Tuesday, September 27, 2022
HomeAgricultureಪಾಲಕ್ ಸೊಪ್ಪು ಕೃಷಿ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ | cultivate palak in...

ಪಾಲಕ್ ಸೊಪ್ಪು ಕೃಷಿ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ | cultivate palak in kannada language | news in kannada

ಪಾಲಕ್ ಸೊಪ್ಪು ಕೃಷಿ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ

ನಿಮಗೆ ಗೊತ್ತಿರುವ ಹಾಗೆ ಪಾಲಕ್ ಸೊಪ್ಪಿನಲ್ಲಿ  ಅದೆಷ್ಟು ಉಪಯೋಗ ಇದೆ ಅಂದರೆ ನೀವು ಈ ಲೇಖನ ಓದಿದರೆ ನಿಜವಾಗಿಯೂ ವಾರಕ್ಕೆ 2 ರಿಂದ 3 ದಿನ ಪಾಲಕ್ ಸೊಪ್ಪನ್ನು  ಬಳಸುತ್ತೀರಾ.
ಹಾಗಾದರೆ ಪಾಲಕ್ ಸೊಪ್ಪಿನಲ್ಲಿ ಅಂತಹ ಉಪಯೋಗ ಏನಿದೆ ಅಂತ ನೋಡೋಣ .
ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ,ಪ್ರೋಟಿನ್‍ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ.
ಪಾಲಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಹೇಗೆ ಇದು ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು ತ್ವಚೆಗೆ ಕೂಡ ಒಳ್ಳೆಯದು.
ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುವುದಕ್ಕೆ ತುಂಬ ಒಳ್ಳೆಯದು.
ಇದು ಕೂದಲ ಬೆಳವಣಿಗೆಗೂ ಬಹಳ ಒಳ್ಳೆಯದು.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ,ಸಿ,ಇ ಪೊಟ್ಯಾಷಿಯಂ,ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳಿವೆ ಈ ಅಂಶಗಳು, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇಷ್ಟೇ ಅಲ್ಲದೆ ಇನ್ನು ಸಾಕಷ್ಟು ಪ್ರಯೋಜನವನ್ನು ಈ ಪಾಲಕ್ ಸೊಪ್ಪು ಹೊಂದಿದೆ.
ಅದ್ದಂರಿಂದ ಮಾರ್ಕೆಟ್ ನಲ್ಲಿ ಇದಕ್ಕೆ ಬೇಡಿಕೆ ಕೂಡ ಹೆಚ್ಚಿದೆ ನೀವು ಇದರ ಕೃಷಿ ಮಾಡಿದರೆ ಖಂಡಿತ ಉತ್ತಮ ಆದಾಯ ಗಳಿಸಬಹುದು .
ಈ ಲೇಖನದಲ್ಲಿ ಪಾಲಕ್ ಸೊಪ್ಪು ಕೃಷಿ ಮಾಡುವುದರ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
cultivate palak in kannada language
cultivate palak in kannada language

ಪಾಲಕ್ ಸೊಪ್ಪುನ ಬೇಸಾಯ ಕ್ರಮ:

ವಿವರಗಳು                            ಪ್ರತಿ ಹೆಕ್ಟೇರಿಗೆ
ಬೀಜ                                    25 ಕಿ.ಗ್ರಾಂ
ಕೊಟ್ಟಿಗೆ ಗೊಬ್ಬರ                    20-25 ಟನ್
ರಾಸಾಯನಿಕ ಗೊಬ್ಬರಗಳು ( ಪ್ರತಿ ಕಟಾವಿಗೆ )
ಸಾರಜನಕ                           150 ಕಿ . ಗ್ರಾಂ
ರಂಜಕ                                100 ಕಿ . ಗ್ರಾಂ
ಪೊಟ್ಯಾಷ್                            100 ಕಿ . ಗ್ರಾಂ

ಮಣ್ಣು ಹೇಗಿರಬೇಕು: 

ಯಾವುದೇ ಒಂದು ಬೆಳೆಯನ್ನು ಬೆಳೆಯಬೇಕು ಅಂದರೆ ಪ್ರಮುಖವಾಗಿ ಮಣ್ಣು ಹೇಗಿದೆ ಅನ್ನುವುದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮ ಮಣ್ಣಿಗೆ ಯಾವ ಬೆಳೆ ಕೃಷಿ ಮಾಡಿದರೆ ಇಳುವರಿ ಚೆನ್ನಾಗಿ ಬರುತ್ತದೆ ಅನ್ನುವುದನ್ನು ತಿಳಿದುಕೊಂಡು ಕೃಷಿ ಮಾಡಿದರೆ ಉತ್ತಮ.
ಈ ಬೆಳೆಯನ್ನು ನೀರು ಬಸಿದು ಹೋಗುವಂತಹ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಹೊಂದಿರುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣುಗಳಲ್ಲಿ ಬೆಳೆಯಬಹುದು .
cultivate palak in kannada language

ಬಿತ್ತನೆ ಕಾಲ :

ಮಣ್ಣು ಪರೀಕ್ಷೆ ಮಾಡಿಸಿದಮೇಲೆ ನೀವು ಯಾವ ಸಮಯದಲ್ಲಿ ಬಿತ್ತನೆ ಮಾಡಬೇಕು ಅನ್ನುವುದನ್ನು ತಿಳಿದುಕೊಂಡು ಸೂಕ್ತವಾದ ಕಾಲದಲ್ಲಿ ಬಿತ್ತನೆ ಮಾಡಬೇಕು.
ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳುಗಳು ಈ ಬೆಳೆಯನ್ನು ಪ್ರಾರಂಭಿಸಲು ಸೂಕ್ತವಾದ ಕಾಲ .

ತಳಿಗಳು:

ಪಾಲಕ್ ಸೊಪ್ಪಿನಲ್ಲಿ ಸಾಕಷ್ಟು ತಳಿಗಳನ್ನು ನೀವು ನೋಡಬಹುದು ಅದರಂತೆ ಈ ಕೆಳಗೆ ಕೆಲವು ತಳಿಗಳ ಕುರಿತು ಮಾಹಿತಿಯನ್ನು ತಿಳಿಸಿದ್ದೇವೆ ನೀವು ಅವುಗಳನ್ನು ನೋಡಬಹುದು ನಿಮ್ಮ ಮಣ್ಣಿಗೆ ಹಾಗೆ ನಿಮ್ಮ ವಾತಾವರಣಕ್ಕೆ ಯಾವ ತಳಿ ಸೂಕ್ತವೆಂದು ತಿಳಿದುಕೊಂಡು ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು .
1. ಪೂಸಾ ಜ್ಯೋತಿ :
ಇದು ದೊಡ್ಡ ಗಾತ್ರದ ದಪ್ಪವಾದ ಎಳೆಯ ರಸಭರಿತ ಎಲೆಗಳನ್ನು ಬಿಡುವ ತಳಿ . ಇದು ಹೆಕ್ಟೇರಿಗೆ 49 ಟನ್ ಎಲೆಯ ಇಳುವರಿಯನ್ನು 6-8 ಕಟಾವುಗಳಲ್ಲಿ ಕೊಡಬಲ್ಲದು .
2. ಆಲ್ ಗ್ರೀನ್ :
ಇದು ಒಂದೇ ತರಹದ ಹಚ್ಚ ಹಸಿರಿನ ಮೃದು ಎಲೆಗಳನ್ನು ಬಿಡುತ್ತದೆ . ಇದರ ಎಲೆಗಳನ್ನು 15-20 ದಿವಸಗಳ ಅಂತರದಲ್ಲಿ 6-7 ಸಲ ಕಟಾವು ಮಾಡಬಹುದು . ಒಟ್ಟು ಪ್ರತಿ ಹೆಕ್ಟೇರಿಗೆ 125 ಟನ್ ಇಳುವರಿಯನ್ನು ಕೊಡಬಲ್ಲದು ,
3 , ಅರ್ಕಾ ಅನುಪಮ :
ಇದು ಮಧ್ಯಮ ಗಾತ್ರದ ಹಾಗೂ ದಪ್ಪದ ಎಲೆಗಳನ್ನು ಬಿಡುತ್ತದೆ . ಇದು ಪ್ರತಿ ಹೆಕ್ಟೇರಿಗೆ 40 ಟನ್‌ ಎಲೆಯ ಇಳುವರಿಯನ್ನು 4 ಕಟಾವುಗಳಲ್ಲಿ 90 ದಿವಸದ ಅವಧಿಯಲ್ಲಿ ಕೊಡಬಲ್ಲದು .

ಬೀಜಗಳು ಎಲ್ಲಿ ಸಿಗುತ್ತದೆ :

ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ ವಿಚಾರಿಸಬಹುದು ಹಾಗೆ ನಿಮ್ಮ ಹತ್ತಿರದ ಸೀಡ್ಸ್ ಅಂಗಡಿ ಯಾವುದಾದರು ಇದ್ದರೆ ನೀವು ಅಲ್ಲಿ ಖರೀದಿ ಮಾಡಬಹುದು .
ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ಅದರ ಲಿಂಕ್ ಈ ಕೆಳಗೆ ಕೊಟ್ಟಿದ್ದೇವೆ ನೀವು ಅಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು .

Buy Now

ಪಾಲಕ್ ಬೀಜ ಬಿತ್ತನೆ ವಿಧಾನ :

ಭೂಮಿಯನ್ನು ಹದ ಮಾಡಿದ ನಂತರ 2-3 ಮೀ . X 1-2 ಮೀ . ಉದ್ದಗಲದ ಸಸಿ ಮಡಿಗಳನ್ನು ತಯಾರಿಸಬೇಕು
ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಮಡಿಗೆ ಕೊಟ್ಟು ಚೆನ್ನಾಗಿ ಬೆರೆಸಬೇಕು .
ನಂತರ ಬೀಜಗಳನ್ನು 10 ಸೆಂ . ಮೀ . ಸಾಲುಗಳಲ್ಲಿ ಬಿತ್ತಬೇಕು ,
ಬೀಜಗಳು ಮೊಳಕೆ ಒಡೆಯುವತನಕ ತುಂತುರು ಜಾಡಿಯ ಮೂಲಕ ನೀರು ಹಾಕಬೇಕು .
ನೀರಾವರಿ ಮತ್ತು ಅಂತರ ಬೇಸಾಯ :
ಬೀಜಗಳು ಮೊಳಕೆಯೊಡೆದ ನಂತರ 4-5 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು
ಮಡಿಗಳಲ್ಲಿ ಕಳೆಗಳು ಬೆಳೆಯದಂತೆ ಕಾಳಜಿ ವಹಿಸಬೇಕು .

ಪಾಲಕ್ ಸೊಪ್ಪುನ ಕೊಯ್ಲು ಮತ್ತು ಇಳುವರಿ :

ಬಿತ್ತಿದ 30-40 ದಿವಸಗಳಲ್ಲಿ ಬೆಳೆ ಮೊದಲು ಕಟಾವಿಗೆ ಬರುತ್ತದೆ .
3 ತಿಂಗಳ ಅಂತರದಲ್ಲಿ ಮೂರು ಬಾರಿ ಕಟಾವು ಮಾಡಬಹುದು
ಪ್ರತಿ ಹೆಕ್ಟೇರಿಗೆ 10-15 ಟನ್ ಸೊಪ್ಪಿನ ಇಳುವರಿ ಪಡೆಯಬಹುದು ,
cultivate palak in kannada language
ಮಾರ್ಕೆಟಿಂಗ್ ಮಾಡುವುದು ಹೇಗೆ :
ಹೋಲ್ಸೇಲ್ ಡೀಲರ್ಸ್ ಗೆ ಸೇರಿದಂತೆ  ತರಕಾರಿ ಅಗಡಿ , ದಿನಸಿ ಅಂಗಡಿ, ಹೋಟೆಲ್, ಗಳಿಗೆ ನೀವು ಹೋಲ್ಸೇಲ್ ಆಗಿ ಮಾರಾಟ ಮಾಡಬಹುದು . 
ಲಾಭ ಎಷ್ಟು ಗಳಿಸಬಹುದು :
ನಿಮಗೆಲ್ಲ ಗೊತ್ತಿರುವಹಾಗೆ ಒಂದು ಕಟ್ಟು ಪಾಲಕ್ ಸೊಪ್ಪಿಗೆ ಮಾರ್ಕೆಟ್ ಬೆಲೆ  10 ರೂ ಇದೆ. ಹಬ್ಬ  ಹಬ್ಬ ಹರಿದಿನ ಬಂತು ಎಂದರೆ ಇದರ ಬೇಕೇ ಇನ್ನು ದುಪ್ಪಟ್ಟು ಆಗುತ್ತದೆ. 
ದಿನಕ್ಕೆ 200 ಕಟ್ಟು ಪಾಲಕ್ ಸೊಪ್ಪು ಮಾರಾಟ ಮಾಡಿದರೆ 2 ಸಾವಿರ ಆದಾಯ ಗಳಿಸಬಹುದು. 
ಇದರಲ್ಲಿ ಖರ್ಚು ಅಂತ 500 ಹಣ ಕಳೆದರು ನಿಮಗ್ 1500 ಹಣ ಲಾಭ ದೊರೆಯುತ್ತದೆ 
ನೀವು ಒಂದು ತಿಂಗಳ ನಂತರ ಪ್ರತಿದಿನ ಆದಾಯವನ್ನು ಗಳಿಸಬಹುದು. 
cultivate palak in kannada language
RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments