ಲೋಳೆ ಸರ ( ಅಲೋವೆರಾ ) ಕೃಷಿ ಮಾಡುವುದು ವಿಧಾನ ಹಗೂ ಲಾಭ
ಅಲವೇರಾ ಕೃಷಿ ಮಾಡುವುದು ಹೇಗೆ
ಎಷ್ಟು ಬಂಡವಾಳಬೇಕು
ನಾಟಿ ಮಾಡುವ ಕ್ರಮಗಳು
ಹವಾಗುಣ
ತಳಿಗಳು
ನಿರ್ವಹಣೆ
ಕೊಯ್ಲು
ಮಾರ್ಕೆಟಿಂಗ್ ಮಾಡುವುದು ಹೇಗೆ
ಎಷ್ಟು ಬಂಡವಾಳಬೇಕು
ನಾಟಿ ಮಾಡುವ ಕ್ರಮಗಳು
ಹವಾಗುಣ
ತಳಿಗಳು
ನಿರ್ವಹಣೆ
ಕೊಯ್ಲು
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು

ಈ ಲೇಖನದಲ್ಲಿ ಅಲೋವೆರಾ ಕೃಷಿಯ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿಸುವ ಪ್ರಯತ್ನ ನಮ್ಮದು ನಮ್ಮ ಪ್ರಯತ್ನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .
ನೀವು ಈ ಕೃಷಿಯನ್ನು ಮಾಡುವಮುನ್ನ ಇದರ ಮಾರ್ಕೆಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನಾಟಿ ಮಾಡಬೇಕು ಯಾಕಂದರೆ ಇದಕ್ಕೆ ಕರ್ನಾಟಕದಲ್ಲಿ ಓಪನ್ ಮಾರ್ಕೆಟ್ ಇಲ್ಲದ ಕಾರಣ ನೀವು ಕೃಷಿ ಮಾಡುವ ಮುನ್ನ ಪತಂಜಲಿ ಕಂಪನಿ ಸೇರಿದಂತೆ ಇತರ ಆಯುರ್ವೇದಿಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ನಾಟಿ ಮಾಡಿದರೆ ನೀವು ಬೆಳೆದಿರುವ ಅಲೋವೆರಾ ದಲ್ಲಿ ನಷ್ಟ ವಿಲ್ಲದೆ ಲಾಭವನ್ನು ಗಳಿಸಬಹುದು .
ಅಲವೇರಾ ಮುಖ್ಯ ಬೆಳೆಯಾಗಿ ಬೆಳೆಯುವುದಕ್ಕಿಂತ ಮಿಶ್ರ ಬೆಳೆಯಾಗಿ ಬೆಳೆಯುವುದು ಸೂಕ್ತ ಇದರಿಂದ ನೀವು ನಷ್ಟ ಅನುಭವಿಸುವುದು ತಪ್ಪುತ್ತದೆ .
ಲೋಳೆಯಂತಹ ಪದಾರ್ಥವನ್ನು ಎಲೆಗಳಲ್ಲಿ ಹೊಂದಿದ ಲೋಳೆಸರವನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗಿಸುತ್ತಿದ್ದಾರೆ .
ಇದನ್ನು ಕಾಂತಿವರ್ದಕಗಳಲ್ಲಿ ಮತ್ತು ಪೇಯಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ ಲೋಳೆಸರ (ಆಲೊವೆರಾ-Aloe Vera) ಒಂದು ರಸಭರಿತ ಜಾತಿಯ ಗಿಡ.
ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ.
ಇದರ ರಸವನ್ನು ಊತ ಮತ್ತು ನೋವಿನ ಔಷಧವಾಗಿ ಬಳಸುವುದು ವಾಡಿಕೆಯಲ್ಲಿದೆ.
ಈ ಸಸ್ಯವು ಸ್ವಾಭಾವಿಕವಾಗಿ ಹುಟ್ಟದೇ ಇದ್ದರೂ ಸಸ್ಯಗಳ ಗುಂಪಿನಲ್ಲಿ ಬೆಳೆದು ಬಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ.
ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದರ ರಸವನ್ನು ಸೌಂದರ್ಯವರ್ಧಕ ಹಾಗೂ ಔಷಧಕ್ಕಾಗಿ ಬಳಸಬಹುದೆಂದು ಹೇಳಲಾಗಿದೆ.
ಎಷ್ಟು ಬಂಡವಾಳಬೇಕು:
ಈ ಕೃಷಿ ಮಾಡಲು ಒಂದು ಎಕರೆ ಗೆ 30 ಸಾವಿರ ಖರ್ಚು ಬರುತ್ತದೆ .
ಮಣ್ಣು :
ಈ ಬೆಳೆಯು ಗಡುತರವಾಗಿದ್ದು , ಉತ್ತಮ ಬೆಳೆವಣಿಗೆಗೆ ಮರಳು ಮತ್ತು ಗೋಡು ಮಣ್ಣು ಹಾಗೂ ಎಲ್ಲಾ ತರಹದ ಮಣ್ಣುಗಳು ಸೂಕ್ತ .
ಹವಾಗುಣ :
ಬೆಚ್ಚನೆಯ ಅಥವಾ ಒಣ ಹವಾಗುಣ ಪ್ರದೇಶದಲ್ಲಿ ಉತ್ತಮ ಬೆಳೆಯನ್ನು ಪಡೆಯಬಹುದು .
ವರ್ಷಕ್ಕೆ ಸರಾಸರಿ ಕನಿಷ್ಠ 350 ಮಿ.ಮೀ. ನಿಂದ 1500 ಮಿ . ಮೀ . ನಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ಸಹ ಯಶಸ್ವಿಯಾಗಿ ಇದನ್ನು ಬೆಳೆಯಬಹುದು .
ತಳಿಗಳು :
ಶೀತಲ್- ಇದು ಸಿಮ್ಯಾಪ್ ಬಿಡುಗಡೆಗೊಳಿಸಿದ ತಳಿ ,

ಬೇಸಾಯ ಸಾಮಗ್ರಿಗಳು
ವಿವರ ಹೆಕ್ಟೇರಿಗೆ
ಕಂದುಗಳ ಸಂಖ್ಯೆ 25,000
ಕೊಟ್ಟಿಗೆ ಗೊಬ್ಬರ ( ಟನ್ ) 10
ರಾಸಾಯನಿಕ ಗೊಬ್ಬರ ( ಕಿ . ಗ್ರಾಂ )
ಸಾರಜನಕ – 50
ಮೊಟ್ಯಾಷ್ – 50
ಸಾರಜನಕ – 50
ಸಸ್ಯಾಭಿವೃದ್ಧಿ :
ಈ ಬೆಳೆಯನ್ನು ಸಾಮಾನ್ಯವಾಗಿ ಬೇರಿನ ಕಂದುಗಳಿಂದ ಹಾಗೂ ಗುಪ್ತಕಾಂಡಗಳಿಂದ ವೃದ್ಧಿ ಮಾಡಲಾಗುತ್ತದೆ ,
ಮಧ್ಯಮ ಗಾತ್ರದ ಬೇರಿನ ಕಂದುಗಳನ್ನು ತಾಯಿ ಗಿಡಕ್ಕೆ ತೊಂದರೆಯಾಗದಂತೆ ತೆಗೆದು ನೇರವಾಗಿ ನಾಟಿ ಮಾಡಬಹುದು ,
ಗುಪ್ತಕಾಂಡಗಳಿಂದ ವೃದ್ಧಿಮಾಡುವುದಾದರೆ ಬೆಳೆಯನ್ನು ಕೊಯ್ಲು ಮಾಡಿದ ನಂತರ ಬೇರುಗಳನ್ನು ಅಗೆದು ಗುಪ್ತಕಾಂಡವನ್ನು 2-3 ಗೆಣ್ಣುಗಳಿರುವಂತೆ 5-6 , ಸೆಂ .ಮೀ . ಉದ್ದ ತುಂಡುಗಳನ್ನಾಗಿ ಕತ್ತರಿಸಿ ಸಸಿಮಡಿಯಲ್ಲಿ ನಾಟಿ ಮಾಡಬೇಕು .
ನಾಟಿ ಮಾಡುವಿಕೆ :
ನಾಟಿಗೆ ಮುಂಚಿತವಾಗಿ ಭೂಮಿಯನ್ನು ಎರಡು ಬಾರಿ ಉಳುಮೆ ಮಾಡಿ ಹದಗೊಳಿಸಿ 60 X 60 ಸೆಂ . ಮೀ . ಅಂತರದಲ್ಲಿ ಬೇರು ಕಂದು ಅಥವಾ ಗುಪ್ತಕಾಂಡದ ತುಂಡುಗಳನ್ನು 2/3 ಭಾಗದಷ್ಟು ಭೂಮಿಯೊಳಗೆ ಇರುವಂತೆ ನಾಟಿ ಮಾಡಬೇಕು ,
ನೀರಾವರಿ ಮತ್ತು ಕಳೆ ನಿಯಂತ್ರಣ :
ನಾಟಿ ಮಾಡಿದ ಮೇಲೆ ನೀರು ಹಾಯಿಸಬೇಕು
ಮಣ್ಣು ಮತ್ತು ಹವಾಗುಣಕ್ಕನುಗುಣವಾಗಿ ನೀರು ಕೂಡಬೇಕು
ಆಗಾಗ್ಗೆ ಕಳೆಯನ್ನು ತೆಗೆಯುವುದು ಅವಶ್ಯಕ
aloe vera cultivation

ಹಾನಿಯ ಲಕ್ಷಣಗಳು:
ಅಪ್ಸರೆ ಮತ್ತ ಪ್ರೌಢ ತಿಗಣೆಗಳು ಎಲೆಯ ಕೆಳಭಾಗದಲ್ಲಿ ಬಿಳಿಯ ಹಿಟ್ಟಿನಂತೆ ಇರುತ್ತವೆ .
ಇವುಗಳು ರಸ ಹೀರುವುದರಿಂದ ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ ,
ನಂತರ ಎಲೆಗಳು ಒಣಗುತ್ತವೆ
ನಿರ್ವಹಣಾ ಕ್ರಮಗಳು:
ಶೇ . 50 ರ 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು
ಮತ್ತು ಬೇರನ್ನು ತೋಯಿಸುವುದರ ಮೂಲಕ ಹತೋಟಿ ಮಾಡುವುದು ,
ರೋಗದ ಲಕ್ಷಣಗಳು:
ಎಲೆ ಚುಕ್ಕೆ ರೋಗ ಉಂಗುರಾಕಾರದ ಅಥವಾ ವಕ್ರಾಕಾರದ ಚುಕ್ಕೆಗಳು ಎಲೆಯ ಮೇಲ್ಬಾಗದಲ್ಲಿ ಕಾಣಿಸಿಕೊಳ್ಳುತ್ತವೆ
ನಿರ್ವಹಣಾ ಕ್ರಮಗಳು:
ರೋಗ ಬಾಧೆ ಕಂಡು ಬಂದಾಗ ಬೆಳೆಗೆ 2.0 ಗ್ರಾಂ ಮ್ಯಾಂಕೋಜೆಬ್ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು .
ಕೊಯ್ಲು ಮತ್ತು ಇಳುವರಿ:
ಈ ಬೆಳೆಯು 18 ತಿಂಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತದೆ .ಕೊಯ್ಲು ಮಾಡುವಾಗ ಬಲಿತ ಎಲೆಗಳನ್ನು ಕತ್ತರಿಸಿ ತೆಗೆಯಬೇಕು , ಇದು ಬಹು ವಾರ್ಷಿಕ ಬೆಳೆಯಾದ್ದರಿಂದ ಕೊಯ್ಲು ನ್ನು ಹೀಗೆಯೇ ಮುಂದುವರಿಸಬಹುದು , ಬೆಳೆಯಲ್ಲಿ 2 ವರ್ಷಗಳ ನಂತರ ಮತ್ತು 5 ವರ್ಷಗಳವರೆಗೆ ವಾಣಿಜ್ಯ ಇಳುವರಿಯನ್ನು ಪಡೆಯಬಹುದು . ಒಂದು ಹೆಕ್ಟೇರ್ ಪ್ರದೇಶದಿಂದ ವಾರ್ಷಿಕ 20 ರಿಂದ 25 ಟನ್ನು ತಾಜಾ ಎಲೆಗಳನ್ನು ಪಡೆಯಬಹುದು .
aloe vera cultivation

ಉಪಯುಕ್ತತೆ (ಬಳಕೆಗಳು):
ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
ಇದರ ಸಾರ/ರಸವನ್ನು ಲೋಷನ್ಗಳು, ಕ್ರೀಂಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ದಂತಕ್ಷಯ ನಿವಾರಣ ಮಾಡುತ್ತದೆ.
ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ
ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.
ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ.
ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
ಇದರ ಸಾರ/ರಸವನ್ನು ಲೋಷನ್ಗಳು, ಕ್ರೀಂಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ದಂತಕ್ಷಯ ನಿವಾರಣ ಮಾಡುತ್ತದೆ.
ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ
ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.
ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ.
ಲಾಭ ಎಷ್ಟು ಗಳಿಸಬಹುದು:
ಅಲವೇರಾ ಮಾರುಕಟ್ಟೆ ಬೆಲೆ ಪ್ರತಿ ಕೆಜಿ ಗೆ 15 ರಿಂದ 20 ರೂಪಾಯಿ ಅಂದರೆ ಒಂದು ಟನ್ ಗೆ 15 ಸಾವಿರದಿಂದ 20 ಸಾವಿರ ರೂಪಾಯಿಗಳು , ಒಂದು ಎಕರೆಗೆ 1,80,000 ಸಾವಿರದಿಂದ 2,40,000 ಸಾವಿರ ಆದಾಯ ಬರಬಹುದು.
ಇದರಲ್ಲಿ ಎಲ್ಲ ಖರ್ಚು ಅಂತ 30 ಪರ್ಸೆಂಟ್ ತೆಗೆದರು 70 ಪರ್ಸೆಂಟ್ ಲಾಭ ಉಳಿಯುತ್ತದೆ.
[…] ನೀವು ಏನು ಮಾಡಬೇಕು ? ನೀವು ಏನು ಮಾಡಬೇಕು ಅಂದರೆ ನಿಮ್ಮ ಅಡಿಕೆ ತೋಟದಲ್ಲಿರುವ ಹಾಳೆಯನ್ನು ನೀವು ಒಟ್ಟುಗೂಡಿಸಿ ಇಡಬೇಕಾಗುತ್ತದೆ . ಒಂದುವೇಳೆ ನಿಮ್ಮ ಮನೆಯಲ್ಲಿ ಅಡಿಕೆ ಮರಗಳು ಇಲ್ಲ ಅಂದರೆ ನೀವು ಬೇರೆ ರೈತರ ತೋಟದಲ್ಲಿ ತೆಗೆದುಕೊಂಡು ಬರಬಹುದು ಹೀಗೆ ಬೇರೆಯವರ ರೈತರ ತೋಟದಲ್ಲಿ ತಂದರೆ ನೀವು ಅವರಿಗೂ ಸಹ ಕಮಿಷನ್ ಕೊಡಬೇಕಾಗುತ್ತದೆ. ಹೀಗೆ ನೀವು ಹೋಲ್ಸೇಲ್ ಆಗಿ ಹಾಳೆಗಳನ್ನು ಜೋಡಿಸಿಟ್ಟು ಅಡಿಕೆ ತಟ್ಟೆ ಮಾಡುವ ಇಂಡಸ್ಟ್ರಿಯವರಿಗೆ ಒಂದು ಕರೆ ಮಾಡಿದರೆ ಅವರೇ ನೇರವಾಗಿ ನಿಮ್ಮ ಮನೆಗೆ ಬಂದು ನಿಮಗೆ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. ಲಾಭ ಎಷ್ಟು ಗಳಿಸಬಹುದು ಒಂದು ಉತ್ತಮ ಗುಣಮಟ್ಟದ ಅಡಿಕೆ ಹಾಳೆಗೆ ರೂಪಾಯಿ ದೊರೆತರೆ 10 ಸಾವಿರ ಅಡಿಕೆ ಹಾಳೆ ಮಾರಾಟ ಮಾಡಿದರೆ 20 ಸಾವಿರ ಹಣವನ್ನು ಯಾವುದೇ ಖರ್ಚು ಇಲ್ಲದೆ ಗಳಿಸಬಹುದು. ಇದು ನೀವು ಮಾಡುತ್ತಿರುವ ಕೃಷಿ ಕೆಲಸದೊಂದಿಗೆ ಇದನ್ನು ಮಾಡಿ ಉತ್ತಮ ಆದಾಯ ಗಳಿಸಬಹುದು. ಇದು ದೊಡ್ಡ ಮೊತ್ತದ ಹಣ ಎಂದು ನಾನು ಹೇಳುತ್ತಿಲ್ಲ ನಿಮಗೆ ಯಾವುದುದಾದರೂ ಒಂದು ಖರ್ಚಿಗೆ ಸಹಾಯವಾಗಬಹುದು ಅನ್ನುವ ಉದ್ದೇಶ ನನ್ನದು. zero investment agriculture business ಅಲೋವೆರಾ ಕೃಷಿ ಮಾಡುವ ವಿಧಾನ ಹಗೂ ಲಾಭ | News In Kan… […]