Wednesday, November 30, 2022
HomeFinancecoffee in kannada | ಕಾಫಿ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ | coffee Powder...

coffee in kannada | ಕಾಫಿ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ | coffee Powder Making Business

ಕಾಫಿ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ

 

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ  ಕಡಿಮೆ ಬಂಡವಾಳದಲ್ಲಿ  ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ಕಾಫಿ ಪೌಡರ್ ಮೇಕಿಂಗ್  ಬ್ಯುಸಿನೆಸ್ 

ನಿಮಗೆಲ್ಲ ಗೊತ್ತಿರುವ ಹಾಗೆ ಕಾಫಿ ಯನ್ನು ಹೆಚ್ಚಾಗಿ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ ಆದ್ದರಿಂದ ನೀವು ಈ ಬ್ಯುಸಿನೆಸ್ ಮಾಡುವುದಕ್ಕೆ ಇದು ತುಂಬಾನೇ ಸಾಯವಾಗುತ್ತದೆ ಅಂತ ಹೇಳಬಹುದು ಏಕೆಂದರೆ ನಿಮಗೆ ಬೇಕಾದ ಕಾಫಿ ಕಾಳುಗಳನ್ನು ನೀವು ಇಲ್ಲಿಂದಲೇ ಖರೀದಿ ಮಾಡುವುದರಿಂದ ನಿಮಗೆ ಕಡಿಮೆ ಬೆಲೆಗೆ ಸಿಗುತ್ತದೆ. 

ಕಾಫಿ ಪೌಡರ್ ಅನ್ನು ಎಲ್ಲಿ ಹೆಚ್ಚಾಗಿ ಬಳಸುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಂದು ಮನೆಯಲ್ಲೂ ಸೇರಿದಂತೆ , ಹೋಟೆಲ್ , ರೆಸ್ಟೋರೆಂಟ್, ಹಾಗೆ ಕಂಪೆನಿಗಳಲ್ಲಿ , ಗಳಲ್ಲಿ ಹೆಚ್ಚಾಗಿ  ಬಳಕೆ ಮಾಡುತ್ತಾರೆ 

ಅದಕೋಸ್ಕರ ಕಾಫಿ ಪೌಡರ್ ಮೇಕಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ.
ಆದ್ದರಿಂದ ನೀವು ಕಾಫಿ ಪೌಡರ್ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು.

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

coffee in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ:

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ  ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು .  ಇದಕ್ಕೆ   10Χ20 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ.

ಕಾಫೀಯಲ್ಲಿ ಎರಡು ವಿಧಗಳನ್ನು ನೋಡಬಹುದು 

ರೊಬಸ್ಟಾ 

ಅರಾಬಿಕಾ 

ನೀವು ಕೂಡ ಖರೀದಿ ಮಾಡಬೇಕಾದರೆ ಯಾವ ತಳಿ ಅಂತ ತಿಳಿದುಕೊಂಡು ಖರೀದಿ ಮಾಡಬೇಕು , ಮಾರುಕಟ್ಟೆ ಡಿಮ್ಯಾಂಡ್ ಗೆ ತಕ್ಕಂತೆ ಖರೀದಿ ಮಾಡಿ ಮಾರಾಟ ಮಾಡಬೇಕು. 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು 3 ಮಷಿನ್ ಗಳನ್ನೂ ಖರೀದಿ ಮಾಡಬೇಕು 

ಕಾಫಿ ಪೌಡರ್ ಮೇಕಿಂಗ್ ಮಷಿನ್ 

ಸೀಲಿಂಗ್ ಮಷಿನ್ 

ವೆಹಿಂಗ್ ಮಷಿನ್ 

ಪ್ಯಾಕಿಂಗ್  ಕವರ್ 

ಸ್ಟಿಕ್ಕರ್ 

coffee in kannada

coffee in kannada

ತಯಾರಿಸುವ ವಿಧಾನ : 

ನೀವು ಖರೀದಿ ಮಾಡಿರುವ ಕಾಫಿ ಕಾಳುಗಳನ್ನು ಇಲ್ಲಿ ಕಾಣಿಸುವ ಮಷಿನ್ ನಲ್ಲಿ ಹಾಕಬೇಕು ಹೀಗೆ ಹಾಕಿದ ನಂತರ ನೀವು ಪವಾರ್ ಸ್ವಿಚ್ ಆನ್ ಮಾಡಬೇಕು ನಂತರ ಅದು ಸಂಪೂರ್ಣವಾಗಿ ಗ್ರಿನ್ಡಿಂಗ್ ಆಗಿ ಹೊರಗಡೆ ಬರುತ್ತದೆ ನೀವು ಅದನ್ನು ನಿಮ್ಮದೇ ಆಗಿರುವ ಸ್ವಂತ ಬ್ರಾಂಡ್ ಮಾಡಿ 100 ಗ್ರಾಂ 200 ಗ್ರಾಂ ಹೀಗೆ ಪ್ಯಾಕ್ ಮಾಡಿ  ಮಾರಾಟ ಮಾಡಬಹುದು. 

ಎಷ್ಟು ಸ್ಥಳಾವಕಾಶ ಬೇಕು : 

ಈ ಬ್ಯುಸಿನೆಸ್ ಮಾಡಲು ಎಷ್ಟು ಸ್ಥಳಾವಕಾಶ ಬೇಕು ಅಂತ ಈ ಕೆಳಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ 

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 10Χ20 ಅಡಿ ಸುತ್ತಳತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ . ಈ ಸ್ಥಳಾವಕಾಶವು  ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ. 

ಎಷ್ಟು ಬಂಡವಾಳ ಬೇಕು:

ಕಾಫಿ ಪೌಡರ್ ಮೇಕಿಂಗ್ ಮಷಿನ್  ಬೆಲೆ  : 750,00

ಸೀಲಿಂಗ್ ಮಷಿನ್ ಬೆಲೆ  : 1500 

ವೆಹಿಂಗ್ ಮಷಿನ್ ಬೆಲೆ :- 800

ಹೋಲ್ಸೇಲ್ ಕಾಫಿ ಕಾಳು ಖರೀದಿ ಮಾಡಲು : 30,000

ಇತರೆ ಖರ್ಚು : 10,000

ಒಟ್ಟು : 1,17,300

 ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ. ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪೆಂಡ್ ಆಗಿರುತ್ತದೆ. 

coffee in kannada

coffee in kannada

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು. 

ಇನ್ನು ಫುಲ್ಲಿ ಆಟೋಮ್ಯಾಟಿಕ್ ಮಷಿನ್ ಸೇರಿದಂತೆ ಮ್ಯಾನುಯಲ್ ಮಷಿನ್ ಕೂಡ ಇದೆ ನಿಮಗೆ ಸೂಕ್ತ ಎಂದರೆ ಅದು ಆಟೋಮ್ಯಾಟಿಕ್ ಮಷಿನ್ ನೀವು ಇದನ್ನು ಖರೀದಿ ಮಾಡಿ ಹೋಲ್ಸೇಲ್ ಬ್ಯುಸಿನೆಸ್ ಮಾಡಬಹುದು. 

 ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ  ಇದು  ಮಷಿನ್  ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

coffee in kannada

coffee in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಫೆಸಯ್ 

ಟ್ರೇಡಿಂಗ್ ಲೈಸೆನ್ಸ್

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:

ನಿಮ್ಮ ಹತ್ತಿರದ ರೈತರ ಹತ್ತಿರ  ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಅಥವಾ  ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.

ಅದರ  ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು. 

 

Buy Now 

ಕೆಲಸಗಾರರು ಎಷ್ಟು ಜನ ಬೇಕು : 

2 ರಿಂದ 3 ಜನ ಕೆಲಸಗಾರರು ಬೇಕು

ಮಾರ್ಕೆಟಿಂಗ್ ಮಾಡುವುದು ಹೇಗೆ :

 ಹೋಲ್ಸೇಲ್ ಕಾಫಿ ವ್ಯಾಪಾರದ ಅಂಗಡಿ ಸೇರಿದಂತೆ , ಕಿರಾಣಿ ಅಂಗಡಿ , ಹಾಗೆ ಸೂಪರ್ ಮಾರ್ಕೆಟ್ , ಹೋಟೆಲ್ ಗೆ ಹಾಗೆ ಇತರ ಸ್ಥಳಗಳಲ್ಲಿ ನೀವು ಮಾರಾಟ ಮಾಡಬಹುದು. 

ಲಾಭ ಎಷ್ಟು ಗಳಿಸಬಹುದು :

ಪ್ರಸ್ತುತ ಒಂದು ಕೆಜಿ ಕಾಫಿ ಪೌಡರ್ ಗೆ 400 ರಿಂದ 700 ರ ವರೆಗೆ ಇದೆ 
ನೀವು ಹೋಲ್ಸೇಲ್ ಕಾಫಿ ಕಾಳುಗಳನ್ನು ಖರೀದಿ ಮಾಡಿದರೆ ನಿಮಗೆ 120 ರಿಂದ 150 ರೂ ಗೆ ಸಿಗುತ್ತದೆ
ನೀವು ಇದನ್ನು ಪೌಡರ್ ಮಾಡಿ ನಿಮ್ಮದೇ ಆದ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಬಹುದು 
ನಿಮಗೆ ಒಂದು ಕೆಜಿಯನ್ನು ಪ್ಯಾಕ್ ಮಾಡಿ ಮಾರಾಟ ಮಾಡುವುದಕ್ಕೆ 20ರೂ ಖರ್ಚು ಬರುತ್ತದೆ 
ನೀವು ಹೋಲ್ಸೇಲ್ ದರದಲ್ಲಿ 300ರೂ ಗೆ ಮಾರಾಟ ಮಾಡಿದರೆ ನಿಮಗೆ ಒಂದು ಕೆಜಿಯಮೇಲೆ 130ಸಿಗುತ್ತದೆ ಅಂದರೆ ನೀವು ದಿನದಲ್ಲಿ 10 ಕೆಜಿ ಪ್ಯಾಕ್ ಮಾಡಿ ಮಾರಾಟ ಮಾಡಿದರೆ 1300ರೂ ಲಾಭ ಗಳಿಸಬಹುದು .

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಮಳಿಗೆ ನಿಮ್ಮದೇ ಸ್ವಂತ ಇಲ್ಲ ಅಂದರೆ ಅಡ್ವಾನ್ಸ್ ಕೊಟ್ಟು ಪಡೆಯಬೇಕಾಗುತ್ತದೆ.
ಹಳ್ಳಿಯಲ್ಲಿ ಮಾಡುವುದಾದರೆ ವಿದ್ಯುತ್ ಸಮಸ್ಯೆ ಇರುತ್ತದೆ .
 ಮಾರ್ಕೆಟಿಂಗ್ ಮಾಡುವುದು ಕೂಡ ತುಂಬಾ ಕಷ್ಟ ಇದೆ.
ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿ ಗಳು ಲಭ್ಯವಿವೆ ಅವಗಳಮುಂದೆ ನೀವು ತುಂಬ ಪ್ರಯತ್ನ ಹಾಕಬೇಕಾಗುತ್ತದೆ.
ಮಾರ್ಕೆಟ್ ನಲ್ಲಿ ಸಾವಿರ ಕಂಪನಿ ಇದ್ದರು  ಕೂಡ ಅದಕ್ಕೆ ತಕ್ಕಂತೆ ಜನಸಂಖ್ಯೆಕೂಡ ಹೆಚ್ಚಿದೆ ಆದ್ದರಿಂದ  ನೀವು ಈ ಬ್ಯುಸಿನೆಸ್ ನಲ್ಲಿ ಎಫರ್ಟ್ ಹಾಕಿದ್ದೆ ಆದಲ್ಲಿ ಕಂಡಿತಾ ಉತ್ತಮ ಪ್ರಾಫಿಟ್ ಗಳಿಸಬಹುದು.
ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ .
ಈ ಬ್ಯುಸಿನೆಸ್ ಗೆ ಲಕ್ಷ ಗಟ್ಟಲೆ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments