Tuesday, September 20, 2022
HomeBusinessಕಾಳುಮೆಣಸಿನ ವೈಜ್ಞಾನಿಕ ಬೇಸಾಯ ಪದ್ಧತಿಯಿಂದ ಲಕ್ಷ ಲಕ್ಷ ಸಂಪಾದಿಸಿ | Black Pepper Cultivation

ಕಾಳುಮೆಣಸಿನ ವೈಜ್ಞಾನಿಕ ಬೇಸಾಯ ಪದ್ಧತಿಯಿಂದ ಲಕ್ಷ ಲಕ್ಷ ಸಂಪಾದಿಸಿ | Black Pepper Cultivation

ಕಾಳುಮೆಣಸಿನ ವೈಜ್ಞಾನಿಕ ಬೇಸಾಯ ಪದ್ಧತಿಯಿಂದ ಲಕ್ಷ ಲಕ್ಷ ಸಂಪಾದಿಸಿ

 

ಉಚಿತವಾಗಿ 500 ಹಣ ಗಳಿಸಲು ಇಲ್ಲಿ   ಕ್ಲಿಕ್ ಮಾಡಿ

ಸಾಂಬಾರ್ ಪದಾರ್ಥಗಳ ರಾಜನೆಂದೇ ಗುರುತಿಸ್ಪಟ್ಟಿರುವ ಕರಿಮೆಣಸು ( ಕಾಳುಮೆಣಸು ) ಸಾಕಷ್ಟು ವರ್ಷಗಳ ಹಿಂದೆಯೇ ಭಾರತ ದೇಶದ ಜನರಿಂದ ಬೆಳೆಯಲ್ಪಡುತ್ತಿದ್ದ ಮತ್ತು ರಫ್ತು ಮಾಡಲ್ಪಡುತ್ತಿದ್ದ ಸಂಬಾರು ಪದಾರ್ಥ , ಭಾರತ ದೇಶವು ಪ್ರಪಂಚದಲ್ಲಿಯೇ ಅತೀ ಹೆಚ್ಚು ಕಾಳುಮೆಣಸು ಬೆಳೆಯುವ ವಿಸ್ತೀರ್ಣವನ್ನು ( 54 % ) ಹೊಂದಿದ್ದರು , ಉತ್ಪಾದನೆ ಮಾತ್ರ ಪ್ರಪಂಚದ 26,69 ರಷ್ಟಿದೆ.

ಸೂಕ್ಷ್ಮವಾದ ಹೂವುಗಳನ್ನು ಬಿಡುವ ಕಾಳುಮೆಣಸಿನ ಬಳ್ಳಿಯಲ್ಲಿ ಪರಾಗಸ್ಪರ್ಶವು ಮುಖ್ಯವಾಗಿ ಭೂಮಿಯ ಗುರುತ್ವಾಕರ್ಷಣ ಬಲದಿಂದ ನಡೆಯುತ್ತದೆ .

Black Pepper Cultivation

Black Pepper Cultivation

ಬಳ್ಳಿಯ ಮೇಲಿನ ಭಾಗದಲ್ಲಿರುವ ಹೂವಿನ ಪರಾಗವು ಗುರುತ್ವಾಕರ್ಷಣದಿಂದ ಬಳ್ಳಿಯ ಕೆಳ ಭಾಗಕ್ಕೆ ಬಂದು ಹೂವಿನ ಹೆಣ್ಣಿನ ಭಾಗವನ್ನು ಮೋಹಿಸಿ ಕಾಯಿ ಕಚ್ಚಲು ಸಹಕಾರಿಯಾಗುತ್ತವೆ . ಕೆಲವೊಮ್ಮೆ ಮಳೆಯ ನೀರು ಅಥವಾ ಸಿಂಚನ ನೀರಾವರಿ ಮತ್ತು ಜೇನು ನೋಣಗಳು ಪರಾಗವನ್ನು ಗಂಡು ಹೂವಿನಿಂದ ಹೆಣ್ಣು ಹೂವಿಗೆ ಮುಟ್ಟಿಸುತ್ತವೆ , 

ಸುಮಾರು 14 ರಿಂದ 65 % ರ ವರೆಗೆ ಹೂ ಗೊಂಚಲಿನಿಂದ ಕಾಯಿಗಳು ಉದುರುತ್ತವೆ . ವಾತಾವರಣದಲ್ಲಾಗುವ ಉಷ್ಣಾಂಶದ ಏರು – ಪೇರು , ಪೋಷಕಾಂಶಗಳ ಕೊರತೆ , ಅಸಮರ್ಪಕವಾದ ಪರಾಗಸ್ಪರ್ಶ ಮತ್ತು ನಿರಂತರವಾದ ಮಣ್ಣಿನ ತೇವಾಂಶದ ಕೊರತೆಯು ಕಾಯಿಗಳು ಉದುರಲು ಕಾರಣವಾಗುತ್ತವೆ .

ಕಾಯಿಗಳ ಉದುರುವಿಕೆ ತಡೆಯಲು ಸಮಗ್ರ ಪೋಷಕಾಂಶಗಳ ನಿರ್ವಹಣೆ ಜೊತೆಗೆ ಐ.ಎ.ಎ ಎಂಬ ಸಸ್ಯ ಪ್ರಚೋದಕವನ್ನು 50 ಪಿ.ಪಿ.ಎಮ್ , ಪ್ರಮಾಣದಲ್ಲಿ ಕಾಯಿ ಕಚ್ಚುವ ಮತ್ತು ಬೆಳವಣಿಗೆಯ ಹಂತದಲ್ಲಿ ಸಿಂಪರಣೆ ಮಾಡಬೇಕು.

Black Pepper Cultivation

Black Pepper Cultivation

ತಳಿಗಳು :

ದೇಶದಲ್ಲಿ ಸರಿ ಸುಮಾರು 75 ಕಾಳುಮೆಣಸಿನ ತಳಿಗಳನ್ನು ಬೆಳೆಯುತ್ತಿದ್ದು ಕರಿಮುಂಡ ಮತ್ತು ಪತ್ನಿಯೂರು-1 ಮುಖ್ಯವಾಗಿ ಗುರುತಿಸಿಕೊಂಡಿವೆ.

ಪನ್ನಿಯೂರು -1 : ಈ ಸಂಕರಣ ತಳಿಯು ತೆರೆದ ವಾತಾವರಣಕ್ಕೆ ಹೆಚ್ಚು ಸೂಕ್ತವಾಗಿದ್ದು , ನೆರಳಿನ ಪ್ರದೇಶದಲ್ಲಿ ಉತ್ತಮ ಇಳುವರಿ ನೀಡಲಾರದು.

ಕರಿಮುಂಡ : ಈ ತಳಿಯು ಹೆಚ್ಚು ನೆರಳಿರುವ ಪ್ರದೇಶಗಳಿಗೆ ಸೂಕ್ತ.

ಐ.ಐ.ಎಸ್.ಆರ್ – ತೇವಮ್ : ಎತ್ತರದ ಮೈದಾನ ಪ್ರದೇಶಕ್ಕೆ ಸೂಕ್ತವಾದ ಈ ತಳಿಯು ಬುಡ ಕೊಳೆರೋಗಕ್ಕೆ ಸಹಿಸುವ ಶಕ್ತಿ ಹೊಂದಿದೆ.

ಪನ್ನಿಯೂರು -8 : ಈ ತಳಿಯು ಬರ ನಿರೋದಕ ಮತ್ತು ಬುಡಕೊಳೆರೋಗಕ್ಕೆ ನಿರೋದಕ ಶಕ್ತಿ ಹೊಂದಿದೆ.

ಪೌರ್ಣಮಿ : ಈ ತಳಿಗೆ ಜಂತು ಹುಳು ( ನೆಮಾಟೋಡ್ ) ಗಳ ಭಾದೆ ಕಡಿಮೆ.

ಸ್ಥಳದ ಆಯ್ಕೆ : ನೀರು ಬಸಿದು ಹೋಗುವ , ಅಧಿಕ ಪ್ರಮಾಣದ ಸಾವಯವ ಅಂಶ ಹೊಂದಿರುವ ಮಣ್ಣು ಮತ್ತು ನೇರವಾದ ಸುಡುವ ಸೂರ್ಯನ ಬೆಳಕಿನಿಂದ ಮುಕ್ತವಾದ ಜಾಗವು ಈ ಬೆಳೆಗೆ ಸೂಕ್ತ.

ಬೆಳೆ ಪದ್ದತಿ : ಮಿಶ್ರ ಬೆಳೆಯಲ್ಲಿ ಅಡಿಕೆ , ತೆಂಗು , ಮಾವು , ಹಲಸಿನ ಮರಗಳನ್ನು ಆಧಾರ ಮರಗಳಾಗಿ ಬಳಸಿಕೊಂಡು ಮತ್ತು ಅಂತರ ಬೆಳೆಯಾಗಿ ಕಾಫಿ ತೋಟಗಳಲ್ಲಿ ಸಿಲ್ವರ್ ಮರಗಳಿಗೆ ಹಬ್ಬಿಸಿ ಬೆಳೆಯಬಹುದು.

ನಾಟಿ ಮಾಡುವುದು :

ಸೂಕ್ತ ಆಧಾರ ಮರದಿಂದ ಉತ್ತರಾಭಿಮುಖವಾಗಿ 30 ಸೆಂ.ಮೀ ದೂರದಲ್ಲಿ 30 ಘನ ಸೆಂ.ಮೀ ಗಾತ್ರದಲ್ಲಿ ಗುಂಡಿಯನ್ನು ತೆಗೆದು , ಗುಂಡಿಯನ್ನು ಮೇಲ್ಮಣ್ಣು , 5 ಕೆ.ಜಿ ಕೊಟ್ಟಿಗೆ ಗೊಬ್ಬರ ಮತ್ತು 150 ಗ್ರಾಂ ಶಿಲಾರಂಜಕಗಳಿಂದ ಮಿಶ್ರಮಾಡಿ ತುಂಬಬೇಕು , ಪ್ರತಿ ಗುಂಡಿಗೆ ಒಂದು ಕಿಲೋ ಗ್ರಾಂ ಬೇವಿನ ಹಿಂಡಿ ಮತ್ತು 50 ಗ್ರಾಂ ಟ್ರೈಕೋಡರ್ಮ ಹಾರ್ಜಿಯಾನಂ ಶಿಲೀಂದ್ರ ನಾಶಕವನ್ನು ಗಿಡ ನೆಡುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು . ಗಿಡದ ಬುಡದ ಕಡೆಯ ಒಂದು ಗಿಣ್ಣು ಮತ್ತು ಬೇರುಗಳು ಮಣ್ಣಿನಲ್ಲಿರುವಂತೆ ನಾಟಿಮಾಡಬೇಕು.

Black Pepper Cultivation

 

ಪೋಷಕಾಂಶಗಳ ನಿರ್ವಹಣೆ :

ಮೂರು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಬಳ್ಳಿಗಳಿಗೆ 200 ಗ್ರಾಂ ಯೂರಿಯಾ , 200 ಗ್ರಾಂ ಶಿಲಾರಂಜಕ ಮತ್ತು 240 ಗ್ರಾಂ ಪೊಟ್ಯಾಷ್ ಗೊಬ್ಬರವನ್ನು 2 ಸಮಾನ ಕಂತುಗಳಲ್ಲಿ ( ಮೇ – ಜೂನ್ ) ಮತ್ತು ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ ಒದಗಿಸಬೇಕು . ಮೇಲೆ ತಿಳಿಸಿದ ಗೊಬ್ಬರದ 1/3 ಭಾಗವನ್ನು ಮೊದಲನೇ ವರ್ಷದ ಬಳ್ಳಿಗಳಿಗೆ , 2/3 ರಷ್ಟು 2 ನೇ ವರ್ಷದ ಬಳ್ಳಿಗಳಿಗೆ ನೀಡಬೇಕು . ಮಣ್ಣಿನ ಪರೀಕ್ಷೆಯ ಮೇರೆಗೆ 250 ಗ್ರಾಂ ಸುಣ್ಣವನ್ನು ಪ್ರತಿ ಬಳ್ಳಿಗೆ ಒದಗಿಸಬೇಕು.

ಘುಪೋಶಕಾಂಶಗಳ ಮಿಶ್ರಣದ ( ಕಾಳುಮೆಣಸು ಸ್ಪೆಷಲ್ ) ಬಳಕೆ :

ಲಘು ಪೋಷಕಾಂಶಗಳು ಪ್ರತಿ ಸಸ್ಯದ ಬೆಳವಣಿಗೆಗೆ ಅತ್ಯವಶ್ಯಕವಾದ ಮತ್ತು ಕಡಿಮೆ ಪ್ರಮಾಣದಲ್ಲಿ ಬೇಕಾಗಿರುವ ಅಂಶಗಳು . ಸಸ್ಯದ ಬೆಳವಣಿಗೆ ಮತ್ತು ಶಾರೀರಿಕ ಕ್ರಿಯೆಗೆ ಸಹಕಾರಿಯಾಗುವುದರ ಜೊತೆಗೆ ಗುಣಮಟ್ಟ , ಗಾತ್ರ , ಬಣ್ಣ , ರೋಗ ನಿರೋಧಕ ಶಕ್ತಿ ಹೆಚ್ಚುವುದರೊಂದಿಗೆ ನೀರು ಮತ್ತು ಗೊಬ್ಬರದ ಸದ್ಬಳಕೆಯು ಕಾಳುಮೆಣಸು ಸ್ಪೆಷಲ್ ಬಳಕೆಯಿಂದ ಕಾಳುಮೆಣಸಿನ ಬೆಳೆಯಲ್ಲಾಗುತ್ತದೆ.

ಸಾವಯವ ಕೃಷಿಯಲ್ಲಿ ಬಳಕೆ ಮಾಡಬಹುದಾದ ಲಘು ಪೋಷಕಾಂಶಗಳ ಮಿಶ್ರಣವು ನೈಸರ್ಗಿಕ ಸ್ನೇಹಿಯಾಗಿದ್ದು ಇಳುವರಿಯನ್ನು ಹೆಚ್ಚಿಸುತ್ತದೆ . ಪ್ರತಿ ಎಕರೆಗೆ ಸುಮಾರು 2 ಕೆ.ಜಿ ಯಷ್ಟು ಬೇಕಾಗುವ ಈ ಮಿಶ್ರಣಕ್ಕೆ ತಗಲುವ ವೆಚ್ಚ 400 ರೂ . ಮೆಣಸಿನ ಬಳ್ಳಿಗೆ ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರಸಿ ಕರೆ ಬರುವ ಸಮಯದಲ್ಲಿ ಮತ್ತು ಎರಡನೇ ಸಿಂಪರಣೆಯನ್ನು ಮೊದಲನೆ ಸಿಂಪರಣೆಯ ಎರಡು ತಿಂಗಳ ನಂತರ ನೀಡಬೇಕು.

ಉತ್ತಮ ಫಲಿತಾಂಶಕ್ಕಾಗಿ ಈ ಲಘುಪೋಶಕಾಂಶಗಳ ಮಿಶ್ರಣವನ್ನು ಯಾವುದೇ ರಾಸಾಯನಿಕ ವಸ್ತುಗಳ ಜೊತೆ ಬೆರಸದೆ ಸಿಂಪರಣೆ ಮಾಡಬೇಕು.

Black Pepper Cultivation

ಸಸ್ಯ ಸಂರಕ್ಷಣೆ :

ಥ್ರಿಪ್ಸ್ ನುಸಿ : ಎಲೆಯ ಅಂಚಿನ ಸುತ್ತಲೂ ಕಂಡು ಬಂದು ರಸ ಹೀರುವುದರಿಂದ ಎಲೆಗಳ ಅಂಚು ಮುರುಟಾಗಿ ಸುತ್ತಿಕೊಳ್ಳುತ್ತವೆ .

ಇದರ ನಿರ್ವಹಣೆಗೆ ಡೈಮಿಥೋಯೆಟ್ 1.7 ಮಿ.ಲೀ ಪ್ರತಿ ಲೀಟರ್ ನೀರಿಗೆ ಆಥವಾ 2 ಮಿ.ಲೀ ಕ್ವಿನಾಲ್‌ಫಾಸ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕಪ್ಪು ಕೊಳೆ ರೋಗ : ಮೇ – ಜೂನ್ ತಿಂಗಳಿನ ಮಳೆ ಪ್ರಾರಂಭದೊಂದಿಗೆ ಶೇ 0.125 ರ ಮೆಟಲಾಕ್ಸಿಲ್‌ ಮ್ಯಾಂಕೊಜೆಬ್ ನ ದ್ರಾವಣವನ್ನು | ( ಸಿಂಪರಣೆ ಮಾಡಿ , ಬಳ್ಳಿಗಳ ಕಾಂಡದ ಬುಡಕ್ಕೆ 5 ಲೀಟರ್‌ ಶೇ 0.125 ರ ಮೆಟಲಾಕ್ಸಿಲ್ ಮ್ಯಾಂಕೊಜೆಬ್ ಅನ್ನು ಉಣಿಸಬೇಕು . | ಇದೇ ಕ್ರಮಗಳನ್ನು ಆಗಸ್ಟ – ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಅನುಸರಿಸಬೇಕು.

ಜೊತೆಗೆ 30 ಗ್ರಾಂ ಟ್ರೈಕೋಡರ್ಮಾ ವಿರಿಡೆ ಶಿಲೀಂಧ್ರವನ್ನು 1 ಕಿಲೋಗ್ರಾಂ ಬೇವಿನ ಹಿಂಡಿಯೊಂದಿಗೆ ಮಿಶ್ರಣ ಮಾಡಿ ಪ್ರತಿ ಬಳ್ಳಿಗೆ ರಾಸಾಯನಿಕ ಔಷಧಿಗಳ ಬಳಕೆಯ 30 ದಿನಗಳ ಮುಂಚೆ ನೀಡಬೇಕಾಗುತ್ತದೆ.

ನಿಧಾನ ಸೊರಗು ರೋಗ : ರೋಗ ತೀವ್ರವಾಗಿ ಹಳದಿ ಬಣ್ಣವನ್ನು ಹೊಂದಿರುವ ಬಳ್ಳಿಗಳನ್ನು ನಾಶಪಡಿಸಬೇಕು . ರೋಗದ ಭಾದೆ ಹೆಚ್ಚಿರುವ ಪ್ರದೇಶಗಳಲ್ಲಿ ಮೊರೇಟ್ 10 ಜಿ ಅನ್ನು 15 ಗ್ರಾಂ ನಂತೆ ನಾಟಿಮಾಡುವ ಸಮಯದಲ್ಲಿ ಪ್ರತಿ ಬಳ್ಳಿಗೆ ಬಳಸಬೇಕು.

ಪೊರೇಟ್ 10 ಜಿ ಅನ್ನು 30 ಗ್ರಾಂ ನಂತೆ ಮೇ ಜೂನ್ ಮತ್ತು ಸೆಪ್ಟೆಂಬರ್ ನಲ್ಲಿ ನೀಡಿ ಕಾಪರ್ ಆಕ್ಸಿ ಕ್ಲೋರೈಡ್ ( 0.2% ) ಅನ್ನು ಬಳ್ಳಿಗಳ ಕಾಂಡದ ಬುಡಕ್ಕೆ ಉಣಿಸಬೇಕು . ಪೌರ್ಣಮಿ ತಳಿಯ ಬಳಕೆಯ ಜೊತೆ ಮೊಕೋನಿಯಾ ಕ್ಲಾಮಿಡಸೋರಿಯಾ ಅನ್ನು 50 ಗ್ರಾಂ ನಂತೆ ಪ್ರತಿ ಬಳ್ಳಿಗೆ ನೀಡಬೇಕು.

Black Pepper Cultivation

ಕೊಯ್ದು:

ನಾಟಿಮಾಡಿದ 2-3 ವರ್ಷಗಳ ನಂತರ ಬಳ್ಳಿಗಳು ಫಲ ಕೊಡಲು ಪ್ರಾರಂಭಿಸುತ್ತವೆ ಮೇ- ಜೂನ್‌ನಲ್ಲಿ ಹೂ ಬಿಟ್ಟು 6 ರಿಂದ 8 ತಿಂಗಳಲ್ಲಿ ಕಾಳುಗಳಾಗುತ್ತವೆ . ಮೈದಾನ ಪ್ರದೇಶದಲ್ಲಿ ನವೆಂಬರ್ ನಿಂದ ಜನವರಿಯಲ್ಲಿ ಕೊಯ್ಲಿಗೆ ಬಂದರೆ ಘಟ್ಟ ಪ್ರದೇಶಗಳಲ್ಲಿ ಜನವರಿಯಲ್ಲಿ ಪ್ರಾರಂಭವಾಗಿ ಮಾರ್ಚವರೆಗೆ ಮುಂದುವರೆಯುತ್ತದೆ , ಕೊಯ್ದು ಮಾಡುವಾಗ ಇಡೀ ಕರೆಗಳಲ್ಲಿಯ ಕಾಳುಗಳು ಚೆನ್ನಾಗಿ ಬಲಿತಿರಬೇಕು . ಪ್ರತಿ ಕರೆಗಳಲ್ಲಿ 2 ರಿಂದ 3 ಕಾಳುಗಳು ಹಣ್ಣಾಗಿರುವುದನ್ನು ಗಮನಿಸಿ ಕೊಯ್ದು ಮಾಡಬೇಕು.

ಸಂಸ್ಕರಣೆ :

ಉತ್ತಮ ಗುಣಮಟ್ಟದ ಕಾಳುಮೆಣಸು ಪಡೆಯಲು ಪ್ಲಾಸ್ಟಿಕ್ ಹೊದಿಕೆಗಳಲ್ಲಿ ಸಂಸ್ಕರಣೆ ಮಾಡಬಹುದು . ಈ ವಿಧಾನದಲ್ಲಿ ರ್ಪೂಣ್ರ ಬಲಿತ ಮೆಣಸಿನ ಕರೆಗಳನ್ನು ಕೊಯ್ದು ಮಾಡಿದ ನಂತರ ಒಂದೆರಡು ದಿನ ರಾಶಿ ಮಾಡಿ ಇರಿಸಿ ನಂತರ 200 ಗೇಜ್ ದಪ್ಪವುಳ್ಳ ಪಾರದರ್ಶಕ ಪ್ಲಾಸ್ಟಿಕ್ ಹಾಳೆಗಳನ್ನು ನೆಲದ ಮೇಲೆ ಹಾಸಿ ,ಹಾಳೆಯ ಮೇಲೆ ಕರೆಗಳನ್ನು ತೆಳುವಾಗಿ ಹರಡಿ ಮೇಲಿನಿಂದ ಇನ್ನೊಂದು ಪದರ ಪ್ಲಾಸ್ಟಿಕ್ ಹಾಳೆಯನ್ನು ಕರೆಯನ್ನು ಮುಚ್ಚುವಂತೆ ಹಾಕಬೇಕು.

ಕೆಳಗಿನ ಮತ್ತು ಮೇಲಿನ ಹಾಳೆಯ ನಾಲ್ಕು ದಿಕ್ಕುಗಳನ್ನು ಒಳಗೆ ಉತ್ಪಾದನೆಯಾಗುವ ಶಾಖ ಹೊರ ನುಸುಳದಂತೆ ಪ್ಯಾಕ್ ಮಾಡಬೇಕು . ಈ ಪ್ರತಿ ಕರೆಗಳನ್ನು ಮಧ್ಯಾಹ್ನದ ಬಿಸಿಲಿಗೆ ಸುಮಾರು 3-4 ತಾಸು ಕನಿಷ್ಠ 4 ದಿವಸ ಹರಡಬೇಕು.

ಪ್ರತಿ ದಿನ ಒಣಗಿಸಿದ ಕರೆಗಳು ಇನ್ನೂ ಬಿಸಿಯಾಗಿರುವಾಗಲೇ ಒಟ್ಟುಗೂಡಿಸಿ | ರಮಿಸಬೇಕು , ನಾಲ್ಕು ದಿವಸಗಳ ನಂತರ ಕರೆಗಳನ್ನು ಕೈಯಿಂದ ಉಜ್ಜಿ ಕಪ್ಪನೆಯ ಕಾಳು ಮತ್ತು ಕಡ್ಡಿಗಳನ್ನು ಬೇರ್ಪಡಿಸಬೇಕು . ಈ ಎಧಾನದಲ್ಲಿ ಕಲೆಗಳನ್ನು ಒಣಗಿಸುವುದರಿಂದ ಉತ್ತಮ ಗುಣಮಟ್ಟದ ಅಚ್ಚ ಕಪ್ಪು ಬಣ್ಣದ ಇತರೆ ಕಸ ಕಡ್ಡಿಗಳಿಂದ ಮುಕ್ತ ಕಾಳುಮೆಣಸು ಪಡೆಯಬಹುದಾಗಿದೆ.

 

ಕಾಳುಮೆಣಸಿನಲ್ಲಿ ಕಸಿಗಿಡಗಳ ಬಳಕೆ : ನಿಧಾನ ಸೊರಗು ರೋಗವು ಜಂತು ಹುಳು ಮತ್ತು ಶಿಲೀಂಧ್ರಗಳ ಮೂಲಕ ಹರಡುವುದರಿಂದ ಇದರ ನಿರ್ವಹಣೆ ಕಷ್ಟವಾಗಿರುತ್ತದೆ . ಪ್ರಧಾನವಾಗಿ ಬೆಳೆಯುತ್ತಿರುವ ಕಾಳುಮೆಣಸಿನ ತಳಿಗಳನ್ನು ಹಿಪ್ಪಲಿಗೆ ( ಪೈಪರ್‌ ಕೊಲುಬ್ರಿನಮ್ ) ಕಸಿ ಮಾಡುವುದರಿಂದ ನಿಧಾನ ಸೊರಗು ರೋಗಕ್ಕೆ ಹತೋಟಿಯನ್ನು ಪಡೆಯಬಹುದಾಗಿದೆ.

ಉತ್ತಮ ಬೇರಿನ ಲಕ್ಷಣವುಳ್ಳ ಹಿಪ್ಪಲಿಯು ಜಂತುಹುಳುಗಳಿಗೆ ನಿರೋದಕತೆಯನ್ನು ಹೊಂದಿದೆ . ಸಾಮಾನ್ಯವಾಗಿ ಕಸಿಮಾಡುವಾಗ ಹಿಪ್ಪಲಿಯನ್ನು “V” ಆಕಾರದಲ್ಲಿ ಕೆತ್ತಿ ನಂತರ ಕಸಿ ಗಿಡವಾದ ಕಾಳುಮೆಣಸಿನ ಬುಡವನ್ನು ಬೆಣೆ ಆಕಾರದಲ್ಲಿ ಸವರಿ ಎರಡು ಗಿಡಗಳನ್ನು ಸೇರಿಸಲಾಗುತ್ತದೆ.

ಕೆಲವೊಮ್ಮೆ ಇಂತಹ ಕಸಿ ಗಿಡದ ನಾಟಿಯ ನಂತರ ಕಾಳುಮೆಣಸಿನ ಬಳ್ಳಿಗಿಂತ ಹಿಪ್ಪಲಿಯು ಹೆಚ್ಚಿನ ಸದೃಡವಾದ ಬೆಳವಣಿಗೆ ಹೊಂದಿದಾಗ ಕಸಿಮಾಡಿದ ಜಾಗದಲ್ಲಿ ಬಿರುಕು ಮೂಡಿ ಕಾಳುಮೆಣಸಿನ ಬಳ್ಳಿಯು ಸಾಯುವುದುಂಟು , ಇದರ ನಿವಾರಣೆಗೆ ಕೆಲವು ನರ್ಸರಿಗಳು ಕಾಳುಮೆಣಸಿನ ಬುಡವನ್ನು ತಿರುಚಿದ “ V ಆಕಾರದಲ್ಲಿ ಕೆತ್ತಿ ನಂತರ ಹಿಪ್ಪಲಿಯ ತುದಿಯನ್ನು ಬೆಣೆ ಆಕಾರದಲ್ಲಿ ಸವರಿ ಎರಡು ಗಿಡಗಳನ್ನು ಸೇರಿಸುತ್ತಾರೆ.

ಕಸಿಮಾಡಲು ಪೆನ್ಸಿಲ್‌ ಗಾತ್ತದ ಪೈಪರ್ ಕೊಲೂಬ್ರನಮ್ ಅನ್ನು ಆಯ್ಕೆ ಮಾಡಿಕೊಂಡು ಗಿಡದ ಬುಡದಿಂದ 2 ಅಡಿ ಮೇಲೆ ಕಸಿಮಾಡಬೇಕಾಗುತ್ತದೆ , ಕಸಿ ಮಾಡಿದ ನಂತರ , ಕಸಿ ಬೆಸೆದುಕೊಂಡ ಮೇಲೆ ಹಿಪ್ಪಲಿಯಲ್ಲಿ ಬರುವ ಎಲ್ಲಾ ಹೊಸ ಚಿಗುರುಗಳನ್ನು ಆಗಾಗ ತೆಗೆಯುತ್ತಿರಬೇಕು . ಇಂತಹ ಕಸಿಮಾಡಿದ ಹಿಪ್ಪಲಿ , ಕಾಳುಮೆಣಸಿನ ಗಿಡಗಳು ಹೆಚ್ಚಿನ ನೀರನ್ನು ಬಯಸುತ್ತವೆ.

ಅಣಬೆ ಕೃಷಿ ಮಾಡಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿ |mushrooms

New business ideas

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments