Tuesday, September 20, 2022
HomeBusinessಬಾಳೆ ಎಲೆ ಮಾರಾಟ ಬ್ಯುಸಿನೆಸ್ ಐಡಿಯಾ | Banana Leaf Business Idea

ಬಾಳೆ ಎಲೆ ಮಾರಾಟ ಬ್ಯುಸಿನೆಸ್ ಐಡಿಯಾ | Banana Leaf Business Idea

ಬಾಳೆ ಎಲೆ ಮಾರಾಟ ಬ್ಯುಸಿನೆಸ್ ಐಡಿಯಾ

 

 

ಬಾಳೆ ಎಲೆ ಬ್ಯುಸಿನೆಸ್ ಮಾಡುವುದು ಹೇಗೆ?

ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು?

ಮಾರ್ಕೆಟಿಂಗ್ ಮಾಡುವುದು ಹೇಗೆ ?

ಎಷ್ಟು ಲಾಭ ಗಳಿಸಬಹದು?

ಬಾಳೆ ಹಣ್ಣುಗಳಿಗಾಗಿ ತೋಟ ಬೆಳೆಸುವುದಕಿಂತಲೂ ಈಗ ಎಲೆಗಳಿಗಾಗಿ ತೋಟಗಳನ್ನು ಬೆಳೆಸುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಾಹ ಸಮಾರಂಭ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳಲ್ಲೂ ಹಾಗೂ ಹೊಟೇಲ್‌ಗಳಲ್ಲಿ `ಬಾಳೆ ಎಲೆ~ ಊಟದ್ದೇ ವಿಶೇಷ. ಊಟ ಮಾಡಲು ಬಾಳೆ ಎಲೆಯೆ ಇರಬೇಕು ಎನ್ನುವುದು ಈಗ ಕಡ್ಡಾಯ.
Banana Leaf Business Idea
ಹೀಗಾಗಿ ಊಟಕ್ಕಾಗಿ ಬಳಸುವ ಒಂದು ಬಾಳೆ ಎಲೆ ಬೆಲೆ 2.50 ರೂಪಾಯಿವರೆಗೂ ಇದೆ. ಇನ್ನು ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಬೆಳಗಿನ ತಿಂಡಿಗೆ ಬಳಸುವ ಒಂದು ಕಟ್ಟು (ಒಂದು ಕಟ್ಟಿನಲ್ಲಿ 40 ರಿಂದ 50 ಎಲೆಗಳಿರುತ್ತವೆ) ಎಲೆ ಬೆಲೆ 10 ರೂಪಾಯಿ.ದೊಡ್ಡಬಳ್ಳಾಪುರದಲ್ಲಿ ಬಾಳೆ ಮಂಡಿಗಳಂತೆ ಬಾಳೆ ಎಲೆ ಮಾರಾಟಕ್ಕಾಗಿಯೇ ಪ್ರತ್ಯೇಕ ಅಂಗಡಿಗಳು ಇವೆ.
ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಹುತೇಕ `ತುದಿ~(ಸುಳಿ) ಎಲೆಗಳೆ ಇರಬೇಕು ಎನ್ನುತ್ತಾರೆ. ಎಲಕ್ಕಿ ಬಾಳೆ ಗಿಡದಲ್ಲಿ ಮಾತ್ರ ಊಟದ ಎಲೆ ದೊರೆಯುತ್ತವೆ. ಪಚ್ಚಬಾಳೆ ಗಿಡದ ಎಲೆಗಳು ದಪ್ಪ ಇರುತ್ತವೆ. ಇದರಿಂದಾಗಿ ಸಾಗಾಣಿಕೆಯಲ್ಲಿ ಹಾಗೂ ತೋಟದಲ್ಲಿ ಇರುವಾಗಲೂ ಗಾಳಿಗೆ ಎಲೆಗಳು ಸೀಳಿ ಹೋಗುತ್ತವೆ.
Banana Leaf Business Idea
ಹೀಗಾಗಿ ಎಲೆ ಬಳಕೆಗೆ ಏಲಕ್ಕಿ ಬಾಳೆ ಗಿಡ ಮಾತ್ರ ಬಳಸಲಾಗುತ್ತದೆ. ಈ ಗಿಡದ ಎಲೆಗಳು ತೆಳುವು ಹಾಗೂ ಆಕರ್ಷಕ ಬಣ್ಣವನ್ನು ಹೊಂದಿರುತ್ತವೆ. ಸಾಗಾಣಿಕೆ, ಬಳಕೆಗೆ ಸುಲಭ
     ಸಾಮಾನ್ಯವಾಗಿ ಏಲಕ್ಕಿ ಬೆಳೆಗಾರರು ಮೊದಲ ಎರಡು ಅಥವಾ ಮೂರನೇ ಬೆಳೆಯನ್ನು ಮಾತ್ರ ಹಣ್ಣುಗಳಿಗಾಗಿ ಬೆಳೆಯುತ್ತಾರೆ. ಮೂರನೇ ಬೆಳೆ ನಂತರ ಸಹಜವಾಗಿಯೇ ಬಾಳೆ ಗೊನೆಗಳು ತೂಕ, ಗುಣಮಟ್ಟದಲ್ಲಿ ಕಡಿಮೆಯಾಗುತ್ತವೆ.
ಹೀಗಾಗಿ ಗಿಡದ ಸುತ್ತ ಬರುವ ಕಂದುಗಳು (ಪುಟ್ಟ ಸಸಿಗಳನ್ನು) ಕಿತ್ತು ಹಾಕದೆ ಎಲೆಗಳಿಗಾಗಿ ಬೆಳೆಸಲಾಗುತ್ತದೆ.

ಬಾಳೆ ಎಲೆ ಬ್ಯುಸಿನೆಸ್ ಮಾಡುವುದು ಹೇಗೆ?

      ನಿಮ್ಮ ಮನೆಯಲ್ಲಿರುವ ಜಮೀನಿನಲ್ಲೇ ಬಾಳೆಯನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು ಬಾಳೆ ಯಿಂದ ಏನಲ್ಲ ಪ್ರಯೋಜನ ಇದೆ ಅಂತ ನಿಮಗೆಲ್ಲ ಗೊತ್ತ್ತಿರುವ ವಿಷಯ.

ಬಾಳೆ ಹಣ್ಣು ಸೇರಿದಂತೆ ಬಾಳೆ ಎಲೆ ಹಾಗೆ ಬಾಳೆ ದಿಂಡುಅಷ್ಟೇ ಅಲ್ಲದೆ ದೇವರಿಗೆ ಪೂಜೆ ಮಾಡಲು ಬಾಳೆ ಸಸಿಯನ್ನು ಬಳಸುತ್ತಾರೆ ಆದ್ದರಿಂದ ಬಹು ಉಪಯೋಗಿ ಬಾಳೆಯನ್ನು ನೀವು ಬೆಳೆದು ಇಷ್ಟೆಲ್ಲ ಉಪಯೋಗವನ್ನು ಪಡೆಯಬಹುದು.

ಬಾಳೆ ಎಲೆ ವ್ಯಾಪಾರಕ್ಕೆ ಹೆಚ್ಚು ಬಂಡವಾಳ ಬೇಡ. ಆದರೆ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಮುಟ್ಟಿಸಬೇಕು. ಸಾಕಷ್ಟು ಪರಿಶ್ರಮ ಪಡಬೇಕು. ಇಷ್ಟಿದ್ದರೆ ಇಲ್ಲಿ ನಷ್ಟವೆನ್ನುವುದಿಲ್ಲ.

Banana Leaf Business Idea

Banana Leaf Business Idea

     ಬಾಳೆಗಿಡಗಳನ್ನು ಬೆಳೆಸುವುದು ಏಕೆ ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿ ನೋಡಿ. ಕೂಡಲೇ ಸಿಗುವ ಉತ್ತರ ಬಾಳೆಹಣ್ಣಿಗಾಗಿ! ಸಾಮಾನ್ಯವಾಗಿ ಕೃಷಿಕ ಕೂಡ ಬಾಳೆ ಗಿಡಗಳನ್ನು ಬೆಳೆಸುವಾಗ ಒಳ್ಳೆಯ ಬಾಳೆಗೊನೆಗಳು ಬರಲಿ ಎಂದು ಬಯಸುತ್ತಾನೆ. ಬಾಳೆಗೊನೆಗಳಿಗಿಂತ ಹೆಚ್ಚಾಗಿ ಬಾಳೆ ಎಲೆಗಳಿಗಾಗಿಯೇ ಈ ಬೆಳೆಯನ್ನು ಬೆಳೆಯುವವರು ಅಪರೂಪ.

ಮಾರ್ಕೆಟಿಂಗ್ ಮಾಡುವುದು ಹೇಗೆ ?

ಹೋಲ್ಸೇಲ್ ಡೀಲರ್ಸ್ ಗೆ ಸೆಲ್ ಮಾಡಬಹುದು ಅಥವಾ ನೀವೇ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು

Banana Leaf Business Idea

ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು? ಎಷ್ಟು ಲಾಭ ಗಳಿಸಬಹದು?

       ಬಾಳೆಎಲೆ ಬ್ಯುಸಿನೆಸ್ ಎರಡು ಟೈಪ್ ಮಾಡಬಹುದು ಒಂದು ನಿಮ್ಮ ಮನೆಯಲ್ಲೇ ಇರುವ ಜಮೀನಲ್ಲಿ ಬಾಳೆ ಬೆಳೆದು ಅದರ ಎಲೆ ಮಾರಾಟ ಮಾಡುವುದು ಇನ್ನೊಂದು ನೀವು ಹೋಲ್ಸೇಲ್ ಆಗಿ ರೈತರ ಹತ್ತಿರ ಖರೀದಿ ಮಾಡುವುದು .

ರೈತರ ಹತ್ತಿರ ನೇರವಾಗಿ ಖರೀದಿ ಮಾಡಬೇಕು ಅಂದರೆ ಹೆಚ್ಚು ಬಂಡವಾಳದ ಅವಶ್ಯಕತೆ ಇಲ್ಲ ಕೇವಲ 5 ಸಾವಿರ ಇದ್ದರೆ ಪ್ರಾರಂಭದಲ್ಲಿ ಸಾಕಾಗುತ್ತದೆ ಬೇಡಿಕೆಗೆ ತಕ್ಕಂತೆ ಖರೀದಿಸಿ ಬ್ಯುಸಿನೆಸ್ ಮಾಡಬಹುದು, ನೀವು ಹೊಲದಲ್ಲಿ ಬೆಳೆದು ಸೆಲ್ ಮಾಡುತ್ತೀನಿ ಅಂದರೆ ಹೆಚ್ಚು ಖರ್ಚು ಬರುತ್ತದೆ .

New Business ideas

Banana Leaf Business Idea

ತರಕಾರಿ ನರ್ಸರಿ ಬೇಸಾಯ ಮಾಡುವುದು ಹೇಗೆ? | Vegetable cultivation in Nursery

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments