Wednesday, June 22, 2022
HomeAgricultureಬಾಳೆ ಕೃಷಿ ನಿಮ್ಮ ಜೀವನವನ್ನೇ ಬದಲಿಸಬಲ್ಲದು

ಬಾಳೆ ಕೃಷಿ ನಿಮ್ಮ ಜೀವನವನ್ನೇ ಬದಲಿಸಬಲ್ಲದು

ಬಾಳೆ ಕೃಷಿ ನಿಮ್ಮ ಜೀವನವನ್ನೇ ಬದಲಿಸಬಲ್ಲದು

 

ಬಾಳೆ  ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ , ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ ,

ಶೇಕಡಾ 27 ರಷ್ಟು ಶರ್ಕರಪಿಷ್ಟವನ್ನು ಹೊಂದಿದ್ದು  ಶಕ್ತಿಯ ಆಗರವಾಗಿದೆ. 

ಬಾಳೆ ಹಣ್ಣಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆಯೂ ಕೂಡ ಹೆಚ್ಚಾಗಿದೆ ನೀವು ಈ ಬಾಳೆಯ ಕೃಷಿಯನ್ನು ಆಧುನಿಕ ತಂತ್ರಜ್ಞವನ್ನು ಅಳವಡಿಸಿಕೊಂಡು ಕೃಷಿ ಮಾಡಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹದು.

ಈ ಬಾಳೆಯ ಕೃಷಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಬಾಳೆ ಕೃಷಿ ಕುರಿತು ಮಾಹಿತಿಯನ್ನು ಪಡೆದು ಉತ್ತಮ ಆದಾಯ ಗಳಿಸಿ. ಹಾಗೆ ಈ ಲೇಖನ ಇತರರಿಗೂ ಉಪಯುಕ್ತ ಎಂದಾದರೆ ತಪ್ಪದೆ ಶೇರ್ ಮಾಡಿ.

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ಮಣ್ಣು :

ಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಗೋಡು ಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯೂ ಬೆಳೆಯಬಹುದು , ತೇವಾಂಶವನ್ನು ಹೆಚ್ಚುಕಾಲ ಕಾಯ್ದಿಟ್ಟುಕೊಳ್ಳುವಂತಹ ಹೆಚ್ಚು ಸಾವಯವ ಅಂಶವವಿರುವ ಮಣ್ಣು ಈ ಬೆಳೆಗೆ ಅತೀ ಯೋಗ್ಯ ಬಾಳೆಯನ್ನು ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದು ,

ನಾಟಿ ಕಾಲ :

ಚಳಿಗಾಲವನ್ನು ( ನವೆಂಬರ್ – ಡಿಸೆಂಬರ್ ) ಹೊರತುಪಡಿಸಿ ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ , ಜೂನ್ ಜುಲೈ ತಿಂಗಳು ಅತೀ ಸೂಕ್ತ .

ತಳಿಗಳು :

ಭಾರತದಲ್ಲಿ 50 ಕ್ಕೂ ಹೆಚ್ಚು ತಳಿಗಳನ್ನು ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದ್ದು , ಕೆಳಗೆ ತಿಳಿಸಿದ ಕೆಲ ತಳಿಗಳು ನಮ್ಮ ರಾಜ್ಯದಲ್ಲಿ ಜನಪ್ರಿಯವಾಗಿವೆ .

1 ) ಹೂವನ್ ( ಸುಗಂಧಿ ) :

ಇದು ಸಾಮಾನ್ಯವಾಗಿ ಎಲ್ಲಾ ಕಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ತಳಿ . ಗಿಡ ಎತ್ತರವಾಗಿದ್ದು , ತೆಳು ಸಿಪ್ಪೆಯಿಂದ ಕೂಡಿದ ಚಿಕ್ಕ ಗಾತ್ರದ ಹಣ್ಣುಗಳನ್ನು ಹೊಂದಿರುತ್ತದೆ . ಪ್ರತಿಯೊಂದು ಗೊನೆಯಲ್ಲಿ ಸರಾಸರಿ 225 ಹಣ್ಣುಗಳಿರುತ್ತವೆ .

ಹಣ್ಣುಗಳು ಸ್ವಲ್ಪ ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತವೆ . ಹಣ್ಣಿನ ತಿರುಳಿನಲ್ಲಿ ಅಭಿವೃದ್ಧಿ ಹೊಂದಿದ ಚಿಕ್ಕ ಬೀಜಗಳೂ ಕೂಡಾ ಇರುತ್ತವೆ , ಈ ತಳಿಯು ಪನಾಮಾ ಸೊರಗು ರೋಗ ಮತ್ತು ಎಲೆಚುಕ್ಕೆ ರೋಗಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು , ನಮ್ಮ ರಾಜ್ಯದ ಜನಪ್ರಿಯ ತಳಿಗಳಲ್ಲೊಂದಾಗಿದೆ ,

2 ) ಪಚ್ಚ ಬಾಳೆ ( ಡ್ವಾರ್ಫ್ ಕ್ಯಾವೆಂಡಿಷ್ ) :

ಇದು ನಮ್ಮ ರಾಜ್ಯದ ಮತ್ತೊಂದು ಜನಪ್ರಿಯ ತಳಿಯಾಗಿದೆ . ಗಿಡಗಳು ಗಿಡ್ಡವಾಗಿ ಸುಮಾರು 6 ಅಡಿ ಎತ್ತರವಾಗಿರುತ್ತವೆ . ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲರು , ಹಣ್ಣುಗಳು ದೊಡ್ಡವಾಗಿದ್ದು ತುದಿಯಲ್ಲಿ ಬಾಗಿರುತ್ತವೆ , ಇದರ , ತಿರುಳು ಮೃದುವಾಗಿದ್ದು , ಸಿಹಿಯಾಗಿರುತ್ತದೆ . ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳು ಇರುತ್ತವೆ , ಈ ತಳಿಯು ಪನಾಮಾ ಸೊರಗು ರೋಗ ನಿರೋಧಕವಾಗಿದ್ದು , ರಫ್ತು ಸಾಮರ್ಥ್ಯವನ್ನು ಪಡೆದಿದೆ .

3 ) ರೋಬಸ್ಟ್ :

ಇದು ಮಧ್ಯಮ ಎತ್ತರದ ತಳಿಯಾಗಿದ್ದು “ ಕಾವಂಡಿದ್ ” ಗುಂಪಿಗೆ ಸೇರಿದೆ . ದೊಡ್ಡ ಗಾತ್ರದ ಹೆಚ್ಚು ಹಣ್ಣುಗಳುಳ್ಳ ಗೊನೆಗಳನ್ನು ಕೊಡುತ್ತದೆ . ಹಣ್ಣುಗಳು ನೆಟ್ಟಗೆ ಇರು , ಗೊನೆಯು ಸಿಲಿಂಡರ್ ಆಕಾರವಾಗಿರುತ್ತದೆ . ಆದ್ದರಿಂದ ರಫ್ತು ಮಾಡಲು ಸೂಕ್ತವಾಗಿದೆ , ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ

4 ) ದ ಸೈಟ್ ( ಜಿ -9 ) :

ಇದು ಮಧ್ಯಮ ಎತ್ತರದ ತಳಿಯಾಗಿದ್ದು ಕ್ಯಾವೆಂಡಿಶ್ ಗುಂಪಿಗೆ ಸೇರಿದ ಹಣ್ಣಗಳನ್ನು ಕೋಲನ್ನು ಹೆಚ್ಚು ದೊಡ್ಡದಾಗಿರುತ್ತದೆ . ಹಣ್ಣುಗಳು ನೆಟ್ಟಗೆ ಇದ್ದು ಗೊನೆಯ ಸಿಲಿಂಡರ ಆಕಾರವಾಗಿರುತ್ತದೆ . ಆದ್ದರಿಂದ ರಫ್ತು ಮಾಡಲು ಸೂಕ್ತವಾಗಿದೆ . ಪನಾಮಾ ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ .

 ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

5 ) ರಸಬಾಳೆ :

ಇದು ಅತ್ಯಂತ ಸ್ವಾದಿಷ್ಟ ತಳಿಗಳಲ್ಲೊಂದಾಗಿದ್ದು , ಗಿಡ 8-9 ಅಡಿ ಎತ್ತರ ಬೆಳೆಯುವುದು , ಮಧ್ಯಮ ಗಾತ್ರದ ಗಟ್ಟ ತಿರುಳಿನ ಆಕರ್ಷಕ ಹಳದಿ ವರ್ಣದ , ತೆಳು ಸಿಪ್ಪೆ ಹೊಂದಿದ ರುಚಿಕರವಾದ ಹಣ್ಣನ್ನು ಕೊಡುತ್ತದೆ , ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ , ಈ ತಳಿಯನ್ನು ರಾಜ್ಯದ ಕೆಲ ಆಯ್ದ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ ( ಉದಾ : ಮೈಸೂರು ಜಿಲ್ಲೆ

6 ) ರಾಜಾಪುರಿ ( ಜವಾರಿ / ಗುಜರಾತಿ / ವಲ್ಲಾ ) :

ಇದು ಸ್ಥಳೀಯ ಬಾಳೆ ತಳಿಯಾಗಿದ್ದು , ಬೆಳಗಾವಿ ಜಿಲ್ಲೆಯ ಮುನವಳ್ಳಿ , ಸವದು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ . ಗಿಡ್ಡ ತಳಿಯಾಗಿದ್ದು , ಗೊನೆಯು ಸುಮಾರು 10-15 ಕಿ.ಗ್ರಾಂ . ತೂಕವಿದ್ದು , ಹಣ್ಣುಗಳು ಹೆಚ್ಚು ರುಚಿಯಾಗಿರುತ್ತವೆ . ಪ್ರತಿ ಗೊನೆಯು ಸುಮಾರು 8-10 ಹಣಿಗೆಗಳನ್ನು ಹಾಗೂ 90-10 ಹಣ್ಣುಗಳನ್ನು ಹೊಂದಿರುತ್ತದೆ .

7 ) ಏಲಕ್ಕಿ ಬಾಳೆ / ಪುಟ್ಟಿಬಾಳೆ / ಮಿಟ್ಟಿಬಾಳೆ :

ಮಧುರವಾದ ರುಚಿ , ಸಿಹಿ ಮತ್ತು ಉತ್ತಮ ಶೇಖರಣಾ ಗುಣಮಟ್ಟವನ್ನು ಹೊಂದಿರುವ ತಳಿ , ಗಿಡ ಎತ್ತರವಾಗಿದ್ದು , 13-14 ತಿಂಗಳಲ್ಲಿ ಕಟಾವಿಗೆ ಬರುವುದು , ಗೊನೆಯು 10-14 ಕಿ , ಗ್ರಾಂ , ಇದ್ದು , 150-160 ಹಣ್ಣುಗಳನ್ನು ಹೊಂದಿರುತ್ತದೆ . ಪ್ರತಿ ಗೊನೆಯಲ್ಲಿ 7-8 ಹಣಿಗೆಗಳು ಇರುತ್ತದೆ , ಹಬ್ಬಗಳು ಚಿಕ್ಕದಾಗಿದ್ದು , ಹಳದಿ ಬಣ್ಣದ ತೆಳುವಾದ ಸಿಪ್ಪೆಯನ್ನು ಹೊಂದಿರುತ್ತದೆ . ತಿರುಳು ಕೆನೆ ಬಣ್ಣದ್ದಿರುತ್ತದೆ . ಇದು ಬರೋಯಿಂಗ್ ಸಸ್ಯ ಜಂತು ರೋಗ ನಿರೋಧಕತೆಯನ್ನು ಹೊಂದಿದೆ .

8 ) ನೇಂದ್ರನ್ :

ಇದು ಅಡುಗೆಗೆ ಹಾಗೂ ತಿನ್ನುವುದಕ್ಕೆ ಯೋಗ್ಯವಾದ ಚಳಿ , ಇದರಲ್ಲಿ ಹಣ್ಣುಗಳು 30 ಸೆಂ . ಮೀ.ಗೂ ಹೆಚ್ಚು ಉದ್ದವಾಗಿದ್ದು ಎಣಗಳಿಂದ ಕೂಡಿರುತ್ತದೆ . ತಿರುಳು ರುಚಿಯಾಗಿರುತ್ತದೆ . ಉಪ್ಪೇರಿ ( ಚಿಪ್ಪ ) ಮಾಡಲು ಬಹಳ ಯೋಗ್ಯವಾದ ತಳಿ .

9 ) ಮಧುರಂಗ :

ಇದನ್ನು ಹೆಚ್ಚಾಗಿ ಅಡುಗೆಗೆ ಬಳಸಲು ಬೆಳೆಯುತ್ತಿರುವ ತಳಿ . ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ . ಕಾಯಿ ಗಾತ್ರದಲ್ಲಿ ದೊಡ್ಡದಾಗಿರುವುದಲ್ಲದೆ ಏಣುಗಳಿಂದ ಕೂಡಿರುತ್ತದೆ . ಉತ್ತಮವಾಗಿ ಬೆಳೆದ ಗೊನೆಯಲ್ಲಿ ಸುಮಾರು 100 ಹಣ್ಣುಗಳಿರುತ್ತವೆ .

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ಗುಡ್ಡಗಾಡು ಪ್ರದೇಶಕ್ಕೆ

1, ಕ್ಯಾವೆಂಡಿಷ್

2, ರೋಬಪ್ಪ

3, ಗ್ರಾಂಡ್ ನೈನ್ ಮತ್ತು

4, ಏಲಕ್ಕಿ ಬಾಳೆ

ರಸ ಬಾಳೆ , ಮುಟ್ಟಬಾಳೆ , ಕರಿಬಾಳೆ ಮತ್ತು ಬೂದುಬಾಳೆ ತಳಿಗಳನ್ನು ಸಣ್ಣ ಪ್ರಮಾಣದಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ .

ಕರಾವಳಿ ಪ್ರದೇಶಕ್ಕೆ 

1. ನೇಂದ್ರ ಬಾಳೆ

2. ರಸಬಾಳೆ

3 , ರೋಬಪ್ಪ ಮತ್ತು

4 , ಮೈಸೂರು ಬಾಳೆ

ಬಾಳೆ ಬೇಕಾಗುವ ಬೇಸಾಯ ಪರಿಕರಗಳು

ತಳಿಗಳು ಅಂತರ ಗುಣಿಗಳ ಸಂಖ್ಯೆ ( ಹೆಕ್ಟರ್ ಗೆ )
ರೋಬಸ್ಟ್ 2.2 ಮೀ x 18 ಮೀ 2250
ಕ್ಯಾವೆಂಡಿಷ್ ( ಪಚ್ಚಬಾಳೆ ) 1.8 ಮೀ . x 18 ಮೀ 3086
1.5 2ಮೀ x 1.5ಮೀ 4444
ಇತರ ತಳಿಗಳು 2.1 ಮೀ X 21 ಮೀ 2270

 

ಸೂಚನೆ : ಹೆಚ್ಚು ಸಾಂದ್ರ ಬೇಸಾಯದಲ್ಲಿ ರೋಬಸ್ಟಾ ಬಾಳೆಯ ತಳಿಯನ್ನು 1.5 x 15 ಮೀ . ಅಂತರದಲ್ಲಿ ( 4444 ಗಿಡಗಳು ) ಅಂತರದಲ್ಲಿ ನಾಟಿಮಾಡಬೇಕು.

 

ನಾಟಿಗೆ ಬಳಸುವ ಕಂದುಗಳು :

ಬಾಳೆ ನಾಟಿಮಾಡಲು ಸೂಕ್ತವಾದ ಕಂದುಗಳನ್ನು ಅಥವಾ ಅಂಗಾಂಶ ಸಸಿಗಳನ್ನು ಉಪಯೋಗಿಸಿ , ಬಾಳೆ ಕಂದುಗಳನ್ನು 2 ಗುಂಪುಗಳಾಗಿ ವಿಂಗಡಿಸಬಹುದು . ಮೊದಲನೆಯದು ಕತ್ತಿ ಕಂದು , ಈ ಕಂದುಗಳಲ್ಲಿ ಎಲೆಗಳು ಕತ್ತಿ ಆಕಾರದಲ್ಲಿ ಉದ್ದಕ್ಕಿರುತ್ತವೆ . ಎರಡನೆಯದು ನೀರು ಕಂದು , ಇದರಲ್ಲಿ ಪ್ರಾರಂಭದಲ್ಲೇ ಎಲೆಗಳು ಅಗಲವಾಗಿ ಹೊರಡುತ್ತವೆ , ಹೊಸದಾಗಿ ಬಾಳೆತೋಟ ಪ್ರಾರಂಭ ಮಾಡಲು ಕತ್ತಿ ಕಂದುಗಳನ್ನು ಬಳಸಿ . ಇವು ಉತ್ತಮ ದರ್ಜೆಯ ಗೊನೆಗಳನ್ನು ಬಿಡಬಲ್ಲವು .

ನೀರು ಕಂದುಗಳನ್ನು ಬಳಸಬಾರದು , ಇವುಗಳಿಂದ ಬೆಳೆ ಸ್ವಲ್ಪ ತಡವಾಗಿ ಬರುವುದಲ್ಲದೆ ಉತ್ತಮ ದರ್ಜೆಯ ಗೊನೆಗಳು ಸಹ ಬರುವುದಿಲ್ಲ . ಚೆನ್ನಾಗಿರುವ ಉತ್ತಮ ಬಗೆಯ ರೋಗರಹಿತ ಅಂಗಾಂಶ ಸಸಿಗಳನ್ನು ಉಪಯೋಗಿಸಬಹುದಾಗಿದೆ .

ಕೊಟ್ಟಿಗೆ ಗೊಬ್ಬರ : 40 ಟನ್ ( ನಾಟಿಗೆ ಮುಂಚೆ ) ಪ್ರತಿ ಹೆಕ್ಟೇರಿಗೆ 

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ನಾಟಿ ಮಾಡುವುದು :

ಬಾಳೆ ನಾಟಿ ಮಾಡಬೇಕೆಂದಿರುವ ಪ್ರದೇಶವನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ , ಭೂಮಿಯನ್ನು ಹದ ಮಾಡಿಟ್ಟುಕೊಳ್ಳಬೇಕು , ನಂತರ ತಳಿಗಳಿಗನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ 45 x 45 x 45 ಸೆಂ.ಮೀ. ಇರುವ ಗುಣಿಗಳನ್ನು ಅಗೆಯಬೇಕು , ಈ ಗುಣಿಗಳಲ್ಲಿ ಚೆನ್ನಾಗಿ ಸಮಪ್ರಮಾಣದಲ್ಲಿ ಬೆರೆಸಿದ ಕೊಟ್ಟಿಗೆ ಗೊಬ್ಬರ , ಕಾಂಪೋಸ್ಟ್ ಮತ್ತು ಮೇಲ್ಕಣ್ಣಿನ ಮಿಶ್ರಣವನ್ನು ಹಾಕಿ ತುಂಬಬೇಕು .

ನಾಟಿ ಮಾಡಲು ಕೇವಲ ಕತ್ತಿ ಆಕಾರದ ಸಮ ವಯಸ್ಸಿನ ಕಂದುಗಳನ್ನು ಬಳಸಬೇಕಲ್ಲದೇ , ಬಂಚಿಟಾಪ್ ಮತ್ತು ನಂಜುರೋಗ ಮುಕ್ತ ತಾಯಿ ಗಿಡದಿಂದ ಕಂದುಗಳನ್ನು ಆಯ್ಕೆ ಮಾಡಬೇಕು . ನಾಟಿ ಮಾಡಿದ ಕೂಡಲೇ ನೀರುಣಿಸಬೇಕು , ನಂತರ ಮಣ್ಣು ಮತ್ತು ಹವಾಗುಣಕ್ಕನುಸಾರವಾಗಿ ಪ್ರತಿ 4-5 ದಿನಗಳಿಗೊಮ್ಮೆ ನೀರು ಹಾಯಿಸಬೇಕು 

ಬಾಳೆಯಲ್ಲಿ ( ಶೇ . 80 ರಷ್ಟು ಬಾಷ್ಟ್ರೀಕರಣ ) ಮೊದಲನೆಯ ಹಂತದಲ್ಲಿ ಪ್ರತಿ ದಿವಸ 8 ರಿಂದ 12 ಲೀಟರ್‌ ಹಾಗೂ ನಾಲ್ಕನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಹಾಗೂ ( ಶೇ . 70 ರಷ್ಟು ಬಾಜೀಕರಣ ) ಎರಡನೇಯ ಹಂತದಲ್ಲಿ 13 ರಿಂದ 18 ಲೀಟರ ಹಾಗೂ ಮೂರನೇಯ ಹಂತದಲ್ಲಿ 19 ರಿಂದ 25 ಲೀಟರ್ ನೀರು ಪ್ರತಿ ದಿವಸ ಬಾಜೀಕರಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು .

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ನಾಟಿ ನಂತರದ ಬೇಸಾಯ :

ತಾಯಿ ಗಿಡ ಹೂ ಬಿಡುವ ತನಕ ಪಕ್ಕದಲ್ಲಿ ಬರುವ ಎಲ್ಲಾ ಕಂದುಗಳನ್ನು ತೆಗೆಯುತ್ತಿರಬೇಕು , ನಂತರ ಕೂಳೆ ಬೆಳೆಗಾಗಿ ಕೇವಲ ಒಂದು ಕಂದನ್ನು ಬಿಡುವುದರಿಂದ ಸಿಗಾಟೋಕಾ ಎಲೆ ಚುಕ್ಕೆ ರೋಗದ ಬಾಧೆ ಕಡಿಮೆಯಾಗುತ್ತದೆ , ಕಂದುಗಳಿಂದ ಬೆಳೆಸಿದ ಬಾಳೆಗೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನಾಟಿ ಮಾಡಿದ 2 ನೇ , 4 ನೇ ಮತ್ತು 6 ನೇ ತಿಂಗಳಿನ ನಂತರ ಮೂರು ಸಮ ಕಂತುಗಳಲ್ಲಿ ಕೊಡಬೇಕು , ಅಂಗಾಂಶ ಬಾಳೆಗೆ ಕೋಷ್ಟಕದಲ್ಲಿ ತಿಳಿಸಿದ ಹಂತಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಒದಗಿಸಬೇಕು .

ಬೆಳೆ ಪ್ರದೇಶವನ್ನು 2-3 ಸಲ ಅಗೆತ ಮಾಡಿ ಮಣ್ಣನ್ನು ಸಡಿಲಗೊಳಿಸಿ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು . ಗೊನೆ ಬಂದ ನಂತರ ಬಾಳೆಗಿಡ ಗಾಳಿಯ ಹೊಡೆತದಿಂದ ಮತ್ತು ಗೊನೆಯ ಭಾರದಿಂದ ಕೆಳಗೆ ಬೀಳದಂತೆ ತಡೆಯಲು ಪ್ರತಿ ಗಿಡಕ್ಕೂ ಕೋಲನ್ನು ಕಟ್ಟಿ ಆಸರೆ ಒದಗಿಸಬೇಕು , ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕೊನೆಯ ಕಾಯಿಗಳು ಕಚ್ಚಿದಾಗ ಕತ್ತರಿಸಿ ಹಾಕಬೇಕು .

ಬಾಳೆತೋಟ ಪ್ರಾರಂಭ ಮಾಡಿದ ಮೊದಲ 3-4 ತಿಂಗಳು ಅಲ್ಪಾವಧಿ ತರಕಾರಿ ಬೆಳೆಗಳನ್ನು ಮತ್ತು ದ್ವಿದಳಧಾನ್ಯ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು .

     ಬಾಳೆಯ ಅಧಿಕ ಇಳುವರಿಗಾಗಿ ಬಾಳೆಯ ಸ್ಪೆಷಲ್‌ನ್ನು ಪ್ರತಿ ಲೀಟರ್ ನೀರಿಗೆ 5,0 ಗ್ರಾಂ ನಂತೆ 5 ಹಂತಗಳಲ್ಲಿ ಗಿಡ ನೆಟ್ಟ 5 ತಿಂಗಳ ನಂತರ ಸಿಂಪಡಿಸಬೇಕು . ಒಟ್ಟಾರೆ ಪ್ರತಿ ಹೆಕ್ಟೇರಿಗೆ 25.0 ಕಿ.ಗ್ರಾಂ ಬಾಳೆ ಸ್ಪೆಷಲ್ ಬೇಕಾಗುತ್ತದೆ .

 

ಕಳೆ ನಿರ್ವಹಣೆ : ಮಣ್ಣಿನ ಹೊದಿಕೆ ಕಳೆ ನಿರ್ವಹಣೆಗೆ ಉಪಯುಕ್ತವಾಗಿದೆ , ಸಾಧ್ಯವಾಗದ ಪ್ರದೇಶದಲ್ಲಿ ಕಳೆನಾಶಕಗಳನ್ನು ಉಪಯೋಗಿಸಬಹುದಾಗಿದೆ .

ತಳಿ                           ಇಳುವರಿ ಹೆಕ್ಟರ್ ಗೆ

ಪಚ್ಚ ಬಾಳೆ                  30-40 ಟನ್

ರೋಬಾ                      38-45 ಟನ್

ಇತರೆ                        20-30 ಟನ್

 

ಕೊಯ್ಲಿನ ನಂತರ ತಾಯಿ ಗಿಡವನ್ನು ಕತ್ತರಿಸಿ ಹಾಕುವುದು :

ಮಾಗಿದ ಗೊನೆಯನ್ನು ಕೊಯ್ದು ಮಾಡುವ ಹಂತದಲ್ಲಿ ಇನ್ನೊಂದು ಮರಿ ಕಂದನ್ನು ಬೆಳೆಯಲು ಬಿಡಬೇಕು , ಗೊನೆಯನ್ನು ಕೊಯ್ದು ಮಾಡಿದ ನಂತರ , ತಾಯಿ ಗಿಡವನ್ನು ಹಂತ ಹಂತವಾಗಿ 15 ರಿಂದ 20 ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಬೇಕು . ಇದರಿಂದ ಪೋಷಕಾಂಶಗಳು ಬೆಳೆಯುತ್ತಿರುವ ಮರಿಗಿಡಗಳಿಗೆ ಲಭ್ಯವಾಗುತ್ತವೆ .

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ಬಾಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ :

ಮಣ್ಣು , ಹವಾಗುಣ , ತಳಿ ಮತ್ತು ಅಂತರ ಇವುಗಳನ್ನು ಅವಲಂಬಿಸಿ ಬಾಳೆ ಬೆಳೆಯಲ್ಲಿ 2-3 ಕೂಳೆ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದೆ . ರೋಬಸ್ಸಾ , ಗಿಡ್ಡ ಕ್ಯಾವೆಂಡಿಷ್ ಇವು ಕೂಳೆ ಬೆಳೆಗೆ ಸೂಕ್ತ ತಳಿಗಳು 

ಮುಖ್ಯ ಬಾಳೆ ಗಿಡವು ಹೂ ಗೊನೆ ಬಿಡುವವರೆಗೆ ಅಕ್ಕಪಕ್ಕದಲ್ಲಿ ಬರುವ ಮರಿ ಕಂದುಗಳನ್ನು ತೆಗೆದು ಹಾಕಬೇಕು , ಹೂ ಗೊನೆ ಬಿಡುವಾಗ ಒಂದು ಕತ್ತಿಯಾಕಾರಾದ  ಕಂದು ಹಾಗೂ ಮಾಗಿದ ಗೊನೆ ಕೊಯಾದ ನಂತರ ಇನ್ನೊಂದು ಕತ್ತಿಯಾಕಾರಾದ ಕಂದನ್ನು ಬೆಳೆಯಲು ಬಿಡಬೇಕು .

ಗೊಬ್ಬರಗಳ ಪ್ರಮಾಣ ಕೂಳೆ ಬೆಳೆಗೆ ಬೇರೆ ಇರುತ್ತದೆ , ಕೂಳೆ ಬೆಳೆಗೆ 100 ಗ್ರಾಂ , ಸಾರಜನಕ , 50 ಗ್ರಾಂ ರಂಜಕ ಮತ್ತು 100 ಗ್ರಾಂ ಬೋಟ್ಯಾನ್ ಪ್ರತಿ ಗಿಡಕ್ಕೆ , ಪ್ರತಿ ಬೆಳೆಗೆ ಮೂರು ಕಂತುಗಳಲ್ಲಿ ಅಂದರೆ ಕೋಳೆ ಗಿಡ ಬಿಟ್ಟ 30 , 75 ಮತ್ತು 120 ದಿನಗಳಲ್ಲಿ ಮುಖ್ಯ ಬೆಳೆ ಕಟಾವಿನ ನಂತರ ಕೊಡಬೇಕು .

ಕೊಯ್ಲಿನ ನಂತರ ತಾಯಿ ಗಿಡವನ್ನು ಹಂತ ಹಂತವಾಗಿ ಕತ್ತರಿಸುವುದರಿಂದ , ಆ ಗಿಡದಲ್ಲಿನ ಉಳಿಕೆ ಮೊಷಕಾಂಶಗಳು ಕೊಳೆ ಕಂದುಗಳಿಗೆ ದೊರೆಯುತ್ತದೆ . ಎಲ್ಲ ಸಸ್ಯ ಉಳಿಕೆಯನ್ನು ಎರಡು ಸಾಲುಗಳ ಮಧ್ಯ ಮಣ್ಣಿಗೆ ಹೊದಿಕೆಯಾಗಿ ಉಪಯೋಗಿಸಬಹುದು.

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ಮಾರ್ಕೆಟಿಂಗ್ ಮಾಡುವುದು ಹೇಗೆ?

ನೀವು ಹೋಲ್ಸೇಲ್ ಡೀಲರ್ಸ್ ಗೆ ಮಾರಾಟ ಮಾಡಬಹುದು ಅಥವಾ ನಿಮ್ಮ ಹತ್ತಿರ ಯಾವುದಾದರು 4 ಚಕ್ರದ ವಾಹನವಿದ್ದರೆ ನೀವು ಅದರಲ್ಲಿ ಮಾರ್ಕೆಟ್ ಗೆ ತೆಗೆದುಕೊಂಡು

ಹೋಗಿ ಮಾರಾಟ ಮಾಡಬಹುದು.

ಲಾಭ ಎಷ್ಟು ಗಳಿಸಬಹುದು :
ಬಾಳೆಯೂ ವರ್ಷದ ಬೆಳೆ ಆಗಿದೆ , ನೀವು ಒಂದು ಎಕರೆಯಲ್ಲಿ ಬಾಳೆಯನ್ನು ಬೆಳೆದರೆ ಒಂದು ವರ್ಷದಲ್ಲಿ 3 ಲಕ್ಷಕ್ಕೂ ಅಧಿಕ ಲಾಭವನ್ನು ಗಳಿಸಬಹದು ಇದನ್ನು ನೀವು ಅಡಿಕೆ ಸಸಿಗಳ ಮದ್ಯದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು ಒಟ್ಟಾರೆ ಆಗಿ ಹೇಳಬೇಕು ಅಂದರೆ ಬಾಳೆ ಹಣ್ಣಿಗೆ ತುಂಬಾನೇ ಬೇಡಿಕೆ ಇರುವುದರಿಂದ ನೀವು ಈ ಬೆಳೆಯನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು.

ಬಾಳೆ ಕೃಷಿಯಿಂದ ಲಕ್ಷ ಸಂಪಾದಿಸಿ

ಮಜ್ಜಿಗೆ ಮೆಣಸಿನಕಾಯಿ ಮೇಕಿಂಗ್ ಬ್ಯುಸಿನೆಸ್ | kannada business Tips

new business ideas

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments