .
ಕೊಯ್ಲು ಮಾಡಿದ ನಂತರ ಮೋಸಂಬಿ ಹಣ್ಣುಗಳನ್ನು ಶೇ . 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 15 ನಿಮಿಷ ಅದ್ದುವುದರಿಂದ ಸಾಮಾನ್ಯ ಹಣ್ಣುಗಳ ಶೇಖರಣೆಗಿಂತ ಸುಮಾರು 30-36 ದಿನಗಳವರೆಗೆ ಕೆಡದಂತೆ ಇಡಬಹುದು .

 

ಮಾರ್ಕೆಟಿಂಗ್ ಮಾಡುವುದು ಹೇಗೆ?

ಹೋಲ್ಸೇಲ್ ಮಾರ್ಕೆಟ್ ಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು
ಅಥವಾ ಹೋಲ್ಸೇಲ್ ಡೀಲರ್ ಗೆ ಹೇಳಿದರೆ ಅವರು ನಿಮ್ಮ ಮನೆ ಬಾಗಿಲಿಗೆ ಬಂದು ತೆಗೆದುಕೊಂಡು ಹೋಗುತ್ತಾರೆ ,
ಇನ್ನು ನೀವೇ ನೇರವಾಗಿ ವ್ಯಾಪಾರವನ್ನು ಕೂಡ ಮಾಡಬಹುದು.
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments