Monday, September 26, 2022
HomeBusinessಅಂಜೂರದ ಕೃಷಿ ಮಾಡಿ ಉತ್ತಮ ಆದಾಯ ಗಳಿಸುವುದು ಹೇಗೆ? | News In Kannada

ಅಂಜೂರದ ಕೃಷಿ ಮಾಡಿ ಉತ್ತಮ ಆದಾಯ ಗಳಿಸುವುದು ಹೇಗೆ? | News In Kannada

ಅಂಜೂರದ ಕೃಷಿ ಮಾಡಿ ಉತ್ತಮ ಆದಾಯ ಗಳಿಸುವುದು ಹೇಗೆ?

 

ಮೂಲತಃ ದಕ್ಷಿಣ ಅರೇಬಿಯಾದ ಬೆಳೆಯಾದ ಅಂಜೂರವು ಒಣಪ್ರದೇಶಕ್ಕೆ ಸೂಕ್ತವಾದದ್ದರಿಂದ ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ . ಅಂಜೂರ ಬೆಳೆಯಲ್ಲಿ ಇಳುವರಿ ಹೆಚ್ಚಾಗಲು ರೈತರು ಸುಧಾರಿತ ಬೇಸಾಯಕ್ರಮವನ್ನು ಅಳವಡಿಸಿಕೊಳ್ಳಬೇಕು . ತೋಟಗಾರಿಕಾ ಬೆಳೆಗಳಲ್ಲಿ ಅಂಜೂರವು ಒಂದು ಒಣಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಬಹುದು ಆದ್ದರಿಂದ ಹೈದ್ರಾಬಾದ್ ಕರ್ನಾಟಕದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

anjura in kannada

ಗುಣಮಟ್ಟದ ಅಂಜೂರ ಬೆಳೆದು ಉತ್ತಮ ಇಳುವರಿ ಪಡೆಯಲು ರೈತರು ಸುಧಾರಿತ ಬೇಸಾಯ ಕ್ರಮವನ್ನು ಅಳವಡಿಸಿಕೊಂಡು ಬೆಳೆಯುವುದು ಅವಶ್ಯಕ .

ಆಂಜೂರ ಬೆಳೆ ಅನ್ನುವುದು ಪ್ರಾಚೀನಕಾಲದಿಂದಲೂ ಚಿರಪರಿಚಿತವಾದ ಹಣ್ಣಿನ ಬೆಳೆಯಾಗಿದೆ ಇದು ಮೂಲತಃ ದಕ್ಷಿಣ ಅರೇಬಿಯಾ ದೇಶಕ್ಕೆ ಸೇರಿದ್ದು ಈ ಅಂಜೂರ ಬೆಳೆ ಅನ್ನುವುದು ಇತ್ತೀಚೆಗಿನ ದಿನಗಳಲ್ಲಿ ಉತ್ತರ ಕರ್ನಾಟಕದ ಒಣ ಪ್ರದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದುತ್ತಿದೆ .
ಇದರಲ್ಲಿ ಹೆಚ್ಚಿನ ಸಕ್ಕರೆ ಪ್ರಮಾಣವನ್ನು ನೋಡಬಹುದು . ಕಡಿಮೆ ಪ್ರಮಾಣದಲ್ಲಿ ಆಮ್ಲತೆಯನ್ನು ಹೊಂದಿರುತ್ತದೆ ಹಾಗೆ ಇದರಲ್ಲಿ ಖನಿಜ ಅಂಶಗಳಾದಂತಹ ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ ಇದರ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. 
ಅಂಜೂರ ಬೇಸಾಯ ಮಾಡಲು ಸೂಕ್ತ ಮಣ್ಣು ಮತ್ತು ಕಡಿಮೆ ಸಾದಾರಣ ಉಷ್ಣಾಂಶ ಇರುವುದು ಅಗತ್ಯ ಹಾಗೆ ಕಪ್ಪುಮಣ್ಣು ಇದ್ದರು ಈ ಬೆಳೆಯನ್ನು ಬೆಳೆಯಬಹುದು.
ಸಾಧಾರಣವಾದ ಉಷ್ಣಾಂಶ ಹಾಗೆ ಕಡಿಮೆ ಆರ್ಧ್ರತೆ ನ್ನು ಹೊಂದಿರುವಂತಹ ಹವಾಮಾನ ಇದ್ದಾರೆ ಸೂಕ್ತವಾಗಿರುತ್ತದೆ.
ಅಂಜೂರದ ಸಸ್ಯಯೋತ್ಪಾದನೆಯನ್ನು ಕಾಂಡದ ತುಂಡುಗಳು ಮತ್ತು ಕಸಿಕಟ್ಟುವ ವಿಧಾನದ ಮೂಲಕ ಮಾಡಬಹುದು .
ಅಂಜೂರ ಬೆಳೆ ಬೆಳೆಯಲು ಸೂಕ್ತವಾದ ಸಮಯ ಜೂನ್ ಮತ್ತು ಜೂಲೈ ತಿಂಗಳಲ್ಲಿ ನಾಟಿ ಮಾಡಲು ಸೂಕ್ತವಾಗಿರತ್ತೆ ಅಂದರೆ ಜೂನ್ ಮತ್ತು ಜೂಲೈ ತಿಂಗಳಲ್ಲಿ ಮಳೆ ಇರುವುದರಿಂದ ಇದರ ಕಾಂಡದ ತುಂಡುಗಳು ಚೆನ್ನಾಗಿ ಬೆಳೆಯುತ್ತದೆ.
ಅಂಜೂರದಲ್ಲಿ ವಿವಿಧ ತಳಿಗಳು ಲಭ್ಯವಿದ್ದು ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು.
ಇದರಲ್ಲಿ ೫ ರಿಂದ ೬ ತಳಿಗಳನ್ನು ನೋಡಬಹುದು, ಪೂನಾ ಅಂಜೂರ ಅಥವಾ ಬಳ್ಳಾರಿ ಅಂಜೂರ , ಡಯಾನಾ ಅಂಜೂರ  ತಳಿಗಳು ನೋಡಬಹುದು .
anjura in kannada
anjura in kannada
ಬೇಸಾಯಕ್ರಮಗಳು
ಎಷ್ಟು ಅಂತರದಲ್ಲಿ ನಾಟಿ ಮಾಡಬೇಕು
ಗಿಡದಿಂದ ಗಿಡಕ್ಕೆ 15 ಅಡಿ ಅಂತರ ಸಾಲಿನಿಂದ ಸಾಲಿಗೆ  15 ಅಡಿ ಅಂತರ ನಾಟಿ ಮಾಡಬೇಕು ಹೀಗೆ ನಾಟಿ ಮಾಡಿದರೆ ಒಂದು ಎಕರೆಗೆ 140 ರಿಂದ 150 ಗಿಡವನ್ನು ಕೂರಿಸಬಹುದು .
ಅಂಜೂರ ಬೆಳೆಗೆ ಸುಧಾರಿತ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪ್ರದಾನ ಮತ್ತು ಸೂಕ್ಷ್ಮ ಪೋಶಕಾಂಶವನ್ನು ಒದಗಿಸಬೇಕು .
ಪೋಷಕಾಂಶಗಳನ್ನು ಯಾವಾಗಲು ಮಣ್ಣು ಪರೀಕ್ಷೆ ಆದಮೇಲೆ  ರೈತರು ಒದಗಿಸಬೇಕಾಗುತ್ತದೆ  ಪ್ರತಿಯೊಂದು ಗಿಡಕ್ಕೆ ರೈತರು 25 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.
ಮೊದಲ ಒಂದು ವರ್ಷದಲ್ಲಿ 25 ಕೆಜಿ ಕೊಟ್ಟಿಗೆ ಗೊಬ್ಬರದ ಜೊತೆಗೆ ಮುಖ್ಯ ಪೋಷಕಾಂಶವಾದ ಸಾರಜನಕ , ಪೊಟಾಷ್ , ರಂಜಕ ವನ್ನು ಒದಗಿಸಬೇಕು
ಸಾರಜನಕ –  75 gram
ರಂಜಕ- 50gram
ಪೊಟಾಷ್- 50gram
ಮೊದಲ ಮತ್ತು ಎರಡನೇ ವರ್ಷದಲ್ಲಿ ನೀಡಬೇಕು

3 ನೇ ಮತ್ತು 5 ನೇ ವರ್ಷದಲ್ಲಿ ಮೊದಲನೇ ವರ್ಷದಲ್ಲಿ ನೀಡಿರುವ ಗೊಬ್ಬರಕಿಂತ ದ್ವಿಗುಣಗೊಳಿಸಿ ನೀಡಬೇಕಾಗುತ್ತದೆ .

ಸಾರಜನಕ – 150 gram
ರಂಜಕ- 100gram
ಪೊಟಾಷ್- 100gram
ಒಂದು ಸಾರಿ ನಾಟಿ ಮಾಡಿದಮೇಲೆ ಗಿಡಗಳು ಒಂದು ಆಕಾರ ಬಂದಮೇಲೆ ಅವುಗಳನ್ನು 3 ಅಥವಾ 4 ರಂಬೆಯನ್ನು ಉಳಿಸಿಕೊಂಡು ಉಳಿದ ರಂಬೆಯನ್ನು ಸವರಬೇಕು ಪ್ರತಿಯೊಂದು ರಂಬೆಯಲ್ಲಿ 5 ರಿಂದ 8 ರೆಂಬೆಯನ್ನು ಉಳಿಸಿಕೊಳ್ಳಬೇಕು ಹೀಗೆ ನೀವು ಆಕಾರ ಕೊಡಬೇಕು.
ಯಾಕಂದರೆ ಯಾವುದೇ ರೀತಿಯ ಕೀಟಗಳ ತೊಂದರೆ ಹಾಗೆ ರೋಗ ಬಾದೆ ಆದಾಗ  ಔಷದಿ ಸಿಂಪಡಣೆ ಮಾಡಲು ಸಹಾಯವಾಗುತ್ತದೆ .
ಅಂಜೂರದ ಗಿಡವನ್ನು ಎಷ್ಟು ಎತ್ತರದಲ್ಲಿ ಬೆಳೆಸಬೇಕು ಅಂದರೆ ಕನಿಷ್ಠ 90 ರಿಂದ 120 ಸೆಂಟಿಮೀಟರ್ ಎತ್ತರಕ್ಕೆ ಬೆಳೆಸಬೇಕು .
ನಾಟಿ 2 ವರ್ಷದಿಂದ ಅಂಜೂರದ ಪಸಲು ಪಡೆಯಬಹುದು ಕೊಯ್ಲಿನ ನಂತರ ಬೆಲೆ ಸಿಗದಿದ್ದರೆ ಒಣಗಿಸಿ ಮಾರಾಟ ಮಾಡಬಹುದಾಗಿದೆ.
ಒಂದು ಸಾರಿ ನಾಟಿ ಮಾಡಿದ ಮೇಲೆ ೨ ನೇ ವರ್ಷದಿಂದ ಹಣ್ಣು ಬಿಡಲು ಪ್ರಾರಂಭ ಆಗುತ್ತದೆ ೨ ನೇ ವರ್ಷದ ನಂತರ ಪ್ರತಿ ಗಿಡದಿಂದ ೨ ರಿಂದ ೩ ಕೆಜಿ ಹಣ್ಣುಗಳನ್ನು ಪಡೆದುಕೊಳ್ಳಬಹುದು
ವಾಣಿಜ್ಯ ಕೊಯ್ಲು ಅಂತ ಬಂದಾಗ ಇದು ೫ ರಿಂದ ೬ ವರ್ಷ ಆದ ನಂತರ ಪ್ರತಿ ಅಂಜೂರದ ಗಿಡ ೨೦ ರಿಂದ ೨೫ ಕೆಜಿ ಹಣ್ಣುಗಳನ್ನು ಕೊಡುತ್ತದೆ ಒಂದು ಹೆಕ್ಟಾರ್ ಪ್ರದೇಶಕ್ಕೆ ೮ ರಿಂದ ೧೨ ಟನ್ ಗಳಷ್ಟು ಹಣ್ಣುಗಳನ್ನು ಪಡೆದುಕೊಳ್ಳಬಹುದು
anjura in kannada
anjura in kannada

ಇದಕ್ಕೆ ಬರುವ ರೋಗಗಳು

ಇದಕ್ಕೆ ರೋಗ ಬರುವುದು ಕಡಿಮೆ ಇದಕ್ಕೆ ಮುಖ್ಯವಾಗಿ ಬರುವ ರೋಗಗಳು ಯಾವು ಅಂದರೆ ತುಕ್ಕು ರೋಗ , ಬೂದಿ ರೋಗ ಬರುತ್ತವೆ ಇದನ್ನು ತಡೆಗಟ್ಟಲು ತುಕ್ಕು ರೋಗ ಬಂದಾಗ 2 ಗ್ರಾಂ ಮ್ಯಾಕೊಜೆಬ್ ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು . ಬೂದಿ ರೋಗ ಕಾಣಿಸಿಕೊಂಡರೆ ಒಂದು ಗ್ರಾಂ ಕಾರ್ಬನ್ದಿಸಿಮ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಹೆಚ್ಚಿನ ಮಳೆ ಮತ್ತು ಆರ್ದ್ರತೆ ಹೆಚ್ಚಾದಾಗ ಈ ರೋಗಗಳು ಬರುತ್ತವೆ.
ತುಕ್ಕು ರೋಗ ಬಂದ ಎಲೆಯನ್ನು ಎಲೆಯನ್ನು ಕತ್ತರಿಸಿ ಆ ಎಲೆಯನ್ನು ತೋಟದಿಂದ ಹೊರಗಡೆ ತೆಗೆದುಕೊಂಡು ಹೋಗಿ ಸುಡಬೇಕು .
ಸುಧಾರಿತ ಬೇಸಾಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅಂಜೂರ ಬೆಳೆ ಬೆಳೆದಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹುದು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments