ಅಡಿಕೆ ಸಸಿ ಬೆಳೆಸಿ ಲಕ್ಷ ಲಕ್ಷ ಗಳಿಸಿ
ಸಸಿ ಬೆಳೆಸಲು ಮೂಲಭೂತ ಅವಶ್ಯಕತೆಗಳು
ಅಡಿಕೆ ಕಾಯಿ ಎಲ್ಲಿ ಸಿಗುತ್ತದೆ
ಸಸಿ ಬೆಳೆಸುವುದು ಹೇಗೆ
ಎಷ್ಟು ಬಂಡವಾಳಬೇಕು
ಮಾರ್ಕೆಟಿಂಗ್ ಮಾಡುವುದು ಹೇಗೆ
ಎಷ್ಟು ಲಾಭವನ್ನು ಗಳಿಸಬಹುದು

ಅಡಿಕೆ ಸಸಿ ಬೆಳೆಸಲು ಮೂಲಭೂತ ಅವಶ್ಯಕತೆಗಳು:-
ರೈತರು ತಾವು ಬೆಳೆದ ಬೆಳೆಗಳ ಜೊತೆಗೆ ಈ ಅಡಿಕೆ ಸಸಿಯನ್ನು ಬೆಳೆಸಿ ಉತ್ತಮ ಆದಾಯ ಗಳಿಸಬಹುದು
ದಿನದಿಂದ ದಿನಕ್ಕೆ ಅಡಿಕೆ ಬೆಲೆ ಹೆಚ್ಚಾಗುತ್ತಿದ್ದಂತೆ ಅಡಿಕೆ ಬೆಳೆಯುವರ ಸಂಖ್ಯೆ ತುಂಬಾನೇ ಹೆಚ್ಚಾಗುತ್ತಿದ್ದಾರೆ. ಮೊದಲು ಈ ಅಡಿಕೆ ಗಿಡವನ್ನು ಮಲೆನಾಡಿನಲ್ಲಿ ಹೆಚ್ಚು ಬೆಳೆಯುತ್ತಿದ್ದರು ಆದರೆ ಪ್ರಸ್ತುತ ಅಡಿಕೆ ಬೆಲೆ ಹೆಚ್ಚಾಗಿರುವ ಕಾರಣ ಪ್ರತಿಯೊಂದು ಪ್ರದೇಶದಲ್ಲೂ ಈ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಅಡಿಕೆ ಮರಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ ಆದ್ದರಿಂದ ಈ ಬೆಳೆಯನ್ನು ಮಲೆನಾಡಿನಲ್ಲಿ ಮಾತ್ರ ಬೆಳೆಯುತ್ತಿದ್ದರು ಆದರೆ ಪ್ರಸ್ತುತ ಬೋರ್ವೆಲ್ ಕೊರೆಸಿ ಎಲ್ಲ ಸ್ಥಳದಲ್ಲಿಯೂ ಬೆಳೆಯುತ್ತಿದ್ದಾರೆ .
ಅಡಿಕೆ ಇಂದು ವಾಣಿಜ್ಯ ಬೆಳೆಯಾಗಿ ರೈತರನ್ನು ಕೈಹಿಡಿದು ನಡೆಸುತ್ತಿದೆ. ಹೀಗಾಗಿ ಸಸಿಗೂ ಬೇಡಿಕೆ ಹೆಚ್ಚಿದೆ. ಆದ್ದರಿಂದ ಮನೆಯಲ್ಲಿ ನೀರಿನ ಸೌಲಭ್ಯವಿದ್ದಲ್ಲಿ ಮಹಿಳೆಯರು ಸೇರಿದಂತೆ ಪುರುಷರು ಬಿಡುವಿನ ವೇಳೆಯಲ್ಲಿ ಅಡಿಕೆ ಸಸಿಗಳನ್ನು ಬೆಳೆಸಿ ಹೆಚ್ಚು ಶ್ರಮವಿಲ್ಲದೆ ಹಣ ಗಳಿಸಬಹುದು.
ಅಡಿಕೆ ಸಸಿಯನ್ನು ನಿಮ್ಮ ಮನೆಯ ಹತ್ತಿರವಿರುವ ಜಾಗದಲ್ಲಿ ಅಥವಾ ನಿಮ್ಮ ತೋಟದಲ್ಲಿ ಬೆಳೆಸಬಹುದು . ಇದಕ್ಕೆ ಉತ್ತಮ ಗುಣಮಟ್ಟದ ಅಡಿಕೆಕಾಯಿ ಬೇಕು ಹಾಗೆ ಹೆಚ್ಚು ಇಳುವರಿ ಕೊಡುವಂತಹ ಅಡಿಕೆ ತಳಿ ಬೆಳೆಸಿದರೆ ಬೇಡಿಕೆ ಹೆಚ್ಚಾಗುತ್ತದೆ . ಇನ್ನು ಅಡಿಕೆ ಸಸಿಯನ್ನು ಬೆಳೆಸಲು ಪಾಲಿಥಿನ್ ಕವರ್ ಬೇಕಾಗುತ್ತದೆ
ಹಾಗೆ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು, ಅಡಿಕೆ ಸಸಿಗೆ ಹಾಕಲು ನೀರು ಸಂವೃದ್ದವಾಗಿ ಇರಬೇಕಾಗುತ್ತದೆ ಇಷ್ಟು, ಇದ್ದರೆ ನೀವು ಅಡಿಕೆ ಸಸಿ ಕೃಷಿಯನ್ನು ಮಾಡಿ ಉತ್ತಮ ಆದಾಯ ಗಳಿಸಬಹುದು. ಅಡಿಕೆ ಸಸಿ ಹೇಗೆ ಬೆಳೆಸಬೇಕು ಅನ್ನುವುದರ ಕುರಿತು ಹಂತ ಹಂತವಾಗಿ ನಿಮಗೆ ತಿಳಿಸಿಕೊಡುವ ಪ್ರಯತ್ನ ವನ್ನು ಈ ಲೇಖನದಲ್ಲಿ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಫ್ರೆಂಡ್ಸ್ ಗೆ ತಪ್ಪದೆ ಶೇರ್ ಮಾಡಿ .
ಅಡಿಕೆ ಸಸಿ ಬೆಳೆಯುವ ವಿಧಾನ

ಗೋಟು ಎಲ್ಲಿ ಸಿಗುತ್ತದೆ:
ಉತ್ತಮ ಗುಣಮಟ್ಟದ ಅಡಿಕೆ ಕಾಯಿ ನಿಮ್ಮ ಮನೆಯಲ್ಲಿ ಇದ್ದರೆ ನೀವು ಆ ಅಡಿಕೆ ಕಾಯಿಯಿಂದ ಸಸಿಯನ್ನು ತಯಾರಿಸಿ ಮಾರಾಟ ಬೇರೆಯವರ ಹತ್ತಿರ ಅಡಿಕೆ ಕಾಯಿಯನ್ನು ಖರೀದಿಸಿ ಸಸಿ ಬೆಳೆಸಿ ಮಾರಾಟ ಮಾಡಬಹುದು.
ಸಸಿ ಬೆಳೆಸುವುದು ಹೇಗೆ ?
ಉತ್ತಮ ಗುಣಮಟ್ಟದ ಮಣ್ಣು ಹಾಗೆ ಆ ಮಣ್ಣಿಗೆ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಬೇಕು ನಂತರ ಮಿಶ್ರಣಮಾಡಿದ ಮಣ್ಣನ್ನು
4Χ4 ಅಡಿ ಸುತ್ತಳತೆಯ ಏರಿ ಮಾಡಬೇಕು. ಹೀಗೆ ಏರಿ ಮಾಡಿದಮೇಲೆ ಅದಕ್ಕೆ ಅಡಿಕೆ ಕಾಯಿಯನ್ನು ಒಂದು ಇಂಚು ಅಂತರ ದಲ್ಲಿ ನೆಡಬೇಕು ಹೀಗೆ ನೆಟ್ಟ ಅಡಿಕೆ ಕಾಯಿಯು
4Χ4 ಅಡಿ ಸುತ್ತಳತೆಯ ಏರಿ ಮಾಡಬೇಕು. ಹೀಗೆ ಏರಿ ಮಾಡಿದಮೇಲೆ ಅದಕ್ಕೆ ಅಡಿಕೆ ಕಾಯಿಯನ್ನು ಒಂದು ಇಂಚು ಅಂತರ ದಲ್ಲಿ ನೆಡಬೇಕು ಹೀಗೆ ನೆಟ್ಟ ಅಡಿಕೆ ಕಾಯಿಯು
3 ರಿಂದ 4 ತಿಂಗಳಲ್ಲಿ ಒಂದು ಇಂಚಿಗೂ ಹೆಚ್ಚು ಉದ್ದ ಮೊಳಕೆ ಒಡೆಯುತ್ತದೆ ,
ಮೊಳಕೆ ಒಡೆದಾಗ ಅದನ್ನು ಪುನಃ ಕಿತ್ತು ಒಂದು ಕೆಜಿ ಪಾಲಿಥಿನ್ ಕವರ್ ಗೆ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಮಿಶ್ರಣ ಮಾಡಿ ಪಾಲಿಥಿನ್ ಕವರ್ ಗೆ ತುಂಬ ಬೇಕು
ಹೀಗೆ ತುಂಬಿದ ನಂತರ ಮೊಳಕೆ ಒಡೆದ ಅಡಿಕೆ ಸಸಿಯನ್ನು ಗೊಬ್ಬರ ಮತ್ತು ಮಣ್ಣು ತುಂಬಿದ ಪಾಲಿಥಿನ್ ಕವರ್ ನ ಮದ್ಯದಲ್ಲಿ ಗೋಟುಗಳನ್ನು ಊರಿ ಪ್ಲಾಸ್ಟಿಕ್ ಶೀಟ್ ಹರಡಿದ ಜಾಗದಲ್ಲಿ ಜೋಡಿಸಿಟ್ಟು ನಿಯಮಿತವಾಗಿ ನೀರು ಹಾಕಬೇಕು,
ಬೆಳವಣಿಗೆ ಕುಂಠಿತವಾದಲ್ಲಿ ಯೂರಿಯಾ, ಪೊಟ್ಯಾಶ್ ಅಥವಾ ಡಿಎಪಿ ಅಗತ್ಯಕ್ಕೆ ಅನುಗುಣವಾಗಿ, ಒಂದು ಲೀಟರ್ ನೀರಿಗೆ 2-3 ಚಮಚದಷ್ಟು ಹಾಕಿ ಕದಡಿ ಸಸಿಗಳಿಗೆ 3-4 ಚಮಚದಷ್ಟು ಕೊಡಬೇಕು. ಕೊಟ್ಟಿಗೆ ಗೊಬ್ಬರವನ್ನೂ ಹಾಕಬಹುದು. ಈ ಹಂತದಲ್ಲಿ ಸಸಿಗಳಿಗೆ ನೀರು ಹಾಕುವುದು ಬಹಳ ಮುಖ್ಯ.
ಹಾಗೆ ವಾರಕೊಮ್ಮೆ ಸಗಣಿ ನೀರು ಹಾಕಬೇಕು .
ಈ ರೀತಿ ಬೆಳೆಸಿದ ಅಡಿಕೆ ಗಿಡ 12 ರಿಂದ 13 ತಿಂಗಳಲ್ಲಿ ನಾಟಿ ಮಾಡಲು ಬಳಸಬಹುದು ಅಥವಾ ಸೆಲ್ ಮಾಡಿ ಉತ್ತಮ ಆದಾಯ ಗಳಿಸಬಹುದು.

ಎಷ್ಟು ಬಂಡವಾಳಬೇಕು:
ಅಡಿಕೆ ಸಸಿಯನ್ನು ಬೆಳೆಸಲು ಹೆಚ್ಚು ಖರ್ಚು ಬರುವುದಿಲ್ಲ
ನಿಮ್ಮ ಮನೆಯಲ್ಲಿ ಅಡಿಕೆ ಕಾಯಿ ಹಾಗೆ ಕೊಟ್ಟಿಗೆ ಗೊಬ್ಬರ ಇದ್ದರೆ ಕೇವಲ ಪಾಲಿಥಿನ್ ಕವರ್ ಖರೀದಿಸಲು ಮಾತ್ರ ಹಣ ಬೇಕಾಗುತ್ತದೆ.
ನಿಮ್ಮ ಮನೆಯಲ್ಲಿ ಅಡಿಕೆ ಕಾಯಿ ಹಾಗೆ ಕೊಟ್ಟಿಗೆ ಗೊಬ್ಬರ ಇದ್ದರೆ ಕೇವಲ ಪಾಲಿಥಿನ್ ಕವರ್ ಖರೀದಿಸಲು ಮಾತ್ರ ಹಣ ಬೇಕಾಗುತ್ತದೆ.
ಹೆಚ್ಚು ಅಂದರು ೫ ಸಾವಿರ ಇದ್ದರೆ ಸಾಕು..
ಒಂದುವೇಳೆ ನಿಮ್ಮ ಮನೆಯಲ್ಲಿ ಅಡಿಕೆಕಾಯಿ ಇಲ್ಲ ಅಂದರೆ ನೀವು ಅದನ್ನು ಹಣಕೊಟ್ಟು ಖರೀದಿಸಲು ಹಾಗೆ ಇತರೆ ಖರ್ಚು ಅಂತ ೧೦ ಸಾವಿರ ಇದ್ದರೆ ಸಾಕಾಗುತ್ತದೆ.
ಒಂದುವೇಳೆ ನಿಮ್ಮ ಮನೆಯಲ್ಲಿ ಅಡಿಕೆಕಾಯಿ ಇಲ್ಲ ಅಂದರೆ ನೀವು ಅದನ್ನು ಹಣಕೊಟ್ಟು ಖರೀದಿಸಲು ಹಾಗೆ ಇತರೆ ಖರ್ಚು ಅಂತ ೧೦ ಸಾವಿರ ಇದ್ದರೆ ಸಾಕಾಗುತ್ತದೆ.
ಮಾರ್ಕೆಟಿಂಗ್ ಮಾಡುವುದು ಹೇಗೆ?
ನೀವು ಬೆಳೆದಿರುವ ಅಡಿಕೆ ಸಸಿಯನ್ನು ಮಾರ್ಕೆಟ್ ಗೆ ತೆಗೆದುಕೊಂಡು ಮಾರಾಟ ಮಾಡಬಹುದು
ಅಥವಾ ನಿಮ್ಮ ಫ್ರಂಡ್ಸ್ ಮತ್ತು ಸಂಬಂಧಿಕರ ಹತ್ತಿರ ಹೇಳಿದರೆ ಯಾರಿಗಾದರೂ ಬೇಕಾದಲ್ಲಿ ಅವರು ತಿಳಿಸುತ್ತಾರೆ.
ಅಥವಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಜಾಹಿರಾತನ್ನು ಪ್ರಕಟಿಸಿ ಗಿಡಗಳನ್ನು ಸೆಲ್ ಮಾಡಬಹುದು
ಅಥವಾ ನಿಮ್ಮ ಫ್ರಂಡ್ಸ್ ಮತ್ತು ಸಂಬಂಧಿಕರ ಹತ್ತಿರ ಹೇಳಿದರೆ ಯಾರಿಗಾದರೂ ಬೇಕಾದಲ್ಲಿ ಅವರು ತಿಳಿಸುತ್ತಾರೆ.
ಅಥವಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಜಾಹಿರಾತನ್ನು ಪ್ರಕಟಿಸಿ ಗಿಡಗಳನ್ನು ಸೆಲ್ ಮಾಡಬಹುದು
ಅಡಿಕೆ ಸಸಿ ಬೆಳೆಯುವ ವಿಧಾನ

ಎಷ್ಟು ಲಾಭವನ್ನು ಗಳಿಸಬಹುದು?
ಒಂದು ಅಡಿಕೆ ಗಿಡಕ್ಕೆ ಪ್ರಸ್ತುತ ಮಾರ್ಕೆಟ್ ಬೆಲೆ 20 ರಿಂದ 25 ರೂ ಇದೆ ನೀವು 10 ಸಾವಿರ ಅಡಿಕೆ ಗಿಡವನ್ನು ಬೆಳೆಸಿ ಮಾರಾಟಮಾಡಿದರೆ ಕೇವಲ ಒಂದು ವರ್ಷದಲ್ಲಿ 2 ಲಕ್ಷದ 50 ಸಾವಿರ ಗಳಿಸಬಹುದು ಇದರಲ್ಲಿ 50 ಸಾವಿರ ಖರ್ಚು ಕಳೆದರು ನಿಮಗೆ 2 ಲಕ್ಷ ಲಾಭ ಉಳಿಯುತ್ತದೆ ಇದು ಒಂದು ಉತ್ತಮವಾದ ಮಿಶ್ರ ಬೇಸಾಯ ಪದ್ಧತಿ ಅಂತಾನೆ ಹೇಳಬಹುದು.
[…] ಅಡಿಕೆ ಸಸಿ ಬೆಳೆಸಿ ಲಕ್ಷ ಲಕ್ಷ ಗಳಿಸಿ | Agriculture… […]
[…] ಅಡಿಕೆ ಸಸಿ ಬೆಳೆಸಿ ಲಕ್ಷ ಲಕ್ಷ ಗಳಿಸಿ | Agriculture… business ideas in kannada […]