Friday, June 24, 2022
HomeAgricultureವೀಳ್ಯದೆಲೆ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ | betel leaf cultivation in karnataka...

ವೀಳ್ಯದೆಲೆ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ | betel leaf cultivation in karnataka | Business IdeaS

ವೀಳ್ಯದೆಲೆ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ 

ಏಳು ಬಗೆಯ ವೀಳ್ಯದೆಲೆಗಳನ್ನು ಆಯುರ್ವೇದದಲ್ಲಿ ಬಣ್ಣಿಸಲಾಗಿದೆ. ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ. ವೀಳ್ಯದೆಲೆಯನ್ನು ಬೆಳೆಸುವುದು ಅಷ್ಟೇನೂ ಶ್ರಮದಾಯಕವಲ್ಲ. ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು. ಮೇಲ ಮೇಲಕ್ಕೆ ಹಬ್ಬುತ್ತದೆ. ಹಲವರಿಗೆ ಇದನ್ನು ಬೆಳೆಸುವುದೇ ಒಂದು ಕಸುಬು ಮತ್ತು ಜೀವನಾಧಾರ.
ತಲೆಮೇಲೆ ಬಂದದ್ದು ಎಲೆಮೇಲೆ ಹೋಗಲಿ ಎನ್ನುವ ಗಾದೆಮಾತಿನಂತೆ ಪ್ರತಿಯೊಂದು ಶುಭ ಕಾರ್ಯಕ್ಕಾಗಲಿ, ಅಶುಭ ಕಾರ್ಯಕ್ಕಾಗಲಿ ವೀಳ್ಯದೆಲೆ ಇರಲೇಬೇಕು. ನಿಮಗೆಲ್ಲ ಗೊತ್ತಿರುವಹಾಗೆ ಊಟದ ನಂತರ ಅಡಿಕೆ ಎಲೆ ಹಾಕುವುದು ಸಾಮಾನ್ಯವಾದ ವಾಡಿಕೆ ಆಗಿದೆ 
ವೀಳ್ಯದೆಲೆಯನ್ನು ಅಡಿಕೆ ಮತ್ತು ಸುಣ್ಣದೊಂದಿಗೆ ಸೇರಿಸಿ ತಿನ್ನಲು ಉಪಯೋಗಿಸುತ್ತಾರೆ . ವೀಳ್ಯದೆಲೆಯ ಸುಣ್ಣದಂಶ ಮತ್ತು ಕೆರೋಟಿನ್ ಒದಗಿಸುತ್ತದೆ . ಇದನ್ನು ಏಕಬೆಳೆ ಅಥವಾ ಮಿಶ್ರಬೆಳೆಯಾಗಿ ಬೆಳೆಯಬಹುದು . ಈ ಕೃಷಿಯ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನ ವನ್ನು ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ . 
betel leaf cultivation

ನಾಟಿ ಮಾಡುವ ಕಾಲ :

ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ .
ಮಣ್ಣು ಮತ್ತು ಹವಾಗುಣ :
ವೀಳ್ಯದೆಲೆಗೆ ಫಲವತ್ತಾದ ಮಣ್ಣು ಬೇಕು ,
ಜೇಡಿಗೋಡು ಮಣ್ಣು ಉತ್ತಮ .
ಆಳವಾದ ಸಾವಯವಯುಕ್ತ , ನೀರು ಬಸಿದು ಹೋಗುವ ಮಣ್ಣು ವೀಳ್ಯದೆಲೆಗೆ ಸೂಕ್ತವಾದುದು .
ಉಷ್ಣವಲಯದಲ್ಲಿ ಹೆಚ್ಚು ತೇವಾಂಶವಿರುವ ಹಾಗೂ ನೆರಳಿರುವ ಕಾಡುಗಳಲ್ಲಿ ವೀಳ್ಯದೆಲೆ ಚೆನ್ನಾಗಿ ಬೆಳೆಯುತ್ತದೆ .
1250 ರಿಂದ 4750 ಮಿ . ಮೀ . ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಹಾಗೂ ಸಮುದ್ರಮಟ್ಟದಿಂದ 1500 ಮೀಟರ್ ಎತ್ತರದ ಪ್ರದೇಶಗಳವರೆಗೂ ಇದನ್ನು ಬೆಳೆಯಬಹುದು ,
betel leaf cultivation
ತಳಿಗಳು :
ಎಲೆಯ ಆಕಾರ 
ಮೆದುತ್ವ 
ಘಾಟು ಮತ್ತು ವಾಸನೆಯ ಆಧಾರದ ಮೇಲೆ ಅನೇಕ ತಳಿಗಳು ಜನಪ್ರಿಯವಾಗಿವೆ
ಅಂಬಾಡಿ 
ಕರಿಬಳ್ಳಿ 
ನಾಗಬಳ್ಳಿ 
ಹೊಸಬಳ್ಳಿ 
ಜನಬಳ್ಳಿ 
ಚಪಬಳ್ಳಿ 
ಮರಎಲೆ 
ಕಲ್ಕತ್ತಪಾನ್ 
ಮೈಸೂರು ಎಲೆ
ಮತ್ತು ವಿಮಂಗಲ ಸ್ಥಳಿಯ ಇವು ಪ್ರಮುಖ ತಳಿಗಳು
ಸಸ್ಯಾಭಿವೃದ್ಧಿ :
ನೀವೇ ಈ ಸಸಿಯನ್ನು ಬೆಳೆಸಿ ಬಿತ್ತನೆ ಮಾಡಬಹುದು ಅಥವಾ ನಿಮ್ಮ ಹತ್ತಿರದ ಕೃಷಿ ಇಲಾಖೆಯಲ್ಲಿ ಖರೀದಿ ಮಾಡಬಹುದು ಹಾಗೆ ನಿಮ್ಮ ಹತ್ತಿರದ ನರ್ಸರಿಯಲ್ಲೂ ಕೂಡ ಖರೀದಿ ಮಾಡಿ ಕೃಷಿ ಮಾಡಬಹುದು .
ಪೂರ್ತಿ ಬಲಿತ ಬಳ್ಳಿಯ ಕುಡಿಯ ಭಾಗದಿಂದ ಕಡ್ಡಿಗಳನ್ನು ಕತ್ತರಿಸಬೇಕು .
ತುಂಡಿನ ಉದ್ದ 30-45 ಸೆಂ.ಮೀ , ಹಾಗೂ 3-5 ಕಣ್ಣುಗಳಿರಬೇಕು .
ಎರಡು ಕಣ್ಣುಗಳು ಭೂಮಿಯ ಅಡಿಯಲ್ಲಿರುವಂತೆ ನಾಟಿ ಮಾಡಬೇಕು ,
ಕಡ್ಡಿಯ ಸುತ್ತಲೂ ಮಣ್ಣನ್ನು ಅದುಮಬೇಕು ,
ಪ್ಲಾಸ್ಟಿಕ್ ಚೀಲಗಳಲ್ಲೂ ಕಡ್ಡಿಗಳನ್ನು ನಾಟಿ ಮಾಡಿ ಗಿಡ ತಯಾರಿಸಿ ನಾಟಿ ಮಾಡಬಹುದು ,
betel leaf cultivation

ನಾಟಿ ಮಾಡುವುದು :

ವೀಳ್ಯದೆಲೆ ಬೆಳೆಯಬೇಕೆಂದಿರುವ ಭೂಮಿಯನ್ನು ಆಳವಾಗಿ ಅಗೆದು ಅಥವಾ ಉಳುಮೆಮಾಡಿ ಹದಮಾಡಿಟ್ಟುಕೊಳ್ಳಬೇಕು .
ತೋಟದ ಸುತ್ತಲೂ ಗಾಳಿಯ ತಡೆಗಾಗಿ ಗೋಡೆ ತಡೆ ಅಥವಾ ಜೈವಿಕ ತಡೆಗಳಾದ ನುಗ್ಗೆ , ಹಿಪ್ಪುನೇರಳೆ , ಸೀಮೆ ಹುಣಸೆ ಇತ್ಯಾದಿ ಮರಗಳನ್ನು ದಟ್ಟವಾಗಿ ಬೆಳೆಯಬೇಕು .
ಪದ್ಧತಿಗಳಿಗನುಸಾರವಾಗಿ ಕಾಲುವೆ , ಪಾತಿ ಮತ್ತು ಬಸಿ ಕಾಲುವೆಗಳನ್ನು ನಿರ್ಮಿಸಬೇಕು ,
ನೆರಳು ಮತ್ತು ಆಧಾರಕ್ಕಾಗಿ ನಾಟಿ ಮಾಡುವ ಮರಗಳ ಬೀಜಗಳನ್ನು ( ಅಗಸೆ , ಹಾಲವಾಣ ಇತ್ಯಾದಿ ) 4 ವಾರಗಳ ಮುಂಚೆ ನಾಟಿ ಮಾಡಬೇಕು ,
ಅನಂತರ ಬೇರು ಬಿಟ್ಟ ವೀಳ್ಯದೆಲೆ ಬಳ್ಳಿಯ ತುಂಡುಗಳನ್ನು ಮರಗಳ ಬಳಿ ನಾಟಿ ಮಾಡಬೇಕು .

ಸೂಚನೆ :

ವೀಳ್ಯದೆಲೆ ಬೆಳೆಯಲು ನೆರಳು ಮತ್ತು ಆಧಾರಕ್ಕಾಗಿ ನಾಟಿ ಮಾಡುವ ಮರಗಳಲ್ಲಿ ಹಾಲವಾಣದ ಎರಿಥೀನಾ ಸಬ್ಬುಂಬೈನ್ಸ್ ಎಂಬ ಜಾತಿಯ ಮರಗಳನ್ನು ಉಪಯೋಗಿಸುವುದು ,
ಇದು ಹಾಲವಾಣದಲ್ಲಿ ಭಾದಿಸುವ ಕಣಜ ಕೀಟಕ್ಕೆ ತಡೆದುಕೊಳ್ಳುವ ಶಕ್ತಿ ಹೊಂದಿದೆ .
ಅಮೋನಿಯಂ ಸಲೈಟ್ ಆಫ್ ಪೊಟ್ಯಾಷ್ ಬಳಸುವುದು ಒಳ್ಳೆಯದು .
ನಾಟಿ ಕ್ರಮಗಳು
ಪಾತಿ ಪದ್ಧತಿ :
60 ಸೆಂ.ಮೀ. ವ್ಯಾಸವುಳ್ಳ ದುಂಡನೆಯ ಅತಿ ಆಳವಲ್ಲದ ಪಾತಿಗಳನ್ನು 2 ಮೀ . x 2.5 ಮೀ . ಅಂತರದಲ್ಲಿ ತೆಗೆಯಬೇಕು .
ಬಳ್ಳಿ ಹಬ್ಬಿಸಲು ಬೆಳೆಯುವ ಮರಗಳ ಬೀಜಗಳನ್ನು ಪಾತಿಗಳ ಪಕ್ಕದಲ್ಲಿ 45 ಸೆಂ.ಮೀ. ಅಂತರದಲ್ಲಿ ತೆಗೆದ ಕಾಲುವೆಗಳಲ್ಲಿ ಬಿತ್ತಬೇಕು .
ಪಾತಿಗಳಿಗೆ ಕೆಂಪು ಮಣ್ಣು , ಮರಳು ಮತ್ತು ಕುರಿ ಹಿಕ್ಕೆ ಮತ್ತು ಕೊಟ್ಟಿಗೆ ಗೊಬ್ಬರ ತುಂಬಿಸಬೇಕು .
ಮೇ ಜೂನ್ ತಿಂಗಳುಗಳಲ್ಲಿ ಬಲಿತ ಬಳ್ಳಿಯಿಂದ ಕತ್ತರಿಸಿದ ಕಡ್ಡಿಗಳನ್ನು ಪಾತಿಗಳಲ್ಲಿ ನಾಟಿ ಮಾಡಬೇಕು ,
 ಬೆಳಗಾವಿ ಪದ್ಧತಿ :
ಇದು ಬೆಳಗಾವಿ ಜಿಲ್ಲೆಯಲ್ಲಿ ರೂಢಿಯಲ್ಲಿದೆ .
ಈ ವಿಧಾನದಲ್ಲಿ ತೋಟದಲ್ಲಿ ಹಲವು ಭಾಗಗಳಿದ್ದು ಪ್ರತಿ ಭಾಗಕ್ಕೂ ‘ ಚಿರಾ ‘ ಎಂದು ಕರೆಯಲಾಗುತ್ತದೆ .
ಸುಮಾರು ಒಂದು ಗುಂಟೆಯಷ್ಟುಳ್ಳ ಪ್ರತಿ ಚಿರಾವನ್ನು 12 ಉಪ ವಿಭಾಗಗಳಾಗಿ ಮಾಡಲಾಗುತ್ತದೆ .
ಬಳ್ಳಿ ಹಬ್ಬಿಸಲು ಬೆಳೆಯುವ ಮರಗಳನ್ನು ಚಿರಾ ಉಪ ವಿಭಾಗಗಳ ಮಧ್ಯ ತೆಗೆದಿರುವ ಬಸಿಕಾಲುವ ಅಥವಾ ನೀರು ಕಾಲುವೆಗಳಲ್ಲಿ 156 ನಾಟಿ ಮಾಡಬೇಕು .
ವೀಳ್ಯದೆಲೆ ಬಳ್ಳಿಯ ತುಂಡುಗಳನ್ನು ಸಸಿ ಮಡಿಗಳಲ್ಲಿ ಆಗಸ್ಟ್ – ಅಕ್ಟೋಬರ್ ತಿಂಗಳುಗಳಲ್ಲಿ ನಾಟಿ ಮಾಡಬೇಕು ,

ಆಳ ಗುಳಿ ಪದ್ಧತಿ :

 

ಹದ ಮಾಡಿದ ಭೂಮಿಯಲ್ಲಿ 90 ಸೆಂ . ಮೀ . ಅಗಲ ಮತ್ತು 90 ಸೆಂ.ಮೀ , ಆಳ ಮತ್ತು 4.5-6 ಮೀ . ಉದ್ದದ ಕಾಲುವೆಗಳನ್ನು 90 ಸೆಂ . ಮೀ . ಅಂತರದಲ್ಲಿ ತೆಗೆಯಬೇಕು .

ಈ ಕಾಲುವೆಗಳನ್ನು ಕೆಂಪು ಮಣ್ಣು , ಮರಳು ಮತ್ತು ಕೊಟ್ಟಿಗೆ ಗೊಬ್ಬರದಿಂದ ತುಂಬಬೇಕು .

ಎರಡು ಕಾಲುವೆಗಳ ನಡುವೆ ನೀರು ಕಾಲುವೆಗಳನ್ನು ನಿರ್ಮಿಸಬೇಕು .

ಕಾಲುವೆಯ ಬದಿಯಲ್ಲಿ 90 ಸೆಂ.ಮೀ. ಅಂತರದಲ್ಲಿ ಹಾಲವಾಣ , ಅಗಸೆ ಬೀಜಗಳನ್ನು ಬಿತ್ತಿ , ಮೇ – ಜೂನ್ ತಿಂಗಳುಗಳಲ್ಲಿ ವೀಳ್ಯದೆಲೆ ಕಡ್ಡಿಗಳನ್ನು ನಾಟಿ ಮಾಡಬೇಕು ,

betel leaf cultivation

ಗುಳಿ ಕಾಲುವೆ ಮತ್ತು ಸಸಿ ಮಡಿ ಪದ್ಧತಿ :

ಹದ ಮಾಡಿದ ಭೂಮಿಯಲ್ಲಿ 1.8 ಮೀ ಅಗಲ , 6-12 ಮೀ . ಉದ್ದದ ಗುಳಿಗಾಲುವೆಗಳನ್ನು ನಿರ್ಮಿಸಬೇಕು .
ಎರಡು ಗುಳಿಗಾಲುವೆಗಳ ಮಧ್ಯೆ 45 ಸೆಂ.ಮೀ. ಆಳದ ನೀರು ಪೂರೈಕೆಗೆ ಬಸಿಗಾಲುವೆಗಳನ್ನು ತೆಗೆಯಬೇಕು ,
ಗುಳಿಗಾಲುವೆಗಳನ್ನು ಕೆಂಪು ಮಣ್ಣು , ಮರಳು ಮತ್ತು ಕೊಟ್ಟಿಗೆ ಗೊಬ್ಬರದಿಂದ ತುಂಬಿಸಬೇಕು .
90 ಸೆಂ.ಮೀ. ಅಂತರದಲ್ಲಿ ಹಾಲವಾಣ ಅಥವಾ ಅಗಸೆ ಬೀಜಗಳನ್ನು ಬಿತ್ತಬೇಕು .
ಮಳೆಗಾಲದಲ್ಲಿ ವೀಳ್ಯದೆಲೆ ಕಡ್ಡಿಗಳನ್ನು ಈ ಮರಗಳ ಬಳಿ ನಾಟಿ ಮಾಡಬೇಕು ,

ಕಿರುಪಟ ಪದ್ಧತಿ :
ಹದಮಾಡಿದ ಭೂಮಿಯಿಂದ ಮುಖ್ಯ ನೀರು ಕಾಲುವೆಗಳನ್ನು ತೆಗೆಯಬೇಕು .
ಈ ಕಾಲುವೆಯಿಂದ ದ್ವಿತೀಯ ನೀರು ಕಾಲುವೆಗಳನ್ನು 21 ಮೀ . ಅಂತರದಲ್ಲಿ ತೆಗೆಯಬೇಕು .
ಈ ಕಾಲುವೆಗಳ ಮಧ್ಯ 30 ಸೆಂ . ಮೀ . ಅಗಲ ಮತ್ತು 30 ಸೆಂ . ಮೀ , ಆಳವಿರುವ ಬಸಿಕಾಲುವೆಗಳನ್ನು ತೆಗೆಯಬೇಕು .
ದ್ವಿತೀಯ ನೀರು ಕಾಲುವೆ ಮತ್ತು ತೃತೀಯ ಕಾಲುವೆಗಳ ( ಬಸಿಗಾಲುವೆಗಳ ) ನಡುವೆ 90 ಸೆಂ.ಮೀ. ಅಗಲದ ಪಟಗಳು ಏರ್ಪಡುತ್ತವೆ .
ಈ 90 ಸೆಂ.ಮೀ. ಅಗಲದ ಪಟಗಳಲ್ಲಿ ವೀಳ್ಯದೆಲೆ ಕಡ್ಡಿಗಳನ್ನು ನಾಟಿಮಾಡಬೇಕು .
ನೆರಳಿನ ಮರಗಳನ್ನು ಬಸಿಗಾಲುವೆಗಳ ಪಕ್ಕದಲ್ಲಿ ನಾಟಿಮಾಡಬೇಕು .
ವೀಳ್ಯದೆಲೆಯನ್ನು ಅಡಿಕೆ ಮರದ ಆಧಾರವಾಗಿ ಮೇಲೆ ಸಹ ಬೆಳೆಯಬಹುದು ,
ಬಳ್ಳಿ ಇಳಿಸುವುದು :
ಬಳ್ಳಿ ಮರಕ್ಕೆ ಹಚ್ಚಿದ ಒಂದು ವರ್ಷದ ನಂತರ ಎಲೆಯ ಗಾತ್ರ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ ,
ಆಗ ಬಳ್ಳಿಗೆ ಪುನಶ್ವೇತನ ನೀಡಲು ಬಳ್ಳಿ ಇಳಿಸಬೇಕು .
ಸಂಪೂರ್ಣ ಬಳ್ಳಿಯನ್ನು ಮರದಿಂದ ಕೆಳಗಿಳಿಸಬೇಕು .
ಬಳ್ಳಿಯ ಕೆಳಭಾಗವನ್ನು ಸುರುಳಿಯಾಗಿ ಸುತ್ತಿ ಸುಮಾರು 60 ಸೆಂ.ಮೀ ನಷ್ಟು ಬಲ್ಲೆಯ ಕುಡಿಭಾಗ ಮೇಲಿರುವಂತೆ , ಪಾತಿಯಲ್ಲಿ ಹೂಳಬೇಕು .
ಇದರಿಂದ ಬರುವ ಚಿಗುರುಗಳಿಂದ ಹೆಚ್ಚು ಇಳುವರಿ ಮತ್ತು ಅಧಿಕ ಗುಣಮಟ್ಟದ ಎಲೆಗಳನ್ನು ಪಡೆಯಬಹುದು .
ಈ ಕಾರ್ಯವನ್ನು ಬೇಸಿಗೆಯಲ್ಲಿ ಮಾಡುವುದರಿಂದ ನೀರು ಕಡಿಮೆ ಪ್ರಮಾಣದಲ್ಲಿದ್ದರೂ ಸಾಕಾಗುತ್ತದೆ .
ಗೊಬ್ಬರ ಕೊಡುವುದು ಮತ್ತು ಅಂತರ ಬೇಸಾಯ :
ವೀಳ್ಯದೆಲೆಯು ಹೆಚ್ಚು ಗೊಬ್ಬರವನ್ನು ಬಯಸುವ ಬೆಳೆ .
ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಬಳ್ಳಿಗಳನ್ನು ಇಳಿಸಿದ ಕೂಡಲೇ ಮುಂಗಾರು ಮಳೆಗೆ ಮೊದಲು ಒದಗಿಸಬೇಕು .
ಮೊಳಕೆಯೊಡೆದ ಆಧಾರದ ಮರಗಳ ಸಸಿಗಳಲ್ಲಿ ಬೇಕಾದಷ್ಟನ್ನು ಮಾತ್ರ ಉಳಿಸಿಕೊಳ್ಳಬೇಕು .
ಆಧಾರ ಮರಗಳ ಕಾಂಡ ನೇರವಾಗಿದ್ದು , ಮುಳ್ಳು ಮತ್ತು ರೆಂಬೆರಹಿತವಾಗಿರಬೇಕು .
ಬಳ್ಳಿಯನ್ನು ಮರಕ್ಕೆ ಹಬ್ಬಿಸಿ ಬಾಳೆ ನಾರಿನಿಂದ ಗಂಟು ಹಾಕಿ ಕಟ್ಟಬೇಕು ,
betel leaf cultivation
ಕೊಯ್ಲು ಮತ್ತು ಇಳುವರಿ :
ಸಾಮಾನ್ಯವಾಗಿ ನಾಟಿಮಾಡಿದ 18 ತಿಂಗಳ ನಂತರ ವೀಳ್ಯದೆಲೆಯು ಕೊಯ್ಲಿಗೆ ಬರುತ್ತದೆ .
ಬಲಿತ ಎಲೆಗಳನ್ನು ತೊಟ್ಟು ಸಹಿತ ಕೊಯ್ಲು ಮಾಡಬೇಕು .
ಒಂದು ವರ್ಷದಲ್ಲಿ ಪ್ರತಿ ಹೆಕ್ಟೇರಿನಿಂದ ಸುಮಾರು 20-30 ಲಕ್ಷ ಎಲೆಗಳನ್ನು ನಿರೀಕ್ಷಿಸಬಹುದು .
 ಕೀಟಗಳು           ಹಾನಿಯ ಲಕ್ಷಣಗಳು ನಿರ್ವಹಣಾ ಕ್ರಮಗಳು
ವೀಳ್ಯದಲೆ ತಿಗಣೆ ಕಾಂಡ ಮತ್ತು ಆಪ್ಪರೆ ತಿಗಣೆಗಳು ಎಲೆಗಳಿಂದ ರಸ ಹೀರುತ್ತವೆ . ರಸ ಹೀರುವ ಸಮಯದಲ್ಲಿ ವಿಷ ಪದಾರ್ಥವನ್ನು ಎಲೆಗಳಿಗೆ ಸೇರಿಸುವುದರಿಂದ , ಎಲೆಗಳ ಮೇಲೆ ಒಣ ಚುಕ್ಕೆಗಳಾಗುತ್ತವೆ . ನಂತರ ಒಣಗುತ್ತವೆ . ಕೀಟಗಳ ಹತೋಟಿಗಾಗಿ , 2 ಮಿ . ಲೀ . ಭೋಸಲೋನ್ 35 ಇ.ಸಿ , ಅಥವಾ 2 ಮಿ . ಲೀ . ಮೆಲಾಥಿಯಾನ್ 50 ಇ.ಸಿ. ಅಥವಾ 4 ಗ್ರಾಂ ಕಾರ್ಬಾರಿಲ್ 50 ಡಬ್ಲೂ ಪಿ . ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು .
ಹಿಟ್ಟು ತಿಗಣೆ  ಬಿಳಿ ಹಿಟ್ಟಿನಂತಹ ತಿಗಣೆಗಳು ಎಲೆಗಳ ಮೇಲೆ ಮತ್ತು ಎಳೆಯದಾದ ರೆಂಬೆಗಳ ಮೇಲೆ ಗುಂಪಾಗಿ ಕುಳಿತು ರಸವನ್ನು ಹೀರುತ್ತವೆ . ಇಂತಹ ಬಾಧೆಗೊಳಗಾದ ಭಾಗಗಳು ಮೊದಲು ಹಳದಿಯಾಗಿ ನಂತರ ಒಣಗುತ್ತವೆ .
ಜೇಡ  ನುಶಿ ಜೇಡ ನುಶಿಗಳು ಗುಂಪಾಗಿ ಎಲೆಗಳ ಕೆಳಭಾಗದಿಂದ ರಸ ಹೀರುತ್ತವೆ . ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ ಪ್ರತಿ ಲೀಟರ್ ನೀರಿಗೆ 5 ಮಿ.ಲೀ ಡೈಕೋಫಾಲ್ 20 ಇ.ಸಿ , ಬೆರೆಸಿ ಸಿಂಪಡಿಸಬೇಕು

ಮಾರ್ಕೆಟಿಂಗ್ ಮಾಡುವುದು ಹೇಗೆ?

ಹೋಲ್ಸೇಲ್ ಮಾರ್ಕೆಟ್ ಗೆ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಬಹುದು ಅಥವಾ ನೀವು ಹೋಲ್ಸೇಲ್ ಡೀಲರ್ಸ್ ಗೆ ಮಾರಾಟ ಮಾಡಬಹುದು ,
ನೀವೇ ನೇರವಾಗಿ ಮಾರಾಟ ಮಾಡಿದರೆ ಹೆಚ್ಚು ಲಾಭವನ್ನು ಗಳಿಸಬಹುದು , ಡೀಲರ್ಸ್ ಗೆ ಸೆಲ್ ಮಾಡಿದರೆ ಸ್ವಲ್ಪ ಕಡಿಮೆ ಲಾಭ ನಿಮಗೆ ಸಿಗುತ್ತದೆ . 
ಲಾಭ ಎಷ್ಟು ಗಳಿಸಬಹುದು
100 ಎಲೆಗಳ ಒಂದು ಕಟ್ಟಿಗೆ ಮಾಮೂಲು ದಿನಗಳಲ್ಲಿ 20 ರಿಂದ 30 ರೂ ಇದ್ದರೆ ,
ಹಬ್ಬ ಹರಿದಿನಗಳಲ್ಲಿ ಇದರ ಬೆಲೆ 60 ರಿಂದ 80  ರೂ ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ.
betel leaf cultivation
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments