Thursday, June 30, 2022
HomeAgricultureಅಡಿಕೆ ಸುಲಿಯುವ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಿ | news in kannada small...

ಅಡಿಕೆ ಸುಲಿಯುವ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಿ | news in kannada small business ideas

ಅಡಿಕೆ ಸುಲಿಯುವ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಿ

ಈ ಲೇಖನದಲ್ಲಿ ಅಡಿಕೆ ಸುಲಿಯುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ ನಿಮ್ಮ ಮನೆಯ ಅಕ್ಕಪಕ್ಕ ಇರುವ ನಿಮ್ಮದೇ ಕಾಲಿ ಇರುವ ಜಾಗದಲ್ಲಿ ನೀವು ಮಾಡುತ್ತಿರುವ ಕೆಲಸದೊಂದಿಗೆ ಸೈಡ್ ಬ್ಯುಸಿನೆಸ್ ಆಗಿ ಮಾಡಬಹುದು . ಇದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ ಹಾಗೆ ಯಾವುದೇ ಆಳುಗಳು ಬೇಕಾಗಿಲ್ಲ ,ಹೇಗೆ ಮಾಡುವುದು ಅಂತ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
areca nut peeling business

ವಿಶೇಷ ಸೂಚನೆ :

ಇದು ಆಸಕ್ತಿ ಇದ್ದವರಿಗೆ ಮಾತ್ರ , ಇದನ್ನು ನೀವು ಪಾರ್ಟ್ ಟೈಮ್ ಆಗಿ ಮಾಡಿ ರೈತರು ಬಿಡುವಿನವೇಳೆಯಲ್ಲಿ ಒಂದಿಷ್ಟು ಹಣವನ್ನು ಗಳಿಸಿಕೊಳ್ಳಲಿ ಅನ್ನುವ ಉದ್ದೇಶದಿಂದ ಈ ಲೇಖನವನ್ನು ಬರೆದಿದ್ದೇನೆ. ಇದು ನನ್ನ ಅಭಿಪ್ರಾಯ ಅಷ್ಟೇ , ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಬಹುದು.
ಅಡಿಕೆ ಕೃಷಿ ಕುರಿತು ಮಾಹಿತಿ: 
ಮಲೆನಾಡು ಪ್ರದೇಶದಲ್ಲಿ ಸಾಮಾನ್ಯವಾಗಿ ಅಡಿಕೆಯನ್ನು ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಬೆಳೆಯುತ್ತಾರೆ.
ಮಲೆನಾಡು ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಪ್ರಸ್ತುತ ಎಲ್ಲಾ ಸ್ಥಳದಲ್ಲಿಯೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಯಾಕಂದರೆ ಅಡಿಕೆಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಿರುವ ಕಾರಣ ರೈತರು ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ.
areca nut peeling business
areca nut peeling business
ಅಡಿಕೆ ಸುಲಿಸುವ ಸಮಸ್ಯೆಗಳು: 
ಹೆಚ್ಚು  ಅಡಿಕೆ ಬೆಳೆಯುವ ರೈತರು ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅವರಿಗೆ ಅಡಿಕೆ ಸುಲಿಸುವುದೇ ಒಂದು ದೊಡ್ಡ ಸಮಸ್ಯೆ ಆಗಿದೆ ಆದ್ದರಿಂದ ಇಂತಹ ರೈತರು ಸಾಮಾನ್ಯವಾಗಿ ಅಡಿಕೆ ಸುಲಿಯುವ ಮಷಿನ್ ನಿಂದ ಅಡಿಕೆಯನ್ನು ಸುಳಿಸುತ್ತಾರೆ.
ಇನ್ನು ಕೆಲವರು ಸ್ವಲ್ಪ ಸ್ವಲ್ಪ ಅಡಿಕೆ ಇರುವವರು ಕತ್ತಿಯಿಂದ ಕೈಗಳ ಮೂಲಕ ಸುಲಿಸುತ್ತಾರೆ. ಪ್ರಸ್ತುತ ಇವರು ಕೊಡ ಮಷಿನ್ ಗೆ ತೆಗೆದುಕೊಂಡು ಹೋಗಿ ಸುಲಿಸಿಕೊಂಡು ಬರುತ್ತಾರೆ. 
ಯಾಕಂದರೆ ಅಡಿಕೆ ಸುಲಿಯುವುದಕ್ಕೆ ಸಾಕಷ್ಟು ಜನಗಳು ಬೇಕಾಗುತ್ತದೆ. ಅಷ್ಟು ಜನಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಎಲ್ಲರೂ ಮಷಿನ್ ಗೆ ಹಾಕುತ್ತಾರೆ.
ಕಡಿಮೆ ಇದ್ರೆ ಹೀಗೆ ಮಾಡಬಹುದು ಆದರೆ ಹೆಚ್ಚು ಅಡಿಕೆ ಇದ್ದರೆ ಕತ್ತಿಯಿಂದ ಸುಲಿಸುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಅವರು ಮಷಿನ್ ಗೆ ತೆಗೆದುಕೊಂಡು ಹೋಗಿ ಸುಳಿಸಿಕೊಂಡು ಬರುತ್ತಾರೆ .
ಮಷಿನ್ ಖರೀದಿ: 
ನಿಮಗೆ ಆಸಕ್ತಿ ಇದ್ದರೆ,  ಈ ಬ್ಯುಸಿನೆಸ್ ಲಾಭ ಎನಿಸಿದರೆ ನೀವು ಒಂದಿಷ್ಟು ಬಂಡವಾಳವನ್ನು ಹೂಡಿಕೆ ಮಾಡಿ ಮಷಿನ್ ಖರೀದಿಸಿ  ಅಡಿಕೆ ಸುಲಿದು ಕೊಟ್ಟು ಹಣವನ್ನು ಗಳಿಸಬಹುದು.
areca nut peeling business
areca nut peeling business

ನಿಮಗೆ ಅಡಿಕೆ ಸುಲಿಯುವ ಮಷಿನ್ ಬೇಕು ಅಂದರೆ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಕೆಳೆಗೆ ಕೊಟ್ಟಿದ್ದೇನೆ ನೀವು ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿ ಮಾಡಬಹುದು .

Contact Number :- 9590907101

ಎಷ್ಟು ಬಂಡವಾಳಬೇಕು :
ಒಂದೊಂದು ಮಷಿನ್ ಬೆಲೆ ಬೇರೆ ಬೇರೆ ಇರುತ್ತದೆ ಯಾಕಂದರೆ ಅದರಲ್ಲಿ  ಕಾನ್ಫಿಗರೇಷನ್ ಗೆ ತಕ್ಕಂತೆ 1,50,000 ಸಾವಿರ ದಿಂದ ಬೆಲೆ ಪ್ರಾರಂಭ ಆಗುತ್ತದೆ.

ಲಾಭ ಎಷ್ಟು ಗಳಿಸಬಹುದು: 

ಸಾಮಾನ್ಯವಾಗಿ ಒಂದು ಕೆಜಿ ಅಡಿಕೆ ಸುಳಿದುಕೊಟ್ಟರೆ 5 ರೂ ತೆಗೆದುಕೊಳ್ಳುತ್ತಾರೆ.
ಒಂದು ದಿನದಲ್ಲಿ 1 ಸಾವಿರ ಕೆಜಿ ಅಡಿಕೆ ಸುಲಿದು ಕೊಟ್ಟರೆ 5 ಸಾವಿರ ಗಳಿಸಬಹುದು. ವಿದ್ಯುತ್ ಬಿಲ್ ಸೇರಿದಂತೆ ಇತರ ಖರ್ಚು ಅಂತ 2 ಸಾವಿರ ಕಳೆದರು 3 ಸಾವಿರ ಲಾಭ ಗಳಿಸಬಹುದು.
ನೀವು ಮಾಡುವ ಕೃಷಿ ಕೆಲಸದೊಂದಿಗೆ   ಈ ಮಷಿನ್ ಖರೀದಿಸಿ  ಸೀಸನ್ ನಲ್ಲಿ ಅಡಿಕೆ ಸುಲಿದು ಕೊಟ್ಟು  ಉತ್ತಮ ಆದಾಯ ಗಳಿಸಬಹುದು.

business ideas kannada

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments