Wednesday, November 30, 2022
HomeBusinessನಾಟಿ ಕೋಳಿ ಸಾಕಾಣಿಕೆ ಬ್ಯುಸಿನೆಸ್ ಮಾಡುವುದು ಹೇಗೆ? | Country Chicken business Ideas...

ನಾಟಿ ಕೋಳಿ ಸಾಕಾಣಿಕೆ ಬ್ಯುಸಿನೆಸ್ ಮಾಡುವುದು ಹೇಗೆ? | Country Chicken business Ideas | Business Ideas In Kannada

ನಾಟಿ ಕೋಳಿ ಸಾಕಾಣಿಕೆ ಬ್ಯುಸಿನೆಸ್ ಮಾಡುವುದು ಹೇಗೆ?

 

ನಾಟಿ ಕೋಳಿ ಸಾಕಾಣಿಕೆ ಮಾಡುವುದು ಹೇಗೆ ?

ಎಷ್ಟು ಬಂಡವಾಳ ಬೇಕು ?

ಕೋಳಿಗಳ ವಿಶೇಷತೆಗಳು?

ಕೋಳಿ ಆಹಾರ?

ರೋಗನಿರೋಧಕ ಲಸಿಕೆಗಳು

ನಾಟಿ ಕೋಳಿ

ಈ ಉದ್ಯೋಗವನ್ನು ಕೈಗೊಳ್ಳಲು ಮೊದಲು ಆಸಕ್ತಿ, ದೃಢವಾದ ಮನಸ್ಸು,  ಕನಿಷ್ಠ ತರಬೇತಿ ಹಾಗೂ ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹಾರಿಕ ಜ್ಞಾನವೂ ಬೇಕು. ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆಯಿರುವುದರಿಂದ ವಿದ್ಯುತ್‌ ಬೇಕು.

ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಈ ಕೋಳಿ ಸಾಕಾಣಿಕೆಯನ್ನು  ಪ್ರಸ್ತುತ ಲಕ್ಷಾಂತರ ಜನರು ಉದ್ಯಮವನ್ನಾಗಿ ನಡೆಸುತ್ತಿದ್ದಾರೆ.

ಶೆಡ್ ನಿರ್ಮಾಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳು:

ಮುಕ್ತವಾದ ಗಾಳಿ ಬೆಳಕು ಈ ಪ್ರದೇಶದಲ್ಲಿದ್ದರೆ ಕೋಳಿಗಳ ಬೆಳವಣಿಗೆಗೆ ಇದು ತುಂಬಾ ಅನುಕೂಲಕಲವಾಗಿರುತ್ತದೆ.

ನೆಲದಿಂದ ಎತ್ತರವಾಗಿ ಮತ್ತು ಸಮವಾಗಿರುವಂತೆ ನಿರ್ಮಿಸಬೇಕು.

ದೊಡ್ಡ ಶೆಡ್ ಅನ್ನು ನಿರ್ಮಿಸಬೇಕು ಅಂದರೆ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ

ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳವನ್ನು ಆಯ್ಕೆಮಾಡಬೇಕು

ಕೋಳಿ ಸಾಕಾಣಿಕೆ  ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ.  ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸುಲಭ

. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಇದರೊಂದಿಗೆ ತಜ್ಞರ ಸಲಹೆ ಮುನ್ನೆಚ್ಚರಿಕೆ ಮಾರುಕಟ್ಟೆಯ ವ್ಯವಹಾರ ಅತೀ ಮುಖ್ಯ. ಈ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್‌ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. 

ಈ ಕೋಳಿಮರಿಗಳು ಹುಟ್ಟಿದಾಗ 45ಗ್ರಾಂ ನಿಂದ 48 ಗ್ರಾಂ ತೂಕವಿರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 12-16 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಬೆಚ್ಚಗೆ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಿ ಒಂದು ಒಂದೂವರೆ ತಿಂಗಳುಗಳ ತನಕ ಸಾಕಿ ಮಾರಾಟ ಮಾಡುತ್ತಾರೆ.

ಕೇವಲ 48 ದಿನಗಳಲ್ಲಿ ಕೋಳಿ ಮರಿಯು ತನ್ನ ತೂಕವನ್ನು 55 ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತಾರೆ.

ಮಾರಕರೋಗಗಳಾದ ರಾಣಿಖೇಟ್(ಕೊಕ್ಕರೆ ರೋಗ), ಗುಂಬಾರೋ ಮತ್ತು ರೋಗಗಳ ವಿರುದ್ಧ ಮರಿಗಳಿಗೆ ಪಶುವೈದ್ಯರ ಸಲಹೆಯ ಮೇರೆಗೆ ಲಸಿಕೆಯನ್ನು ನೀರಿನಲ್ಲಿ ಕೊಡಬೇಕಾಗುತ್ತದೆ. ಇವಲ್ಲದೇ ರಕ್ತ ಬೇಧಿ(ಕಾಕ್ಸಿಡಿಯಾ), ಶ್ವಾಸಕೋಶಗಳ ಕಾಯಿಲೆ ಸಿ.ಆರ್.ಡಿ), ಗೌಟ್ ಹಾಗೂ ಟೈಫಾಯಿಡ್ನಂ(ತಹ ರೋಗಗಳ ಕುರಿತು ನಿಗಾ ಅವಶ್ಯ.

ಇತ್ತೀಚೆಗೆ  ತರಬೇತಿಯ ಕೊರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ, ಕೆಲವೊಮ್ಮೆ ಉದ್ಯಮಿಗಳು ಕೈಸುಟ್ಟುಕೊಂಡಿರುವ ಉದಾಹರಣೆಗಳೂ ಇವೆ. ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಹಾಕಿದರೆ,  ಕೈತುಂಬಾ ಆದಾಯವೂ ಗಳಿಸಬಹುದು.

 ಮಾಂಸಕೋಳಿ,

ನಾಟಿ ಕೋಳಿ

ಮಾಂಸಕೊಳಿ ಯನ್ನು ಕೆಲವರು ಕೇವಲ ಮಾಂಸಕ್ಕೆ ಮಾತ್ರ ಸಾಕುತ್ತಾರೆ ಇವುಗಳನ್ನು ಮೊಟ್ಟೆಗೋಸ್ಕರ ಸಾಕುವುದಿಲ್ಲ

ಮತ್ತು ಮೊಟ್ಟೆ ಕೊಳಿ

 ಮೊಟ್ಟೆ ಮತ್ತು ಮಾಂಸಕ್ಕಾಗಿ ಕೋಳಿಗಳನ್ನು ಸಾಕುತ್ತಾರೆ.  ನೀವು ಯಾವ ಉದ್ದೇಶಕ್ಕೆ ಕೋಳಿಯನ್ನು ಸಾಕಾಣಿಕೆ ಮಾಡುತ್ತಿರೋ ಅದು ನಿಮ್ಮ ಆಯ್ಕೆ ಗೆ ಬಿಟ್ಟಿದ್ದು 

 

 

ಗ್ರೋಸರಿ ಇ – ಕಾಮರ್ಸ್ ಬ್ಯುಸಿನೆಸ್ ರಂಭಿಸುವುದು ಹೇಗೆ? | online grocery business ideas in kannada

 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments