ತೆಂಗಿನ ನಾರಿನಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿ
ಕಲ್ಪಋಕ್ಷ ಎಂದೇ ಕರೆಯುವ ತೆಂಗಿನ ಎಲ್ಲ ಉತ್ಪನ್ನಗಳು ಉಪಯೋಗಕಾರಿ ತೆಂಗಿನನಾರಿನ ಪುಡಿಯಿಂದ ಗೊಬ್ಬರ ತಯಾರಿಸಿ ನರ್ಸರಿಯಲ್ಲಿ ಬಳಸಿದರೆ ಸಸಿಗಳ ಶೀಘ್ರ ಬೆಳವಣಿಗೆಗೆ ಅನುಕೂಲವಾಗುತ್ತದೆ. ರೈತರು ಈ ತೆಂಗಿನ ನಾರಿನಿಂದ ಹೇಗೆ ಗೊಬ್ಬರ ತಯಾರಿಸಿಕೊಂಡು ನರ್ಸರಿಗೆ ಬಳಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ಇತರರಿಗೂ ಉಪಯುಕ್ತ ಎಂದರೆ ತಪ್ಪದೆ ಶೇರ್ ಮಾಡಿ .
ತೆಂಗಿನ ಗೊಬ್ಬರದ ಕುರಿತು ವಿಡಿಯೋ ಇಲ್ಲಿ ಕ್ಲಿಕ್ ಮಾಡಿ
ಅಪ್ ಸ್ಟಾಕ್ಸ್ ನಿಂದ ಉಚಿತ ಹಣವನ್ನು ಗಳಿಸಲು ಈಗಲೇ ರಿಜಿಸ್ಟರ್ ಮಾಡಿ, ಇಲ್ಲಿ ಕ್ಲಿಕ್ ಮಾಡಿ
ತೆಂಗಿನ ಗಿಡ ಬೆಳಸಿದಲ್ಲಿ ತೆಂಗಿನ ಕಾಯಿಯ ಜೊತೆಗೆ ಕಾಯಿಯ ಸಿಪ್ಪೆ ಅದರ ಚಿಪ್ಪು , ಹೀಗೆ ಎಲ್ಲ ಉತ್ಪನ್ನಗಳು ಒಂದಿಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ.
ಹಾಗೆಯೆ ತೆಂಗಿನ ನಾರಿನ ಪುಡಿಯಿಂದ ನರ್ಸರಿಗೆ ಬಳಸಲೆಂದೇ ಗೊಬ್ಬರ ತಯಾರಿಸಿಕೊಳ್ಳಬಹುದು.
ತೆಂಗಿನ ನಾರಿನಿಂದ ಗೊಬ್ಬರ ತಯಾರಿಸಲು ಸಾಂಪ್ರದಾಯಿಕ ವಿಧಾನವಷ್ಟೇ ಅಲ್ಲದೆ ಸುಧಾರಿತ ಪದ್ದತಿಯಲ್ಲಿ ಗೊಬ್ಬರ ತಯಾರು ಮಾಡಿ ಉಪಯೋಗಿಸಬಹುದು.
ತೆಂಗಿನ ನಾರಿನ ಗೊಬ್ಬರ ಸಾಮಾನ್ಯವಾಗಿ ಎಲ್ಲ ರೈತರಿಗೂ ತಿಳಿದಿರೋ ವಿಷಯವೇ ಆಗಿದೆ.
ಈ ಹುಡಿಯನ್ನು ಉಪಯೋಗಿಸಿಕೊಂಡು ನರ್ಸರಿಗೆ ಬೇಕಾಗುವ ಗೊಬ್ಬರವನ್ನು ತಯಾರು ಮಾಡಬಹುದು.
ಅರ್ಕ ಫರ್ಮೆಂಟೇಡ್ ಕೊಕೊ ಪೀಟ್ (arca fermented coco cocopeat)
ತೆಂಗಿನ ಹುಡಿಗೆ ಒಂದು ಟನ್ ಗೆ ಒಂದು ಕೆಜಿ ಯಷ್ಟು ಅರ್ಕ ಮೈಕ್ರೋಬಿಯಲ್ ಕನ್ಸೋರ್ಷಿಯಂ , ಇದನ್ನು ಹಾಗೆ ಅರ್ಕ ಡಿಕಂಪೋಸರ್ ಈ ಎರಡು ಕಲ್ಚರ್ ಹಾಕಿ ಈ ಹುಡಿ ಗೊಬ್ಬರವನ್ನು ತಯಾರು ಮಾಡಬೇಕು.
arka fermented cocopeat business
ತಯಾರಿಸುವ ವಿಧಾನ ಹೇಗೆ?:
ತಯಾರಿಸುವ ವಿಧಾನ ಹೇಗೆ ಅಂದರೆ ಒಂದು ಲೇಯರ್ ತೆಂಗಿನ ಹುಡಿಯನ್ನು ನೆಲದ ಮೇಲೆ ಹರಡ ಬೇಕು
ಹರಡಿದ ಮೇಲೆ 1 ಟನ್ ಗೆ 5 ಕೆಜಿಯಷ್ಟು ಅರ್ಕ ಡಿಕಂಪೋಸರ್ ನ್ನು ಹಾಕಬೇಕು.
ಒಂದು ಟನ್ ಅನ್ನು 200 ಕೆಜಿಯಂತೆ 2 ಲೇಯರ್ ಮಾಡಿಕೊಳ್ಳಬೇಕು
ನಂತರ 1 ಲೇಯರ್ ಕಲ್ಚರ್ ಹಾಗೆ 1 ಲೇಯರ್ ಯೂರಿಯಾ ಗೊಬ್ಬರ ಹಾಕಬೇಕು
ಹೀಗೆ 5 ಲೇಯರ್ ಒಂದರಮೇಲೆ ಒಂದರಂತೆ ಮಾಡಬೇಕು .
ಈ ಯೂರಿಯಾ ಗೊಬ್ಬರವನ್ನು ಒಂದು ಟನ್ ಗೆ 3 ಕೆಜಿ ಹಾಕಬೇಕು.
ಇದಕ್ಕೆ ಸುಮಾರು 70 ಪರ್ಸೆಂಟ್ ರಷ್ಟು ತೇವಾಂಶ ಇರುವಂತೆ ಮಾಡಬೇಕು
70 ಪರ್ಸೆಂಟ್ ಅಂದರೆ ಕೈಯಲ್ಲಿ ಹಿಡಿದು ಹಿಂಡಿದರೆ 2 ರಿಂದ 3 ಹನಿಗಳು ನೀರು ಕೆಳಗೆ ಬೀಳುವಂತೆ ಇರಬೇಕು
ಹೀಗೆ ನೀವು ತೇವಾಂಶವನ್ನು ಕಾಪಾಡಿಕೊಳ್ಳಬೇಕು
ನಂತರ ಇದಕ್ಕೆ ಪ್ಲಾಸ್ಟಿಕ್ ಕವರ್ ನಿಂದ ಬಿಸಿಲು ಬೀಳದಂತೆ ಕವರ್ ಮಾಡಿ ಇಟ್ಟಿರಬೇಕು.
ನಂತರ ನೀವು ಆಗಾಗ ತೇವಾಂಶ ಇರುವಂತೆ ನೋಡಬೇಕು.
15 ದಿನ ಹೀಗೆ ಇಡಬೇಕು ನಂತರ ಅದನ್ನು ಮಿಶ್ರಣ ಮಾಡಿ ಮತ್ತೆ ಅದೇರೀತಿ ಕವರ್ ಮಾಡಿ ಇನ್ನೊಂದು 15 ದಿನ ಹಾಗೆ ಇಡಬೇಕು.
ನಂತರ 29 ನೇ ದಿನ ಇದಕ್ಕೆ ಅರ್ಕ ಮೈಕ್ರೋವಿಯಲ್ ಕನ್ಸೋರ್ಷಿಯಂ ಅನ್ನುವ ಜೈವಿಕ ಗೊಬ್ಬರ ಸಿಗುತ್ತದೆ ಇದನ್ನು ಒಂದು ಟನ್ ಗೆ 1 ಕೆಜಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ಒಂದು ದಿನ ಅಥವಾ 2 ದಿನದ ನಂತರ ಪ್ಯಾಕ್ ಮಾಡಿ ಮಾರಾಟ ಮಾಡಬಹುದು .
ಇದನ್ನು ಒಂದು ಕೆಜಿಗೆ ಕೇವಲ 1.50 ಪೈಸೆಗೆ ತಯಾರಿಸಬಹುದು
ರೈತರು ತಮ್ಮ ಜಮೀನಿನಲ್ಲಿ ಬಳಸಿದಾಗ ಸಾಕಷ್ಟು ಲಾಭವನ್ನು ಪಡೆಯಬಹುದು.
ಇದನ್ನು ಅತ್ಯಂತ ಕಡಿಮೆ ಬಂಡವಾಳದಲ್ಲಿ ತಯಾರಿಸಿ ತಮ್ಮ ಜಮೀನಿನಲ್ಲಿ ಬಳಸಿ ಉತ್ತಮ ಇಳುವರಿ ಪಡೆಯಬಹುದು ಹಾಗೆ ಇದರಿಂದ ನೀವು ನರ್ಸರಿ ಮಾಡಿದರೆ ಸಾಮಾನ್ಯ ವಾಗಿ 4 ರಿಂದ 5 ದಿನ ಮುಂಚೆಯೇ ದಷ್ಟ ಪುಷ್ಟ ಗಿಡಗಳು ಮಾರಾಟಕ್ಕೆ ಬರುತ್ತದೆ .
arka fermented cocopeat business
ತೆಂಗಿನ ಸಿಪ್ಪೆ ಎಲ್ಲಿ ಸಿಗುತ್ತದೆ:
ನಿಮ್ಮ ಮನೆಯಲ್ಲಿ ತೆಂಗಿನ ಸಿಪ್ಪೆ ಇಲ್ಲ ಅಂದರೆ ನೀವು ಬೇರೆ ರೈತರ ಹತ್ತಿರ ಹೋಲ್ಸೇಲ್ ದರದಲ್ಲಿ ಖರೀದಿಸಿ ಈ ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡಬಹುದು.
ತೆಂಗಿನ ಹುಡಿಯನ್ನು ಮಾಡಲು ಮಷಿನ್ ಎಲ್ಲಿ ಸಿಗುತ್ತದೆ :
ತೆಂಗಿನ ಹುಡಿಯನ್ನು ಮಾಡಲು ಮಷಿನ್ ಅನ್ನು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ಅದರ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇನೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ವೆಬ್ಸೈಟ್ ಗೆ ಭೇಟಿ ನೀಡಿ ಮಷಿನ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದು ಮಷಿನ್ ಖರೀದಿ ಮಾಡಬಹುದು.
Cocopeat Machine click here
ವೀಳ್ಯದೆಲೆ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ | betel leaf cultivation in karnataka | Business IdeaS
[…] ತೆಂಗಿನ ನಾರಿನಿಂದ ಗೊಬ್ಬರ ತಯಾರಿಸಿ ಮಾರಾಟ… […]