Bisibelebath Recipe in Kannada, ಬಿಸಿಬೇಳೆ ಬಾತ್ ಮಾಡುವ ವಿಧಾನ, bisi bele bath in kannada, bisi bele bath maduva vidhana kannada, masala powder
Bisibelebath Recipe in Kannada
ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡೋರ ವರೆಗೂ ಪ್ರತಿಯೊಬ್ಬರೂ ಹೆಚ್ಚು ಇಷ್ಟ ಪಡುವಂತಹ ರೆಸಿಪಿ ಅಂದರೆ ಬಿಸಿಬೇಳೆಬಾತ್
ಕೇವಲ ಬೆಳಿಗ್ಗೆ ಅಲ್ಲದೆ ಸಂಜೆ ಟೈಮ್ ತಿನ್ನುವುದಕ್ಕೆ ಕೂಡ ತುಂಬಾ ಇಷ್ಟ ಪಡ್ತಾರೇ ನಾನು ತಿಳಿಸಿಕೊಡುತ್ತಾ ಇರುವ ಈ ರೆಸಿಪಿ ತುಂಬಾನೇ ರುಚಿಕರವಾದ ಬಾಯಲ್ಲಿ ನೀರೂರಿಸುವ ಟಿಫನ್ ಆಗಿದೆ.

ಈ ಟಿಫಿನ್ ಆರೋಗ್ಯಕ್ಕೂ ಕೂಡಾ ತುಂಬಾ ಒಳ್ಳೆಯ ಆಹಾರವಾಗಿದೆ ಅಷ್ಟೇ ಅಲ್ಲದೆ ಇದು ತುಂಬಾ ಸುಲಭವಾಗಿ ಆಗಿ ಕಡಿಮೆ ಇನ್ಗ್ರೇಡಿಅಂಟ್ಸ್ ಬಳಸಿ ಮಾಡುವಂಥ ಒಂದು ಅದ್ಬುತ ರುಚಿ ಹಾಗು ಸರಳವಾಗಿರುವ ರೆಸಿಪಿ.
ಹಾಗೆ ಈ ರೆಸಿಪಿ ಅನ್ನು ಬಾಯ್ಸ್, ಗರ್ಲ್ಸ್, ಯಾರು ಬೇಕಾದರೂ ಕೂಡ ತುಂಬಾ ಆರಾಮವಾಗಿ ಮಾಡಬಹುದು ಈ ರೆಸಿಪಿಯನ್ನು ಮನೆಯಲ್ಲಿ ಮಕ್ಕಳು ದೊಡ್ಡವರು ಎಲ್ಲರೂ ಕೂಡ ಹೆಚ್ಚು ಇಷ್ಟ ಪಟ್ಟು ತಿಂತಾರೆ ಹಾಗಾಗಿ ಇದು ಒಂದು ಎಲ್ಲರಿಗೂ ಅಚ್ಚು ಮೆಚ್ಚಿನ ಟಿಫನ್ ಅಂತಾನೆ ಹೇಳಬಹುದು.
ಹಾಗಾದ್ರೆ ಈ ರೆಸಿಪಿ ಮಾಡುವ ವಿಧಾನ ಗಳನ್ನೂ ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ನಮ್ಮದು ಈ ಲೇಖನವನ್ನು ಕೊನೆತನಕ ಓದಿ ಇಷ್ಟ ಆದರೆ ಶೇರ್ ಮಾಡಿ .

ನಾನು ಈ ದಿನ ತಿಳಿಸಿಕೊಡುತ್ತಾ ಇರುವಂತಹ ರೆಸಿಪಿ ಬಿಸಿ ಬೇಳೆ ಬಾಥ್.
ಇನ್ಗ್ರೇಡಿಯೆಂಟ್ಸ್ :-
ಮಸಾಲೆಗೆ
- ಕೊತ್ತಂಬರಿ 4 ಚಮಚ
- ಲವಂಗ 4
- ದಾಲ್ಚಿನ್ನಿ 2 ಚೂರು
- ಸಾಸಿವೆ
- ಜೀರಿಗೆ
- ಉದ್ದು
- ಅರಿಶಿನ
- ಎಣ್ಣೆ – ತಲಾ ಒಂದು ಚಮಚ
- ಇಂಗು ಚಿಟಿಕೆ
- ಕಾಳು ಮೆಣಸು ಕಾಲು ಚಮಚ
- ಕೆಂಪು ಮೆಣಸು 3
- ಕರಿಬೇವಿನ ಎಲೆ 10
ಹೆಚ್ಚಿದ ತರಕಾರಿಗಳು:
- ಬೀನ್ಸು
- ಕ್ಯಾರಟ್ಈ
- ರುಳ್ಳಿ
- ಬಟಾಣಿ-ತಲಾ ಕಾಲು ಲೋಟ
- ಆಲೂಗಡ್ಡೆ ೧
- ತೆಂಗಿನ ತುರಿಒಂದು ಲೋಟ
- ಅಕ್ಕಿ 1 ಲೋಟ
- ತುಪ್ಪ ಎರಡು ಚಮಚ
- ತೊಗರಿ ಬೆಳೆ ಅರ್ಧ ಲೋಟ
- ಉಪ್ಪು ರುಚಿಗೆ ತಕ್ಕಸ್ಟು
- ಹುಣಸೆ ರಸ ಎರಡು ಚಮಚ .
ತಯಾರಿಸುವ ವಿಧಾನ :-
ಮೊದಲು ಅನ್ನ ತಯಾರಿಸಿ ಇಟ್ಟುಕೊಳ್ಳಿ .
ಬೇಳೆ ಮತ್ತು ತರಕಾರಿಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಕೊಳ್ಳಿ .
ಮಸಾಲೆಗೆ ಹೇಳಿದ ಸಾಮಾನುಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹುರಿದು ತೆಂಗಿನ ಕಾಯಿ ತುರಿ ಜೊತೆಗೆ ರುಬ್ಬಿಕೊಳ್ಳಿ.
ಬಾಣಲಿಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಕಂದು ಬಣ್ಣ ಬರುವ ವರೆಗೂ ಕರಿದು ಇಟ್ಕೊಳ್ಳಿ.
ನಂತರ ಗೋಡಂಬಿಗೆ ಬೇಯಿಸಿದ ತರಕಾರಿ ಮತ್,ಬೇಳೆ ಮತ್ತು ರುಬ್ಬಿಟ್ಟ ಮಿಶ್ರಣವನ್ನು ಸೇರಿಸೆ ಚನ್ನಾಗಿ ಮಿಕ್ಸ್ ಮಾಡಿ
ಸ್ವಲ್ಪ ಉಪ್ಪು ಹಾಕಿ ದಪ್ಪನೆಯ ಹದಕ್ಕೆ ಬರುವ ವರೆಗೂ ಕುದಿಸಿ ಅನ್ನವನ್ನುಮಿಕ್ಸ್ ಮಾಡಿ ಇನ್ನು ಸ್ವಲ್ಪ ಉಪ್ಪು ಹಕೀಮತ್ತೆ ಮಿಕ್ಸ್ ಮಾಡಿ ಕೊನೆಯಲ್ಲಿ ಹುಣಸೆ ರಸವನ್ನು ಹಾಕಿ ಮಿಕ್ಸ್ ಮಾಡಿ
ಬಿಸಿಬೇಳೆ ಬಾತ್ ಮಾಡುವ ವಿಧಾನ
ಈಗ ರುಚಿಯಾದ ಬಿಸಿ ಬೇಳೆ ಬಾತ್ ಸವಿಯಲು ಸಿದ್ಧ ಇದನ್ನು ಪ್ಲೇಟ್ ನಲ್ಲಿ ಬಡಿಸಿ ಸರ್ವ್ ಮಾಡಿ ಹಾಗೆ ಮಿರ್ಚಿ ಅನ್ನು ಬಿಸಿ ಬೆಳೆ ಬಾತ್ ಜೊತೆ ಸೇರಿಸಿ ತಿಂದರೆ ತುಂಬಾನೇ ಟೇಸ್ಟಿಯಾಗಿರುತ್ತೆ.